How to become proficient and wise books and stories free download online pdf in Kannada

ಪ್ರವೀಣ ಹೇಗೆ ಆದ ಜಾಣ


ಪ್ರವೀಣ ಹೇಗೆ ಆದ ಜಾಣ

( ಮಕ್ಕಳ ನೀತಿ ಕಥೆ)

ಲೇಖಕ ವಾಮನಾಚಾರ್ಯ


ರಾಘವಪುರ್ ನಗರ ದಲ್ಲಿ ಬೆಳಗಿನ ಹತ್ತು ಗಂಟೆ ಸಮಯ. ಅನ್ನಪೂರ್ಣ ಮಾಧ್ಯಮಿಕ ಶಾಲೆ ಏಳನೇ ತರಗತಿಯಲ್ಲಿ ಅರ್ಧ ಗಂಟೆ ಮೊದಲು ಇದ್ದ ಲವಲವಿಕೆ ಒಮ್ಮಿ0 ದೊಮ್ಮೆಲೆ ಮಾಯ. ಕಾರಣ ಪ್ರವೀಣ್ ಎನ್ನುವ ವಿದ್ಯಾರ್ಥಿ ಗೆ ತಲೆ ಸುತ್ತಿದಂತೆ ಆಗಿ ಎಚ್ಚರ ತಪ್ಪಿ ನೆಲದ ಮೇಲೆ ಬಿದ್ದ. ತರಗತಿಯ ಎಲ್ಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಗಿರಿನಾಥ್ ಗಾಬರಿ ಆದರು. ಸ್ವಲ್ಪ ಸಮಯದ ಹಿಂದೆ ವಿಜ್ಞಾನ ವಿಷಯದ ಮೇಲೆ ಗಿರಿನಾಥ ಅವರು ಪಾಠ ಹೇಳುವ ದನ್ನು ಮುಗಿಸಿದ ನಂತರ ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಉತ್ತರ ಕೊಡುತ್ತಿದ್ದರು. ಪ್ರವೀಣ್ ಎನ್ನುವ ವಿದ್ಯಾರ್ಥಿ ಸರದಿ.

“ನೀರಿನ ರಾಸಾಯನಿಕ ಸೂತ್ರ ಹೇಳು?”

ಅದಕ್ಕೆ ಪ್ರವೀಣ,

“HIJKLMNO”

“ಏನೋ ಅದು ನೀನು ಹೇಳುತ್ತಿರುವದು?”

“ನೀವೇ ಹೇಳಿದ್ದಿಲ್ಲವೇ ಸಾರ್. ನೀರಿನ ರಾಸಾಯನಿಕ ಸೂತ್ರ ಎಚ್ ಟು ಒ (H to O) ಎಂದು.”

ಉದ್ಟಟ ತನ ದಿಂದ ತಪ್ಪುಉತ್ತರ ಕೊಡುವದ ಲ್ಲದೆ ಪಕ್ಕದ ಹುಡುಗನ ಜೊತೆಗೆ ಇದರ ಬಗ್ಗೆ ಚೇಷ್ಟೆ ಮಾಡುವದನ್ನು ಗಮನಿಸಿದ ಗಿರಿ ನಾಥ್ ಅವರಿಗೆ ಎಲ್ಲಿಲ್ಲದ ಕೋಪ ಬಂದು ಪ್ರವೀಣ್ ನಿಗೆ ಬೆತ್ತದಿಂದ ಕೈಗೆ ಜೋರಾಗಿ ಬಾವು ಬರುವ ಹಾಗೆ ಹೊಡೆದರು. ನೋವು ತಡೆಯಲು ಆಗದೇ ಪ್ರವೀಣ ಕುಸಿದು ಬಿದ್ದ. ತಡ ಮಾಡದೇ ಕೆಲವು ವಿದ್ಯಾರ್ಥಿಗಳು ಒಂದು ಬೆಂಚ್ ಖಾಲಿ ಮಾಡಿ ಪ್ರವೀಣ್ ಗೆ ಅದರ ಮೇಲೆ ಮಲಗಿಸಿದರು. ಶಾಲೆಯಲ್ಲಿ ಇದ್ದ ದಿಂಬು ಹಾಗೂ ಜಮ ಖಾನೆ ತಂದರು. ಅವನ ಕೆಂಪಾದ ಅಂಗೈಗೆ ಸುಧೀರ್ ಒದ್ದೆ ಬಟ್ಟೆ ತಂದು ಕಟ್ಟಿದ. ಉಳಿದ ವಿದ್ಯಾರ್ಥಿಗಳು ಅವನಿಗೆ ಸಹಾಯ ಮಾಡಿದರು. ಎಲ್ಲರಿಗೂ ಹೊರಗೆ ಹೋಗಲು ಹೇಳಿ ಫ್ಯಾನ್ ಆನ್ ಮಾಡಿದರು.

