Magical garden in Kannada Crime Stories by Shrathi books and stories PDF | ಮಾಯಾಂಗನೆ

The Author
Featured Books
  • ಪ್ರಣಂ 2 - 2

    ​ವಿಕ್ರಮ್‌‌ನಿಂದ ಹೊರಬಂದ ನಂತರ ಆರ್ಯನ್ ಮನಸ್ಸು ಇನ್ನಷ್ಟು ಗೊಂದಲಕ್ಕೆ...

  • ಮಾಯಾಂಗನೆ

    ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು.ಮಂಗಳೂರಿನಿಂದ ಮೈಸೂರಿಗೆ ಹೊರಡುವ...

  • ಬಯಸದೆ ಬಂದವಳು... - 18

    ಅಧ್ಯಾಯ 18 : "ವಿದಾಯದ ಕ್ಷಣಗಳು,ಮನೆಗೆ ಮರಳುವ ಹಾದಿ "ಮರುದಿನ ಅವರ ಎಕ್...

  • ಪ್ರಣಂ 2 - 1

    ಈ ಧಾರಾವಾಹಿಯಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕ ವಾಗ...

  • ಬೇಡಿದರೂ ನೀಡದವರು

    ಬೆಳಗ್ಗೆ ನಾಲ್ಕು ಗಂಟೆಗೆ ವಿರೂಪಾಕ್ಷಿ ಮಠದ ಗಂಟೆ ಬಾರಿಸಿದಾಗ, ಆ ಊರ ಸಮ...

Categories
Share

ಮಾಯಾಂಗನೆ

ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು.
ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್‌ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು.

ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ಒಬ್ಬ ವ್ಯಕ್ತಿ ಓಡಿಕೊಂಡು ಬಂದು ಆ ಬಸ್ಸ್ ಅನ್ನು ಹತ್ತಿದ್ದ.
ಅವನು  ಅನುಜ್ ಸೂದ್ , ಆತ ತನ್ನ  ಮನೆಯಿಂದ ಬಸ್ಸ್ ಸ್ಟ್ಯಾಂಡ್ ಗೆ ಬರುವಾಗ ಮದ್ಯದಲ್ಲಿ ಅವನ ಬೈಕ್ ಪಂಚರ್ ರಾಗುತ್ತದೆ .

ಅಲ್ಲಿಂದ ಬಸ್ಸ್ ಸ್ಟ್ಯಾಂಡ್ 10-15 ನಿಮಿಷದ ದಾರಿ ಇದ್ದ ಕಾರಣ ಅಲ್ಲಿಂದ  ಓಡಿಕೊಂಡು ಬಂದು ಬಸ್ಸ್ ಹತ್ತಿದ ಪುಣ್ಯಾತ್ಮ .. 

"ನನ್ನ ಪುಣ್ಯಕ್ಕೆ ಬಸ್ಸ್ ಸಿಕ್ಕಿತು. ಬಸ್ ಮಿಸ್ಸ್ ಆಗಿದ್ರೆ ಸುಮ್ನೆ ಶ್ರೀಮತಿ ( ಹೆಂಡತಿ  ) ಕೈ ಯಿಂದ ಬೈಗುಳ ತಿನ್ನ ಬೇಕಿತ್ತು ..."

ಎಂದು ಮನದಲ್ಲಿಯೇ ಯೋಚನೆ ಮಾಡಿದ ....

( ಸರಿ ಸುಮಾರು ಮಂಗಳೂರಿನಿಂದ ಮೈಸೂರಿಗೆ ತಲುಪಲು ಸರಾಸರಿ 6 ಗಂಟೆ ತೆಗೆದುಕೊಳ್ಳುತ್ತದೆ . )

ಅನುಜ್ ಸೂದ್ ಗೆ ಪ್ರಯಾಣಿಸುವುದೆಂದರೆ ತುಂಬಾ ಕಿರಿಕಿರಿಯಾಗುತಿತ್ತು . ಆದರು ಮೈಸೂರಿಗೆ ತಲುಪುವುದು ಅನಿವಾರ್ಯವಾದರಿಂದ ಬಸ್ಸ್ ನಲ್ಲಿ ಹೋಗುವ ನಿರ್ಧಾರ ಮಾಡಿದ. 

