ಬೆಂಗಳೂರಿನ ಆ ಪುಟ್ಟ ಬಾಡಿಗೆ ಮನೆಯಲ್ಲಿ ಅಂದು ರಾತ್ರಿ ಮೌನವು ಒಂದು ಕರಾಳ ಶಕ್ತಿಯಂತೆ ಹೆಪ್ಪುಗಟ್ಟಿತ್ತು. ಆದರ್ಶ್ ತನ್ನ ರೂಮಿನ ಬಾಗಿಲನ್ನು ಒಳಗಿನಿಂದ ಮೂರು ಬಾರಿ ಲಾಕ್ ಮಾಡಿದ್ದರೂ, ಅವನಿಗೆ ಸುರಕ್ಷಿತ ಭಾವನೆ ಮೂಡುತ್ತಿರಲಿಲ್ಲ. ಅವನ ಮಂಚದ ಪಕ್ಕದಲ್ಲಿ, ನೆಲದ ಮೇಲೆ ಆ 'ಬ್ರಹ್ಮಶಿರಸ್ಸು' ಎಂಬ ಎಲುಬಿನ ಪೆಟ್ಟಿಗೆಯನ್ನು ಇರಿಸಲಾಗಿತ್ತು. ಆ ಪೆಟ್ಟಿಗೆಯಿಂದ ನಿರಂತರವಾಗಿ ಒಂದು ರೀತಿಯ ವಿಚಿತ್ರವಾದ ಗುಂಯ್ ಎಂಬ ಸದ್ದು ಅಂದರೆ Low frequency humming ಬರುತ್ತಿತ್ತು. ಅದು ಕೇವಲ ಕಿವಿಗೆ ಕೇಳಿಸುವ ಶಬ್ದವಾಗಿರಲಿಲ್ಲ, ಬದಲಾಗಿ ಇಡೀ ರೂಮಿನ ನೆಲವನ್ನೇ ಒಳಗಿನಿಂದ ನಡುಗಿಸುತ್ತಿತ್ತು. ರೂಮಿನ ಒಳಗಿದ್ದ ಎಲ್.ಇ.ಡಿ ಬಲ್ಬ್ ಉರಿಯುತ್ತಿದ್ದರೂ ಅದರ ಬೆಳಕು ಪೆಟ್ಟಿಗೆಯ ಹತ್ತಿರ ಹೋದಂತೆ ಕಪ್ಪಾಗುತ್ತಿತ್ತು. ಆ ಪೆಟ್ಟಿಗೆಯು ತನ್ನ ಸುತ್ತಲಿನ ಬೆಳಕನ್ನೇ ಹೀರಿಕೊಂಡು ಶೂನ್ಯವನ್ನು ಸೃಷ್ಟಿಸುತ್ತಿರುವಂತೆ ಭಾಸವಾಗುತ್ತಿತ್ತು. ಆದರ್ಶ್ ತನ್ನ ಬೆವರುತ್ತಿದ್ದ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ಮಂಚದ ಮೇಲೆ ಕುಳಿತು ಆ ಪೆಟ್ಟಿಗೆಯನ್ನೇ ದಿಟ್ಟಿಸುತ್ತಿದ್ದ. ಅವನ ಹಣೆಯ ಮೇಲಿರುವ ಆ ಕೆಂಪು ಮಣಿ ಈಗ