ರಕ್ತ ಲಿಪಿಯ ಚಿರಂಜೀವಿ - 36

  • 207

ಶ್ರೀಶೈಲದ ದಟ್ಟಾರಣ್ಯಗಳಲ್ಲಿ ನಾಗಪಾಶವನ್ನು ಭೇದಿಸಿ, ಹಸಿರು ರತ್ನದ ದಿವ್ಯ ದೃಷ್ಟಿಯನ್ನು ತನ್ನ ಲೇಖನಿಗೆ ಅಳವಡಿಸಿಕೊಂಡ ನಂತರ, ಆದರ್ಶ್ ಮತ್ತು ರಶ್ಮಿ ತೆಲಂಗಾಣದ ಐತಿಹಾಸಿಕ ನಗರವಾದ ಹೈದರಾಬಾದ್‌ಗೆ ಕಾಲಿಟ್ಟರು. ನಗರದ ಗದ್ದಲದ ನಡುವೆ ಗಂಭೀರವಾಗಿ ಎದ್ದು ನಿಂತಿದ್ದ ಗೋಲ್ಕಂಡ ಕೋಟೆಯ ಬೃಹತ್ ದ್ವಾರದ ಮುಂದೆ ಅವರ ಹೆಚ್.ಎಫ್ ಡಿಲಕ್ಸ್ ಬೈಕ್ ಬಂದು ನಿಂತಿತು. ಸೂರ್ಯ ಪಶ್ಚಿಮದ ದಿಕ್ಕಿಗೆ ಸರಿಯುತ್ತಿದ್ದಂತೆ, ಕೋಟೆಯ ಕಪ್ಪು ಕಲ್ಲುಗಳು ಯಾವುದೋ ಕರಾಳ ಇತಿಹಾಸವನ್ನು ಮೌನವಾಗಿ ಸ್ಮರಿಸುತ್ತಿರುವಂತೆ ಭಾಸವಾಗುತ್ತಿದ್ದವು. ಆದರ್ಶ್‌ನ ಲೇಖನಿಯ ತುದಿಯಲ್ಲಿದ್ದ ಆ ಹಸಿರು ರತ್ನವು ಈಗ ತೀವ್ರವಾಗಿ ಕಂಪಿಸತೊಡಗಿತು ಅದು ಈ ಕಲ್ಲಿನ ಕೋಟೆಯ ಗೋಡೆಗಳ ಹಿಂದೆ ಅಡಗಿರುವ ಅಶ್ವತ್ಥಾಮನ ಶಬ್ದದ ಸಂಚನ್ನು ಮೈಲಿಗಳ ದೂರದಲ್ಲೇ ಪತ್ತೆಹಚ್ಚಿತ್ತು.ಆದರ್ಶ್, ಇಲ್ಲಿನ ಪ್ರವೇಶ ದ್ವಾರದ ಹತ್ತಿರ ನಿಂತು ಒಂದು ಸಣ್ಣ ಚಪ್ಪಾಳೆ ತಟ್ಟಿದರೂ ಅದು ಕೋಟೆಯ ಅತಿ ಎತ್ತರದಲ್ಲಿರುವ ಬಾಲಾ ಹಿಸಾರ್ ವರೆಗೆ ಸ್ಪಷ್ಟವಾಗಿ ಕೇಳಿಸುತ್ತದೆಯಂತೆ. ಆದರೆ ಈಗ ನನಗೆ ಕೇಳಿಸುತ್ತಿರುವುದು ಚಪ್ಪಾಳೆಯ ಸದ್ದಲ್ಲ ಬದಲಾಗಿ ಯಾರೋ ಸಾವಿರಾರು ಜನ