ಮಂಗಳೂರಿನಿಂದ ಮೈಸೂರು ಹೋಗುವುದಕ್ಕೆ ಒಂದು ಕಡೆ ಹೆಂಡತಿಯನ್ನು ನೋಡಬಹುದು ಎಂದು ಖುಷಿಯಾದರೆ ಇನ್ನೊಂದು ಕಡೆ ಸ್ವಲ್ಪ ಭಯ ಮತ್ತು ಬಸ್ಸ್ ನಲ್ಲಿ ಹೋಗ ಬೇಕು ಎಂಬ ಬೇಜಾರು ಕೂಡ ಇತ್ತು .

ಭಯದ ಕಾರಣವೆನೆಂದರೆ ಅನುಜ್ ಸೂದ್ ನ ಪತ್ನಿ ತುಂಬು ಗರ್ಭಿನಿಯಾಗಿದ್ದಳು ಅವಳ ಡೆಲಿವರಿ ಡೇಟ್ ಗೆ ಇನ್ನು ಕೇವಲ ಐದು ದಿನ ಇತ್ತು ಅಷ್ಟೇ , ಅವಳ ಡೆಲಿವರಿಗಿಂತ ಮೊದಲು ಅಲ್ಲಿ ಇರಬೇಕು ಎಂದು ಹೊರಟ್ಟಿದ್ದ  ಈ ಮಹಾಶಯ .... 
ಅನುಜ್ ಸೂದ್ ತನ್ನನ್ನು ತಾನು 6 ಗಂಟೆಯ ಪ್ರಯಾಣಕ್ಕೆ ಸಜ್ಜು ಮಾಡಿ ಬಸ್ಸ್ ನ ಮೆಟ್ಟಲಿನಿಂದ ಮೇಲೆ ಹತ್ತಿದ   ..... 
ಅನುಜ್ ಸೂದ್ ಅಲ್ಲೇ ಖಾಲಿ ಇದ್ದ ಸೀಟಿನಲ್ಲಿ ಕುಲಿತು ದಣಿವಾರಿಸಿಕೊಂಡು , ತನ್ನ ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದವನ ಕಡೆಗೆ ನೋಡಿ ಮುಗುಳು ನಗುತ್ತಾನೆ . 

ಹಾಯ್ ನಾನು ಅರುಣ್ ಕುಮಾರ್ 

ಎಂದು ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ಅರುಣ್ ತನ್ನನ್ನು ತಾನು ಪರಿಚಯಿಸಿಕೊಂಡ . ಆ ಅರುಣ್ ನ ಮುಖದಲ್ಲಿ ಒಂದು ರೀತಿಯ ಆಶ್ಚರ್ಯ ಮತ್ತು ಖುಷಿ ಎದ್ದು ಕಾಣುತ್ತಿತ್ತು .....

ಹಾಯ್ ನಾನು ..........

ಎಂದು ಅನುಜ್ ತನ್ನ ಹೆಸರನ್ನು ಹೇಳುವುದಕ್ಕೆ ಹೋದ ಆದರೆ ಅರುಣ್ ಅನುಜ್ ನ ಮಾತನ್ನು ಅರ್ಧದಲ್ಲಿ ನಿಲ್ಲಿಸಿ ಹೇಳುತ್ತಾನೆ. 

ನಿಮ್ಮ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ,  ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ನಿಮ್ಮನ್ನು ತಿಳಿಯದೆ ಇರುವವರು ಯಾರು ಇಲ್ಲ  .... 
ನಿಷ್ಠಾವಂತ ಐ.ಪಿ.ಎಸ್. ಅಧಿಕಾರಿ ಅನುಜ್ ಸೂದ್ ತಾನೇ ನೀವು .... 
ದಕ್ಷತೆಗೆ ಇನ್ನೊಂದು ಹೆಸರೇ ಅನುಜ್ ಸೂದ್ ಅನ್ನುವ ರೀತಿ ನೀವು ನಿಮ್ಮ ಛಾಪು ಮೂಡಿಸಿದ್ದೀರಾ ....
ಏಷ್ಟೋ ವಿದ್ಯಾರ್ಥಿಗಳ ರೋಲ್ ಮಾಡೆಲ್ ನೀವು ... 
ಯಾವತ್ತೂ ನ್ಯಾಯದ ಪರವಾಗಿ ನಿಂತು , ಜನರ ವಿಶ್ವಾಸ ಗಳಿಸಿದ್ದಿರಾ ...
ಅದರೆ ನೀವು ಬಸ್ಸ್ ನಲ್ಲಿ ಬರ್ತೀರಾ ಅಂತ ಇಮ್ಯಾಜಿನ್ ಕೂಡ ಮಾಡ್ಕೊಂಡಿರಲಿಲ್ಲಾ .. 
ನಿಮ್ಮನ್ನು ಬೇಟಿ ಮಾಡುವ ತುಂಬಾ ಆಸೆ ಇತ್ತು ಆದರೆ ನನ್ನ ಪುಣ್ಯ ಎಂಬಂತೆ ನೀವು ನನ್ನೊಂದಿಗೆ ಪ್ರಯಾಣ ಮಾಡುತ್ತಿದ್ದೀರಾ .....

