ಅವಳ ಹೋರಾಟ - 6

(277)
  • 1.5k
  • 654

(ನಾರಾಯಣನ ಮಾತು ಕೇಳಿ ಲಕ್ಷ್ಮಿ, ರಾಘವೇಂದ್ರ ಮತ್ತು ದುರ್ಗಾ ಬಾಗಿಲತ್ತ ನೋಡಿದರು.) ಶೌರ್ಯ : ಏನಿಲ್ಲ ಅಂಕಲ್, ಇಲ್ಲಿ ಸ್ವಲ್ಪ ಕೆಲಸ ಇತ್ತು ಬಂದಿದ್ದೆ. ಹಾಗೇ ನಿಮನ್ನೆಲ್ಲ ನೋಡ್ಕೊಂಡು ಹೋಗೋಣ ಅಂತ ಬಂದೆ. (ಶೌರ್ಯ ನಾರಾಯಣನ ಸ್ನೇಹಿತನ ಮಗನಾಗಿದ್ದ. ಶೌರ್ಯ ಬಂದಿದ್ದು ಎಲ್ಲರಿಗೂ ತುಂಬ ಖುಷಿ ಆಯ್ತು. ಚಿಕ್ಕವಯಸ್ಸಿನಿಂದಲೇ ರಾಘವೇಂದ್ರ ಮತ್ತು ಶೌರ್ಯ ಒಟ್ಟಿಗೆ ಆಟ ಆಡುತ್ತಿದ್ದರು. ಆದರೆ ದುರ್ಗಾಗೆ ಮೊದಲಿನಿಂದಲೇ ಶೌರ್ಯನನ್ನು ಕಂಡರೆ ಅಷ್ಟೇನೂ ಇಷ್ಟ ಇರಲಿಲ್ಲ.) ದುರ್ಗಾ : ಅಪ್ಪಾ, ನಾನು ಚಿಕ್ಕವಯಸ್ಸಿಂದ ನೋಡ್ತಾ ಇದ್ದೀನಿ, ನೀವು ಯಾಕೆ ಅವನಿಗೆ ಇಷ್ಟು ಸಲುಗೆ ಕೊಡ್ತೀರೀ? ಲಕ್ಷ್ಮಿ : ದುರ್ಗಾ, ಈ ರೀತಿ ಎಲ್ಲ ಮಾತಾಡ್ಬಾರದು. ಅಷ್ಟಕ್ಕೂ ಅವನು ನಿನಗೆ ಏನು ಮಾಡಿದ್ದಾನೆ? ನಾನು ಮೊದಲಿಂದಲೇ ನೋಡ್ತಾ ಇದ್ದೀನಿ, ಅವನು ನಿನ್ನ ಜೊತೆ ಚೆನ್ನಾಗಿ ಮಾತಾಡಿದ್ರೂ ನೀನು ಯಾಕೆ ಇಷ್ಟು ಸೋಕು ತೋರಿಸ್ತೀಯಾ ಅವನಿಗೆ? ಶೌರ್ಯ ತುಂಬ ಒಳ್ಳೆ ಹುಡುಗ. ದೊಡ್ಡವರಂದ್ರೆ ಎಷ್ಟು ಗೌರವ ಇದೆ ಅವನಿಗೆ. ದುರ್ಗಾ :