ಅಭಿ ನಯನಾ ಜೀವನದಲ್ಲಿ ಇಷ್ಟು ಖುಷಿ ಯಾಗಿ ಇರೋದಕ್ಕೆ ಮೂಲ ಕಾರಣ ಅನಾ, ಅವರ ಜೀವನದಲ್ಲಿ ಏನೇ ಇದ್ದರು ಮೊದಲ ಆದ್ಯತೆ ಅನಾ ಗೆ ಅನಾ ನಂತರ ಏನೇ ಆದ್ರು ಅನ್ನೋ ನಿರ್ಧಾರ ನ ಅಭಿ ನಯನಾ ಯಾವಾಗೋ ತೆಗೆದುಕೊಂಡರು. ವಿಶ್ವ ಸುಭದ್ರ, ಮಗಳು ಅಳಿಯ ಮೊಮ್ಮಗಳು ಖುಷಿಯಾಗಿ ಜೀವನ ಮಾಡೋದನ್ನ ನೋಡಿ ಇದಕ್ಕಿಂತ ಸಂತೋಷ ಏನಿದೆ ಅಂತ ಸಂತೋಷ ಪಡ್ತ ಇದ್ದರು. ವಿಶ್ವನಾಥ್ ಸೂಪರ್ ಮಾರ್ಕೆಟ್ ನ ಮತ್ತಷ್ಟು ದೊಡ್ಡದು ಮಾಡೋ ಕೆಲಸ ನ ಶುರು ಮಾಡಿದರು. ಕೆಲವೇ ದಿನಗಳಲ್ಲಿ ಅದು ಕೂಡ ನಡೆದು ಹೋಯ್ತು. ಸೂಪರ್ ಮಾರ್ಕೆಟ್ ದೊಡ್ಡದು ಆದಂತೆ ಕೆಲಸಗಳು ಜಾಸ್ತಿ ಆದವು, ಅಭಿ ಸೂಪರ್ ಮಾರ್ಕೆಟ್ ನ ಜವಾಬ್ದಾರಿ ನ ಪೂರ್ತಿಯಾಗಿ ವಹಿಸಿಕೊಂಡ, ಪ್ರಿಯಾ ಗೆ ಅಕೌಂಟ್ಸ್ ನ ನೋಡಿಕೊಳ್ಳೋ ಜವಾಬ್ದಾರಿ ನ ವಹಿಸಿದ. ನಿರಂಜನ್ ಮೇಘ ಗೆ ಬಿಲ್ಲಿಂಗ್ ಕೌಂಟರ್ ಜವಾಬ್ದಾರಿ ನ ವಹಿಸಿದ. ರಾಜ್ ಗೆ ತೇಜು ಗೆ ಇಬ್ಬರು ಹೆಲ್ಪರ್