Living life is the true life. in Kannada Women Focused by Narendra books and stories PDF | ಜೀವನನ ಜೀವಿಸುವುದೇ ನಿಜವಾದ ಜೀವನ

Featured Books
Categories
Share

ಜೀವನನ ಜೀವಿಸುವುದೇ ನಿಜವಾದ ಜೀವನ

ಒಂದು ಸಣ್ಣ ಹಳ್ಳಿಯಲ್ಲಿ ಮಧ್ಯತರಗತಿ ಕುಟುಂಬದಲ್ಲಿ ಒಬ್ಬ ಹೆಣ್ಣು ಹುಟ್ಟುತ್ತಾರೆ, 1 ಅಣ್ಣ, 1 ತಮ್ಮ ಇರುತ್ತಾರೆ,
ಹಸಿದು ಬಂದ್ರೆ ಊಟ ತಿನ್ನಿಸೋದಕ್ಕೆ ಅಮ್ಮ, ಕಷ್ಟನೇ ಗೊತ್ತಿಲದ ಹಾಗೆ ಅಪ್ಪ, ಧೈರ್ಯ ಹೇಳೋದಕ್ಕೆ ಅಣ್ಣ, ಸಂತೋಷ ಹಂಚಿಕೊಳೋದಕ್ಕೆ ತಮ್ಮ. ಇಷ್ಟ್ಟು ಜನರ ಜೊತೆ ಖುಷಿ ಖುಷಿಯಾಗಿ ಜೀವನ ನಡಿಸುತ್ತ ಇರುತ್ತಾರೆ,ಒಂದು ದಿನ ಅವರ ಅಪ್ಪ ಸಾಲ ಮಾಡಿರುವಂತ ಒಬ್ಬ ಯಜಮಾನ ಮನೆಗೆ ಬಂದು ಸಾಲದ ದುಡ್ಡು ಹಿಂದಿರುಗಿಸಿ ಕೊಡು ಇಲ್ಲ ಮನೆನ ನನಗೆ ಮಾರಾಟ ಮಾಡು ಅಂತ ಜಗಳ ಮಾಡುತ್ತಾನೆ, ಅವರ ಅಪ್ಪ 1 ವಾರದಲ್ಲಿ ನಿಮ್ಮ ದುಡ್ಡು ಹಿಂದೂರುಗಿಸಿ ಕೊಡುತ್ತೀನಿ ಅಂತ ಮಾತು ಕೊಟ್ಟಿರುತ್ತಾರೆ ಎಲ್ಲರ ಮುಂದೆ, 
ಕೆಲವು ದಿನಗಳ ನಂತರ ಒಂದು ವಾರ ಮುಗಿತ ಬಂತು ಆದರೆ ದುಡ್ಡು ವಾಪಾಸ್ ಕೊಡಕ್ಕೆ ಹಾಗಲಿಲ್ಲ, ಕೊಟ್ಟಿರುವ ಮಾತು ಉಳಿಸಿ ಕೊಡಲಿಲ್ಲವೆಂದು ಸಾವನ್ನು ಅಪ್ಪುತ್ತಾರೆ,
ಆ ಮನೆಯ ಪರಿಸ್ಥಿತಿ ನಡು ರಸ್ತೆಯಲ್ಲಿ ಬಂತು, ಸಹಾಯ ಅಂತ ಯಾವ ಸಂಬಂಧಿಕರು ಇಲ್ಲ, ಕಷ್ಟ ಕೇಳುವುದಕ್ಕೆ ಯಾರೂ ಮುಂದೆ ನಿಂತವರು ಇಲ್ಲ, ತನ್ನ ತಾಯಿ ಆ 3 ಮಕಳ್ಳನ್ನು ಪೋಶಿಸಲು ಮತ್ತೆ ಸಾಲ ತೀರಿಸಲು ತುಂಬಾ ಕಷ್ಟ್ಟಪಡುತ್ತಿರುವ ಸಂದರ್ಭದಲ್ಲಿ ಒಬ್ಬ ದುಡ್ಡು ಇರುವಂತ ಶ್ರೀಮಂತ ಆ ತಾಯಿನ ನಿನ್ನ ಅಂದವನ್ನು ನನಗೆ ಕೊಟ್ಟರೆ ನಿನ್ನ ಎಲ್ಲಾ ಸಮಸ್ಯೆಯಿಂದ ನಾನು ಪರಿಹಾರ ಮಾಡುತ್ತೀನಿ ಅಂತ ಹೇಳುತ್ತಾನೆ, ಆ ತಾಯಿಯ ಪರಿಸ್ಥಿತಿ ಸಾಲ ತೀರಿಸಬೇಕು ಒಂದು ಕಡೆ, 3 ಮಕ್ಕಳನ್ನು ಪೂಷಿಸಬೇಕು, ಎಷ್ಟ್ಟೊಂದು ಕಷ್ಟ್ಟದಲ್ಲೂ ಆ ತಾಯಿ ಒಂದು ಮಾತು ಹೇಳುತ್ತಾಳೆ, ಸಾಯುವ ಪರಿಸ್ಥಿತಿ ಬಂದರು, ಆ ಸಾವಿಗೆ ಬೇಕಾದ್ರೂ ಎದುರು ನಿಂತು ಹೋರಾಡುತೀನಿ ಹೊರತು, ಮೈ ಮಾರಿಕೊಂಡು ಅದರಲ್ಲಿ ಬರುವ ದುಡ್ಡಿನಿಂದ, ಸಾಲ ತೀರಿಸುವ ಅವಶ್ಯಕತೆ ನನಗೆ ಇಲ್ಲ ಹೇಳಿ ಅಲ್ಲಿಂದ ಹೊರಡುತ್ತಾಳೆ,

ಕೆಲವು ದಿನಗಳ ನಂತರ ಆ ತಾಯಿಯು ಅನಾರೋಗ್ಯದಿಂದ ಸಾವನ್ನು ಅಪ್ಪುತ್ತಾರೆ.

