ಕೆಮಿಕಲ್

ಮಂಗಳೂರಿನ ಆ ಹಳೆಯ ಬಂದರಿನ ಮೇಲೆ ಅಂದು ಸುರಿಯುತ್ತಿದ್ದ ಮಳೆ ಸಾಮಾನ್ಯ ನೀರಾಗಿರಲಿಲ್ಲ ಅದು ಇಡೀ ನಗರದ ನೆಮ್ಮದಿಯನ್ನೇ ತೊಳೆದುಹಾಕಲು ಬಂದ ಕರಾಳ ಮುನ್ಸೂಚನೆಯಂತಿತ್ತು. ಕತ್ತಲೆಯ ನಡುವೆ ತನ್ನ RTRT ಬೈಕ್ ಹತ್ತಿ ವೇಗವಾಗಿ ಧಾವಿಸುತ್ತಿದ್ದ ವಿವೇಕ್, ಕೇವಲ ಮೂರು ತಿಂಗಳ ಹಿಂದೆ ಮಂಗಳೂರಿನ ಅತ್ಯಂತ ಪ್ರಭಾವಿ ಮತ್ತು ಯಶಸ್ವಿ ಯುವ ಬರಹಗಾರನಾಗಿದ್ದ. ಅವನ ಲೇಖನಿಯಿಂದ ಮೂಡಿಬರುತ್ತಿದ್ದ ಒಂದೊಂದು ಸಸ್ಪೆನ್ಸ್ ಕಥೆಯೂ ಇಂಟರ್ನೆಟ್ ಲೋಕದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದವು. ಕಥೆ ಬರೆಯುವುದಷ್ಟೇ ಅಲ್ಲ, ಬಾಕ್ಸಿಂಗ್ ರಿಂಗ್‌ನ ಒಳಗೆ ಇಳಿದರೆ ಎದುರಾಳಿಗಳ ಹೆಡೆಮುರಿ ಕಟ್ಟುತ್ತಿದ್ದ ಅಪ್ರತಿಮ ಚಾಂಪಿಯನ್ ಅವನು. ಅವನ ಮೆದುಳಿನಲ್ಲಿ ಹರಿಯುತ್ತಿದ್ದ ಉತ್ಸಾಹದ ರಸಾಯನಿಕಗಳು ಅವನನ್ನು ಸದಾ ಕ್ರಿಯಾಶೀಲವಾಗಿ ಇಡುತ್ತಿದ್ದವು.ಆದರೆ, ಕಳೆದ ಎರಡು ತಿಂಗಳುಗಳಿಂದ ವಿವೇಕ್‌ನ ಬದುಕಿನಲ್ಲಿ ಎಲ್ಲವೂ ಬದಲಾಗಿಹೋಗಿತ್ತು. ಇದ್ದಕ್ಕಿದ್ದಂತೆ ಅವನ ಲೇಖನಿ ಮೂಕವಾಗಿತ್ತು, ಬರೆಯಲು ಲ್ಯಾಪ್‌ಟಾಪ್ ತೆರೆದರೆ ಕೀಲಿಮಣೆಯ ಮೇಲೆ ಬೆರಳುಗಳು ಹೆಪ್ಪುಗಟ್ಟುತ್ತಿದ್ದವು. ಬಾಕ್ಸಿಂಗ್ ಗ್ಲೌಸ್ ಮುಟ್ಟಿದರೆ ಒಂದು ರೀತಿಯ ಅನಾಮಧೇಯ ಭಯ ಅವನನ್ನು ಕಾಡುತ್ತಿತ್ತು. ಇಡೀ ರಾತ್ರಿ ನಿದ್ದೆಯಿಲ್ಲದೆ