ಮಂಗಳೂರಿನ ಆ ಹಳೆಯ ಜಂಕ್ಷನ್‌ನಲ್ಲಿರುವ ವಿಷ್ಣು ಭವನ ಹೋಟೆಲ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಒಂದು ಸಂಪ್ರದಾಯ ನಡೆದುಕೊಂಡು ಬಂದಿದೆ. ಸಂಜೆ ಸರಿಯಾಗಿ ಆರು ಗಂಟೆಯಾದರೆ, ಕಿಟಕಿಯ ಪಕ್ಕದ ಮೂರನೇ ನಂಬರ್ ಟೇಬಲ್ ಆದಿತ್ಯನಿಗಾಗಿ ಮೀಸಲಾಗಿರುತ್ತದೆ. ಆದಿತ್ಯ ಅಲ್ಲಿಗೆ ಬಂದು ಕುಳಿತ ಕೂಡಲೇ ಹೋಟೆಲ್ ಮಾಲೀಕ ಸೋಮಣ್ಣ ಯಾವುದೇ ಆರ್ಡರ್ ಪಡೆಯದೆ ಎರಡು ಪ್ಲೇಟ್ ಬಿಸಿ ಬಿಸಿ ಕೇಸರಿ ಬಾತ್ ಅನ್ನು ಟೇಬಲ್ ಮೇಲೆ ಇಡುತ್ತಾನೆ. ಒಂದು ಪ್ಲೇಟ್ ಆದಿತ್ಯನ ಮುಂದೆ, ಇನ್ನೊಂದು ಪ್ಲೇಟ್ ಅವನ ಎದುರಿಗಿರುವ ಖಾಲಿ ಕುರ್ಚಿಯ ಮುಂದೆ.ಆದಿತ್ಯ ಆ ಖಾಲಿ ಕುರ್ಚಿಯ ಕಡೆಗೆ ಪ್ರೀತಿಯಿಂದ ನೋಡುತ್ತಾ, ಇವತ್ತು ತುಂಬಾ ಲೇಟ್ ಆಯ್ತಲ್ಲ ಮೈತ್ರೇಯಿ?" ಎಂದು ಗಾಳಿಯಲ್ಲಿ ಯಾರೋ ಕುಳಿತಿದ್ದಾರೆ ಎಂಬಂತೆ ಮೆಲ್ಲಗೆ ಮಾತಾಡುತ್ತಾನೆ. ಹಬೆ ಬರುತ್ತಿರುವ ಆ ಕೇಸರಿ ಬಾತ್ ಅನ್ನು ಒಂದು ಚಮಚ ಎತ್ತಿ ಎದುರಿಗಿನ ಖಾಲಿ ಪ್ಲೇಟ್‌ಗೆ ಮುಟ್ಟಿಸಿ, ಆಮೇಲೆ ತಾನು ತಿನ್ನುತ್ತಾನೆ. ಅವನ ಈ ವಿಚಿತ್ರ ನಡವಳಿಕೆಯನ್ನು ನೋಡಿ ಹೋಟೆಲ್‌ಗೆ ಬರುವ ಹೊಸ ಗ್ರಾಹಕರು