ಈ ಆಚಾ ತುರ್ಯ ಗಮನಿಸಿದ ಗಿರಿನಾಥ್ ಅವರು ಗಾಬರಿ ಆಗಿ ಒಂದು ನಿಮಿಷ ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತರು.

ಆಗ ಸುಧೀರ್,

“ಸರ್, ಮೊದಲು ಪ್ರವೀಣ್ ಗೆ ಆಸ್ಪತ್ರೆ ಕರೆದುಕೊಂಡು ಹೋಗಿ. ಅವನು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ನಮಗೂ ತುಂಬಾ ಗಾಬರಿ ಆಗಿದೆ,” ಎಂದ.

ಗಿರಿನಾಥ್ ಅವರಿಗೆ ಸುಧೀರ್ ಹೇಳಿದ್ದು ಸರಿ ಅನಿಸಿ ತಾವೇ ಅಸ್ಪತ್ರೆಗೆ ಹೋಗಿ ಡಾ. ಸತೀಶ್ ಅವರನ್ನು ಕರೆದುಕೊಂಡು ಬ0ದರು. ಸುಧೀರ್, ಹೆಡ್ ಮಾಸ್ಟರ್ ಮುಕುಂದ ರಾವ್ ಭೇಟಿ ಆಗಿ ಅವರಿಗೆ ಆಗಿರುವದನ್ನು ವಿವರಿಸಿದ.

ಇದನ್ನು ಕೇಳಿದ ರಾವ್ ಹುಡುಗ ನನ್ನು ನೋಡಲು ತರಗತಿಗೆ ಬಂದರು. ಆಗಲೇ ಡಾಕ್ಟರ್ ಬಂದು ಪರೀಕ್ಷೆ ಮಾಡಿ ಗಾಬರಿ ಆಗುವ ಕಾರಣ ಇಲ್ಲ. ಹುಡುಗನಿಗೆ ಬೇಗ ಆಸ್ಪತ್ರೆಗೆ ಕರೆದುಕೊಂಡು ಬನ್ನಿ. ಪ್ರವೀಣ ಸಾಮಾನ್ಯ ಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕು,” ಎಂದು ಹೇಳಿ ಹೋಗಿಬಿಟ್ಟರು.

ಅಷ್ಟರಲ್ಲಿ ಪ್ರವೀಣ್ ನ ತಂದೆ ತಾಯಿ ಬಂದರು. ಹೆಡ್ ಮಾಸ್ಟರ್, ಅವರಿಗೆ ಸಮಾಧಾನ ಮಾಡಿದರು.

"ಹೆಸರಿಗೆ ತಕ್ಕಂತೆ ನಿಮ್ಮ ಮಗ ಕುಚೇಷ್ಟೆ ಯಲ್ಲಿ ಪ್ರವೀಣ. ಈಗಾಗಲೇ ಎಷ್ಟೋ ಸಲ ಅವನಿಗೆ ಅಭ್ಯಾಸ ದ ಕಡೆ ಲಕ್ಷ್ಯ ಕೊಡು ಎಂದು ವಾರ್ನ್ ಮಾಡಿ ದರೂ ಅವನು ಹಾಗೆ ಇದ್ದು ತನ್ನ ಸ್ವಭಾವ ಬದಲಿಸಲಿಲ್ಲ. ನಿಮಗೆ ಈ ಬಗ್ಗೆ ದೂರು ಕೊಟ್ಟರೂ ಅದರ ಪರಿಣಾಮ ಏನೂ ಆಗಲಿಲ್ಲ. ಸರಳ ಪ್ರಶ್ನೆಗೆ ಪ್ರವೀಣ್ ಗೆ ಉತ್ತರ ಗೊತ್ತಿದ್ದರೂ ಉದ್ದೇಶ ಪೂರ್ವಕವಾಗಿ ತಪ್ಪು ಉತ್ತರ ಕೊಟ್ಟ."

