ಉಡುಪಿಯ ಆ ಹಳೆಯ ಮೀನು ಮಾರ್ಕೆಟ್‌ನ ಹಿಂಭಾಗದ ಓಣಿಗಳಲ್ಲಿ ಗಾಳಿ ಬೀಸುತ್ತಿರಲಿಲ್ಲ, ಬದಲಾಗಿ ಅಲ್ಲಿ ಅಸಹ್ಯದ ವಾಸನೆ ಘನೀಕರಿಸುತ್ತಿತ್ತು. ಕೊಳೆತ ಮೀನಿನ ಚೂರುಗಳು, ಹರಿದು ಬಿದ್ದ ಪ್ಲಾಸ್ಟಿಕ್ ಹಾಳೆಗಳು ಮತ್ತು ಸಮಾಜ ಎಸೆದ ಕಸದ ರಾಶಿಯ ನಡುವೆ ಒಂದು ಸಿಮೆಂಟ್ ಪೈಪ್ ಇತ್ತು. ಆ ಪೈಪ್‌ನ ಒಳಗೇ ಬಾಬಣ್ಣನ ಸಾಮ್ರಾಜ್ಯ. ಬಾಬಣ್ಣ ಅಂದರೆ ಈ ಊರಿಗೆ ಒಬ್ಬ ಹುಚ್ಚ, ಒಬ್ಬ ಭಿಕ್ಷುಕ ಅಥವಾ ಅವರಿಗಿಂತ ಕೀಳಾಗಿ ಕಂಡರೆ ಒಬ್ಬ ನಾಯಿ ಬುದ್ಧಿಯವನು ಅವನ ಮೈಮೇಲೆ ಸದಾ ಒಂದು ಹಳೆಯ, ಗಲೀಜಾದ ಟಾವೆಲ್ ಸುತ್ತಿಕೊಂಡಿರುತ್ತಿತ್ತು. ಅದೇ ಅವನ ಬಟ್ಟೆ, ಅದೇ ಅವನ ಹೊದಿಕೆ, ಅದೇ ಅವನ ಮರ್ಯಾದೆ. ಅವನ ಸುತ್ತಲೂ ಯಾವಾಗಲೂ ನಾಲ್ಕೈದು ಬೀದಿ ನಾಯಿಗಳಿರುತ್ತಿದ್ದವು. ಅವುಗಳ ಜೊತೆ ಬಾಬಣ್ಣ ಮಾತಾಡುತ್ತಿದ್ದಾಗ ಜನ ನಗುತ್ತಿದ್ದರು, ನೋಡ್ರೋ, ಆ ನಾಯಿಗಳಿಗೆ ಈ ನಾಯಿ ಪಾಠ ಮಾಡ್ತಿದೆ ಎಂದು ಲೇವಡಿ ಮಾಡುತ್ತಿದ್ದರು. ಆದರೆ ಬಾಬಣ್ಣನಿಗೆ ಆ ನಾಯಿಗಳ ಕಣ್ಣಿನಲ್ಲಿ ಕಾಣುವ ಪ್ರೀತಿ, ಬೆಳಿಗ್ಗೆ ಟೈ ಹಾಕಿ