ಪಶ್ಚಿಮ ಘಟ್ಟಗಳ ಆಳದಲ್ಲಿ, ಯಾವುದೇ ನಕ್ಷೆಯಲ್ಲೂ ಗುರುತಿಸಲ್ಪಡದ ಒಂದು ಜಾಗವಿತ್ತು. ಸ್ಥಳೀಯರು ಅದನ್ನು ಕತ್ತಲ ಕಣಿವೆ ಎಂದು ಕರೆಯುತ್ತಿದ್ದರು. ಸುತ್ತಲೂ ಆಕಾಶ ಮುಟ್ಟುವಂತಹ ಕಡಿದಾದ ಕಪ್ಪು ಬಂಡೆಗಳು, ವರ್ಷದ ಮುನ್ನೂರರವತ್ತು ದಿನವೂ ಅಲ್ಲಿ ಆವರಿಸಿರುವ ಮಂಜು ಮತ್ತು ದಟ್ಟವಾದ ಕಾಡು. ಆ ಕಣಿವೆಯ ಭೌಗೋಳಿಕ ರಚನೆ ಎಂತದ್ದಿತ್ತೆಂದರೆ, ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲೆ ಬಂದಾಗಲೂ ಅಲ್ಲಿಗೆ ಬೆಳಕು ತಲುಪುತ್ತಿರಲಿಲ್ಲ. ಸದಾ ಕಾಲ ಮುಸ್ಸಂಜೆಯ ಕತ್ತಲೆ ಅಲ್ಲಿ ಮನೆಮಾಡಿರುತ್ತಿತ್ತು. ಆದರೆ, ಆ ಕಣಿವೆಗೆ ಕೇವಲ ಪ್ರಕೃತಿಯ ಕಾರಣದಿಂದ ಕತ್ತಲ ಕಣಿವೆ ಎಂಬ ಹೆಸರು ಬಂದಿರಲಿಲ್ಲ. ಅಲ್ಲಿಗೆ ಹೋದ ಯಾವೊಬ್ಬ ಮನುಷ್ಯನೂ ಮರಳಿ ಬಂದಿಲ್ಲ ಎಂಬ ಭೀಕರ ಇತಿಹಾಸ ಅದಕ್ಕಿತ್ತು.ಶರತ್ ತನ್ನ ಹೆಗಲ ಮೇಲಿದ್ದ ಬೃಹತ್ ಟ್ರೆಕ್ಕಿಂಗ್ ಬ್ಯಾಗ್ ಅನ್ನು ಸರಿಪಡಿಸಿಕೊಳ್ಳುತ್ತಾ ಆ ಕಣಿವೆಯ ಪ್ರವೇಶ ದ್ವಾರದಂತಿದ್ದ ಸಣ್ಣ ಹಾದಿಯ ಮುಂದೆ ನಿಂತಿದ್ದ. ಅವನ ಕೈಯಲ್ಲಿದ್ದ ಅತ್ಯಾಧುನಿಕ ಕ್ಯಾಮೆರಾ ಮತ್ತು ಜಿಪಿಎಸ್ ಸಾಧನಗಳು ಈಗಾಗಲೇ ಸಿಗ್ನಲ್ ಕಳೆದುಕೊಂಡು ನಿಷ್ಕ್ರಿಯವಾಗಿದ್ದವು.ಅತ್ತ ಹೋಗಬೇಡ ತಂಬಿ ಅದು ಬದುಕಿ