ಬಯಸದೆ ಬಂದವಳು... - 22

(156)
  • 1.7k
  • 536

ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂಕೋಚ ಪಡತಿದ್ದೀರಾ ಶಶಿ ಅವರೇ?” ಮೋಹನ್ ಅವರ ಗಂಭೀರ ಧ್ವನಿ ಮನೆಯ ನಿಶ್ಯಬ್ಧತೆಯನ್ನು ಚೀರಿಕೊಂಡಿತು.“ಅದೇನಾದ್ರೂ ಇದ್ದರೆ ನೇರವಾಗಿ ಹೇಳಿ... ಮುಚ್ಚಿಟ್ಟ್ರೆ ಇನ್ನಷ್ಟು ಕಷ್ಟ ಆಗುತ್ತೆ.”ಆ ಕ್ಷಣದಲ್ಲಿ ಮನೆ ತುಂಬಾ ಒಂದು ವಿಚಿತ್ರ ಮೌನ ಆವರಿಸಿತ್ತು.ಪ್ರತಿಯೊಬ್ಬರ ಮುಖದಲ್ಲೂ ಅಜ್ಞಾತ ಭಯ, ಕಳವಳ ಮತ್ತು ದುಃಖದ ನೆರಳು ಸ್ಪಷ್ಟವಾಗಿ ಕಾಣಿಸುತ್ತಿತ್ತು.ಸುಧಾಕರ್ ಅಣ್ಣನ ಮುಖದತ್ತ ಗಾಬರಿಯಿಂದ ನೋಡಿದ.“ಅಣ್ಣಾ... ನೀನು ಏನು ಯೋಚನೆ ಮಾಡ್ತಾ ಇದ್ದೀಯಾ ಅಂತ ನಂಗೆ ಅರ್ಥ ಆಗ್ತಿಲ್ಲ...”ಅವನ ಧ್ವನಿಯಲ್ಲಿ ಆತಂಕ ಸ್ಪಷ್ಟವಾಗಿತ್ತು.ಆದರೆ ಶಶಿಧರ್ ಮುಖದಲ್ಲಿ ಮಾತ್ರ ಗಂಭೀರ ನಿರ್ಧಾರದ ಛಾಪು ಕಾಣಿಸುತ್ತಿತ್ತು.ಸ್ವಲ್ಪ ಹೊತ್ತು ತಲೆತಗ್ಗಿಸಿ ನಿಂತ ಶಶಿಧರ್ ಕೊನೆಗೆ ಆಳವಾದ ನಿಟ್ಟುಸಿರು ಬಿಟ್ಟರು.“ನೋಡಿ ಮೋಹನ್ ಅವರೇ... ನಾನು ಈಗ ಹೇಳೋ ಮಾತು ನಿಮ್ಮ ಮನಸ್ಸಿಗೆ ಎಷ್ಟು ನೋವು ಕೊಡುತ್ತದೋ ಗೊತ್ತಿಲ್ಲ. ಆದರೆ ನನ್ನಿಂದ ಒಂದು ದೊಡ್ಡ ತಪ್ಪಾಗಿದೆ... ದಯವಿಟ್ಟು ನನ್ನನ್ನ ಕ್ಷಮಿಸಿ ಬಿಡಿ.”ಆ ಮಾತು ಕೇಳುತ್ತಿದ್ದಂತೆಯೇ ಮೋಹನ್ ಅವರ ಮನಸ್ಸಿನಲ್ಲಿ ನೂರಾರು