She came unwillingly... - 1 in Kannada Drama by Kavya Pattar books and stories PDF | ಬಯಸದೆ ಬಂದವಳು... - 1

Featured Books
  • ಬಯಸದೆ ಬಂದವಳು... - 1

    ಎಲ್ಲರಿಗೂ ನಮಸ್ಕಾರ ,ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷ...

  • ನಮಾಮಿ ಪುರದ ಶ್ರೇಯಾ

    ನಮಾಮಿ ಪುರದ ಶ್ರೇಯಾ (ಯಶಸ್ವಿ ಮಹಿಳೆಯ ನೂರೆಂಟು ನೆನಪುಗಳು)ಲೇಖಕ- ವಾಮನ...

  • ಇಂದ್ರಜಾಲ

          ಅಂದು ಭಾನುವಾರವಾದ್ದರಿಂದ ಕಚೇರಿಗೆ ಹೋಗುವ ಗಡಿಬಿಡಿ ಇರಲಿಲ್ಲ. ನ...

  • ಇಂದ್ರಜಾಲ

          ಅಂದು ಭಾನುವಾರವಾದ್ದರಿಂದ ಕಚೇರಿಗೆ ಹೋಗುವ ಗಡಿಬಿಡಿ ಇರಲಿಲ್ಲ. ನ...

  • ತೆಂಗಿನ ಮರದ ತತ್ವ

    ಕೃಷ್ಣಾಪುರ ಎಂಬ ಹಳ್ಳಿಯಲ್ಲೊಬ್ಬ ಸಾಹಸಿಕ ರೈತ ವೀರಣ್ಣ ವಾಸಿಸುತ್ತಿದ್ದ....

Categories
Share

ಬಯಸದೆ ಬಂದವಳು... - 1








ಎಲ್ಲರಿಗೂ ನಮಸ್ಕಾರ ,
ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷಯ,ವ್ಯಕ್ತಿ,ಸ್ಥಳಕ್ಕೆ ಸಂಬದ್ದಿಸಿದ್ದಾಗಿರುವುದಿಲ್ಲ ಇದು ನನ್ನ ಮೊದಲ ಕಥೆ ತಪ್ಪಿದಲ್ಲಿ ಕ್ಷಮಿಸಿ, ಈಗ ಕಥೆ ಪ್ರಾರಂಭಿಸೋಣ 


ಈ ಕಥೆಯು ತುಂಬು ಕುಟುಂಬದ್ದಾಗಿದೆ ಇಲ್ಲಿ ಹಲವಾರು ಪಾತ್ರದಾರಿಗಳು ಬರುತ್ತಾರೆ ಸಂದರ್ಭಕ್ಕೆ ತಕ್ಕಂತೆ ನೋಡುತ್ತಾ ಹೋಗೋಣ ಆದರೆ ಈ ಕಥೆಯ ಕೆಲವು ಪ್ರಮುಖ ಪಾತ್ರದಾರಿಗಳನ್ನು ಪರಿಚಯಿಸುತ್ತೇನೆ ಕಥೆಯ ನಾಯಕ "ಜೆಕೆ" (ಜಯ ಕಾರ್ತಿಕ್) ಇಡೀ ಕಾಲೇಜನ ಹುಡುಗಿಯರು ಇವನ ಫ್ಯಾನ್ಸ್ ಅಷ್ಟು ಸುಂದರವಾಗಿರುವ ಇವನು. ಅವನ ಸೊಗಸಾದ ದೇಹ, ಉನ್ನತ ಹೈಟ್, ತೀಕ್ಷ್ಣ ಮೂಗು, ಮತ್ತು ಆಕರ್ಷಕ ಕಣ್ಣುಗಳು ಯಾವ ಹೀರೊಗಳಿಗಿಂತ ಏನೂ ಕಡಿಮೆ ಇಲ್ಲ. ಇಡೀ ಕಾಲೇಜಿನ ಹುಡುಗಿಯರ ಹೃದಯ ಗೆದ್ದಿರುವ ಅವನ ಈ ಬಾಹ್ಯ ಸೌಂದರ್ಯವೇ ಅಲ್ಲ, ಅವನ ವ್ಯಕ್ತಿತ್ವವೇ ಮತ್ತಷ್ಟು ಗಮನ ಸೆಳೆಯುತ್ತದೆ.


ಅವನು ಸ್ವಲ್ಪ ಕೋಪಿಷ್ಠನಾಗಿದ್ದರೂ, ಎಲ್ಲರ ಬಗ್ಗೆ ಕಾಳಜಿಯುಳ್ಳವನು. ಆತ್ಮೀಯತೆಯಿಂದ ಇತರರಿಗೆ ಸಹಾಯ ಮಾಡುವ ಗುಣಗಳು ಅವನನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ತುಂಬು ಕುಟುಂಬದಲ್ಲಿ ಬೆಳೆದ ಇವನು ಕುಟುಂಬದ ಮಹತ್ವ ಅನ್ನು ತಿಳಿದುಕೊಂಡಿರುವ ಹುಡುಗ. ಇಂತಹ ಬಾಹ್ಯ ಮತ್ತು ಆಂತರಿಕ ಸೌಂದರ್ಯವುಳ್ಳವನು ನಮ್ಮ ಹೀರೋ.ಹಾಗೆ  "ಸೂರ್ಯ" ,"ಪ್ರವೀಣ್" ,"ಕಾರ್ತಿಕ್" 
"ಸ್ವಾತಿ" ಇವರೆಲ್ಲರು ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರು


(ಇಲ್ಲಿ ಸೂರ್ಯ ಇವನ್ ಅತ್ತೆಯ ಮಗಾ  ಅಂದರೆ ಜೆಕೆ ಯ ತಂದೆಯ ತಂಗಿಯ ಮಗ ಆಗುತ್ತಾನೆ) 

ಅದಕ್ಕಿಂತ ಹೆಚ್ಚು ಇವನು ಅವನ ಜೀವದ ಗೆಳೆಯ ಅಂದರೆ ತಪ್ಪಾಗಲ್ಲ ಜೆಕೆ ನ ಪ್ರತಿ ವಿಷಯವು ಸೂರ್ಯನಿಗೆ ಗೊತ್ತು ಮತ್ತು ಸ್ವಾತಿ ದೂರದ ಸಂಬಂಧಿ ಯಾದರು ಸ್ವಾತಿಯ ಅಪ್ಪ ಅಮ್ಮ ಇದೆ ಊರಿನಲ್ಲಿ ಇರುತ್ತಾರೆ ಸ್ವಾತಿ ಈ ಕಥೆಯ ಓರ್ವ ನಾಯಕಿ ಸ್ವಾತಿ ತುಂಬಾ ಸೌಂದರ್ಯವತಿ ಇವಳು ಎಷ್ಟೇ ದೊಡ್ಡವಳಾದರು ಚಿಕ್ಕ ಮಗುವಿನ ತರದ ಮನಸ್ಸನ್ನು ಹೊಂದಿದವಳು ಯಾವುದಕ್ಕೂ ಹೆದರದವಳು ಲೈಫ್ ನಾ ಚೀಲ್ ಆಗಿ ತಗೊಳ್ಳೋ ಇವಳು ಸ್ವಲ್ಪ ಹಠಮಾರಿ ಹುಡಗಿ ಯಾದರು ಬೇರೆಯವರ ನೋವಿಗೆ ಸ್ಪಂದಿಸುವ ಗುಣ ಹೊಂದಿರುವಳು,

