ಬೆಂಗಳೂರಿನ ಕಲ್ಪಳ್ಳಿ ಸ್ಮಶಾನದ ಆ ಹಳೆಯ, ಗಾಳಿಬಂದಾಗ ಕೆಟ್ಟದಾಗಿ ಶಬ್ದ ಮಾಡುವ ಅಶ್ವತ್ಥ ಮರದ ಕೆಳಗೆ ಆದರ್ಶ್ ಮತ್ತು ರಶ್ಮಿ ಮುಖಾಮುಖಿಯಾಗಿ ಕುಳಿತಿದ್ದರು. ಸ್ಮಶಾನದ ಗಾಳಿಯಲ್ಲಿ ಚಿತೆಗಳ ಬೂದಿ ಮತ್ತು ಒಣಗಿದ ಹೂವುಗಳ ವಾಸನೆ ಆವರಿಸಿತ್ತು. ಆದರ್ಶ್‌ನ ಶರೀರವು ಇನ್ನೂ ಪೂರ್ಣವಾಗಿ ಮನುಷ್ಯ ರೂಪಕ್ಕೆ ಮರಳಿರಲಿಲ್ಲ ಅವನ ಕೈಗಳು ಮತ್ತು ಎದೆಯ ಭಾಗವು ಗಾಳಿಯಲ್ಲಿ ತೇಲುತ್ತಿರುವಂತೆ ಪಾರದರ್ಶಕವಾಗಿ, ಬಿಳಿ ಬೆಳಕಿನಂತೆ ಕಾಣುತ್ತಿದ್ದವು. ಆದರೆ ಅವನ ಕಣ್ಣುಗಳಲ್ಲಿ ಮಾತ್ರ ರಶ್ಮಿಯ ಮೇಲಿರುವ ಅಗಾಧವಾದ ಪ್ರೀತಿಯ ಸೆಲೆ ಮತ್ತು ಸೃಜನಶೀಲತೆಯ ಕಿಚ್ಚು ಹಾಗೆಯೇ ಇತ್ತು. ರಶ್ಮಿಯ ನಡುಗುವ ಕೈಯಲ್ಲಿದ್ದ ಆ ಸುವರ್ಣ ಲೇಖನಿಯು ಈಗ ಕೆಂಪು ಮತ್ತು ನೀಲಿ ಬಣ್ಣದ ವಿದ್ಯುತ್ ಕಿಡಿಗಳನ್ನು ಹೊರಸೂಸುತ್ತಾ ಇಡೀ ಸ್ಮಶಾನವನ್ನು ಬೆಳಗುತ್ತಿತ್ತು.ಆದರ್ಶ್, ನಾನು ಇದನ್ನು ನಿಜವಾಗಿಯೂ ಬರೆಯಬಲ್ಲೆನೇ? ಅಶ್ವತ್ಥಾಮನ ಆ ಭೀಕರ ಕ್ರೋಧವು ಒಂದು ದೈತ್ಯಾಕಾರದ ನೆರಳಿನಂತೆ ಸುತ್ತಲೂ ಆವರಿಸಿದೆ, ಅದು ನನ್ನ ಅಕ್ಷರಗಳನ್ನು ಹುಟ್ಟುವ ಮುನ್ನವೇ ನುಂಗಲು ಹೊಂಚು ಹಾಕುತ್ತಿದೆ. ನನಗೆ ಭಯವಾಗುತ್ತಿದೆ ಆದರ್ಶ್, ನಾನು