ವ್ಯೋಮ - 5

ಋಷಿತ್ ಹೊಸ ಬೈಕ್ ಮೇಲೆ ಬರೋದನ್ನ ನೋಡಿ, ಕಲ್ಪನಾ ಅವರು, ಸಂತೋಷ ದಿಂದ ಏನ್ ಋಷಿ ಹೊಸ ಬೈಕ್ ತಗೊಂಡ ಅಂತ ಕೇಳ್ತಾರೆ.ಋಷಿತ್... ಇಲ್ಲಾ ಅಮ್ಮ ನಮ್ ಮೇಡಂ ಅವರು ಕೊಡಿಸಿದ್ರು, ಬನ್ನಿ ಒಂದು ರೌಂಡ್ ಹೋಗಿ ಬರೋಣ.ಕಲ್ಪನಾ... ಬೇಡ ಋಷಿ.ಋಷಿತ್... ಅಮ್ಮ ಪ್ಲೀಸ್.ಕಲ್ಪನಾ ಅವರಿಗೆ ಅವನ ಮನಸನ್ನ ನೋಯಿಸೋಕೆ ಇಷ್ಟ ಇಲ್ಲದೆ ಸರಿ ನಡಿ ಅಂತ ಹೇಳಿ,  ಅವನ ಬೈಕ್ ಅಲ್ಲಿ ಕೂತ್ಕೋತಾರೆ.  ನಂತರ ಬೈಕ್ ಅಲ್ಲಿ ಒಂದು ರೌಂಡ್ ಹೋಗಿ ಬರ್ತಾರೆ.ಕಲ್ಪನಾ ಅವರು ಬೈಕ್ ಇಳಿದು, ಸರಿ ಋಷಿ,, ನಿನ್ ಹೋಗಿ ಕೈ. ಕಾಲು ತೊಳ್ಕೊಂಡು ಬಾ ಊಟಕ್ಕೆ ಇಡ್ತೀನಿ. ಮತ್ತೆ ನಿನ್ನ ಕೆಲಸಕ್ಕೆ ಲೇಟ್ ಆಗುತ್ತೆ.ಋಷಿತ್,,, ಬೇಡ ಅಮ್ಮ ಬರ್ತಾ ಊಟ ಮಾಡ್ಕೊಂಡೆ ಬಂದೆ.  ಈಗ ಸ್ವಲ್ಪ ರೆಸ್ಟ್ ಮತ್ತೆ ಸಂಜೆ 7 ಗಂಟೆಗೆ ಹೋಗಿ ರಾತ್ರಿ 12 ಗಂಟೆಗೆ ಬರ್ತೀನಿ. ಕಲ್ಪನಾ,,, ಹೌದ ಸರಿ ನಿನ್ ಹೋಗಿ ರೆಸ್ಟ್ ಮಾಡು, ರಾತ್ರಿ ಊಟನ ನಿನ್ನ ರೂಮಲ್ಲಿ ಇಡ್ತೀನಿ,