ಎ೦ದು ಹೇಳುತ್ತಾ ಅರುಣ್ ಕುಮಾರ್ ಹೆಮ್ಮೆಯಿಂದ ಅನುಜ್ ಸೂದ್ ಅನ್ನು ನೋಡುತ್ತಾನೆ ..

ಅದು ಕಾರ್ ನಲ್ಲಿ ಲಾಂಗ್ ಡ್ರೈವ್  ಒಬ್ಬನೆ ಹೋಗಲಿಕ್ಕೆ ಬೋರ್ ಆಗುತ್ತೆ .. 
ಮೈಸೂರಿಗೆ ಹೋಗುವುದು ಅನಿವಾರ್ಯ ಅದಕ್ಕಾಗಿ ಬಸ್ಸ್ ನಲ್ಲಿ ಬಂದದ್ದು .. 
ಬಸ್ಸ್ ನಲ್ಲಿ ಬಂದು ಏನಾದರೂ ತಪ್ಪು ಮಾಡಿದೆಯಾ ನಾನು  ..? 
ಹಾಗೆ ಐಪಿಎಸ್ ಅಧಿಕಾರಿ ಬಸ್ಸ್ ನಲ್ಲಿ
ಬರಬಾರದು ಎಂದು ಕಾನೂನು ಇದೆಯಾ ... ?

ಅಂತ ನಗುತ್ತ  ಅನುಜ್ ಸೂದ್ ಕೇಳುತ್ತಾನೆ .. 

ಆಗೇನು ಇಲ್ಲ ಸರ್ .. 
ಸುಮ್ಮನೆ ಮಾತಿನ ವರಸೆಗೆ ಹೇಳಿದೆ ಅಷ್ಟೇ .. 
ಈಗಿನ ಕಾಲದಲ್ಲಿ ಸ್ವಂತ ಗಾಡಿ ಎಲ್ಲ ಇದ್ದರೆ ಯಾರು ತಾನೇ ಬಸ್ಸ್ ನಲ್ಲಿ ಬರುತ್ತಾರೆ ....
ನಾನು ಹಾಗೆ ಕೇಳಿದ್ದು ನಿಮಗೆ ಬೇಜಾರು ಆದರೆ 
ಕ್ಷಮಿಸಿ ಸರ್ .. 

ಅಂತ ಅರುಣ್ ಕುಮಾರ್ ಹೇಳಿದ .. 

ನಾನು ಸುಮ್ಮನೆ ತಮಾಷೆ ಮಾಡಿದ್ದು .... 
ಕ್ಷಮೆ ಎಲ್ಲ ಕೇಳ್ಬೇಡಿ ..  

ಅಂತ ಅನುಜ್ ಕುಮಾರ್ ಹೇಳಿದ ..

ಆಯ್ತು ಸರ್ .. 

ಅಂತ ಅರುಣ್ ಕುಮಾರ್ ಹೇಳಿದ ...

ನನ್ನ ಬಗ್ಗೆ ಇಷ್ಟೊಂದು ತಿಳಿದುಕೊಂಡಿದ್ದಿರಾ , 
ನಿಮ್ಮ ಬಗ್ಗೆ ಕೂಡ ಸ್ವಲ್ಪ ಹೇಳಿ ... 
ನಾನು ಕೂಡ ತಿಳಿದುಕೊಳ್ಳುತ್ತೇನೆ ನಿಮ್ಮ ಬಗ್ಗೆ ಸರ್ ...

ಎಂದು ಅನುಜ್ ಸೂದ್ ಕುತೂಹಲದಿಂದ ಹೇಳಿದ ...

