Pranam 2 - 1 in Kannada Spiritual Stories by Sandeep Joshi books and stories PDF | ಪ್ರಣಂ 2 - 1

Featured Books
  • ಬಯಸದೆ ಬಂದವಳು... - 18

    ಅಧ್ಯಾಯ 18 : "ವಿದಾಯದ ಕ್ಷಣಗಳು,ಮನೆಗೆ ಮರಳುವ ಹಾದಿ "ಮರುದಿನ ಅವರ ಎಕ್...

  • ಪ್ರಣಂ 2 - 1

    ​ಇಂದು ಬೆಳಿಗ್ಗೆಯೇ ಶುಭಾರಂಭವಾಗಿತ್ತು. ನಸುಕಿನ ಜಾವ 5 ಗಂಟೆ. ಬೆಂಗಳೂರ...

  • ಬೇಡಿದರೂ ನೀಡದವರು

    ಬೆಳಗ್ಗೆ ನಾಲ್ಕು ಗಂಟೆಗೆ ವಿರೂಪಾಕ್ಷಿ ಮಠದ ಗಂಟೆ ಬಾರಿಸಿದಾಗ, ಆ ಊರ ಸಮ...

  • ಕವಲೊಡೆದ ಕಥೆ

    ಸುಮಾರು ಏಳು ನೂರು ವರ್ಷಗಳ ಇತಿಹಾಸವಿರುವ ವೈಶಾಲಿ ಎಂಬ ಹಳ್ಳಿಯ ಪಶ್ಚಿಮ...

  • ಅಸುರ ಗರ್ಭ - 7 - (Last Part)

    ​ಅರ್ಜುನ್, ಅಸುರರ ಮುಖ್ಯಸ್ಥನನ್ನು ದೈಹಿಕವಾಗಿ ಸೋಲಿಸಿದ ನಂತರವೂ, ಆ ಹೋ...

