ತನ್ನ ತಂದೆಯ ಸಾವಿನ ಕಹಿ ನೆನಪುಗಳನ್ನು ಹಿಡಿದುಕೊಂಡು ನಮ್ಮ ಮನೆಯಿಂದ ಒಂಟಿಯಾದ ಈ ಜೀವನವನ್ನು ಪ್ರವಾಸ ಮಯ ಮಾಡಲು ಪ್ರವಾಸಕ್ಕೆ ಹೋಗುವ ಮನಸ್ಸು ಮಾಡಿದೆ .....
ಅಲ್ಲಿಂದ ನನ್ನ ಪ್ರಯಾಣನ ಬೆಳೆಯಿತು ಮಲೆನಾಡಿನ ಕಡೆಗೆ ......
ಮಲೆನಾಡಿನ ರಮಣೀಯ ಸ್ಥಳಕ್ಕೆ ಒಬ್ಬನೇ ಬೈಕ್ ಏರಿ ಹೋದೆ ನಾನು .......
ಮಂಜಿನ ಮಳೆಯಲ್ಲಿ ಕುಣಿಯುತ್ತಿರುವ ಸಣ್ಣಕೆ ಜಿನುಗುವ ತುಂತುರು ಮಳೆ ಹನಿ , ತಂಪಾದ ಗಾಳಿಯನ್ನು ನೆನೆಯುತ ಬೈಕ್ನಲ್ಲಿ ಕಾತರದಿಂದ ಆಗುಂಬೆಯ ಕಡೆಗೆ ಸಾಗಿದೆ ...
ಹೇಗೋ ನಾನು ಆಗುಂಬೆಯನ್ನು ತಲುಪಿದೆ ...
ಆಗುಂಬೆಯ ವನಸಿರಿಯ ಹಸಿರು ರಾಶಿಯನ್ನು ನನ್ನ ಕಂಗಳು ಅಚ್ಚರಿಯಿಂದ ಸಂಭ್ರಮಿಸಿ ...
ಕ್ಷಣ ಕಾಲ ನನ್ನ ಎಲ್ಲ ನೋವುಗಳನ್ನು ಮರೆತು ಮುಂದೆ ಸಾಗಿದೆನು ಒಂಟಿಯಾಗಿ ......
ಸಾಗುವಾಗ ಜೊತೆಗಾರರು ಯಾರದರು ಇದ್ದರೆ ಒಳ್ಳೆಯದಿತ್ತೆಂದು ನೆನೆಯುತ್ತಿತ್ತು ಈ ಮನ, ಆದರೆ ಜೊತೆಯಾಗಿ ಬರಳೆಂದು ಯಾರಿಗೂ ಅನಿಸಿರಲಿಲ್ಲ ...
ಆಗುಂಬೆಯ ಸೂರ್ಯಸ್ತಮಾನ ವೀಕ್ಷಣ ಸ್ಥಳದಲ್ಲಿ ನಿಂತು ಮಲೆನಾಡಿನ ಸೊಬಗನ್ನು ಸವಿಯುತ್ತಾ ಅಲ್ಲೇ ಸೆಲ್ಫಿ ತೆಗೆದೆನು.
ಒಂಟಿತನದ ಊರಿಗೆ
ನಾನೊಬ್ಬನೆ ಸಾಹುಕಾರ ....
ನನ್ನ ಹಗಲು ರಾತ್ರಿಗೇ
ಏಕಾಂತವೆ ಜೊತೆಗಾರ .....
ಹಗಲೆಲ್ಲ ನನ್ನ ಹಿಂದೆ ಮುಂದೆ
ಸುತ್ತುವ ನೆರಳು
ರಾತ್ರಿಯಾಗುವಾಗ ನನ್ನ ತೊರೆದಿದೆ .....
ನನ್ನೆಲ್ಲಾ ಕನಸುಗಳಿಗೆ ಕಣ್ಣೀರಿನ
ಸಂಪೂರ್ಣ ಸಹಕಾರ ...
