ಶುಭಮಿಲನ

  • 186
  • 57

ಸೂಚನೆ :- ಇ ಕಥೆಯು ನನ್ನ ಸ್ವ ರಚನೆಯಾಗಿದ್ದು ಎಲ್ಲಿಯಾದರೂ ಹೋಲಿಕೆ ಕಂಡುಬಂದರೆ ಅದು ಕೇವಲ ಕಾಕತಾಳಿಯವಷ್ಟೇ.... ಹೃದಯದ ಒಡತಿ ಕಥೆಯ ಪ್ರೀತಿಯ ಅಭಿಮಾನಿಗಳಿಗೆ ಸಮರ್ಪಣೆ... ಏಕೆಂದರೆ ಇದು ಅದರ ಮುಂದುವರಿದ ಭಾಗ ಸೀಸನ್ 2🫰...ನಿಮ್ಮ ಪ್ರೋತ್ಸಾಹ ಇ ಪುಟ್ಟ ಬರಹಗಾರ್ತಿಯ ಮೇಲೆ ಸದಾ ಇರಲಿ ಅಧ್ಯಾಯ -1" ತುಳಸಿ ಗಿಡದ ಮುಂದೆ ಕೈ ಮುಗಿದು ಶ್ರದ್ದೆಯಿಂದ ತನ್ನ ಪುಟ್ಟ ಬೇಡಿಕೆಯ ದೇವರ ಮುಂದೆ ಇಡುತಿದ್ದ ಮುಗ್ದ ಮನಸ್ಸಿನ ಕೋರಿಕೆ ದೇವರಿಗೆ ತಲುಪುವುದಾದರು ಯಾವಾಗಲೋ.... ಕಣ್ತೆರೆದು ಪೂಜೆ ತಟ್ಟೆಯಲ್ಲಿದ್ದ ಪ್ರಸಾಧದ ಬಟ್ಟಲಿನಿಂದ ಸಿಹಿ ಪೊಂಗಲ್ ತೆಗೆದುಕೊಂಡು ಬಾಯಿಗೆ ಹಾಕಿಕೊಂಡವಳು ತನ್ನ ಅಮ್ಮನಿಗೆ ಕಾಣದಿರಲೆಂದು ಬೆರಳುಗಳನ್ನು ಚೀಪಿದವಳು, ಪಂಚಪಾತ್ರೆಯಿಂದ ನೀರು ಚುಮುಕಿಸಿಕೊಂಡು ಕೈ ತೊಳೆದುಕೊಳ್ಳುತ್ತಾಳೆ... ದೇವ್ರೇ ಕ್ಷಮಿಸಿಬಿಡು ಆಗಿಂದ ಅದರ ಘಮ ಬಾಯಿಯಲ್ಲಿ ನೀರು ಬರ್ತಿತ್ತು, ಆದ್ರೂ ನಾನು ಪೂಜೆ ಮುಗಿಯುವವರೆಗೂ ತಿಂದಿಲ್ಲ ಗೊತ್ತ, ನೀವು ಚಿಕ್ಕ ಮಕ್ಕಳು ಮಾಡಿದ ತಪ್ಪನ್ನ ಬೇಗ ಕ್ಷಮಿಸ್ತೀರಾ ಯಾಕಂದ್ರೆ ಮಕ್ಕಳು ದೇವರಂತೆ ಅಂತ ಮಮ್ಮಿ ಹೇಳ್ತಿರ್ತಾರೆ