ಸ್ವಾತಿಯ ಅಪ್ಪ ಶಿವು ಒಬ್ಬ ಬಸ್ಸಿನೆಸ್ ಮನ್ ಇವರು ಜೆಕೆ ಫ್ಯಾಮಿಲಿ ಕಂಪನಿ ಅಲ್ಲಿ ಪಾಟ್ನರ್ಶಿಪ್ ಅಲ್ಲಿ ಕಂಪನಿ ಯನ್ನು ನಡೆಸುತ್ತಿರುತ್ತಾರೆ ಹಾಗೆ ಇವರ ಅಮ್ಮನ ಹೆಸರು ಭಾರತಿ ಶಿವು ಮತ್ತು ಭಾರತಿ ದಂಪತಿಗಳಿಗೆ ಇರುವುದು ಅವಳೊಬ್ಬಳೆ ಮಗಳು ಹಾಗಾಗಿ ಸ್ವಾತಿಯ ಅಪ್ಪ ಇವಳನ್ನು ಮಹಾರಾಣಿ ತರಹ  ಯಾವುದೇ ಕಷ್ಟಗಳು ಇವಳಿಗೆ ಸೋಕದ ಹಾಗೆ ಇವಳನ್ನು ಬೆಳೆಸಿದ್ದಾರೆ. ಸ್ವಾತಿಗೆ ಈ ಐದು ಸ್ನೇಹಿತರೆಂದರೆ ಪ್ರಾಣ ,
ಇನ್ನು ಕಾರ್ತಿಕ್ ಇವನು ತುಂಬಾ ಮುಗ್ಧ ಮನಸ್ಸಿನ ಹುಡುಗ ಇವನು ಒಬ್ಬ ಅನಾಥ ಕಾರ್ತಿಕ ನ ಎಲ್ಲಾ ಎಜುಕೇಷನ್ ಅನ್ನು ಜೆಕೆ ನೇ ನೋಡಿಕೊಳ್ಳುತ್ತಿರುತ್ತಾನೆ  ಜೆಕೆ ಗೆ ಕಾರ್ತಿಕ್ ಎಂದರೆ ತುಂಬಾ ಇಷ್ಟ ಇನ್ನು ಪ್ರವೀಣ್ ಕೂಡ ಇವರ ಗುಂಪಲ್ಲಿ ಒಬ್ಬ ಒಟ್ಟಾರೆ ಇವರು 5 ಜನ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರು ಇವರು ಎಲ್ಲರೂ ಚಿಕ್ಕ ವಯಸ್ಸಿನಿಂದಲೂ ಒಂದೇ ಸ್ಕೂಲ್ ನಲ್ಲಿ ಕ್ಲಾಸ್ಮೇಟ್ ಗಳಾಗಿರುತ್ತಾರೆ ಇವರ ಚಿಕ್ಕವಯಸ್ಸಿನ ಸ್ನೇಹ ಈಗ ಬೆಳೆದು ಹೆಮ್ಮರವಾಗಿದೆ .


ಈಗ ಕಾಲೇಜ್ ನಲ್ಲಿ ಕಾರ್ತಿಕ್ ಮತ್ತು ಪ್ರವೀಣ್ ಇನ್ನೂ ಕೆಲವು ಫ್ರೆಂಡ್ಸ್ ಸೇರಿ ಜೂನಿಯರ್ಸ್ ಗೆ ಸೀನಿಯರ್ಸ್ ಎಂದು ಗೊತ್ತಾಗಬೇಕು ಎಂಬ ಕಾರಣಕ್ಕೆ ಹೋಗೋ ಬರೋ ಸ್ಟೂಡೆಂಟ್ಸ್ ಗಳಿಗೆಲ್ಲ ಕಾಡಸ್ತಿರುತ್ತಾರೆ ಆಗ  ಪ್ರವೀಣ್ Hi ಸೂರ್ಯ  ಸೂರ್ಯ :Hi guys, 
ಕಾರ್ತಿಕ್ : ಸೂರ್ಯ ಜೆಕೆ ಬರಲಿಲ್ಲವ್ವ ಫ್ರೆಂಡ್ಸ್ ಈ ಕತೆಯ ನಾಯಕ ಜೆಕೆ(ಜಯ ಕಾರ್ತಿಕ್)

ಸೂರ್ಯ : ಇಲ್ಲ ಕಣೋ ಏನೋ ಕೆಲ್ಸ  ಇದೆ ನಾವಿಬ್ರೂ ಆಮೇಲೆ ಬರ್ತೀವಿ ನಿನ್ ಹೋಗಿರು ಅಂದ ನೀವ್ ಎನ್ ಮಾಡ್ತಾ ಇದೀರಾ ಇಲ್ಲಿ ಪ್ರಿನ್ಸಿಪಾಲ್ ಕ್ಲಾಸ್ ಇದೆ ಗೊತ್ತಾದರೆ ನಮ್ಮನ್ನ ಸಾಯಿಸಿ ಬಿಡ್ತಾನೆ, 

ಪ್ರವೀಣ್ : ಓ..ಸರ್ ತಾವು ಪ್ರಿನ್ಸಿ ಗೆ ಹೇದರೋದ ಏನೋ ಮಿಸ್ ಹೊಡಿತಿದೆ ಅಲ್ಲ ಏನದು, 

ಕಾರ್ತಿಕ್ : ಹೌದು ಕಣೋ ನಂಗೂ ಹಂಗೆ ಅನಸ್ತಿದೆ 

ಸೂರ್ಯ : ಇಗೆನ್ ನೀವ್ ಬರಲ್ವಾ ಸರಿ ನಾನ್ ಹೋಗ್ತೀನಿ ಹೇ..ನಿಲ್ಲೊ ನಾವು ಬರತಿವಿ ಮೊದಲೇ ಜೆಕೆ ಬೇರೆ ಇಲ್ಲಾ... ಆಗ ಎಲ್ಲರೂ ಸೇರಿ  ಕ್ಲಾಸ್ ಗೆ ಹೋಗುವಾಗ ಹಿಂದೆ ಇಂದ ಒಂದ್ ಹುಡಗಿ ಹೇ..ನಿಲ್ರೋ ನಾನು ಬರ್ತೀನಿ ಯಾರದು ಅಂತ ಹಿಂದೆ ತಿರುಗಿ ನೋಡ್ತಾರೆ

