ರಕ್ತ ಲಿಪಿಯ ಚಿರಂಜೀವಿ - 17

  • 1.4k
  • 627

ಮೈಸೂರು ಅರಮನೆಯ ಬೃಹತ್ ಕಬ್ಬಿಣದ ದ್ವಾರಗಳು 'ಘರ್ ಘರ್' ಎಂಬ ಕರ್ಕಶ ಧ್ವನಿಯೊಂದಿಗೆ ತಾನಾಗಿಯೇ ತೆರೆದಾಗ, ಆದರ್ಶ್ ಮತ್ತು ರಶ್ಮಿಗೆ ಎದುರಾಗಿದ್ದು ಸ್ಮಶಾನದಂತಹ ಭೀಕರ ನಿಶ್ಯಬ್ದ. ಅಮಾವಾಸ್ಯೆಯ ಹತ್ತಿರವಿರುವ ಆ ರಾತ್ರಿಯಲ್ಲಿ ಅರಮನೆಯ ಬಂಗಾರದ ಗೋಪುರಗಳು ಯಾವುದೋ ಬೃಹತ್ ಅತೃಪ್ತ ರಾಕ್ಷಸರಂತೆ ಕಗ್ಗತ್ತಲ ಆಕಾಶವನ್ನು ಸೀಳುತ್ತಿದ್ದವು. ಆದರ್ಶ್ ಬೈಕ್ ನಿಲ್ಲಿಸಿ ಕೆಳಗಿಳಿದಾಗ, ಅವನ ಹಣೆಯ ಮೇಲಿದ್ದ ಆ ಪೂರ್ಣಗೊಂಡ ಮಹಾ ಮಣಿ ಅರಮನೆಯ ಒಳಗಿರುವ ಯಾವುದೋ ಅದೃಶ್ಯ ಶಕ್ತಿಗೆ ಪ್ರತಿಕ್ರಿಯಿಸಿ, ಚರ್ಮದ ಅಡಿಯಲ್ಲೇ ಹೃದಯದಂತೆ ತೀವ್ರವಾಗಿ ಮಿಡಿಯತೊಡಗಿತು.ಆದರ್ಶ್, ಇಲ್ಲಿ ಬೇಡ ವಾಪಸ್ ಹೋಗೋಣ. ಈ ಅರಮನೆಯ ಗೋಡೆಗಳು ನನ್ನನ್ನು ನೋಡಿ ಅಟ್ಟಹಾಸದಿಂದ ನಗುತ್ತಿರುವಂತೆ ಭಾಸವಾಗುತ್ತಿದೆ. ಇಲ್ಲಿನ ಗಾಳಿಯಲ್ಲಿ ಮೃತ್ಯುವಿನ ವಾಸನೆ ಬರುತ್ತಿದೆ ರಶ್ಮಿ ಅವನ ಕೈಯನ್ನು ತನ್ನ ಬೆವರುತ್ತಿದ್ದ ಬೆರಳುಗಳಿಂದ ಬಿಗಿಯಾಗಿ ಹಿಡಿದು ನಡುಗುತ್ತಾ ಪಿಸುಗುಟ್ಟಿದಳು.ಆದರ್ಶ್ ಅವಳ ಕೆಂಪಾದ ಕಣ್ಣುಗಳನ್ನು ದಿಟ್ಟಿಸಿ ನೋಡಿದ. "ರಶ್ಮಿ, ಈಗ ವಾಪಸ್ ಹೋಗುವ ದಾರಿಯಿಲ್ಲ. ಅಶ್ವತ್ಥಾಮ ಇಲ್ಲಿ ನಮ್ಮನ್ನು ಕರೆಯುತ್ತಿದ್ದಾನೆ ಎಂದರೆ, ಇಲ್ಲಿ ನಮಗೆ ಬೇಕಾದ