ರಕ್ತ ಲಿಪಿಯ ಚಿರಂಜೀವಿ - 30

  • 705
  • 285

ಜೋಗ ಜಲಪಾತದ ಆ ಭೀಕರ ಅಗ್ನಿ ಕುಂಡದ ಪರೀಕ್ಷೆಯನ್ನು ಗೆದ್ದು, ಸುವರ್ಣ ಪುಟವನ್ನು ಪಡೆದ ನಂತರ ಆದರ್ಶ್ ಮತ್ತು ರಶ್ಮಿ ಮಲೆನಾಡಿನ ಹಸಿರು ಸಿರಿಯನ್ನು ದಾಟಿ ಬಯಲು ಸೀಮೆಯತ್ತ ಮುಖ ಮಾಡಿದರು. ಹಳೆಯ ಹೆಚ್.ಎಫ್ ಡಿಲಕ್ಸ್ ಬೈಕ್ ಈಗ ವಿಜಯನಗರ ಸಾಮ್ರಾಜ್ಯದ ಗತವೈಭವದ ನೆಲೆವೀಡು, ಬಳ್ಳಾರಿ ಜಿಲ್ಲೆಯ ಹಂಪೆಯ ಕಲ್ಲಿನ ಸಾಮ್ರಾಜ್ಯವನ್ನು ಪ್ರವೇಶಿಸಿತು. ತುಂಗಭದ್ರಾ ನದಿಯ ತಟದಲ್ಲಿ ಹರಡಿಕೊಂಡಿರುವ ಹಂಪೆಯ ಬೃಹತ್ ಬಂಡೆಗಳು ಮಧ್ಯಾಹ್ನದ ಸೂರ್ಯನ ಬಿಸಿಲಿಗೆ ಶುದ್ಧ ಬಂಗಾರದಂತೆ ಹೊಳೆಯುತ್ತಿದ್ದವು. ವಿರೂಪಾಕ್ಷ ದೇವಸ್ಥಾನದ ಆ ಎತ್ತರದ ಮತ್ತು ಭವ್ಯವಾದ ಗೋಪುರವು ಆದರ್ಶ್‌ನನ್ನು ಯುಗ ಯುಗಗಳ ನಂತರ ಸ್ವಾಗತಿಸುತ್ತಿರುವಂತೆ ಭಾಸವಾಯಿತು. ಆದರ್ಶ್ ಇನ್ನು ಮೌನಿಯಾಗಿದ್ದನು ಅವನ ದನಿ ಆ ಸಮುದ್ರದ ಸುವರ್ಣ ಶಂಖದೊಳಗೆ ಇನ್ನು ಸೆರೆಯಾಗಿತ್ತು. ಆದರೆ ಅವನ ಹಸ್ತದ ಮೇಲಿದ್ದ ಆ ಜಲಮಂತ್ರದ ಹಚ್ಚೆ ಮತ್ತು ಹಣೆಯ ಮೇಲಿದ್ದ ಬೆಳಕಿನ ಬಿಂದು ಈಗ ಹಂಪೆಯ ಮಣ್ಣನ್ನು ಸೋಕಿದ ತಕ್ಷಣ ತೀವ್ರವಾಗಿ ಮಿಡಿಯತೊಡಗಿದವು. ಆದರ್ಶ್, ಇಲ್ಲಿನ ಪ್ರತಿ ಶಿಲೆಯೂ, ಪ್ರತಿ ಧೂಳಿನ