ಪ್ರವೀಣ್ : ಹೇ.. ನಿನಾ!! ಸ್ವಾತಿ ಯಾಕೆ ಇಷ್ಟು ಲೇಟ್ ಮಾಡಿದೆ ಜೆಕೆ ಎಲ್ಲಿ 

ಸ್ವಾತಿ : ಅಯ್ಯೋ ಅವನ ಬಗ್ಗೆ ಗೊತ್ತಲ್ಲ ಯಾರಾದ್ರೂ ಪ್ರಾಬ್ಲಮ್ ಅಂತ ಬಂದ್ರೆ ಸಾಕು ಹೋಗಿಬಿಡ್ತಾನೆ ನಂಗೆ ಅರ್ಧ ದಾರೀಲಿ ನನ್ನ ಕ್ಯಾಬ್ ನಲ್ಲಿ ಕೂರಿಸಿ ಹೋಗು ನಾನ್ ಬರ್ತಿನಿ ಅಂತ ಕೇಳಿ ಹೋದ 

ಸೂರ್ಯ : ಅವನ್ ಯಾವಾಗ್ಲೂ ಹಾಗೆ ಸರಿ ನಾವು ಕ್ಲಾಸ್ ಗೆ ಹೋಗೋಣ ಬನ್ನಿ (ಇವರೆಲ್ಲರೂ ಇಂಜಿನೀರಿಂಗ್ ಫೈನಲ್ ಇಯರ್ ಸ್ಟೂಡೆಂಟ್ಸ್) 
ಸ್ವಾತಿ : may I come in sir 

ಪ್ರಿನ್ಸಿಪಾಲ್ : ಓ.. ಬ್ಯಾಕ್ ಬೆಂಚೆರ್ಸ್ ಟೀಮ್ ನೀವು ನನ್ ಕ್ಲಾಸ್ ಗೆ what a surprise 🫢 ನಿಮ್ಗೆ ಟೈಮ್ ಸೆನ್ಸ್ ಅನ್ನೋದ್ ಇಲ್ವಾ you know I am very strick ನಿಮ್ಗೆ ಕ್ಲಾಸ್ ಗೆ allow ಮಾಡಲ್ಲ so come to the next ಕ್ಲಾಸ್  

ಪ್ರವೀಣ್ : ಯಾಕೋ ಸರ್ ಬಾಲ ಬಿಚ್ಟಿದಾನೆ  
ಕಾರ್ತಿಕ್ : ಜೆಕೆ ಇಲ್ವಲ್ಲಾ ಅದಕ್ಕೆ 😂 ಅಂತ ಇಬ್ಬರು ನಗೋಕೆ ಸ್ಟಾರ್ಟ್ ಮಾಡಿದಾಗ ಪ್ರಿನ್ಸಿಗೆ ಕೋಪ ಬಂದು get out from here   
ಸೂರ್ಯ : ಸರ್ ಜೆಕೆ ಬರತಿದಾನೆ  ಪ್ರಿನ್ಸಿಪಾಲ್ : ಹೌದಾ ಅಯ್ಯೋ ಅಲ್ಲಿ ಯಾಕ್ ನಿಂತಿದಿರ ಒಳಗಡೆ ಬನ್ನಿ 


( ಜೆಕೆ ಗೆ ಭಯ ಪಡದೆ ಇರೋರ್ ಕಾಲೇಜ್ ಅಲ್ಲಿ ಇಲ್ಲ ಎಲ್ಲರೂ ಅವನಿಗೆ ಅಷ್ಟು ಭಯ ಇಡೀ ಕಾಲೇಜ್ ಗೆ ಈ ಬ್ಯಾಕ್ ಬೆಂಚರ್ಸ್ ಟೀಮ್ ಅಂತಾನೇ ಫೇಮಸ್ ಆಗಿರುತ್ತಾರೆ ಇವರು ಕಾಲೇಜ್ ನಲ್ಲಿ ಏನೇ ನಡದ್ರು ಇವರ ಪರ್ಮಿಷನ್ ಇಲ್ಲದೆ ಏನು ನಡಿಯೋಲ್ಲ ಯಾಕೆ ಅಂದ್ರೆ ಕಾಲೇಜ್ ಲೆಕ್ಚರ್ಸ್ ಮತ್ತೆ ಪ್ರಿನ್ಸಿಪಾಲ ಗಳ ವೀಕ್ನೆಸ್ ಇವರಿಗೆ ಗೊತ್ತಿರುತ್ತೆ )


ಸೂರ್ಯ : guys ಬನ್ನಿ ಸರ್ ಅಷ್ಟು ಕರಿತಿದ್ದಾರೆ ಹೋಗೋಣ😉

ಪ್ರಿನ್ಸಿಪಾಲ್ : ಎಲ್ಲಿ ಜೆಕೆ  ಪ್ರವೀಣ್ : ಸರ್ ಈಗ ಎನ್ ಕೂಡಬೇಕ ಬೇಡ್ವಾ

ಪ್ರಿನ್ಸಿಪಾಲ : ಓಕೆ..ಓಕೆ.. ಬನ್ನಿ ಪ್ರಿನ್ಸಿಪಾಲ್ ಪೂರ್ವಿ : Hi ಸ್ವಾತಿ ಜೆಕೆ ಬರಲಿಲ್ಲವ್ವ 

ಸ್ವಾತಿ : ಇಲ್ಲ ಅವ್ನಿಗೇನೋ ಕೆಲಸ ಇತ್ತು 

ಪೂರ್ವಿ : ಹೌದಾ ಓಕೆ ಪೂರ್ವಿ ಫ್ರೆಂಡ್ ಹರ್ಷಾ : ಹೇ..ಎಷ್ಟು ದಿನಾ ಹೀಗೆ ಅವನನ್ನ ನೋಡ್ತಾ ಕಾಲ ಕಳಿತಿಯ ಕಣೆ ನಮ್ ಕಾಲೇಜ್ ಮುಗಿಯೋಕೆ ಬಂತು ಬೇಗ ಹೇಳ್ಬೈಡೆ 

ಪೂರ್ವಿ : ಸುಮ್ನಿರು ಸ್ವಾತಿಗೆ ಕೇಳ್ಸಿದರೆ ಕಷ್ಟ ನಾನ್ ಇವತ್ತು ಹೇಳೋಕೆ ತುಂಬಾ ಪ್ರಿಪೇರ್ ಆಗಿದಿನಿ ಆದರೆ ಎಕ್ಸಾಮ್ ಬರಿವಾಗನು ಇಷ್ಟ ಭಯ ಆಗಿರಲಿಲ್ಲ ಅಷ್ಟು ಭಯ ಆಗ್ತಿದೆ ಕಣೆ ಪೂರ್ವಿ ಫ್ರೆಂಡ್ 
ಹರ್ಷಾ : ಹೆದರುಕೋಬೇಡ ಅವನು ಪಕ್ಕಾ ok ಅಂತಾನೆ 😀