ಶುರು ಮಾಡಿರುವ ಒಂಟಿ ಬಾಳ ಪಯಣ
ಜೀವನದಲ್ಲಿ ಎಲ್ಲಿಗೆ
ತಲುಪುವೆನೆಂದು ತಿಳಿಯದೆ ....
ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದು ಆ ಸೆಲ್ಫಿಯನ್ನು ಸ್ಟೋರಿ ಹಾಕಿದೆ ....
ಅಲ್ಲೇ ನಿಂತು ಹಚ್ಚ ಹಸಿರಿನ ಸೀರೆಯನ್ನುಟು ಕಂಗೊಳಿಸುವ ಮಲೆನಾಡಿನ ದೇವಿಯ ಸೌಂದರ್ಯ ರವಿತೇಜನ ಕಿರಣಗಳ ಹೊಂಬಣ್ಣದಿಂದ ಕಂಗೊಳಿಸುತಿದ್ದತ್ತು ....
ಅಲ್ಲಿಂದ ನನ್ನ ಬೈಕ್ ಹತ್ತಿ ಒಂಟಿ ಪ್ರಯಾಣವ ಮುಂದುವರಿಸಿದೆ ....
ಮಲೆನಾಡ ಮಳೆಬಿಲ್ಲು
ಸವಿಗಾಳಿಯ ಸಂಪ್ರೀತಿಯಲಿ ....
ತಂಪು ವನವ ನೋಡಿ
ತಂಪಾಯಿತು
ಈ ನನ್ನ ತನು ಮನವು ...
ಮುಂಜಾನೆಯ ಮಂಜು ಮುಸುಕು
ಪಲ್ಲವಿಸಲು ನವ್ಯ ಬದುಕು ...
ಸೂರ್ಯ ರಶ್ಮಿ ಸ್ಪರ್ಶಕ್ಕೆ
ಧಾರಿಣಿಯು ಅಚ್ಚು ಮೆಚ್ಚು ...
ನವೀರ ಚಿಗುರೆಳೆಗಳ ಮೇಲೆ
ಇಬ್ಬನಿಯ ಚುಂಬನ ....
ನಲಿದಾಡೋ ಶರಾವತಿಗೆ
ವೈಯ್ಯಾರದಿಂದ ಮೆರೆವ
ಜೋಗವ ಸೇರುವ ಸ್ಪಪ್ನ ....
ಈ ಸುಂದರ ಸೃಷ್ಟಿಗೆ
ತನ್ನನ್ನು ತಾನು ಮರೆತೆ
ಅದರೊಂದಿಗೆ ಬೆರೆತೆ .....
ಮಲೆನಾಡು ಹಚ್ಚ ಹಸಿರು ಹೊದಿಕೆಯ ಮೇಲ್ಮೈ ದಟ್ಟ ಕಾನನದ ನಡುವೆ , ಅಲ್ಲಲ್ಲಿ ಒಂದೋ ಎರಡೋ ಮನೆಗಳು ಮತ್ತೆಲ್ಲೋ ಚಿಕ್ಕ ಹಳ್ಳಿ ಊರು ಕೇರಿ ಇತ್ಯಾದಿ .....
ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿರುವ ಪ್ರಕೃತಿಯ ಮಡಿಲು ಕೆರೆ , ನದಿ , ಹಳ್ಳ , ಕೊಳ್ಳಗಳಿಂದ ಸಮೃದ್ಧ ಗಾಳಿ ಬೀಸುತ್ತಿದೆ ....
ಬೇಸಿಗೆಯಲ್ಲೂ ಮರದ ನೆರಳು ರಸ್ತೆಗಳನ್ನು ಮುಚ್ಚುವಷ್ಟು ತಂಪಾಗಿರುತ್ತದೆ ....
ಹಲವು ಹಣ್ಣು ಹೂಗಳು ಹಾಗೇ ಪ್ರಾಣಿ ಪಕ್ಷಿಗಳಿಗೆ ವಿವಿಧತೆಯ ತಾಣವಾಗಿತ್ತು .....
ಇಂತಹ ಸ್ಥಳ ಸುಂದರವಾದ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದೆ ......