ಇವರ ಸಂಭಾಷಣೆ ನಡೆದಾಗ ಪ್ರವೀಣ್ ಗೆ ಸ್ವಲ್ಪ ಚೇತರಿಕೆ ಬರುವದನ್ನು ಗಿರಿ ನಾಥ್ ಗಮನಿಸಿ ದರು. ಬಹುಷಃ ಈಗತಾನೆ ಡಾಕ್ಟರ್ ಆರೈಕೆ ಮಾಡಿದ ಪರಿಣಾಮ. ಬದುಕಿದೆಯಾ ಬಡಜೀವ ಎಂದು ಗಿರೀನಾಥ್ ಮನಸ್ಸಿನಲ್ಲೇ ಅಂದು ಕೊಂಡರು.

ಆಗ ಪ್ರವೀಣ,

“ಹೆಡ್ ಮಾಸ್ಟರ್ ಸರ್, ದಾರಿ ತಪ್ಪಿದ ನನಗೆ ಈ ಘಟನೆಯಿಂದ ಇಂದಿ ನಿಂದಲೇ ಕುಚೇಷ್ಟೆ ಬಿಟ್ಟು ಪರಿಶ್ರಮ ವಹಿಸಿ ಸುಧೀರ್ ನ ಹಾಗೆ ಜಾಣ ವಿದ್ಯಾರ್ಥಿ ಆಗುವ ಪಾಠ ಕಲಿಸಿದರು. ಗಿರಿನಾಥ್ ಸರ್ ಅವರು ಹೊಡೆದಿರುವದರಿಂದ ನನಗೆ ಜ್ಞಾನೋದಯ ಆಗಿದೆ,” ಎಂದ.

ಪುಟ್ಟ ಹುಡುಗನ ಅಚ್ಚರಿ ಮಾತುಗಳು ಅಲ್ಲಿದ್ದ ಎಲ್ಲರಿಗೂ ಸಂತೋಷ ವಾಯಿತು. ಅವನ ಅಪ್ಪ ಅಮ್ಮನ ಆನಂದ ಕೇಳಬೇಕೇ?

"ಪ್ರವೀಣ್ ನೀನು ಚೆನ್ನಾಗಿ ಓದಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವದನ್ನು ಬಿಟ್ಟು ಕೆಲವು ಸಲ ಎಲ್ಲವೂ ತಿಳಿದವನಂತೆ ದೊಡ್ಡವರ ಹಾಗೆ ದೊಡ್ಡ ದೊಡ್ಡ ಮಾತಾಡುತ್ತಿ. ಮೊದಲು ನೀನು ಅಭ್ಯಾಸ ಚೆನ್ನಾಗಿ ಮಾಡು. ನಿಜವಾಗಿಯೂ ನೀನು ಜಾಣ. ಮಕ್ಕಳ ಮನಸ್ಸು ಆಟ ಪಾಟ ಗಳಲ್ಲಿ ಹೋಗುವದು ಸಹಜ. ಬೇಗನೆ ನಿನಗೆ ಸದ್ಭುದ್ಧಿ ಬರಲಿ,” ಎಂದರು ಹೆಡ್ ಮಾಸ್ಟರ್.

"ಸರ್, ಇಂದಿನ ಹಾಗೆ ಎಂದೆಂದಿಗೂ ಪರಿಸ್ಥಿತಿ ಬರದೇ ಇರು ವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ." ಎಂದ ಪ್ರವೀಣ್.

"ಸಧ್ಯ ನೀನು ಆಸ್ಪತ್ರೆಗೆ ಹೋಗು. ನಂತರ ಮನೆಗೆ ಹೋಗು," ಎಂದರು ಹೆಡ್ ಮಾಸ್ಟರ್.

"ಆಗಲಿ ಸರ್," ಎಂದ.