ಪೂರ್ವಿ : I hope 🙂 ( ಪೂರ್ವಿ ತುಂಬಾ ದಿನಗಳಿಂದ ಜೆಕೆ ನಾ ಇಷ್ಟ ಪಡುತ್ತಿರುತ್ತಾಳೆ ಆದರೆ ಜೆಕೆ ಗೆ ಹೋಗಿ ಪ್ರಪೋಸ್ ಮಾಡೋಕೆ ಭಯ ) 

ಕ್ಲಾಸ್ ಮುಗಿದ ಮೇಲೆ ಎಲ್ಲರೂ ಕ್ಯಾಂಟಿನ್ ನಲ್ಲಿ ಎಂಜಾಯ್ ಮಾಡತಾ ಮಾತಾಡ್ತೀರಾತಾರೆ ತರುಣ ಇವನು ಕೂಡ ಇವರ ಕ್ಲಾಸ್ಮೇಟ್ ಲೋ ಮಚ್ಚಾ ಕಾಲೇಜ್ ಮುಗಿತಾ ಬಂತು ಕಣೋ ಟೈಮ್ ಎಸ್ಟ್ ಬೇಗ ಮುಗಿತಾ ಬರತಿದೆ ನೋಡ್ರೂ ಅಷ್ಟರಲ್ಲಿ ಜೆಕೆ ಕ್ಯಾಂಟಿನ್ ಗೆ ಎಂಟರ್ ಆಗತಾನೆ

ಜೆಕೆ : Hi guys.. 
ಪ್ರವೀಣ್ : ಯಾಕೋ ಇಸ್ಟ್ ಲೇಟು ಜೆಕೆ ಸಣ್ಣ ಕೆಲಸಾ ಮಗಾ 

ಪ್ರವೀಣ್ : ಲೋ ನಿನ್ ಇಲ್ಲ ಅಂತ ಪ್ರಿನ್ಸಿಪಾಲ್ ಇವರನ್ನ ಒಳಗೆ ಕರೆದುಕೊಳ್ತಾನೆ ಇರಲಿಲ್ಲ ಆಗ ನಾನ್ ಎಂಟ್ರಿ ಕೊಟ್ಟೆ ನೋಡು ಪ್ರಿನ್ಸಿಪಲ್ ಗಡ ಗಡ ನಡುಗಿ ಬಿಟ್ಟು ನಮ್ಮನ್ನ ರಾಜ ಅತಿಥಿ ಗಳ ತರ ಒಳಗಡೆ ಕರಕೊಂಡ ಗೊತ್ತಾ... ಆಗ ಎಲ್ಲರೂ ಸೇರಿ ಜೋರಾಗಿ ನಗೋಕೆ ಸ್ಟಾರ್ಟ್ ಮಾಡತಾರೆ ಈಕಡೆ

ಪೂರ್ವಿ ಫ್ರೆಂಡ್ ಹರ್ಷಾ  : ಹೇ ಇದೆ ಒಳ್ಳೆ ಚಾನ್ಸ್ ಕಣೆ ಹೋಗಿ ಹೇಳ್ಬಿಡು ಅಂತ ಹೇಳ್ತಾಳೆ  

ಪೂರ್ವಿ : ಓಕೆ ಇರು ನಿನ್ ನನ್ನ ಇನ್ನು ಹೆದರಿಸಬೇಡ ಅಂತ ಜೆಕೆ ಹತ್ರ ಬಂದು ಜೆಕೆ ನಾನ್ ನಿನ್ ಹತ್ರ ಸ್ವಲ್ಪ  ಮಾತಾಡ್ಬೇಕಾಗಿತ್ತು

ಜೆಕೆ : ನನ್ ಹತ್ರ ಟೈಮ್ ಇಲ್ಲ ಈಗ ಅಂತಾ ಸ್ವಲ್ಪ ರೂಡ್ ಆಗಿ ಹೇಳ್ತಾನೆ ಆಗ 

ಸ್ವಾತಿ : ಹೇ ಯಾಕೋ ಅವಳ ಹತ್ರ ಹಾಗ್ ಮಾತಾಡ್ತಿಯಾ ಪಾಪ ಅವಳು ತುಂಬಾ ಹೆದರಿಕೊಂಡಿದ್ದಾಳೆ ಒಂದು  2 ನಿಮಿಷ ಮಾತಾಡು ಎನ್ ಆಗಲ್ಲ ಜೆಕೆ ಸ್ವಾತಿ ಮುಖಾನೆ ನೋಡ್ತಾ ಓಕೆ ಅದೇನ್ ಹೇಳ್ಬೇಕೋ ಬೇಗ ಹೇಳು 

ಪೂರ್ವಿ : ಸ್ವಲ್ಪ ಪ್ರೈವೇಟ್ ಆಗಿ ಮಾತಾಡ್ಬೇಕು ಅಂತ ತುಂಬಾ ಭಯದಿಂದಾನೆ ಹೇಳ್ತಾಳೆ ಆಗ ಜೆಕೆ ಸ್ವಾತಿ ನ ನೋಡುತ್ತಾನೆ

ಸ್ವಾತಿ : ಪ್ಲೀಜ್ ಹೋಗೋ ಅಂತ force ಮಾಡಿದಾಗ ಜೆಕೆ ಓಕೆ.. ನಿನಗೋಸ್ಕರ ಹೋಗ್ತೀನಿ ,ಪೂರ್ವಿ ಜೆಕೆ ನಾ ಕ್ಯಾಂಟಿನ್ ಹೊರಗಡೆ ಗಾರ್ಡನ್ ಹತ್ರ ಕರೆದುಕೊಂಡು ಬರ್ತಾಳೆ ಪೂರ್ವಿ ಸ್ವಲ್ಪದೈರ್ಯ ತೆಗೆದುಕೊಂಡು ಹೇಳ್ಬೇಕು ಅಂದುಕೊಂಡಾಗ ಅವನ ಕಣ್ಣುಗಳನ್ನು ನೋಡುತ್ತಲೇ ಇನ್ನು ಬಯ ಪಡೋಕೆ ಸ್ಟಾರ್ಟ್ ಮಾಡ್ತಾಳೆ ಜೆಕೆ ಅದು.. ಅದು ... 

