ಯಮ ದ್ವಾರ

ಹಿಮಾಲಯದ ಹಿಮಶಿಖರಗಳ ಮಡಿಲಲ್ಲಿ, ಕೈಲಾಸ ಪರ್ವತದ ತಪ್ಪಲಿನಲ್ಲಿ ನಿಂತಿರುವ ಆ ಕಲ್ಲಿನ ದ್ವಾರದ ಹೆಸರು ಯಮ ದ್ವಾರ.  ಲೋಕದ ನಂಬಿಕೆಯ ಪ್ರಕಾರ ಇದು ಕೇವಲ ಮನುಷ್ಯ ನಿರ್ಮಿತ ಕಟ್ಟಡವಲ್ಲ ಇದು ಇಹಲೋಕದ ಸಂಬಂಧಗಳು ಕೊನೆಯಾಗಿ, ಆತ್ಮಗಳು ಮೃತ್ಯುವಿನ ಶಾಶ್ವತ ಕತ್ತಲೆಗೆ ಪ್ರವೇಶಿಸುವ ಅಂತಿಮ ಬಿಂದು. ಅಲ್ಲಿನ ಗಾಳಿಯಲ್ಲಿ ಒಂದು ರೀತಿಯ ಅಸಹಜ ಭಾರವಿದೆ ಆ ಗಾಳಿ ಶ್ವಾಸಕೋಶದ ಒಳಗೆ ಸೇರಿದರೆ ಉಸಿರಾಟವೂ ಕಿರುಚಾಟದಂತೆ ಕೇಳಿಸುತ್ತದೆ. ಸ್ಥಳೀಯ ಲಾಮಾಗಳು ಹೇಳುವಂತೆ, ಈ ದ್ವಾರದ ಒಳಗೆ ಪ್ರತಿ ಅಮಾವಾಸ್ಯೆಯ ರಾತ್ರಿ ಮೃತ್ಯು ದೇವತೆಯ ಘೋರ ಸಭೆ ನಡೆಯುತ್ತದೆ ಮತ್ತು ಅಲ್ಲಿಗೆ ಹೋದವರ ನೆರಳು ದ್ವಾರದ ಒಳಗೆ ಪ್ರವೇಶಿಸಿದ ಮೇಲೆ ಎಂದಿಗೂ ವಾಪಸ್ ಬರುವುದಿಲ್ಲ ಎನ್ನುವುದು ಅಲ್ಲಿನ ಅಲಿಖಿತ ನಿಯಮ. ಅವಿನಾಶ್‌ ಒಬ್ಬ ಸಸ್ಪೆನ್ಸ್ ಕಥೆಗಾರ ಮತ್ತು ಮಹತ್ವಾಕಾಂಕ್ಷೆಯ ಸಿನಿಮಾ ನಿರ್ದೇಶಕ. ಸವಾಲುಗಳನ್ನು ಇಷ್ಟಪಡುವ ಅವನಿಗೆ ಸಾವಿಗೆ ಯಾವುದೇ ಸೈಕಾಲಜಿ ಇಲ್ಲ, ಅದಕ್ಕಿರುವುದು ಕೇವಲ ಹಸಿವು ಮಾತ್ರ ಎಂಬುದು ದೃಢ ನಂಬಿಕೆ. ಸುಮಾರು 200 ಕ್ಕೂ