Categories
Share

ಪ್ರಣಂ 2 - 1

​ಇಂದು ಬೆಳಿಗ್ಗೆಯೇ ಶುಭಾರಂಭವಾಗಿತ್ತು. ನಸುಕಿನ ಜಾವ 5 ಗಂಟೆ. ಬೆಂಗಳೂರಿನ ಸಿಲಿಕಾನ್ ಸಿಟಿಯಲ್ಲಿ ಗಣಕಯಂತ್ರಗಳ ಮಧ್ಯೆ ಬೆಳೆದಿದ್ದ ಆರ್ಯನ್, ತನ್ನ ಆಫೀಸ್‌ನಲ್ಲಿ ಸಿದ್ಧಗೊಂಡಿದ್ದ ಹೊಸ ಯೋಜನೆ 'ಪ್ರಣಂ 2' ಪ್ರಾಜೆಕ್ಟಿನ ನೀಲಿ ನಕ್ಷೆಯನ್ನು (ಬ್ಲೂಪ್ರಿಂಟ್) ಮತ್ತೊಮ್ಮೆ ಪರಿಶೀಲಿಸುತ್ತಿದ್ದ. ಹೊರಗೆ ಇನ್ನೂ ಪೂರ್ತಿ ಬೆಳಗಾಗಿರಲಿಲ್ಲ, ಆದರೂ ಅವನ ಕಚೇರಿ ಪ್ರಕಾಶಮಾನವಾಗಿತ್ತು. 'ಪ್ರಣಂ 2' ಎಂಬುದು ಕೇವಲ ಒಂದು ಪ್ರಾಜೆಕ್ಟ್ ಆಗಿರಲಿಲ್ಲ. ಅದು ಭಾರತದ ಇತಿಹಾಸವನ್ನು, ಕಲೆ ಮತ್ತು ವಾಸ್ತುಶಿಲ್ಪವನ್ನು ಪ್ರಪಂಚಕ್ಕೆ ಪರಿಚಯಿಸುವ ಒಂದು ಮಹಾಕನಸಾಗಿತ್ತು. ಈ ಯೋಜನೆಯಡಿ, ದೇಶದ ಹಳೆಯ ಮತ್ತು ಪಾಳುಬಿದ್ದ ದೇವಾಲಯಗಳನ್ನು ಹೊಸ ತಂತ್ರಜ್ಞಾನದ ಸಹಾಯದಿಂದ ನವೀಕರಿಸುವ ಕೆಲಸ ನಡೆಯಬೇಕಿತ್ತು. ಆರ್ಯನ ಮನಸ್ಸು ಆಳವಾದ ಯೋಚನೆಯಲ್ಲಿ ಮುಳುಗಿತ್ತು. ಈ ಪ್ರಾಜೆಕ್ಟ್‌ನ ಬಗ್ಗೆ ಅತಿಯಾದ ಉತ್ಸಾಹವಿದ್ದರೂ, ಕಳೆದ ಕೆಲವು ದಿನಗಳಿಂದ ಅವನಿಗೆ ಪದೇ ಪದೇ ಬೀಳುತ್ತಿದ್ದ ವಿಚಿತ್ರ ಕನಸುಗಳು ಅವನನ್ನು ಕಾಡುತ್ತಿದ್ದವು. ಕನಸಿನಲ್ಲಿ, ತಾನು ಒಬ್ಬ ಪರಾಕ್ರಮಿ ಸೇನಾಪತಿಯಂತೆ ಕತ್ತಿ ಹಿಡಿದು ಹೋರಾಡುತ್ತಿದ್ದನು. ಅವನ ಎದುರಿನಲ್ಲಿ ನೂರಾರು ಸೈನಿಕರು, ಅವನ ಹಿಂದೆ ಒಂದು ವಿಶಾಲವಾದ ಕೋಟೆ, ಮತ್ತು ಆ ಕೋಟೆಯ ಮೇಲಿರುವ ಸುಂದರವಾದ ಸ್ತ್ರೀ ತನ್ನತ್ತ ಭಯದಿಂದ ನೋಡುತ್ತಿರುವ ದೃಶ್ಯ ಅವನ ಕಣ್ಣ ಮುಂದೆ ಹಾದುಹೋಗುತ್ತಿತ್ತು. ಆ ಕನಸಿನಲ್ಲಿ ಆತ ಪದ್ಮಾ, ಭಯಪಡಬೇಡ ನಾನು ನಿನ್ನ ರಕ್ಷಿಸುತ್ತೇನೆ ಎಂದು ಕೂಗುತ್ತಾನೆ. ನಂತರ, ಆತನಿಗೆ ಬೆನ್ನಿನಿಂದ ಯಾರೋ ಇರಿದು, ಆತ ನೆಲಕ್ಕೆ ಕುಸಿಯುವ ದೃಶ್ಯ ಕಾಣುತ್ತದೆ.ಹಳೆಯದನ್ನು ಮರೆತು ಹೊಸ ಕನಸನ್ನು ಕಾಣಲು ಪ್ರಯತ್ನಿಸುತ್ತಿರುವಾಗಲೇ ಈ ರೀತಿಯ ಕನಸುಗಳು ಬೀಳುತ್ತಿರುವುದು ಆರ್ಯನಿಗೆ ವಿಚಿತ್ರ ಎನಿಸಿತ್ತು. ಅದೇ ದಿನ, 'ಪ್ರಣಂ 2' ಪ್ರಾಜೆಕ್ಟ್‌ನ ಪ್ರಮುಖ ವಿಭಾಗದ ಕೆಲಸಕ್ಕೆ ಸಂಬಂಧಿಸಿದಂತೆ, ಆತ ದೇವಸ್ಥಾನಗಳ ಸಂರಕ್ಷಣೆ ಮತ್ತು ಅದರ ಪಾವಿತ್ರ್ಯತೆಯನ್ನು ಉಳಿಸುವ ಕೆಲಸ ಮಾಡುವ ಸಂಸ್ಥೆಯೊಂದರ ಮುಖ್ಯಸ್ಥರಾದ ಅನುಳನ್ನು ಭೇಟಿಯಾಗಬೇಕಿತ್ತು. ಆರ್ಯನು ತನ್ನ ಕೆಲಸವನ್ನು ಮುಗಿಸಿ ಅನುಳನ್ನು ಭೇಟಿ ಮಾಡಲು ಹೊರಡುತ್ತಾನೆ.