ಜೆಕೆ : ಬೇಗ ಎನ್ ಹೇಳ್ಬೇಕೋ ಹೇಳು ಇಲ್ಲ ನಾನ್ ಹೋಗ್ತೀನಿ

ಪೂರ್ವಿ : ಇಲ್ಲ ಇಲ್ಲ ಹೇಳ್ತೀನಿ ಜೆಕೆ ನಾನ್ ನಿನ್ನ ಫಸ್ಟ್ ಟೈಮ್ ಕಾಲೇಜ್ ಫ್ರೆಶರ್ ಪಾರ್ಟಿ  ಯಲ್ಲಿ ಸ್ಟೇಜ್ ಮೇಲೆ ಸ್ಪೀಚ್ ಮಾಡತಿದ್ದಾಗಲೆ ನಿನ್ ಮೇಲೆ ಕ್ರಷ್ ಆಗೋಯ್ತು 😊 ಆದರೆ ಒಂದು ದಿನ ನೀನು ಟ್ರಾಫಿಕ್ ರೋಡ್ ನಲ್ಲಿ ನಾಯಿ ಮರಿ ರೋಡ್ ನಲ್ಲಿ ಸಿಕ್ಕಾಕೊಂಡು ಎನ್ ಮಾಡಬೇಕ್ ಅಂತಾ ಗೊತ್ತಾಗದೆ ಆಕಡೆ ಈಕಡೆ ಓಡಾಡ್ತಿತ್ತು ಯಾರು ಅದರ ಬಗ್ಗೆ ತಲೇನೆ ಕೇದಸ್ಗೊಳ್ದೆ ತಮ್ಮ ಪಾಡಿಗೆ ತಾವು ಇದ್ರು ಆಗ ನನಗೆ ಈ ಜನರಲ್ಲಿ ಮಾನವೀಯತೆ ನೆ ಇಲ್ಲವಲ್ಲ ಅನ್ಕೊಂಡು ಸ್ಕೂಟಿ ಇಂದ ನಾಳೆ ಇಳಿಯು ವಸ್ಟ್ರಲ್ಲಿ ಕಾರಿಂದ ನಿನ್ ಇಳಿದು ಅದನ್ನ ಹೋಗಿ ಸೇವ್ ಮಾಡದೆ ಅಲ್ವಾ ಆಗ ನಾನ್ ನಿಂಗೆ ಫಿದಾ ಆಗೋದೇ  ನನ್ನ ಡ್ರೀಮ್ ಬಾಯ್ ನಂಗೆ ಸಿಕ್ಕಿಬಿಟ್ಟ ಅಂತ ತುಂಬಾ ಕುಷಿಯಾದೆ ಲವ್ ಮಾಡಿದ್ರೆ ನಿನ್ನೆ ಅಂತಾ ಫಿಕ್ಸ ಆದೆ ಅವಾಗಿಂದ ನಿನ್ ಹುಚ್ಚಿ ತರ ಲವ್ ಮಾಡ್ತಿದ್ದೀನಿ ನಿನ್ ಮಾಡೋ ಪ್ರತಿ ಕೆಲಸನು ನನಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ ಜೆಕೆ ನನಗೆ ನಿನ್ನ ಬಿಟ್ಟಿರೋಕೆ ಸಾಧ್ಯನೇ ಇಲ್ಲ ಪ್ಲೀಜ್ 🥺 ನನ್ನ ಪ್ರಪೋಸಲ್ ನಾ accept ಮಾಡು 

ಜೆಕೆ : sorry I can't ನಾನ್ ನಿನ್ನ ಪ್ರೀತಿಸೋಕೆ ಆಗೋಲ್ಲ.
ಪೂರ್ವೀ : ಯಾಕೆ ನಂಗೆನ್ ಕಮ್ಮಿ ಅಂತ ನನ್ನ ರೇಜೆಕ್ಟ್ ಮಾಡತಿದ್ದಿಯ ನೋಡೋಕೆ ಚೆನ್ನಾಗಿದ್ದೀನಿ ಇನ್ನು ಆಸ್ತಿ ಬಗ್ಗೆ ನಿನ್ ಚಿಂತನೆ ಮಾಡಬೇಕಾಗಿಲ್ಲ ನಮ್ ಅಪ್ಪ ನು ಶ್ರೀಮಂತಾನೆ ನಮ್ದು ನಿಮ್ಮಷ್ಟು ದೊಡ್ಡ ಕುಟುಂಬ ಅಲ್ಲ ಹಾಗೆ ನಿಮ್ಮಷ್ಟು ಶ್ರೀಮಂತರು ಅಲ್ಲದೆ ಇರಬಹುದು ನಂಗೆ ನಿಮ್ಮ ಕುಟುಂಬ ದಲ್ಲಿ ಒಬ್ಬಳಾಗಿ ಇರಬೇಕು ಅಂತಾ ತುಂಬಾ ಆಸೆ ಈಗಿನ ಕಾಲದಲ್ಲಿ ಇಂತ ಕುಟುಂಬ ನಾ ನೋಡೋದೆ ಅಪರೂಪ ದಯವಿಟ್ಟು ನನ್ನ ಪ್ರೀತಿನಾ ಒಪ್ಪಿಕೊ ಪ್ಲೀಸ್  ನನಗೆ ನಿನ್ ಯಾವ ರೀತಿಯಲ್ಲೂ ಕಳಕೊಳ್ಳೋಕೆ ಇಷ್ಟ ಇಲ್ಲ ಜೆಕೆ " I love you more than anything in this world "

ಜೆಕೆ :  ಪೂರ್ವೀ I respect your feelings ಆದರೆ ನನಗೆ ನಿನ್ನ ಪ್ರೀತಿ ಮಾಡೋಕೆ ಆಗೋಲ್ಲ sorry ಅಂತಾ ಹೇಳಿ ಹೋಗುವಾಗ ಪೂರ್ವಿ ಅವನ್ ಕೈನ ಗಟ್ಟಿಯಾಗಿ ಹಿಡಿದು ಜೆಕೆ ನಿನ್ ನನ್ನ ಯಾಕ್ ರಿಜೆಕ್ಟ್ ಮಾಡಿದೆ ಅಂತ ಕಾರಣ ಕೊಡೋವರೆಗೂ ನಾನ್ ನಿನ್ನ ಬಿಡೋಲ್ಲ ಅಂತಾ ಕಣ್ಣಲಿ ನೀರನ್ನ ಸುರಿಸುತ್ತಾ ಕೇಳಿದಾಗ ಜೆಕೆ ಏನನ್ನು ಮಾತಾಡದೆ ಕೈ ಬಿಡಿಸಿಕೊಂಡು ಹೋಗುವಾಗ ಅಷ್ಟರಲ್ಲಿ  ಕ್ಯಾಂಟಿನ್ ನಿಂದ ಸ್ವಾತಿ ಬರುತ್ತಾಳೆ

(ಹಾಗೆ ಪೂರ್ವಿ ಫ್ರೆಂಡ್ ಕೂಡಾ ಅವರು ಮಾತಾಡೋದನ್ನ ದೂರದಿಂದ ನೋಡತೀರ್ತಾಳೆ)    ಸ್ವಾತಿ : ಜೆಕೆ ಪೂರ್ವಿ ಯಾಕೆ ಅಳತಿದ್ದಾಳೆ??