..........
ನೀನು ತುಂಬಾ ಚೆನ್ನಾಗಿ ಕವನ ಹೇಳ್ತೀರಾ ... ಕವನ ಎಲ್ಲ ಬರಿಲಿಕ್ಕೆ ಯಾವಾಗ ಕಲಿತದ್ದು ನಂಗೆ ಕೂಡ ಸ್ವಲ್ಪ ಹೇಳಿ ಕೊಡು ...
ನನ್ನ ಹೆಂಡತಿ ಕೋಪ ಮಾಡಿಕೊಂಡಾಗ ಸಮಾಧಾನ ಮಾಡಿಲಿಕ್ಕೆ ಹೆಲ್ಪ್ ಆಗುತ್ತೆ ....
ಎಂದು ಅನುಜ್ ಸೂದ್ ನಗುತ್ತ ಕೇಳುತ್ತಾನೆ ...
ಮನಕ್ಕೆ ಬಂದ ಪದವನ್ನು ಹೇಳಿದೆ ಅಷ್ಟೇ ...
ನಂಗೆನೇ ಸರಿ ಗೊತ್ತಿಲ್ಲ ಇನ್ನೂ ನಿಮ್ಗೆ ಹೇಗೆ ಕಳಿಸಿ ಕೊಡುವುದು ಹೇಳಿ ...
ಆದರೆ ಒಂದು ಸಹಾಯ ಮಾಡಬಹುದು ....
ಎಂದು ಅರುಣ್ ಕುಮಾರ್ ನಗುತ್ತ ಹೇಳುತ್ತಾನೆ.....
ಆ ...
ಅದು ಕೂಡ ಸರಿಯೇ ....
ಸಹಾಯನ ಯಾವ ರೀತಿ ಸಹಾಯ ಮಾಡುತ್ತೀಯ ನನಗೆ ....
ಎಂದು ಅನುಜ್ ಸೂದ್ ಕೇಳುತ್ತಾನೆ ....
ನಿಮ್ಮ ಹೆಂಡತಿಗೆ ಸಮಾಧಾನ ಮಾಡ ಬೇಕಾದ ಸಮಯದಲ್ಲಿ ನನಗೊಂದು ಕರೆ ಮಾಡಿ ಹಾಗ ನಿಮಗೆ ನಾನು ಕವನ ಹೇಳಿ ಕೊಡ್ತೇನೆ ...
ನೀವು ಅದನ್ನು ನಿಮ್ಮ ಹೆಂಡತಿಗೆ ಹೇಳಿ ಸಮಾಧಾನ ಮಾಡಿ ....
ಎಂದು ಅರುಣ್ ಕುಮಾರ್ ಹೇಳುತ್ತ ಮುಗುಳು ನಗುತ್ತಾನೆ ....
ಐಡಿಯಾ ತುಂಬಾ ಚೆನ್ನಾಗಿದೆ ...
ಎಂದು ಅನುಜ್ ಸೂದ್ ಹೇಳುತ್ತಾನೆ ...
ನಾನು ಯಾವಾಗಲೂ ಸೂಪರ್ ಆಗಿರುವ ಐಡಿಯಾವನ್ನು ಹೇಳುವುದು ...
ಎಂದು ಅರುಣ್ ಕುಮಾರ್ ತನ್ನ ಕಾಲರ್ ಮೇಲೆ ಮಾಡಿ ಹೇಳಿದ ...
ಗರ್ವ ಪಟ್ಟದ್ದು ಸಾಕು ..
ಈಗ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು.....
ಎಂದು ಅನುಜ್ ಸೂದ್ ಹೇಳುತ್ತಾನೆ ...
ಆ ಕೇಳಿ ..
ಎಂದು ಅರುಣ್ ಕುಮಾರ್ ಹೇಳುತ್ತಾನೆ ...
ಅದು ಸರಿ ನಿನಗೆ ಆಶ್ರಮದಲ್ಲಿ ಗೆಳೆಯರು ಇದ್ದಾರಲ್ಲ ಅವರು ಎಲ್ಲಿ ... ?