ನೀವು 
ನನ್ನ ಬಗ್ಗೆ ತಿಳಿದುಕೊಳ್ಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ...
ಸಾಧಾರಣ ಮನುಷ್ಯ ಹೊಟ್ಟೆ ಪಾಡಿಗಾಗಿ ವಿದ್ಯೆ ಕಲಿಸುತ್ತೇನೆ ....
ನಾನು ಶಿಕ್ಷಣ ವೃತ್ತಿಯನ್ನು ಶುರು ಮಾಡಿ ಇಲ್ಲಿಗೆ ಎರಡು ವರ್ಷವಾಯಿತು ಅಷ್ಟೇ .....

ಎಂದು ಹೇಳಿ ಮಾತು ನಿಲ್ಲಿಸಿದ ಅರುಣ್ ಕುಮಾರ್

ನೀವು ಶಿಕ್ಷಕರ ... 
ತುಂಬಾ ಒಳ್ಳೆಯಾ ವಿಷಯ ...
ಯಾವ ಶಿಕ್ಷಣ ಸಂಸ್ಥೆ ...

ಎ೦ದು ಅನುಜ್ ಸೂದ್ ಕೇಳುತ್ತಾನೆ.




ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆನೆ ....

ಎಂದು ಅರುಣ್ ಮುಗುಳು ನಗುತ್ತ ಉತ್ತರಿಸಿದ

ನಾನು  ತುಂಬಾ ಕೇಳಿದ್ದೇನೆ ಆ ಕಾಲೇಜ್ ಬಗ್ಗೆ ... ಒಳ್ಳೆಯಾ ಶಿಕ್ಷಣ ಸಂಸ್ಥೆಯದು ....
ಮತ್ತೆ ಆ ಸಂಸ್ಥೆ ನೋಡಲು ತುಂಬಾ ಚೆನ್ನಾಗಿದೆ ....

ಎಂದು ಹೇಳಿ ಅನುಜ್ ಸೂದ್ ಸುಮ್ಮನಾದ

ಎಲ್ಲಿಯವರೆಗೆ ನಿಮ್ಮ ಪ್ರಯಾಣ ?

ಎಂದು ಮತ್ತೆ ಅರುಣ್ ಸಂಭಾಷಣೆ ಶುರು ಮಾಡಿದ

ಮೈಸೂರಿನವರೆಗೆ

ಎಂದು ಅನುಜ್ ಸೂದ್ ಉತ್ತರ ಕೊಟ್ಟು ..

ನೀವೆಲ್ಲಿಗೆ ಹೋಗುತ್ತಿರುವುದು ...? 

ಎಂದು ಪುನಃ ಕೇಳುತ್ತಾನೆ ...

ನಾನು ಕೂಡ ಮೈಸೂರಿಗೆ ಹೊರಟಿದ್ದೇನೆ....

ಎಂದು ಅರುಣ್ ಉತ್ತರ ಕೊಟ್ಟು

ಆಗಿದ್ದರೆ ನಾವು ಅಲ್ಲಿ ತನಕ ಮಾತಾಡುತ್ತ ಹೋಗುವ , ಏಕೆಂದರೆ ಸುಮ್ಮನೆ ಕುಳಿತುಕೊಂಡು ಹೋಗುವುದಕ್ಕೆ ಬೋರ್ ಆಗುತ್ತೆ ಆದರೆ ನಿಮಗೆ ಅಭ್ಯಂತ್ರ ಇಲ್ಲ ಅಂದ್ರೆ ಮಾತ್ರ ....

ಎಂದು ಅರುಣ್ ಮತ್ತೆ ಕೇಳಿದ 

ಸರಿ ಆದರೆ ಈಗ ನನಗೆ ನ್ಯೂಸ್ ಪೇಪರ್ ಓದುತ್ತೇನೆ , ನಾವು ಸ್ವಲ್ಪ ಸಮಯದ ನಂತರ ಮಾತನಾಡುವ ....

ಎಂದು ಹೇಳಿ ತನ್ನ ಬ್ಯಾಗಿನಲ್ಲಿ ಇರುವ 
' ಮಾಸ ಪತ್ರಿಕೆ 'ಗಳನ್ನು ಹೊರಕ್ಕೆಳೆದುಕೊಂಡು ಸೀಟಿಗೆ ಒರಗಿ ಓದುತ್ತ ಕುಳಿತ .... 