​ಅನು ಕೂಡ ಆರ್ಯನ ಭೇಟಿಯ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಳು. ಅವಳಿಗೆ ತನ್ನ ಸಂಸ್ಥೆಯ ಕೆಲಸದ ಬಗ್ಗೆ ಅತೀವ ಗೌರವವಿತ್ತು. ಅವಳು ತನ್ನ ಕೆಲಸವನ್ನು ಕೇವಲ ವೃತ್ತಿಯಂತೆ ನೋಡದೆ ಅದೊಂದು ಪವಿತ್ರ ಸೇವೆ ಎಂದು ಭಾವಿಸಿದ್ದಳು. ಆಕೆಯ ನಂಬಿಕೆಗಳು ಮತ್ತು ಆಧುನಿಕತೆಯ ನಡುವಿನ ಸಮತೋಲನವು ಅವಳನ್ನು ಇತರರಿಗಿಂತ ವಿಭಿನ್ನವಾಗಿ ಕಾಣುವಂತೆ ಮಾಡಿತ್ತು.​ಆರ್ಯನು ಅನುಳ ಕಚೇರಿಗೆ ತಲುಪಿದನು. ಅವಳು ತನ್ನ ಮೇಜಿನ ಮೇಲೆ ಏನೋ ಬರೆಯುತ್ತಾ ಕುಳಿತಿದ್ದಳು. ಆತ ಅವಳ ಮುಖ ನೋಡಿದ ತಕ್ಷಣ ಒಂದು ಕ್ಷಣ ಸ್ತಬ್ಧನಾದ. ತನ್ನ ಕನಸಿನಲ್ಲಿ ಕಂಡ ರಾಣಿಯ ಕಣ್ಣುಗಳು ಮತ್ತು ಅದೇ ಮುಗ್ಧ ನಗುವನ್ನು ಅನುಳ ಮುಖದಲ್ಲಿ ಕಂಡಾಗ ಆರ್ಯನಿಗೆ ಏನೋ ಅರಿವಾಯಿತು. ಅವನ ಹೃದಯದ ಬಡಿತ ಹೆಚ್ಚಾಯಿತು. ಅವನಿಗೆ ತನ್ನ ಕನಸು ಕೇವಲ ಒಂದು ಭ್ರಮೆಯಲ್ಲ, ಅದಕ್ಕೆ ವಾಸ್ತವದ ಸ್ಪರ್ಶವಿದೆ ಎಂದು ಅನ್ನಿಸಿತು.ಹಾಯ್, ನಾನು ಆರ್ಯ, ಎಂದು ಪರಿಚಯಿಸಿಕೊಂಡಾಗ, ಅನು ತನ್ನ ತಲೆಯನ್ನು ಎತ್ತಿದಳು. ಅವಳು ಸಹ ಅವನನ್ನು ನೋಡುತ್ತಿದ್ದಂತೆ ಒಂದು ಕ್ಷಣ ನಿಂತು, ನಿಮ್ಮನ್ನ ಎಲ್ಲಿಯೋ ನೋಡಿದ ಹಾಗೆ ಇದೆ, ಎಂದು ಮೃದುವಾದ ದನಿಯಲ್ಲಿ ಹೇಳಿದಳು. ಅವಳ ಈ ಮಾತು ಆರ್ಯನ ಮನಸ್ಸಿನಲ್ಲಿ ವಿಚಿತ್ರವಾದ ಸಂಚಲನವನ್ನು ಮೂಡಿಸಿತು. ಇಬ್ಬರ ನಡುವೆ ಒಂದು ವಿಶೇಷವಾದ ಸಂಬಂಧ ರೂಪುಗೊಳ್ಳಲು ಆರಂಭವಾಗಿತ್ತು. ಆದರೆ ಇದು ಕೇವಲ ಒಂದು ಹೊಸ ಪರಿಚಯವೋ, ಅಥವಾ ಅದಕ್ಕೂ ಮೀರಿದ ಇನ್ನೇನಾದರೂ ಇದೆಯೋ ಎಂಬುದು ಇಬ್ಬರಿಗೂ ಇನ್ನೂ ತಿಳಿದಿರಲಿಲ್ಲ.​ಆರ್ಯನ ಮನಸ್ಸಿನಲ್ಲಿ ಒಂದು ಹೊಸ ಪ್ರಶ್ನೆ ಮೂಡಿತ್ತು. ಈ ಕನಸುಗಳೇನು? ಈ ಹುಡುಗಿ ಯಾರು? ಈ ಕನಸುಗಳು ಮತ್ತು ಈಕೆಗೂ ಇರುವ ಸಂಬಂಧವೇನು?

