ಅಧ್ಯಾಯ 19 : "ಸತ್ಯ ಹೊರಬಂದ ಕ್ಷಣ"ಸೂರ್ಯನ ಮನೆಯಿಂದ ಬೇಗನೆ ಹೊರಟು ಎಲ್ಲರೂ ಜೆಕೆ ಮನೆಗೆ ತಲುಪಿದರು ಎರಡು ವರ್ಷಗಳ ನಂತರ ಮನೆಗೆ ಮರಳಿ ಬಂದ ಮಕ್ಕಳನ್ನು ನೋಡಲು ಆ ಮನೆ ತುಂಬಾ ಆತುರ ಮತ್ತು ಸಂತೋಷದಿಂದ ಕಾದಿತ್ತುಮನೆಯೊಳಗೆ ಕಾಲಿಟ್ಟ ಕೂಡಲೇ ಹಾಲ್‌ನಲ್ಲಿ ಕುಳಿತಿದ್ದ ಚಂದ್ರಿಕಾ ಇವರನ್ನು ನೋಡುತ್ತಲೇ ಎದ್ದು ನಿಂತರು“ಮಗನೇ ಜೆಕೆ.. ಎಷ್ಟು ದಿನ ಆಯ್ತೋ ನಿನ್ನ ನೋಡಿ…” ಎಂದು ಹೇಳುತ್ತಾ ಖುಷಿಯಿಂದ ಜೆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡರು.“ಚಿಕ್ಕಿ.... ಈಗ ನಿಮ್ಮನ್ನ ನೋಡಿ ಮನಸ್ಸಿಗೆ ತುಂಬಾ ಸಮಾಧಾನ ಆಗ್ತಿದೆ ನನ್ನ ಮುದ್ದು ಚಿಕ್ಕಿ,” ಎಂದು ಜೆಕೆ ಮೃದುವಾಗಿ ನಗುತ್ತಾನೆಆನಂದದಿಂದ ತುಂಬಿದ ಚಂದ್ರಿಕಾ ತಕ್ಷಣ ಮನೆಯೊಳಗೆ ಕೂಗಿದರು“ಅತ್ತೆ, ಯಶೋಧ ಅಕ್ಕ, ಕಮಲಾ ಅಕ್ಕ… ಇಲ್ಲಿ ಬೇಗ ಬನ್ನಿ ಯಾರು ಬಂದಿದಾರೆ ನೋಡಿ!”ಜೆಕೆಯನ್ನು ನೋಡಿದ ಸಂತೋಷವನ್ನು ಮಾತಿನಲ್ಲಿ ಹೇಳಲು ಚಂದ್ರಿಕಾಗೆ ಆಗಲೇ ಇಲ್ಲ ಆ ಶಬ್ದ ಕೇಳಿ ಮನೆಯ ಎಲ್ಲರೂ ಕೂಡಲೇ ಅಲ್ಲಿಗೆ ಬರುತ್ತಾರೆ.“ನನ್ನ ಮೊಮ್ಮಕ್ಕಳು ಬಂದ್ಬಿಟ್ರಾ…” ಎಂದು ಲಕ್ಕಿ ಸಂತೋಷದಿಂದ ಹೇಳಿದಳು “ಹೈ!!.. ಮೈ