ತಂದೆ ತಾಯಿ ಮಗನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದರು. ಡಾ. ಸತೀಶ್, ಕಂಪೌಂಡರ್ ಮುನಿರಾಜು ಕರೆದು ಬ್ಯಾಂಡೇಜ್ ಕಟ್ಟಲು ಹೇಳಿದರು. ಅದಲ್ಲದೆ ಅಯಿಂಟ್ಮೆಂಟ್, ಮಾತ್ರೆಗಳು, ಔಷಧ ಕೊಟ್ಟರು. ಬಿಲ್ ಪಾವತಿ ಮಾಡುವ ಕೌಂಟರ್ ಹತ್ತಿರ ಇದ್ದ ಗಿರೀನಾಥ್ ಆಗಿರುವ ತಪ್ಪು ತನ್ನದು ಬಿಲ್ ತಾನೇ ಪಾವತಿ ಮಾಡುವಾದಾಗಿ ಹೇಳಿದರು. ಅದಕ್ಕೆ ಪ್ರವೀಣ್ ನ ಅಪ್ಪ ಅಮ್ಮ ಒಪ್ಪಲಿಲ್ಲ.

ಮನೆಗೆ ಬಂದಮೇಲೆ ಪ್ರವೀಣ್ ತಾಯಿ,

“ಏನ್ರಿ, ಗಿರೀನಾಥ್ ತಪ್ಪು ಮಾಡಿದ್ದಾನೆ. ಅವನಿಗೆ ಶಿಕ್ಷೆ ಏಕೆ ಆಗಬಾರದು? "

ಅದಕ್ಕೆ ಪ್ರವೀಣ್ ತಂದೆ,

"ನಿನಗೆ ಮಗನ ಮೇಲೆ ಮಮತೆ ಇರುವ ದರಿಂದ ಹೀಗೆ ಮಾತಾಡುತ್ತಿ ಮಕ್ಕಳನ್ನು ಸರಿಯಾದ ದಾರಿಗೆ ತರಲು ಶಿಕ್ಷೆ ಕೊಡುವದು ಸಾಮಾನ್ಯ. ಅವರ ವಿರುದ್ಧ ದೂರು ಕೊಡುವ ಅವಶ್ಯಕತೆ ಇಲ್ಲ. ಆದರೆ ನಮ್ಮ ಮಗನಿಗೆ ಅದು ಅತಿರೇಕ ವಾಗಿದೆ. ಮಗ ತನ್ನಂತೆ ದುಡಿಯುವ ರೈತನಾಗಬೇಕೆಂದು ನಾನು ಮಗನ ಅಭ್ಯಾಸದ ಕಡೆಗೆ ಗಮನ ಹರಿಸಲಿಲ್ಲ," ಎಂದರು.

ರೈತ ಕುಟುಂಬದಿಂದ ಬಂದ ಮಂಜುಳ ಹಾಗೂ ಮಂಜುನಾಥ ಅವರ ಏಕೈಕ ಪುತ್ರ ಪ್ರವೀಣ್. ರಾಘವಪುರ್ ನಿಂದ ಮೂರು ಕಿಲೋ ಮೀಟರ್ ದೂರ ಇರುವ ರಮೇಶನ ಹಳ್ಳಿಯಲ್ಲಿ ಹತ್ತು ಎಕರೆ ಫಲವತ್ತಾಗಿರುವ ಜಮೀನು. ಪರಿಶ್ರಮ ದಿಂದ ಮಂಜುನಾಥ ಅವರು ಪ್ರಗತಿಪರ ರೈತ ರಾಗಿದ್ದರು. ಮಗನಿಗೆ

ಪ್ರೀತಿಯಿಂದ ಬೆಳೆಸಿದರು. ಅದರಿಂದ ಅವನು ವಿದ್ಯಾಭ್ಯಾಸ ದಲ್ಲಿ ನಿರುತ್ಸಾಹಿ ಆಗಿ ಆಟಗಳು,

ಸ್ನೇಹಿತರ ಜೊತೆಗೆ ಕಾಲಹರಣ ಮಾಡಿದ. ಪ್ರವೀಣ್ ನಿಗೆ ಯಾರು ಏನೇ ಹೇಳಲಿ ಅವರ ಕಡೆ ಲಕ್ಷ್ಯ ಕೊಡದೆ ಹೋದ. ಹಾಗೆ ನೋಡಿದರೆ ಅವನಿಗೆ ಓದಿರುವದನ್ನು ಅರ್ಥ ಮಾಡಿಕೊಳ್ಳು ವದು, ನಿರರ್ಗಳವಾಗಿ ಮಾತನಾಡುವ ಕೌಶಲ್ಯ ಇರುವದು ಅಪರೂಪ.

ಪ್ರವೀಣ್ ನಿಗೆ ಶಿಕ್ಷಕರು ಕೊಟ್ಟ ಶಿಕ್ಷೆ ಅವನ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು. ಅವನ ಏಳನೇ ತರಗತಿಯ ಬೋರ್ಡ್ ವಾರ್ಷಿಕ ಪರೀಕ್ಷೆಗೆ ಉಳಿದಿರುವದು ಕೇವಲ ಆರು ತಿಂಗಳು. ದಿನದ ಅಧಿಕ ಸಮಯ ಓದುವದು ಹಾಗೂ ಬರೆಯುವದ ರಲ್ಲಿ ಹೆಚ್ಚಿನ ಸಮಯ ಕಳೆದ..ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಮನದಟ್ಟು ಮಾಡಿಕೊಂಡ.

ಅವನ ಪರಿಶ್ರಮ ಫಲಕಾರಿ ಆಯಿತೇ?

ಅವನ ಹಗಲು ರಾತ್ರಿ ಅಭ್ಯಾಸ ದಲ್ಲಿ ತೊಡಗಿದ. ಸಂದೇಹ ಬಂದಲ್ಲಿ ಶಿಕ್ಷಕರ ಭೇಟಿ ಆಗಿ ಸರಿಯಾಗಿ ತಿಳಿದುಕೊಂಡ. ಪ್ರವೀಣ್ ಶಾಲೆಗೆ ಹೋಗುವದು ತರಗತಿಯಲ್ಲಿ ಗಂಭೀರವಾಗಿ ಕುಳಿತು ಯಾರ ಜೊತೆಗೆ ಕೆಲಸಕ್ಕೆ ಬಾರದ ಮಾತನಾಡದೇ ಇರುವದನ್ನು ಗಮನಿಸಿದ ಇತರ ವಿದ್ಯಾರ್ಥಿ ಗಳಿಗೆ ಹಾಗೂ ಶಿಕ್ಷಕರಿಗೆ ಆಶ್ಚರ್ಯ ವಾಯಿತು. ವಿಜ್ಞಾನ ಮೇಷ್ಟ್ರು ಗಿರಿನಾಥ್, ಪ್ರವೀಣ್ ನಲ್ಲಿ ಆಗಿರುವ ಬದಲಾವಣೆ ನೋಡಿ ಸಂತೋಷ ಪಟ್ಟರು. ಈಗಾಗಲೇ ಹೆಡ್ ಮಾಸ್ಟರ್ ಶಿಕ್ಷಕ ರನ್ನು ಕರೆಸಿ ಮಾತನಾ ಡಿದ ಬಗ್ಗೆ ಪ್ರವೀಣ್ ನಿಗೆ ತಿಳಿಯಿತು.

ಮುಂದಿನ ದಿನಗಳಲ್ಲಿ ಪ್ರವೀಣ್ ಪ್ರತಿಭಾವಂತ ವಿದ್ಯಾರ್ಥಿ ಆಗುವ ಎಲ್ಲ ಲಕ್ಷಣಗಳು ಕಂಡು ಬಂದವು. ಇದರಿಂದ ಇತರ ವಿದ್ಯಾರ್ಥಿಗಳಲ್ಲಿ ವಿಶೇಷವಾಗಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗುವ ಸುಧೀರ್ ಗೆ ಎಲ್ಲಿಲ್ಲದ ಮತ್ಸರ ಬರತೊಡಗಿತು. ಇದನ್ನು ಅವನು ಪ್ರವೀಣ್ ಗೆ ಎಷ್ಟೋ ಬಾರಿ ವ್ಯಕ್ತ ಪಡಿಸಿದ. ಆಗ ಪ್ರವೀಣ್ ಅವನಿಗೆ ಹೇಳಿದ ಮಾತು ಕೇಳಿ ಉಳಿದ ವಿದ್ಯಾರ್ಥಿಗಳು ಭೇಷ್ ಎಂದರು.

ಪ್ರವೀಣ್ ಹೇಳಿರುವದಾದರೂ ಏನು?

"ಏ ಸುಧೀರ್ ನಿನಗೆ ಆಗಿರುವ ನೋವು ನನಗೆ ಗೊತ್ತಿದೆ. ನೀನು ನನ್ನ ಮೇಲೆ ಮತ್ಸರ ಮಾಡುವ ಬದಲು ಪರಿಶ್ರಮ ವಹಿಸಿ ನನಗಿಂತಲೂ ಹೆಚ್ಚಿನ ಅಂಕ ಪಡೆದು ನಂಬರ್ ಒನ್ ಆಗು. ಯಾವುದೂ ಅಸಾಧ್ಯ ಇಲ್ಲ. ನಿನಗೆ ನನ್ನ ಶುಭಾಶಯಗಳು,”ಎಂದ.