ಸ್ವಾತಿ : ಪೂರ್ವಿ ಯಾಕೆ ನೀನು ಅಳತಿದ್ದಿಯ ಜೆಕೆ ಏನಾದ್ರೂ ಬೈದ್ನ ಪೂರ್ವಿ ಅಳುತ್ತಾ ಸ್ವಾತಿ ನಾನ್ ಜೆಕೆ ನಾ ತುಂಬಾ ಲವ್ ಮಾಡ್ತಿದ್ದೀನಿ ಅವನ್ ಇಲ್ಲ ಅಂದ್ರೆ ನಂಗೆ ಇರೋಕೆ ಆಗಲ್ಲ ಅಷ್ಟು ಹುಚ್ಚಿ ಆಗಿದ್ದೀನಿ ಅವನ್ ಪ್ರೀತಿಲಿ ಪ್ಲಿಜ್ ನೀನೇ ಅವನಿಗೆ ಹೇಳು 

ಅಷ್ಟರಲ್ಲಿ ಪ್ರವೀಣ್ ,ಕಾರ್ತಿಕ್ ಸೂರ್ಯ, 3ಜನ  ಕೂಡ ಇಲ್ಲಿಗೆ ಬಂದು ಇಲ್ಲಿ ಎನ್ ನಡೀತಿದೆ

ಸ್ವಾತಿ: ಅದು ಪೂರ್ವಿ ಜೆಕೆ ಗೆ ಪ್ರಪೋಸ್ ಮಾಡಿದ್ಲು ಆದರೆ ಜೆಕೆ ಅದನ್ನ ರಿಜೆಕ್ಟ್ ಮಾಡಿದ ಆದ್ರೆ ಪೂರ್ವಿ ತುಂಬಾ ಒಳ್ಳೆ ಹುಡಗಿ ಜೆಕೆ ನಿನ್ ಯಾಕೆ ರಿಜೆಕ್ಟ್ ಮಾಡಿದೆ ಅಂತಾ ಕೇಳೋದೇ ತಡಾ ಜೆಕೆ ಕಣ್ಣು ಕೆಂಪಾಗಿ 😡ಯಾಕ್ ರಿಜೆಕ್ಟ್ ಮಾಡಿದೆ ನಿಂಗ್ ಗೊತ್ತಿಲ್ವಾ ಅಂತಾ  ಹತ್ರಾ ಹೋಗಿ ಸ್ವಾತಿ ಕಣ್ಣಲ್ಲಿ ಕಣ್ಣಿಟ್ಟು ಕೇಳ್ತಾನೆ ಸ್ವಾತಿ ಜೆಕೆ ಯ ಕೋಪಾ ನೋಡಿ ಅದು.. ಅದು.. ಅಂತ ಭಯಾಪಡ್ತಾ

( ಯಪ್ಪಾ ಏನಿದು ಜೆಕೆ ನಾನ್ ಏನ್ ಅಂತಾದ್ ಕೇಳ್ದೆ ಅಂತ ಇಸ್ಟೊಂದು ಕೋಪ ಮಾಡ್ಕೋತಿದಾನೆ ನಾನ್ ಇವನ ಈ ತರ ಕೊಪಾನಾ ನೋಡೇ ಇಲ್ಲ ಇಲ್ಲಿವರೆಗೂ ಅಂತಾ ಮನಸಲ್ಲಿ ಅಂದುಕೊತೀರ್ತಾಳೆ) 

ಸೂರ್ಯ : ಜೆಕೆ ನಿನ್ ಸ್ವಲ್ಪ ತಾಳ್ಮೆ ತಗೋ ಅಂತ ಅವನ ತನ್ನ ಕಡೆ ಎಳೆದುಕೊಳ್ತಾನೆ ಪೂರ್ವಿ ನಿನ್ ಈಗ ಹೋಗು ನಾನ್ ನಿನ್ ಜೊತೆ ಆಮೇಲೆ ಮಾತಾಡ್ತೀನಿ ಆಗ ಪೂರ್ವಿ ಜೆಕೆ ಮುಖವನ್ನೇ ನೋಡುತ್ತಾ ಅಲ್ಲಿಂದ ಹೋಗುತ್ತಾಳೆ 

ಪ್ರವೀಣ್ : ಅಲ್ಲ ಕಣೋ ಅಳವು... ಅನ್ನುವಷ್ಟರಲ್ಲಿ ಸೂರ್ಯ ಈಗ ಏನು ಮಾತಾಡೋದು ಬೇಡ ಇವಾಗ  ಹೋಗೋಣ ಅನ್ಯುವಲ್ ಫಂಕ್ಷನ್ ಗೆ ಇನ್ನು 3 ಡೇಸ್ ಅಷ್ಟೇ ಇದೆ ಪ್ರಿಪೇರೇಷನ್ ತಯಾರಿ ಎಲ್ಲಾ ನಮ್ಮ ಮೇಲೆ ಇದೆ ಅಂತಾ ಹೇಳಿ ಸೂರ್ಯ ಎಲ್ಲರನ್ನು ಕರೆದುಕೊಂಡು ಹೋಗ್ತಾನೆ  ಕಾಲೇಜ್ ನಲ್ಲಿ ಎಲ್ಲಾ ಕೆಲಸಾ ನು ಮುಗಡ್ಕೊಂಡು 
ಸಾಯಂಕಾಲ 5 ಜನ ಹೊರಗಡೆ ಬರುತ್ತಾರೆ ಆಗ ಸೂರ್ಯ ನೀವ್ ಹೊರಡಿ ನಾನ್ ಸ್ವಲ್ಪ ಪೂರ್ವಿ ಹತ್ರ ಮಾತಾಡಿ ಬರ್ತೀನಿ ,ಆಗ ಜೆಕೆ ಅದರ ಅವಶ್ಯಕತೆ ಇಲ್ಲ ಬನ್ನಿ ಹೋಗೋಣ ಸೂರ್ಯ ಇಲ್ಲ ನೀವ್ ಹೊರಡಿ ನಾನ್ ಬರ್ತೀನಿ  

ಜೆಕೆ : ಓಕೆ ..ಪ್ರವೀಣ್ ನಿನ್ ನನ್ ಹಿಂದೆ ಬಂದ್ ಕುತಗೋ ಬಾ ಆಗ 

ಪ್ರವೀಣ್ : 😳 ಏನು ನಾನ್.. ನಿನ್ ಹಿಂದೆ ಬಂದ್ ಕೂತಗೋಬೇಕ ಅಂತ ಹೇಳಿ ಪ್ರವೀಣ್ ಸ್ವಾತಿ ಮುಖವನ್ನೇ ನೋಡ್ತಾನೆ..

