ತಟಸ್ಥ ಬಿಂದು - 2

  • 276
  • 114

ಕಳುವಾದ ಎರಡು ದಿನಗಳ ನಂತರವೂ ಶಿರಡಿಹಳ್ಳಿಯಲ್ಲಿ ಯಾವುದೇ ಕೋಲಾಹಲವಿರಲಿಲ್ಲ. ಬದಲಿಗೆ, ಒಂದು ಬಗೆಯ ಭಾರವಾದ ಮೌನ ಆವರಿಸಿತ್ತು. ಊರ ಜನರಿಗೆ ಕಳ್ಳ ಸಿಗದಿರುವ ಆತಂಕಕ್ಕಿಂತ, ಇನ್ನು ನಮ್ಮ ನಂಬಿಕೆಯೂ ಅನ್ಯರಂತೆ ದುರ್ಬಲವಾಯಿತೇ?  ಎಂಬ ಸಂಕಟ ಹೆಚ್ಚು ಕಾಡುತ್ತಿತ್ತು. ಕಳ್ಳ ಸಿಕ್ಕಿದ್ದರೆ, ಅವನನ್ನು ಶಿಕ್ಷಿಸಿ ಮತ್ತೆ ನಂಬಿಕೆ ಗಳಿಸಬಹುದಿತ್ತು. ಆದರೆ ಕಳ್ಳ ಸಿಗದಿರುವುದು, ಪ್ರತಿಯೊಬ್ಬರ ಮೇಲೂ, ಸ್ವತಃ ತಮ್ಮ ಮೇಲೂ ಸೂಕ್ಷ್ಮ ಅನುಮಾನ ಹುಟ್ಟಿಸಿತ್ತು. ತಿಮ್ಮಣ್ಣಯ್ಯನವರೂ ಈ ಮೌನವನ್ನು ಗಮನಿಸಿದರು. ಅವರು ತಮ್ಮ ಮೊಮ್ಮಗ ವಿಶ್ವಾಸ್‌ನಿಗೆ ತಾಳೆಗರಿಯ ಗ್ರಂಥವನ್ನು ಓದಲು ಹೇಳಿ, ತಮ್ಮ ಹಳೆಯ ದಿನಚರಿಯ ಪುಟಗಳನ್ನು ತೆಗೆದುಕೊಂಡು ಕೇಂದ್ರದ ಮುಂದೆ ಕುಳಿತರು.ಅಜ್ಜ, ವಿಶ್ವಾಸ್ ಕೇಳಿದ, ಆ ಚಿನ್ನದ ಚೀಲವನ್ನು ನಿಜವಾಗಿಯೂ ಆ ಸಾಧುವೇ ಕದ್ದಿರಬಹುದೇ?ತಿಮ್ಮಣ್ಣಯ್ಯ: ಇಲ್ಲ ವಿಶ್ವಾಸ್. ಸಾಧು ಕದ್ದಿದ್ದರೆ, ಅವನಿಗೆ ಪಾಪದ ಭಯ ಇರಲಿಲ್ಲ. ಪಾಪದ ಭಯವಿಲ್ಲದವನು ಸಾಧುವಾಗುವುದಿಲ್ಲ. ಸಾಧು ಹಣವನ್ನು ಪ್ರೀತಿಸಲಾರ.ವಿಶ್ವಾಸ್: ಹಾಗಾದರೆ ಆ ರೈತ, ಗಣೇಶಪ್ಪ, ಅಥವಾ ಶಿವಣ್ಣ... ಯಾರಾದರೂ...?ತಿಮ್ಮಣ್ಣಯ್ಯ: ಕಳ್ಳ ಯಾರೇ ಆಗಿರಲಿ. ನಷ್ಟದ ಬೆಲೆ