​ಅನುಳ ಕಚೇರಿಯಿಂದ ಹೊರ ಬಂದ ಆರ್ಯನ ಮನಸ್ಸು ಗೊಂದಲಗಳಿಂದ ತುಂಬಿ ಹೋಗಿತ್ತು. ಆಕೆಯ ಮುಖದಲ್ಲಿ ತಾನು ಕನಸಿನಲ್ಲಿ ಕಂಡ ರಾಣಿಯ ರೂಪವನ್ನು ಹೋಲಿಸುವುದು ಕೇವಲ ಒಂದು ಕಾಕತಾಳೀಯವೇ ಅಥವಾ ಅದಕ್ಕೂ ಮೀರಿದ ಇನ್ನೇನಾದರೂ ಇತ್ತೇ? ಅವನು ತನ್ನ ಕಾರಿನಲ್ಲಿ ಕುಳಿತುಕೊಂಡು, ಆದಷ್ಟು ಬೇಗ ಮನೆ ತಲುಪಬೇಕೆಂದು ನಿರ್ಧರಿಸಿದನು. ಆರ್ಯನು ಸಾಮಾನ್ಯ ಮನುಷ್ಯನಂತೆ ಯೋಚಿಸಲು ಪ್ರಯತ್ನಿಸಿದರೂ, ಅವನ ಮನಸ್ಸನ್ನು ಕಾಡುತ್ತಿದ್ದ ಕನಸುಗಳು ಅವನನ್ನು ಹಿಂದಿನ ಜನ್ಮದ ಕಡೆಗೆ ಎಳೆಯುತ್ತಿದ್ದವು. ​ಮನೆಯಲ್ಲಿ ರಾತ್ರಿ ಊಟ ಮಾಡುವಾಗಲೂ ಆರ್ಯನ ಮನಸ್ಸು ಶಾಂತವಾಗಿರಲಿಲ್ಲ. ಅವನ ತಾಯಿಗೆ ಅವನ ಗೊಂದಲಗಳು ಅರ್ಥವಾಗಲಿಲ್ಲ. ಏನಾಯ್ತು ಮಗಾ? ಏನಾದರೂ ಸಮಸ್ಯೆಯಿದೆಯಾ? ಎಂದು ಪ್ರೀತಿಯಿಂದ ಕೇಳಿದರು. ಆರ್ಯನು ಏನಿಲ್ಲ ಅಮ್ಮಾ, ಕೆಲಸದ ಒತ್ತಡ ಅಷ್ಟೇ, ಎಂದು ಹೇಳಿ ತಪ್ಪಿಸಿಕೊಂಡ. ಅವನ ಕನಸುಗಳ ಬಗ್ಗೆ ಮನೆಯವರ ಬಳಿ ಹೇಳಿಕೊಂಡರೆ, ಅದನ್ನು ಗಂಭೀರವಾಗಿ ಪರಿಗಣಿಸದೆ ಇರಬಹುದು ಎಂದು ಅವನಿಗೆ ಅನ್ನಿಸಿತು.ರಾತ್ರಿ, ಆರ್ಯನ್ ಮತ್ತೆ ಆಳವಾದ ನಿದ್ರೆಗೆ ಜಾರಿದನು. ಈ ಬಾರಿ ಅವನಿಗೆ ಕಂಡ ಕನಸು ಇನ್ನೂ ಸ್ಪಷ್ಟವಾಗಿತ್ತು. ಅವನು ಕತ್ತಿಯೊಡನೆ ರಣರಂಗದಲ್ಲಿ ನಿಂತಿದ್ದನು, ಅವನ ರಕ್ತದಿಂದ ಭೂಮಿ ಕೆಂಪಾಗಿತ್ತು. ಎದುರಿನಲ್ಲಿ ಇದ್ದುದು ಅವನದೇ ಸೇನಾಪತಿ, ನಂಬಿಕೆಯ ದ್ರೋಹಿ ಕಾಲಾನಾಗ್ ಕಾಲಾನಾಗ್ ರಾಣಿ ಪದ್ಮಾವತಿಯನ್ನು ಒತ್ತೆಯಾಳಾಗಿ ಹಿಡಿದು ನಿಂತಿದ್ದನು. ಆರ್ಯನು ತನ್ನ ಪೂರ್ಣ ಶಕ್ತಿಯನ್ನು ಬಳಸಿ ವೀರಾವೇಶದಿಂದ ಹೋರಾಡಲು ಪ್ರಯತ್ನಿಸುತ್ತಿದ್ದನು, ಆದರೆ ದ್ರೋಹದ ಕಾರಣದಿಂದ ಅವನ ಶಕ್ತಿ ಕುಗ್ಗಿತ್ತು. ನಮ್ಮ ಪ್ರೀತಿ ಅಮರ, ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ, ಎಂದು ವೀರಬಾಹು ಕೂಗಿದನು. ಆಗ ಕಾಲಾನಾಗ್ ಕ್ರೂರವಾಗಿ ನಕ್ಕು ಇದು ಮುಗಿದ ಕಥೆಯಲ್ಲ ವೀರಬಾಹು. ಇದು ಕೇವಲ ಒಂದು ಅಧ್ಯಾಯದ ಅಂತ್ಯ, ಎಂದು ಹೇಳಿ ಪದ್ಮಾವತಿಯನ್ನು ಕತ್ತಿಯಿಂದ ಇರಿಯುತ್ತಾನೆ. ಅದೇ ಸಮಯದಲ್ಲಿ, ಆರ್ಯನ ಬೆನ್ನಿಗೆ ಒಂದು ಬಾಣ ಬಂದು ನಾಟುತ್ತದೆ. ಆರ್ಯನಿಗೆ ಇದು ಹಿಂದಿನ ಜನ್ಮದ ಒಂದು ನೋವಿನ ಕ್ಷಣ ಎಂದು ತಿಳಿದುಬರುತ್ತದೆ. ಈ ಕನಸು ಅವನನ್ನು ಬೆಚ್ಚಿ ಬೀಳಿಸುತ್ತದೆ. ಬೆವರಿನಿಂದ ನೆನೆದ ಆರ್ಯನ್ ದಿಢೀರನೇ ಎದ್ದು ಕುಳಿತುಕೊಳ್ಳುತ್ತಾನೆ. ಆರ್ಯನಿಗೆ ಅನುಳ ಮುಖ ನೆನಪಾಯಿತು. ಕನಸಿನಲ್ಲಿ ಕಂಡ ಪದ್ಮಾವತಿಯ ಕಣ್ಣುಗಳು ಮತ್ತು ಅನುಳ ಕಣ್ಣುಗಳಲ್ಲಿನ ಸಾಮ್ಯತೆ ಅವನನ್ನು ಕಾಡಿತ್ತು. ಈ ಕನಸುಗಳು ಕೇವಲ ಕನಸುಗಳಲ್ಲ, ಆದರೆ ತನ್ನ ಹಿಂದಿನ ಜನ್ಮದ ಪ್ರತಿಬಿಂಬಗಳು ಎಂದು ಅವನಿಗೆ ಈಗ ನಿಶ್ಚಿತವಾಯಿತು. ಆದರೂ, ಅವನು ತಾನು ಆರ್ಯನಾಗಿ ಮಾಡಿದ ಯಾವುದೇ ಕೆಲಸದ ಬಗ್ಗೆ ಖಚಿತವಾಗಿಲ್ಲ. ತನ್ನ ಯಶಸ್ವಿ ವೃತ್ತಿ ಮತ್ತು ಆಧುನಿಕ ಜೀವನಶೈಲಿಯ ಮಧ್ಯೆ, ಇಂತಹ ಗತಕಾಲದ ನೆನಪುಗಳು ಅವನನ್ನು ಇನ್ನಷ್ಟು ಗೊಂದಲಕ್ಕೆ ದೂಡಿದವು. ​ಆರ್ಯನ್ ತನ್ನ ಗೊಂದಲಗಳನ್ನು ಯಾರ ಜೊತೆಯೂ ಹಂಚಿಕೊಳ್ಳಲು ಸಾಧ್ಯವಾಗದೆ, ತನ್ನ ಹಳೆಯ ಕಾಲೇಜು ಸ್ನೇಹಿತನಾದ ರಾಜೇಶನನ್ನು ಭೇಟಿಯಾಗಲು ನಿರ್ಧರಿಸುತ್ತಾನೆ. ರಾಜೇಶ ಒಬ್ಬ ವೃತ್ತಿಪರ ಸಂಶೋಧಕ, ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನ ಹೊಂದಿದ್ದನು. ಆರ್ಯನ್ ಈ ಕನಸುಗಳ ಬಗ್ಗೆ ನೇರವಾಗಿ ಹೇಳುವ ಬದಲು, ಹಳೆಯ ದೇವಾಲಯಗಳ ಬಗ್ಗೆ ಮಾಹಿತಿ ಬೇಕಿತ್ತು, ಎಂದು ಕೇಳುತ್ತಾನೆ. ರಾಜೇಶ್ ಸಂತೋಷದಿಂದ ಇತಿಹಾಸದ ಪುಸ್ತಕಗಳನ್ನು ತೆಗೆದು ತೋರಿಸುತ್ತಾನೆ. ಆರ್ಯನ್ ಆ ಪುಸ್ತಕಗಳಲ್ಲಿ ಹಳೆಯ ರಾಜಮನೆತನಗಳ ಕುರಿತಾದ ಕೆಲವು ಚಿತ್ರಗಳನ್ನು ನೋಡಿದನು. ಅದರಲ್ಲಿ ಒಂದು ಚಿತ್ರ ಆತನನ್ನು ಆಕರ್ಷಿಸಿತು. ಅದರಲ್ಲಿರುವ ಕೋಟೆಯು ಆತನ ಕನಸಿನಲ್ಲಿ ಕಂಡ ಕೋಟೆಯಂತೆಯೇ ಇತ್ತು. ಚಿತ್ರದ ಕೆಳಗೆ ಸೇನಾಪತಿ ವೀರಬಾಹು ಮತ್ತು ರಾಣಿ ಪದ್ಮಾವತಿ ಎಂದು ಬರೆದಿತ್ತು. ಆರ್ಯನು ಆಶ್ಚರ್ಯಚಕಿತನಾದನು.