ಸುಧೀರ್ ಗೆ ತನ್ನ ತಪ್ಪು ಅರಿವಾಗಿ ಪ್ರವೀಣ್ ನಿಗೆ ಆಲಿಂಗನ ಮಾಡಿದ. ಅಂದಿನಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾದರು. ಅಭ್ಯಾಸ ಜೊತೆ ಜೊತೆಗೆ ಮಾಡಿದರು.

ವಾರ್ಷಿಕ ಪರೀಕ್ಷೆಯಲ್ಲಿ ಪ್ರವೀಣ್ ಇಡೀ ಶಾಲೆಗೆ ಏಳನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಯಲ್ಲಿ ತೇರ್ಗಡೆ ಯಾಗಿ ಎಲ್ಲರ ಮೆಚ್ಚುಗೆ ಪಾತ್ರ ನಾದ. ಶಾಲೆಯ ಆಡಳಿತ ಮಂಡಳಿ ಹಾಗೂ ಹೆಡ್ ಮಾಸ್ಟರ್ ಶಾಲೆಗೆ ತಂದ ಗೌರವ ಎನ್ನುವ ಪ್ರಶಸ್ತಿ ಕೊಟ್ಟರು.

ಇನ್ನೊಂದು ಆಶ್ಚರ್ಯ ಎಂದರೆ ಪ್ರವೀಣ್ ಹಾಗೂ ಸುಧೀರ್ ಪಡೆದ ಒಟ್ಟು ಅಂಕಗಳು ಸರಿಸಮ.

ಆ ಸಮಯ ಕ್ಲಾಸ್ ನಲ್ಲಿ ಪ್ರವೀಣ್ ತನ್ನ ಸ್ವರೂಪೋ ದ್ಧಾರಕಾರದ ಗಿರಿನಾಥ್ ಅವರಿಗೆ ಕಾಲು ಮುಟ್ಟಿ ನಮಸ್ಕಾರ ಮಾಡಿ,

“ಸರ್, ಈಗ ನಾನು ಮೊದಲಿನ ಪ್ರವೀಣ ಅಲ್ಲ ಜಾಣ ಪ್ರವೀಣ,”ಎಂದ.

ತರಗತಿಯ ವಿದ್ಯಾರ್ಥಿಗಳಿಗೆ ನಗು ತಡೆಯಲು ಆಗಲಿಲ್ಲ. ಅವರ ಜೊತೆಗೆ ಗಿರಿ ನಾಥ್ ಜೋರಾಗಿ ನಕ್ಕರು.

ಗಿರೀನಾಥ್ ಅವರು ಪ್ರವೀಣ ಹಾಗೂ ಸುಧೀರ್ ಕರೆದು ಇವರಿಬ್ಬರೂ ನಮ್ಮ ಶಾಲೆಯ ಮುತ್ತುಗಳು ಎಂದರು.

ಮನೆಯಲ್ಲಿ ಅವನ ತಾಯಿಗೆ ಸಂತೋಷ ವಾದರೂ ತಂದೆಗೆ ಒಂದು ಕೊರಗು. ಪ್ರವೀಣ್ ಉಚ್ಚ ಶಿಕ್ಷಣ ಮಾಡಿ ತಮ್ಮ ಅಚ್ಚು ಮೆಚ್ಚಿನ ಕೃಷಿ ವ್ಯವಸಾಯ ಮಾಡುವದಿಲ್ಲ.

ಆ ಸಮಯದಲ್ಲಿ ಪ್ರವೀಣ್ ಅಪ್ಪನಿಗೆ,

ನನಗೆ ಕೃಷಿ ವಿಜ್ಞಾನ ದಲ್ಲಿ ಸಂಶೋಧನೆ ಮಾಡುವ ಗುರಿ ಇದೇ,” ಎಂದ.

ಇದನ್ನು ಕೇಳಿದ ಅಪ್ಪ ಅಮ್ಮನ ಸಂತೋಷಕ್ಕೆ ಮಿತಿ ಇಲ್ಲ.