ಬೆಂಗಳೂರಿನ ಫ್ರೀಡಂ ಪಾರ್ಕ್‌ನ ಹಳೆಯ ಕಲ್ಲಿನ ಗೋಡೆಗಳ ಅಡಿಯಲ್ಲಿರುವ ಆ ಗುಪ್ತ ಸುರಂಗವು ಯಾವುದೋ ಬೃಹತ್ ಕಾಲಘಟ್ಟದ ಬಾಯಿಯಂತೆ ತೆರೆದುಕೊಂಡಿತ್ತು. ಆದರ್ಶ್ ಮತ್ತು ರಶ್ಮಿ ಒಳಗೆ ಹೆಜ್ಜೆ ಇಟ್ಟಂತೆಲ್ಲಾ, ಹೊರಗಿನ ಬೆಂಗಳೂರಿನ ಟ್ರಾಫಿಕ್ ಸದ್ದು ಮತ್ತು ಆಧುನಿಕತೆಯ ಗದ್ದಲ ಕ್ಷಣಾರ್ಧದಲ್ಲಿ ಮರೆಯಾಗಿ, ಯುಗ ಯುಗಗಳ ಹಳೆಯ ಉಸಿರಾಟದ ಸದ್ದು ಕೇಳಿಸತೊಡಗಿತು. ಸುರಂಗದ ಗೋಡೆಗಳಿಂದ ತೇವಾಂಶದ ಜೊತೆಗೆ ಹಸಿ ರಕ್ತದ ಘಾಟು ವಾಸನೆ ಬರುತ್ತಿತ್ತು. ಆದರ್ಶ್‌ನ ಕೈಯಲ್ಲಿದ್ದ ಆ ಕಪ್ಪು ಆಲ್ಬಂ ಈಗ ತನ್ನಷ್ಟಕ್ಕೆ ತಾನೇ ಕುದಿಯುವ ಕಬ್ಬಿಣದಂತೆ ಬಿಸಿಯಾಗುತ್ತಿತ್ತು, ಅದರ ಪುಟಗಳಿಂದ ಮಂದವಾದ ಕೆಂಪು ಬೆಳಕು ಹೊರಸೂಸಿ ಸುರಂಗದ ಕತ್ತಲೆಯನ್ನು ಸೀಳುತ್ತಿತ್ತು.ಆದರ್ಶ್, ನನಗೆ ಇಲ್ಲಿ ಉಸಿರುಗಟ್ಟುತ್ತಿದೆ. ಈ ಗೋಡೆಗಳ ಮೇಲೆ ಏನೋ ವಿಚಿತ್ರವಾದ ಕೆತ್ತನೆಗಳಿವೆ ಇವು ನನ್ನ ಪೂರ್ವಜರ ಚಿತ್ರಗಳೇ? ರಶ್ಮಿ ನಡುಗುತ್ತಾ ಕೇಳಿದಳು. ಅವಳ ಧ್ವನಿ ಸುರಂಗದ ಆಳದಲ್ಲಿ ಭಯಾನಕವಾಗಿ ಪ್ರತಿಧ್ವನಿಸುತ್ತಿತ್ತು.ಆದರ್ಶ್ ತನ್ನ ಮೊಬೈಲ್ ಟಾರ್ಚ್ ಬೆಳಗಿದಾಗ ಕಂಡ ದೃಶ್ಯ ಅತ್ಯಂತ ಭೀಕರವಾಗಿತ್ತು. ಸುರಂಗದ ಕಲ್ಲಿನ ಗೋಡೆಗಳ ಮೇಲೆ ರಶ್ಮಿಯ