ಜೆಕೆ : ಹೌದು ಇಲ್ಲಿ ಪ್ರವೀಣ್ ನಿನ್ ಒಬ್ಬನೇ ಇರೋದು 
ಪ್ರವೀಣ್ : ಅಲ್ವೋ ಯಾವಾಗ್ಲೂ ಇಲ್ಲಿ ಸ್ವಾತಿನೆ ಕೂತಗೊಳೋದು ಅಲ್ವಾ ಇದೇನು ಸಡನ್ ಆಗಿ ನಾನ್ ಒಂದ್ ಸಲ ಹಠಾ ಮಾಡಿ ಕುತ್ಗೊಂಡಾಗ ನಿನ್ ಅವತ್ ನಂಗೆ  ಜೀವದ ಭಯ ಹೇಗಿರುತ್ತೆ ಅಂತಾ ತೋರಿಸಿದೆ ಆದುನ ನೆನಸಗೊಂಡ್ರೇನೆ ಇನ್ನು ಕಾಲೆಲ್ಲ ನಡಗುತ್ತೆ ನಂಗೆ ನೆಡದುಕೊಂಡೇನೆ ಮನೆಗೆ ಹೋಗ್ತೀನಿ ನಿನ್ ಜೊತೆ ಮಾತ್ರ ಬರಲ್ಲ 

ಸ್ವಾತಿ : ಜೆಕೆ ಯಾಕೋ ನಾನ್ ಕೂತಗೊಬಾರದು ಇಷ್ಟ ದಿನ ನಾನೇ  ಕುಳಿತುಕೊಳ್ತಿದ್ದೆ ಅಲ್ವಾ ಎನ್ ಸಡನ್ ಆಗಿ ಈಗ

ಪ್ರವೀಣ್ : ಸ್ವಾತಿ ಜೆಕೆ ಹಾಗೆ ಹೇಳ್ತಿದಾನೆ ನಿನ್ ಹೋಗಿ ಕುಳಿತುಕೋ ಅಂತ ಹೇಳುವಷ್ಟರಲ್ಲಿ ಜೆಕೆ ಬೈಕ್ ನಾ ಸ್ಟಾರ್ಟ್  ಮಾಡಿ ಹೊಗೆಬಿಡ್ತಾನೆ ಸ್ವಾತಿ ಕಣ್ಣಂಚಲ್ಲಿ ನೀರು ಬರುತ್ತೆ🥺  ಕಾರ್ತಿಕ್ ಪ್ರವೀಣ್ ನೋಡಿದ್ರ ಜೆಕೆ ಯಾವತ್ತೂ ನನ್ನ ಹೀಗೆ ಬಿಟ್ಟೋಗಿಲ್ಲ ಈಗ ನೋಡಿ ಅಂತ ಅಳೋಕೆ ಸ್ಟಾರ್ಟ್ ಮಾಡುತ್ತಾಳೆ

ಕಾರ್ತಿಕ್ ; ಸ್ವಾತಿ ಜೆಕೆ ಪೂರ್ವಿ ವಿಷಯದಲ್ಲಿ ಸ್ವಲ್ಪ ಮಿಸ್ಅಂಡರ್ಸ್ಟಾಂಡಿಂಗ್ ಮಾಡ್ಕೋಡಿದಾನೆ ಅನ್ಸುತ್ತೆ 

ಸ್ವಾತಿ : ನಾನೇನ್ ಅಂತಹದ್ದು ಹೇಳ್ದೆ ಅಂತಾನೆ ಗೊತ್ತಾಗ್ತಿಲ್ಲ ಹೋಗಲಿ ಬಿಡು ಈಗ ನಾನ್ ನಿನ್ನ ಮನೆಗೆ ಡ್ರಾಪ್ ಮಾಡತೀನಿ ಬಾ ಅಂತ ಸ್ವಾತಿ ನಾ ಕುಂದ್ರಸ್ಗೊಂಡು ಪ್ರವೀಣ್ ನಿನ್ ಸೂರ್ಯನ ಬೈಕ್ ನಲ್ಲಿ ಬಾ ಅಂತ ಸ್ವಾತಿ ಕಾರ್ತಿಕ್ ಇಬ್ಬರೂ ಹೊರಡುತ್ತಾರೆ ಈಕಡೆ ಪೂರ್ವಿ ಮತ್ತು ಪೂರ್ವಿ ಫ್ರೆಂಡ್ ಮನೆಗೆ ಹೋಗಬೇಕು ಅಂತ ಪಾರ್ಕಿಂಗ್ ಏರಿಯಾ ಕಡೆ ಹೊರಡುವಾಗ ಹಿಂದೆಯಿಂದ ಸೂರ್ಯ ಪೂರ್ವಿ ನಿಲ್ಲೂ.. ನಾನ್ ನಿನ್ ಹತ್ರ ಮಾತಾಡ್ಬೇಕು ಅಂತ ಹೇಳ್ತಾನೆ 

ಪೂರ್ವಿ : ಹೇಳು ಸೂರ್ಯ ಎನ್ ಮಾತಾಡ್ಬೇಕು🙂.

ಸೂರ್ಯ : ಅದು ನಿನ್ ಜೆಕೆ ಮೇಲೆ ಇನ್ನು ಯಾವ ಫೀಲಿಂಗ್ಸ್ ಇಟ್ಟುಕೋಬೇಡ ಇದನ್ನ ಇಲ್ಲಿಯೆ ಬಿಟ್ಬಿಡು ಅಂತ ಹೇಳೋಕೆ ಬಂದೆ. 

ಪೂರ್ವಿ: 😂 ಏನು ಇಲ್ಲೇ ಬಿಡ್ಬೇಕಾ ನಾನ್ ಏನ್ ಅವನು ನನ್ ಮೇಲೆ ಕೋಪ ಮಾಡಕೊಂಡಾ ಅಂತಾ ಎನ್ ಬೇಜಾರ್ ಮಾಡ್ಕೊಂಡಿಲ್ಲ ಸೂರ್ಯ infact ಅವನ್ ಕೋಪ ಕೂಡ ಇಷ್ಟ ನಂಗೆ ಅಷ್ಟು ಲವ್ ಮಾಡತೀನಿ ಅವನ ಅವನು ನನ್ನ ಪ್ರಪೋಸಲ್ ನ ಒಪ್ಕೊಳ್ಳುತನಕ ವೇಟ್ ಮಾಡತೀನಿ ನಾನು

ಸೂರ್ಯ : ನಿನ್ ಎಷ್ಟೇ ವೇಟ್ ಮಾಡಿದ್ರು ಅವನು ನಿನ್ನ ಒಪ್ಗೊಳಲ್ಲ. 