ಹಾಗೆ ಓದುತ್ತಾ ಕುಳಿತವನು ಅಲ್ಲಿಯೆ ನಿದ್ದೆ ಹೋದ , ಹಾಗೆ ನಿದ್ದೆ ಹೋದವನಿಗೆ ತನ್ನ ಗರ್ಭಿಣಿ ಹೆಂಡತಿ ಮುಂದೆ ಬಂದು ಏನೋ ಹೇಳಿದಂತೆ ಭಾಸವಾಗುತ್ತದೆ ...
ಅವಳು  ಹಾಗೆ ಹೇಳುತ್ತಿದ್ದಂತೆ ಅವಳ ತಲೆಗೆ ಯಾರೋ ಹಿಂದೆಯಿಂದ ಹೊಡೆಯುವಂತೆ ಕನಸ್ಸು ಬೀಳುತ್ತದೆ ... ಅದನ್ನು ನೋಡಿ ಅವನು ಒಮ್ಮೆಲೆ ಶಾಕ್ ನಿಂದ ಎದ್ದೇಳುತ್ತಾನೆ ...

ಹಾಗೆ ಎದ್ದೇಳಿದವನೆ ತನ್ನ ಮುಖದ ಮೇಲೆ ಇದ್ದ ಪೇಪರ್ ಅನ್ನು ತೆಗೆದು ಪಾಕೇಟ್ ನಿಂದ ಮೊಬೈಲ್ ತೆಗೆದು ತನ್ನ ಹೆಂಡತಿಗೆ ಕಾಲ್ ಮಾಡುತ್ತಾನೆ .. 
ಅವಳು ಕಾಲ್ ರಿಸೀವ್ ಮಾಡಿದ ತಕ್ಷಣ ...

ಹುಷಾರಾಗಿ ಇದ್ದಿಯಾ ತಾನೇ ... 

ಎಂದು ಒಮ್ಮೆಲೆ ಕೇಳುತ್ತಾನೆ ಅನುಜ್ ಸೂದ್ .. 

ನಾನು ಹುಷಾರಾಗಿ ಇದ್ದೇನೆ , ನಿಮಗೆ ಏನಾಗಿದೆ ಇಷ್ಟೊಂದು ಗಾಬರಿಯಿಂದ ಮಾತಾಡುತ್ತಿದ್ದಿರಾ ..

ಎಂದು ಅನುಜ್ ಸೂದ್ ನ ಪತ್ನಿ  ಮಾನವಿಕಾ ನಗುತ್ತಾ ಕೇಳುತ್ತಾಳೆ  ...

ಒಂದು ಕೆಟ್ಟ ಕನಸ್ಸು ಬಿತ್ತು ..
ಹಾಗೆ ಸ್ವಲ್ಪ ಭಯ ಆಯ್ತು  ಅದಕ್ಕೆ ಕಾಲ್ ಮಾಡಿದೆ .. 
ನೀನು ಹುಷಾರಾಗಿ ಇದ್ದಿಯಾ ತಾನೇ ... 

ಎಂದು ಅನುಜ್ ಸೂದ್ ಕೇಳುತ್ತಾನೆ .. 

ದೇವರೇ ದೇವ ... 
ನಮ್ಮ ಪೊಲೀಸ್ ಸಾಹೇಬ್ರಿಗೆ ಭಯ ಕೂಡ ಆಗುತ್ತಾ ... 

ಎಂದು ಮಾನವಿಕಾ ಹೇಳುತ್ತಾ ನಗುತ್ತಾಳೆ .. 

ಮತ್ತೆ ಭಯ ಆಗದೆ ..
ಇವತ್ತು ಸ್ವಲ್ಪ ಜಾಗರೂಕತೆಯಿಂದ ಇರು ನಾನು ನಾಳೆ ಮುಂಜಾನೆ ಬೇಗನೆ  ಮನೆಗೆ ಬರುತ್ತೇನೆ ....

ಎಂದು ಅನುಜ್ ಸೂದ್ ಹೇಳುತ್ತಾ ...

ಸರಿ ... 
ನೀವು ಕೂಡ ಸ್ವಲ್ಪ ಜಾಗ್ರತೆ .. 

ಎಂದು ಮಾನವಿಕಾ ಹೇಳಿ ಕಾಲ್ ಕಟ್ ಮಾಡುತ್ತಾಳೆ ...

ಅನುಜ್ ಸೂದ್ ಮತ್ತೆ ತನ್ನ ಪೇಪರ್ ಅನ್ನು ತೆಗೆದು ಓದಲು ಶುರು ಮಾಡುತ್ತಾನೆ ... 
ಮಧ್ಯಾಹ್ನ ಒಂದುವರೆ ಘಂಟೆಯ ವೇಳೆಗೆ ಬಸ್ ಬಂದು ಒಂದು ಹೋಟೆಲ್ ನ ಎದುರು ನಿಂತಿತು .

