ಎನ್ಕೌಂಟರ್

  • 267
  • 69

ಮಂಗಳೂರಿನ ಹೊರವಲಯದ ಆ ಹಳೆಯ ಮೀನು ಸಂಸ್ಕರಣಾ ಘಟಕ ಈಗ ಕೇವಲ ಪಾಳುಬಿದ್ದ ಕಟ್ಟಡವಾಗಿರಲಿಲ್ಲ, ಅದು ಸಾವಿನ ಮೌನವನ್ನು ಹೊದ್ದ ಮಸಣದಂತೆ ಭಾಸವಾಗುತ್ತಿತ್ತು. ಆ ರಾತ್ರಿ ಕತ್ತಲೆಯು ಅದೆಷ್ಟು ಗಾಢವಾಗಿತ್ತೆಂದರೆ, ಬೀಳುವ ಮಳೆಹನಿಗಳು ಕೂಡ ಕಪ್ಪು ಬಣ್ಣಕ್ಕೆ ತಿರುಗಿದಂತೆ ಕಾಣುತ್ತಿದ್ದವು. ಸಮುದ್ರದ ಅಲೆಗಳು ಹತ್ತಿರದ ಬಂಡೆಗಳಿಗೆ ಅಪ್ಪಳಿಸುವ ಸದ್ದು ಮೈ ನಡುಗಿಸುವಂತಿತ್ತು. ರಾತ್ರಿ ಸಮಯ ಸರಿಯಾಗಿ 2.22. ಎಸಿಪಿ ವಿಕ್ರಮ್ ತನ್ನ ಬೈಕ್ ನಿಲ್ಲಿಸಿದಾಗ, ಅವನ ಉಸಿರಾಟದ ಸದ್ದಿಗಿಂತ ಮಳೆಯ ಆರ್ಭಟವೇ ಜೋರಾಗಿತ್ತು. ಅವನಿಗೆ ಬಂದಿದ್ದ ಇನ್ಫಾರ್ಮೇಷನ್ ಪಕ್ಕಾ ಇತ್ತು. ನಗರದ ಮೋಸ್ಟ್ ವಾಂಟೆಡ್ ಶಾರ್ಪ್ ಶೂಟರ್ ಕಾಳ ಮತ್ತು ಅವನ ಗ್ಯಾಂಗ್ ಇವತ್ತು ಇಲ್ಲೇ ಅಡಗಿದ್ದಾರೆ. ವಿಕ್ರಮ್ ತನ್ನ ಕೈಗಡಿಯಾರ ನೋಡಿದಾಗ ಆ 2:22 ಸಂಖ್ಯೆ ಅವನನ್ನು ಕೆಣಕುವಂತೆ ಕಂಡಿತು. ಅವನ ಜೀವನದ ಪ್ರತಿಯೊಂದು ಮುಖ್ಯ ಘಟನೆಯಲ್ಲೂ ಈ ಸಂಖ್ಯೆ ಬೆಂಬಲವಾಗಿತ್ತು ಅಥವಾ ಬೆನ್ನಟ್ಟುತ್ತಿತ್ತು.ವಿಕ್ರಮ್ ಕಟ್ಟಡದ ಒಳಗೆ ಹೆಜ್ಜೆ ಇಟ್ಟಾಗ ಹಳೆಯ ಕಬ್ಬಿಣದ ಸರಪಳಿಗಳು ಗಾಳಿಗೆ ಅಲುಗಾಡುತ್ತಾ ಕಿರುಚುವಂತೆ ಶಬ್ದ