ಪೂರ್ವಿ : ಯಾಕೆ??.. ಯಾಕ್ ಒಪ್ಗೋಳಲ್ಲ ಅವನು ಕಾಲೇಜ್ ಅಲ್ಲಿ ಇದುವರೆಗೂ ಎಷ್ಟು ಜನ ಪ್ರಪೋಸ್ ಮಾಡಿದ್ರು ಒಂದು ಪ್ರಪೋಸಲ್ ನಾ ಒಪ್ಗೊಂಡಿಲ್ಲ ಆದರೆ ಎಲ್ಲರನ್ನು ಎಲ್ಲರ ಭಾವನೆಗಳನ್ನು ಅವನು ತುಂಬಾ ರೆಸ್ಪೆಕ್ಟ್ ಮಾಡ್ತಾನೆ ಅದು ನಂಗೆ ತುಂಬಾ ಇಷ್ಟ ಆಗೋ ವಿಷಯ ನೋಡತಿರು ಸೂರ್ಯ
ನನ್ ಪ್ರಪೋಸಲ್ ನಾ ಒಪ್ಗೊಳ್ಳುತ್ತರ ನಾನ್ ಮಾಡೆ ಮಾಡತೀನಿ ಸೂರ್ಯ ಪೂರ್ವಿ ಫ್ರೆಂಡ್ ಕೂಡ ಸೂರ್ಯ ಪೂರ್ವಿ ಜೆಕೆ ನಾ ತುಂಬಾ ದಿನದಿಂದ ಪ್ರೀತಿಸುತ್ತಿದ್ದಾಳೆ ಸ್ವಲ್ಪ ನೀನು ಕೂಡ ನಮಗೆ ಹೆಲ್ಪ್ ಮಾಡು ಪ್ಲೀಜ್ 😔 

ಸೂರ್ಯ : ಏನೂ ನಾನು ನಿಮ್ಗೆ ಹೆಲ್ಪ್ ಮಾಡೋದ ಕಂಡಿತಾ ಇಲ್ಲ ನಾನು ಯಾವಾಗ್ಲೂ ನನ್ ಜೆಕೆ ಗೆ ಸಪೋರ್ಟ್ ಮಾಡೋದು so.. ನೀನು ಅವನಿಂದ ದೂರ ಇರೋದೇ ಒಳ್ಳೇದು  ನಾನ್ ನಿನಗೆ ಇದನ್ನೇ ಹೇಳೋಕೆ ಬಂದೆ ಜೆಕೆ ಯಾವತ್ತೂ ನಿನ್ನ ಲವ್ ಮಾಡೋಲ್ಲ ಸುಮ್ನೆ ಎಸ್ಪೆಕ್ಟೇಷನ್ಸ್ ಇರಸಗೋಬೇಡ 

ಪೂರ್ವಿ : ಅದೇ ಯಾಕೆ ಯಾಕ್ ನಾನ್ ಅವನ ಲವ್ ಮಾಡಬಾರದು ನಂಗೆ ಎನ್ ಕಡಿಮೆ ಆಗಿದೆ ಅಂತ ಅಥವಾ ಜೆಕೆ ಯಾರನ್ನಾದ್ರೂ ಲವ್ ಮಾಡತಿದ್ದಾನ?  

ಸೂರ್ಯ : ಅದು ನಿನಗೆ ಎಲ್ಲಾ ಬೇಡವಾದ ಮ್ಯಾಟರ್ so.. ಅವನ ಅವನ್ ಪಾಡಿಗೆ ಬಿಟ್ಟು ಬಿಡು ಪ್ಲೀಜ್ 🙏 
ಪೂರ್ವಿ : 🥺ಆದರೆ... ಅಷ್ಟರಲ್ಲಿ ಸೂರ್ಯ ನೀನು ಏನೇ ಮಾತಾಡಿದ್ರು ಏನೇ ಮಾಡಿದ್ರೂ ಅವನ್ ಡಿಸಿಷನ್ ಚೇಂಜ್ ಆಗೋಲ್ಲ ಓಕೆ ನಾನ್ ಇನ್ನು ಹೊರಡ್ತಿನಿ ನೀವು ಇಬ್ಬರು ಹುಷಾರಾಗಿ ಮನೆಗೆ ಹೋಗಿ ಬಾಯ್..ಅಂತ ಸೂರ್ಯ ಅಲ್ಲಿಂದ ಹೋರಡ್ತಾನೆ ಆಗ ಪೂರ್ವಿ ಫ್ರೆಂಡ್ 

ಹರ್ಷಾ : ಹೇ..ನೀನು ತುಂಬಾ ತಲೆಕೆಡಿಸಿಕೊಳ್ಬೇಡ ನೀನು ಅವನ ಮರೆತು ಬಿಡೋದೇ ಬೆಸ್ಟ್ ಅಂತ ಭಯದಲ್ಲೇ ಹೇಳುತ್ತಾಳೆ  ಅಷ್ಟು ಹೇಳೋದೇ ತಡ ಪೂರ್ವಿ ಅವಳ ಕೆನ್ನೆಗೆ ಪಡಾರ್ ಅಂತ ಹೊಡೀತಾಳೆ ನಿನ್ ನನ್ ಫ್ರೆಂಡ್ ಅಷ್ಟೆ ಅಷ್ಟರಲ್ಲೇ ಇರು ನಂಗೆ ಅಡ್ವೈಸ್ ಮಾಡೋಕೆ ಬಂದ್ರೆ ಸರಿ ಇರೋಲ್ಲ😠 ಆಗ ಹೇ..ನಾನು ನಿನ್ ಒಳ್ಳೇದಕ್ಕೆ ಹೇಳಿದೆ ಕಣೆ ಆದರೆ ನೀನು.. ಛೇ!! ಮುಂದೆ ಏನು ಮಾತನಾಡದೇ ಅಲ್ಲಿಂದ ಹೊರಡುತ್ತಾಳೆ ಪೂರ್ವಿ ಅವಳ ಬಗ್ಗೆ ತಲೇನು ಕೆಡೆಸಿಕೊಳ್ಳದೆ  ದುಷ್ಟ ನಗುವನ್ನು ಬೀರುತ್ತಾ ಯಾರು ಏನೇ ಹೇಳಿದ್ರು ನಾನ್ ಮಾತ್ರ ಜೆಕೆ ನಾ ಬಿಡೋಲ್ಲ ಅವನು ನನ್ನ ಲವ್ ಮಾಡೋ ಹಾಗೆ ಮಾಡೆ ಮಾಡ್ತೀನಿ ನೋಡತಿರು 😏 ಅಂತ ಹೇಳಿ ಅಲ್ಲಿಂದ ಹೊರಡುತ್ತಾಳೆ,

           

                ಮುಂದುವರೆಯುವುದು....


ಸ್ನೇಹಿತರೆ ಇದು ನನ್ನ ಮೊದಲ ಕಥೆ ಏನಾದರೂ ಅಕ್ಷರ ದೋಷವಿದಲ್ಲಿ ಕ್ಷಮಿಸಿ ಮತ್ತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ನಿಮ್ಮ ಅನಿಸಿಕೆಗಳು ನಮಗೆ  ಮುಂದಿನ ಕಥೆ ಬರೆಯಲು ತುಂಬಾ ಅವಶ್ಯಕ, ದನ್ಯವಾದಗಳು😊