ಮತ್ತೆ ನೀನು ಅವರನ್ನು ಭೇಟಿ ಮಾಡಲಿಲ್ಲವ .... ?
ಮೋಹನ್ ಸರ್ ನಿನ್ನನ್ನು ದತ್ತು ತೆಗೆದುಕೊಂಡ ನಂತರ ಮತ್ತೆ ನೀನು ಆ ಆಶ್ರಮದ ಕಡೆ ತಿರುಗಿ ಕೂಡ ನೋಡಲಿಲ್ಲವ ...
ಎಂದು ಅನುಜ್ ಸೂದ್ ರಾಶಿ ಪ್ರಶ್ನೆಗಳ ಕೇಳಿದರು .....
ಹಾಗೇನು ಇಲ್ಲ ...
ನನ್ನನ್ನು ದತ್ತು ತೆಗೆದುಕೊಂಡ ನಂತರ ನಾನು ಎರಡು ಮೂರು ಸಲ ಹೋಗಿದ್ದೇನೆ ...
ಆದರೆ
ಅವಿ ಮತ್ತು ಉಮಾ ನನ್ನನ್ನು ದತ್ತು ತೆಗೆದುಕೊಳ್ಳುವ ಮೊದಲೇ ಅವರು ಆಶ್ರಮದಿಂದ ಹೋಗಿದ್ದರು ..
ಅದರಿಂದ ಅವರ ಸಂಪರ್ಕ ಬೆಳೆಸಲು ಸಾದ್ಯ ಆಗಲಿಲ್ಲ ...
ನನ್ನನ್ನು ದತ್ತು ತೆಗೆದ ಮೇಲೆ ಎರಡು ವರ್ಷ ಅರಿ ಮತ್ತು ರಘು ಅಲ್ಲೇ ಇದ್ದರು ...
ಸ್ವಲ್ಪ ಸಮಯದ ನಂತರ ರಘುವನ್ನು ದತ್ತು ತೆಗೆದುಕೊಂಡು ಹೋದರು ......
ಆದರೆ ಅರಿ ಅಲ್ಲೇ ಆಶ್ರಮದಲ್ಲಿ ಇದ್ದ ....
ನನ್ನ ತಂದೆಯ ಸಾವಿಗಿಂತ ಮುಂಚೆ ಆರಿಯನ್ನು ಮಾತನಾಡಿಸಲು ಆಶ್ರಮಕ್ಕೆ ಹೋಗಿದ್ದಾಗ ..
ನಂಗೆ
ಆಶ್ರಮದ ರಿಜಿಸ್ಟರ್ ನಿಂದ ರಘು ಹಾಗೂ ಅವಿಯ ನಂಬರ್ ಸಿಕ್ಕಿತ್ತು ...
ಎಂದು ಅರುಣ್ ಕುಮಾರ್ ಉತ್ತರ ನೀಡಿದ ...
ಹೌದ ...
ಎಂದು ಅನುಜ್ ಸೂದ್ ಕೇಳುತ್ತಾನೆ ....
ಆ ಹೌದು ...
ಎಂದು ಅರುಣ್ ಕುಮಾರ್ ಹೇಳುತ್ತಾನೆ ...
ಆದರೆ ನೀನು ಅವಿ ಉಮಾ ಮತ್ತು
ರಘು ಬಗ್ಗೆ ಹೇಳಿದೆ ಆದರೆ ಅರಿ ಎನಾದ ...
ಅವನು ಎಲ್ಲಿದ್ದಾನೆ ..
ಎಂದು ಅನುಜ್ ಸೂದ್ ಕೇಳುತ್ತಾನೆ
ಅವನು ಜೀವಂತವಾಗಿ ಇಲ್ಲ ...
ಎಂದು ಅರುಣ್ ಕುಮಾರ್ ಹೇಳುತ್ತಾನೆ ...
ಒ ... ನೋ ...
ಹೇಗೆ ...?
ಎಂದು ಅನುಜ್ ಸೂದ್ ಕೇಳುತ್ತಾನೆ ...