ಬೆಂಗಳೂರಿನ ಆ ಕರಾಳ ಭೂಗತ ಸುರಂಗದ ಘಟನೆಗಳ ನಂತರ, ಆದರ್ಶ್ ತನ್ನ ಹಳೆಯ ಹೆಚ್.ಎಫ್ ಡಿಲಕ್ಸ್ ಬೈಕ್‌ನಲ್ಲಿ ರಶ್ಮಿಯನ್ನು ಕೂರಿಸಿಕೊಂಡು ಮೈಸೂರಿನ ಗಡಿ ದಾಟಿ ಬಂಡೀಪುರದ ದಟ್ಟಾರಣ್ಯದ ನಡುವೆ ಇರುವ 'ಹಿಮವತ್ ಗೋಪಾಲಸ್ವಾಮಿ ಬೆಟ್ಟದತ್ತ ಪಯಣ ಬೆಳೆಸುತ್ತಿದ್ದನು. ಆದರ್ಶ್ ಈಗ ಪೂರ್ಣವಾಗಿ ಮಾಂಸ ಖಂಡದ ಮನುಷ್ಯ ರೂಪಕ್ಕೆ ಮರಳಿದ್ದರೂ, ಅವನ ಹಣೆಯ ಮೇಲಿದ್ದ ಆ ಬೆಳ್ಳಿಯ ಮಣಿ ಈಗ ಚರ್ಮದ ಅಡಿಯಲ್ಲಿ ಒಂದು ಸಣ್ಣ ಕೆಂಪು ಜ್ವಾಲೆಯ ಕುರುಹಾಗಿ ಉಳಿದುಕೊಂಡಿತ್ತು. ರಶ್ಮಿಯ ಕೈಯಲ್ಲಿದ್ದ ಆ ಸುವರ್ಣ ಲೇಖನಿಯು ಕಾಡಿನ ಹಸಿರು ಗಾಳಿಯನ್ನು ಸೋಕಿದ ತಕ್ಷಣ ಯಾವುದೋ ನಿಗೂಢ ಸಂಕೇತದಂತೆ ವಿಚಿತ್ರವಾಗಿ ಕಂಪಿಸತೊಡಗಿತ್ತು.ಆದರ್ಶ್, ಈ ಕಾಡು ಎಷ್ಟು ಭಯಾನಕವಾಗಿ ನಿಶ್ಯಬ್ದವಾಗಿದೆ ನೋಡು. ಇಲ್ಲಿ ಹಕ್ಕಿಗಳ ಚಿಲಿಪಿಲಿಗಿಂತ ಯಾವುದೋ ಹಳೆಯ ಕಾಲದ ಮಂತ್ರಗಳ ಪಿಸುಮಾತು ಗಾಳಿಯಲ್ಲಿ ತೇಲಿ ಬರುತ್ತಿರುವಂತೆ ಅನ್ನಿಸುತ್ತಿದೆ ರಶ್ಮಿ ಆದರ್ಶ್‌ನ ಭುಜವನ್ನು ಬಿಗಿಯಾಗಿ ಹಿಡಿದುಕೊಂಡು, ದಟ್ಟವಾದ ಮರದ ಎಲೆಗಳ ನಡುವೆ ಸೋರುತ್ತಿದ್ದ ಮಂದ ಸೂರ್ಯನ ಬೆಳಕನ್ನು ಆತಂಕದಿಂದ ನೋಡುತ್ತಾ ಹೇಳಿದಳು. ಬೈಕ್ ಬಂಡೀಪುರದ