ದೇಹ ಕಾಣೆಯಾಗಿದೆ

  • 111

ಉಡುಪಿಯ ಆ ಹಳೆಯ ಓಣಿಯಲ್ಲಿ ಗಾಳಿ ಬೀಸುತ್ತಿರಲಿಲ್ಲ, ಬದಲಾಗಿ ಯಾರೋ ಮಂತ್ರಿಸಿದಂತೆ ಸ್ಥಬ್ದವಾಗಿತ್ತು. ಕೃಷ್ಣನ ಬಾಡಿಗೆ ಮನೆಯ ಗೋಡೆಗಳು ರಾತ್ರಿಯ ಕತ್ತಲಲ್ಲಿ ದೆವ್ವಗಳಂತೆ ಭಾಸವಾಗುತ್ತಿದ್ದವು. ಗೋಡೆಯ ಮೇಲಿನ ಹಳೆಯ ಗಡಿಯಾರ ಟಿಕ್ ಟಿಕ್ ಎನ್ನುತ್ತಾ ತನ್ನ ಅಂತಿಮ ಗುರಿಯತ್ತ ಸಾಗುತ್ತಿತ್ತು. ಸಮಯ ಸರಿಯಾಗಿ ರಾತ್ರಿ 2:22 ಅದೇ ಸಂಖ್ಯೆ, ಕೃಷ್ಣನ ಬದುಕನ್ನು ಕಾಡುತ್ತಿರುವ ಅದೇ ಏಂಜೆಲ್ ನಂಬರ್. ಕೃಷ್ಣ ಗಾಢ ನಿದ್ರೆಯಿಂದ ಎಚ್ಚರವಾದಾಗ ಮೈಯೆಲ್ಲಾ ಬೆವತು ಹೋಗಿತ್ತು. ಆದರೆ ಆ ಬೆವರಿನಲ್ಲಿ ಒಂದು ವಿಚಿತ್ರವಾದ ತಂಪು ಇತ್ತು.ಅವನು ಹಾಸಿಗೆಯಿಂದ ಎದ್ದೇಳಲು ಪ್ರಯತ್ನಿಸಿದ. ಆದರೆ ಏನಿದು? ಅವನ ಕೈಕಾಲುಗಳಿಗೆ ಭಾರವೇ ಇಲ್ಲದಂತೆ ಭಾಸವಾಯಿತು. ಅವನು ನೆಲದ ಮೇಲೆ ಕಾಲಿಟ್ಟರೆ, ಪಾದಗಳು ನೆಲಕ್ಕೆ ತಾಕುತ್ತಿರಲಿಲ್ಲ. ಗಾಳಿಯಲ್ಲಿ ಒಂದು ಹೊಗೆಯ ತುಂಡಿನಂತೆ ಅವನು ತೇಲುತ್ತಿದ್ದ. ಗಾಬರಿಯಿಂದ ರೂಮಿನ ಮೂಲೆಯಲ್ಲಿದ್ದ ಹಳೆಯ ಕನ್ನಡಿಯನ್ನು ನೋಡಲು ಹೋದ. ಆ ಕನ್ನಡಿ ಅವನ ತಂದೆಯ ಕಾಲದ್ದು, ಯಾವಾಗಲೂ ಅವನ ಪ್ರತಿಬಿಂಬವನ್ನು ಸ್ಪಷ್ಟವಾಗಿ ತೋರಿಸುತ್ತಿತ್ತು. ಆದರೆ ಇಂದು ಕನ್ನಡಿಯಲ್ಲಿ ಏನೂ ಇರಲಿಲ್ಲ.ಕನ್ನಡಿಯ