ತಟಸ್ಥ ಬಿಂದು - 3

  • 255
  • 93

ಗಣೇಶಪ್ಪನವರ ಆಘಾತಕಾರಿ ತಪ್ಪೊಪ್ಪಿಗೆಯ ನಂತರ ಮತ್ತು ಚಿಲಕದ ವೈಫಲ್ಯದ ನಂತರ, ಊರಿನ ಹಿರಿಯರೆಲ್ಲಾ ಸೇರಿ ಒಂದು ನಿರ್ಣಾಯಕ ಸಭೆ ನಡೆಸಿದರು. ನಂಬಿಕೆಯು ಸತ್ತಿದೆ ಎಂದು ಒಪ್ಪಿಕೊಳ್ಳಲು ಮನಸ್ಸಿಲ್ಲದಿದ್ದರೂ, ಸತ್ಯವನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಧರ್ಮಸಂಕೇತ' ಕೇಂದ್ರವು ತನ್ನ ಮೂಲ ಉದ್ದೇಶವನ್ನು ಕಳೆದುಕೊಂಡಿತು.    ಗಣೇಶಪ್ಪನವರ ಪ್ರಭಾವದಿಂದ ಮತ್ತು ಬೀಗದ ಮೇಲೆ ಬೆಳೆದ ಭ್ರಮೆಯಿಂದ, ಸಮುದಾಯ ಕೇಂದ್ರವನ್ನು ಸಂಪೂರ್ಣವಾಗಿ ನವೀಕರಿಸಲು ನಿರ್ಧರಿಸಲಾಯಿತು. ಹಳೆಯ ತೆರೆದ ಮಂಟಪವನ್ನು ಕೆಡವಿ, ಅಲ್ಲಿ ಬಲಿಷ್ಠವಾದ ಬಾಗಿಲುಗಳು ಮತ್ತು ಗ್ರಾಮೀಣ ಬ್ಯಾಂಕ್ ಶಾಖೆಯನ್ನು ಸ್ಥಾಪಿಸಲು ತೀರ್ಮಾನಿಸಲಾಯಿತು.ವಿಶ್ವಾಸ್ ಈ ನಿರ್ಧಾರವನ್ನು ಮನಸ್ಸಿಲ್ಲದಿದ್ದರೂ ಒಪ್ಪಿಕೊಂಡರು. ಅವರ ಅಭಿಪ್ರಾಯದಲ್ಲಿ, ಬೀಗ ಹಾಕುವುದು ಕೇವಲ ಕಳ್ಳರಿಗಲ್ಲ, ನಮ್ಮದೇ ಭವಿಷ್ಯಕ್ಕೆ ನಾವು ಹಾಕುವ ಬೀಗ. ಕೇಂದ್ರದ ಹಳೆಯ ಮರದ ಚೌಕಟ್ಟಿನ ಜಾಗದಲ್ಲಿ ದಪ್ಪ ಕಾಂಕ್ರೀಟ್ ಗೋಡೆಗಳು ಎದ್ದವು. ಬಾಗಿಲುಗಳು ಇನ್ನು ಮುಂದೆ ಮರದ್ದಾಗಿರಲಿಲ್ಲ. ಅವು ಕಬ್ಬಿಣದವು ಪ್ರವಚನ ನಡೆಯುತ್ತಿದ್ದ ಜಾಗದಲ್ಲಿ ಖಜಾನೆ ಕೋಣೆ ನಿರ್ಮಾಣವಾಯಿತು.ಗಣೇಶಪ್ಪನೇ ಈ ಹೊಸ ಬ್ಯಾಂಕಿನ ಮೇಲ್ವಿಚಾರಣೆಯನ್ನು ವಹಿಸಿಕೊಂಡರು ಮತ್ತು ಅದಕ್ಕೆ ಭದ್ರ ಕೋಟೆ