​ಅದೇ ದಿನ, ಆರ್ಯನ 'ಪ್ರಣಂ 2' ಪ್ರಾಜೆಕ್ಟ್‌ನ ಪ್ರಮುಖ ಪ್ರತಿಸ್ಪರ್ಧಿಯಾದ ವಿಕ್ರಮ್‌ನನ್ನು ಭೇಟಿಯಾಗುತ್ತಾನೆ. ವಿಕ್ರಮ್‌ ಒಬ್ಬ ಮಹತ್ವಾಕಾಂಕ್ಷೆಯ ಉದ್ಯಮಿ. ಈ ಹಿಂದಿನಿಂದಲೇ ಆರ್ಯನನ್ನು ಸೋಲಿಸಲು ಯೋಜಿಸುತ್ತಿದ್ದನು. ಈ ಬಾರಿ, ಅವನು ಪ್ರಣಂ 2' ಪ್ರಾಜೆಕ್ಟ್‌ನ ಬಗ್ಗೆ ತಿಳಿದಿದ್ದನು, ಮತ್ತು ಅದರಲ್ಲಿ ಆರ್ಯನನ್ನು ಸೋಲಿಸುವ ಉದ್ದೇಶದಿಂದ ಬಂದಿದ್ದನು. ವಿಕ್ರಮ್‌ ಆರ್ಯನ ಬಳಿ ಪ್ರಣಂ 2 ಪ್ರಾಜೆಕ್ಟ್‌ನಲ್ಲಿ ನಿಮ್ಮ ಮಹತ್ವಾಕಾಂಕ್ಷೆ ನನಗೆ ಇಷ್ಟವಾಯ್ತು. ಆದರೆ ಕೆಲವೊಮ್ಮೆ ಕಥೆಗಳು ಪುನರಾವರ್ತನೆ ಆಗುತ್ತವೆ, ಕೆಲವು ಹಳೆ ಸಂಬಂಧಗಳು ಹೊಸದಾಗಿ ಹುಟ್ಟುತ್ತವೆ ಎಂದು ಅಣಕದ ನಗೆ ನಗುತ್ತಾನೆ.​ಈ ಮಾತುಗಳು ಆರ್ಯನಿಗೆ ಏನೋ ವಿಶೇಷವೆಂದು ಅನಿಸಿತು. ವಿಕ್ರಮ್‌ ತನ್ನ ಕನಸಿನ ಕಾಲಾನಾಗನಂತೆ ಕಾಣುತ್ತಿದ್ದನು, ಮತ್ತು ಅವನ ಮಾತುಗಳು ಆರ್ಯನ ಹಿಂದಿನ ಜನ್ಮದ ನೋವನ್ನು ನೆನಪಿಸಿದವು. ಆರ್ಯನಿಗೆ, ವಿಕ್ರಮ್‌ ಮತ್ತು ಕಾಲಾನಾಗ್ ಇವರಿಬ್ಬರ ನಡುವೆ ಒಂದು ಸಂಪರ್ಕ ಇರಬಹುದು ಎಂದು ಒಂದು ಕ್ಷಣ ಅನ್ನಿಸಿತು.

                                   ಮುಂದುವರೆಯುತ್ತದೆ