ಅವಳ ಹೋರಾಟ - 11

  • 1.1k
  • 465

(ಪ್ರಸಾದ್ ಮತ್ತು ದುರ್ಗಾ ಇಬ್ಬರೂ ಅವರ ಹಳ್ಳಿಗೆ ಹೋದರು, ಅವರ ಊರಿನ ಹೆಸರು ರಾಮಪುರ ಅಂತ) ದುರ್ಗಾ : ಅರೆ ಈ ಊರನ್ನು ನೋಡಿದರೆ ಯಾರೂ ಹಳ್ಳಿ ಅನ್ನಲ್ಲ, ಅಲ್ಲ ಅಣ್ಣ ಹಳ್ಳಿ ಅಂದರೆ ಹಸಿರು ಹಸಿರಾಗಿ ಎಷ್ಟು ಚೆನ್ನಾಗಿರುತ್ತೆ, ಆದರೆ ಇದು ಬರಡು ಭೂಮಿ ಹಾಗೆ ಇದೆ, ಸ್ವಲ್ಪವೂ ಹಳ್ಳಿ ಕಳೆನೇ ಇಲ್ಲ. ಪ್ರಸಾದ್ : ಅಜ್ಜ ತೀರಿಕೊಳ್ಳೋ ಮುಂಚೆ ಈ ಊರು ತುಂಬಾ ಚೆನ್ನಾಗಿತ್ತು, ಅಮೇಲೆ ಹಿರಿಯರು ಯಾರೂ ಇಲ್ಲದಿರುವ ಕಾರಣ ಈ ಊರು ಹೀಗಾಗಿದೆ ಅಂತ ಅಜ್ಜಿ ನನಗೆ ಆಗಾಗ ಹೇಳ್ತಾ ಇದ್ದಳು. ಸರಿಯಾಗಿ ಹೇಳ್ದೆ ಕಣಪ್ಪ (ಎಂದು ಹಿಂದಿನಿಂದ ಯಾರೋ ಹೇಳಿದರು, ಆ ಧ್ವನಿ ಕೇಳಿ ಇಬ್ಬರೂ ಹಿಂದೆ ತಿರುಗಿದರು). ದುರ್ಗಾ : ಕ್ಷಮಿಸಿ ನೀವು ಯಾರು ಅಂತ ನಮಗೆ ಗೊತ್ತಾಗಲಿಲ್ಲ. ಭೀಮಪ್ಪ : ನನ್ನ ಹೆಸರು ಭೀಮಪ್ಪ ಅಂತ, ನೀವು ಅನಂದರಾವ್ ಅವರ ಮೊಮ್ಮಕ್ಕಳು ಅಲ್ಲವಾ? ಪ್ರಸಾದ್ : ನಿಮಗೆ ಹೇಗೆ ಗೊತ್ತಾಯ್ತು? ಭೀಮಪ್ಪ