ಹೈವೇ ಮತ್ತೆ ಸಂಪೂರ್ಣ ಕತ್ತಲೆಯಲ್ಲೇ ಮುಳುಗಿತ್ತು.ಕಾರಿನ ಹೆಡ್‌ಲೈಟ್ ಹಠಾತ್ ಆಫ್ ಆದ ಕ್ಷಣದಲ್ಲಿ ರಾಹುಲ್ ಹೃದಯ ಬಡಿತವೇ ನಿಂತಂತೆ ಆಯಿತು. ಅವನು ತಕ್ಷಣ ಬ್ರೇಕ್ ಒತ್ತಿದ. ಕಾರು ರಸ್ತೆ ಮಧ್ಯದಲ್ಲೇ ನಿಂತಿತು.ಸುತ್ತಲೂ ಸಂಪೂರ್ಣ ಮೌನ.ಗಾಳಿ ಮಾತ್ರ ಜೋರಾಗಿ ಬೀಸುತ್ತಿತ್ತು. ಕಾಡಿನ ಮರಗಳು ಒದೆಯುವ ಶಬ್ದ ಕೇಳಿಸುತ್ತಿತ್ತು.ರಾಹುಲ್ ಕೈಗಳು ನಡುಗುತ್ತಿವೆ. ಉಸಿರು ವೇಗವಾಗಿ ಬರುತ್ತಿದೆ.ಕೆಲವೇ ಕ್ಷಣಗಳ ಹಿಂದೆ ಅವನು ರಿಯರ್ ವ್ಯೂ ಮಿರರ್‌ನಲ್ಲಿ ಕಂಡ ದೃಶ್ಯ ಅವನ ಮೆದುಳಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು. ರಾಹುಲ್ ಮತ್ತೇ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಅವನ ಹೃದಯ ಇನ್ನೂ ಜೋರಾಗಿ ಬಡಿತ ಹೊಡೆಯುತ್ತಿತ್ತು. ಕೆಲವೇ ಕ್ಷಣಗಳ ಹಿಂದೆ ರಿಯರ್ ವ್ಯೂ ಮಿರರ್‌ನಲ್ಲಿ ಕಂಡ ಆ ಭಯಾನಕ ದೃಶ್ಯ ಅವನ ಮನಸ್ಸಿನಿಂದ ಹೋಗುತ್ತಿರಲಿಲ್ಲ.ಮನಸಲ್ಲೇ ನೆನಪಿಗೆ ಬರೋ ದೇವರನೆಲ್ಲ ನೆನೆಸಿಕೊಂಡು ಕಾಪಾಡಪ್ಪ ತಂದೆ ನಾನೇನಾದರೂ ತಪ್ಪು ಮಾಡಿದ್ರೆ ನನ್ನ ಕ್ಷಮಿಸಿ ನನ್ನ ಕಾಪಾಡು ಎನ್ನುತ್ತಿದ್ದಂತೆ ಅವನು ಮೆಲ್ಲಗೆ ರಿಯರ್ ವ್ಯೂ ಮಿರರ್ ನ ನೋಡುತ್ತಾನೆ ಅದೇ ಹೆಂಗಸು… ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಳು.ಅವಳ