ಸರ್  ಪೇಪರ್ ಓದಿದ್ದು ಸಾಕು ... 
ಹೋಟೆಲ್ ಬಂತು ಬನ್ನಿ ಊಟ ಮಾಡುವ ....
ಇನ್ನು ತುಂಬ ಹೊತ್ತು ಪ್ರಯಾಣ ಮಾಡ್ಬೇಕು ... 
ಊಟ ಮಾಡಲಿಲ್ಲ ಅಂದ್ರೆ ನಿತ್ರಾಣ ಆಗುತ್ತೆ ಬನ್ನಿ ...

ಎಂದು ಅರುಣ್ ಕುಮಾರ್ ಅನುಜ್ ಕಡೆಯಿಂದ ಉತ್ತರ ಬರುವುದಕ್ಕಿಂತ ಮೊದಲೇ ಅರುಣ್ ಅವರ ಕೈ ಹಿಡಿದು   ಎಳೆದುಕೊಂಡು ಹೋದ ...... 
ಅವರಿಬ್ಬರು ಊಟ ಮಾಡಿ ಬಸ್ ಹತ್ತಿರ ಬರುವಾಗ ಅರುಣ್ ಮುಖ ಒರೆಸಲು ಎಂದು ತನ್ನ ಜೇಬಿನಲ್ಲಿ ಇದ್ದ  ಹ್ಯಾಂಡ್  ಕರ್ಚೀಫ್ ತೆಗೆಯಲು ಹೋದ ... ತೆಗೆಯುವಾಗ ಕರ್ಚಿಫ್ ನ ಒಟ್ಟಿಗೆ ಇದ್ದ  ಲೇಟರ್ ಮತ್ತು ಫೋಟೋ ಕೆಳಗೆ ಬೀಳುತ್ತದೆ ..
ಕೆಳಗೆ ಬಿದ್ದಿದ್ದ ಫೋಟೋ ಮತ್ತು ಪತ್ರವನ್ನು ಅನುಜ್  ಎತ್ತಿಕೊಂಡು ಅದನ್ನು ನೋಡಲು
ಹೋಗುವನು , ಇನ್ನೇನು ಅನುಜ್  ಆ ಫೋಟೋವನ್ನು ನೋಡಬೇಕು ಅನ್ನುವಷ್ಟರಲ್ಲಿ ಅರುಣ್ ಅವರ ಕೈಯಿಂದ ಆ ಫೋಟೋ ಮತ್ತು ಲೇಟರ್ ಅನ್ನು ಎಳೆದುಕೊಂಡು...

ಬೇಗಾ ಬನ್ನಿ ಸರ್ , ಬಸ್ಸ್ ಹೊರಡುವಂತೆ ಇದೆ ...

ಎಂದು ಅರುಣ್ ಕುಮಾರ್ ಮಾತು ಬದಲಾಯಿಸಲು ನೋಡುತ್ತಾನೆ ...

ಬಸ್ಸ್ ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಅರುಣ್ ...
ಆದರೆ ನೀನು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು .... 

ಎಂದು ಅನುಜ್ ಸೂದ್ ಹೇಳುತ್ತಾನೆ ...

ಯಾವ ಪ್ರಶ್ನೆ ...? 
ಯಾವ ಉತ್ತರ ನಾನು ನೀಡ ಬೇಕು ...

ಎಂದು ಅರುಣ್ ಕುಮಾರ್ ಗೊಂದಲದಲ್ಲಿ  ಕೇಳುತ್ತಾನೆ ..

ನೀನು ಯಾಕೆ ನಿನ್ನ ಹೆಂಡತಿಯ ಫೋಟೋವನ್ನು ನೋಡಲು ಬಿಡಲಿಲ್ಲ ... 
ನನಗೆ ಅಷ್ಟು ಕೂಡ ಅರ್ಹತೆ ಇಲ್ಲವೇ ... ? 

ಅಂತ ಕಾಲು ಎಳೆಯುತ್ತಾ ಮುಖದಲ್ಲಿ  ಉಸಿ ಕೋಪವ ತೋರುತ್ತಾ ಅನುಜ್ ಸೂದ್ ಹೇಳುತ್ತಾನೆ ...