ಆ 3 ಮಕ್ಕಳು ಅನಾಥ ಮಕ್ಕಳು ಆದರೂ, ಕಷ್ಟ ಸುಖ ನೋಡಕ್ಕೆ ಯಾರೂ ಇಲ್ಲವಂತಾದರು, ಅಣ್ಣ ಮತ್ತೆ ತಮ್ಮ ಶಾಲೆಗೆ ಹೋಗದೆ ಆ ಹೆಣ್ಣು ಮಗುನ ಸಾಕಿದರು, ಆದರೆ ಆ ಹೆಣ್ಣು ಮಗು ಬೆಳೆಯುತ್ತ ವಯಸ್ಸಿಗೆ ಬಂದಾಗ ಪ್ರೀತಿ, ಪ್ರೇಮ ಅಂತ 2 ಅಣ್ಣ, ತಮ್ಮನ ಬಿಟ್ಟು ಹೋಗುತ್ತಾಳೆ, ನಾನು ಚಿಕ್ಕವಳು ಇದ್ದಾಗಿಂದ ಇದೆ ಕಷ್ಟ್ಟದ ಪ್ರಪಂಚದಲ್ಲಿ ಬದುಕುತ್ತಾ ಇದೀನಿ ಮುಂದೆ ಆದರೂ ನಾನು ಒಳ್ಳೆ ಜೀವನ ನಡಿಸಬೇಕು ಶ್ರೀಮಂತಿಕೆಯಿಂದ ಇದ್ದು ಬಾಳಬೇಕು ಅಂತ ಪ್ರೀತಿಸಿದವನ ಜೊತೆ ಹೋಗುತ್ತಾಳೆ, ಅ ಇಡೀ ಪ್ರಪಂಚವನ್ನೇ ಅ ಹೆಣ್ಣು ಮಗು ಅಂತ ಪ್ರೀತಿಸಿ, ಅಷ್ಟೊಂದು ಸಾಕಿದ ಅಣ್ಣ ತಮ್ಮ ಇಬ್ಬರು ಅ ನೋವಿನಲ್ಲಿ ಹೃದಯಗಾತ ಇಂದ ಸಾವನ್ನು ಅಪ್ಪುತ್ತಾರೆ,

ಆ ಹೆಣ್ಣು ತನ್ನ ಗಂಡನ ಮನೆಯಲ್ಲಿ ಜೀವನ ನಡೆಸುತ್ತ ಇರುತ್ತಾಳೆ, ಅ ಹೆಣ್ಣು ಗರ್ಭಿಣಿ ಆಗುತ್ತಾಳೆ, ಅವನು ಆ ಹೆಣ್ಣಿನ ಮೇಲೆ ವ್ಯಾಮೋಹ ಕಡಿಮೆ ಆಗುತ್ತೆ, ಆಗ ಬೇರೆ ಹೆಣ್ಣಿನ ಸಹವಾಸ ಮುಂದುವರಿಸುತ್ತಾನೆ, ಅ ಹೆಣ್ಣು ತನ್ನ ಗಂಡನ್ನ ಯಾಕೆ ಈ ತರ ನನ್ನ ಮೋಸ ಮಾಡುತ್ತಾ ಇರೋದು ಎಂದು ಕೇಳುವಾಗ, ಗಂಡ ನೀನು ನಿನ್ನ ಅಣ್ಣ ತಮ್ಮಗೆ ಮಾಡಿದ್ದು ಏನು, ನಿನ್ನಿಂದ ಸುಖ ಸಿಗಲಿಲ್ಲ ನಿನ್ನ ಹತ್ತಿರ ದುಡ್ಡು ಆಸ್ತಿ ಖಾಲಿ ಆಯಿತು, ನಿನ್ನ ಜೊತೆ ಇದ್ದು ಕಷ್ಟ್ಟ ಪಡುವುದಕ್ಕಿಂತ ಬೇರೆ ಹೆಣ್ಣಿನ ಜೊತೆ ಸುಖವಾಗಿ ಇರುತ್ತೀನಿ, ಅಂತ ಅ ಗಂಡ ಅ ಹೆಣ್ಣನ್ನು ನಡು ಬೀದಿಗೆ ಬಿಟ್ಟುಬಿಡುತ್ತಾನೆ, 

ಆ ಹೆಣ್ಣು ಗರ್ಭಿಣಿ ಪರಿಸ್ಥಿತಿಯಲ್ಲಿ ಮಳೆ ಬರುತ್ತಾ ಇರುತ್ತೆ ರಸ್ತೆಯಲ್ಲಿ ಬಸ್ ನಿಲ್ದಾಣದಲ್ಲಿ ಕುಳಿತಿರುತ್ತಾಳೆ , ಆ ಬಸ್ ನಿಲ್ದಾಣ ಪಕ್ಕದಲ್ಲಿ ವೇಶ್ಯ ಅವರು ಇರುತ್ತಾರೆ, ಅವರು ಅ ಹೆಣನ್ನು ನೋಡುತ್ತಾರೆ, ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು ಅ ಹೆಣ್ಣಿನ ಹತ್ತಿರ ಎಷ್ಟಕ್ಕೆ ಬರ್ತೀಯ ಅಂತ ಕೇಳುತ್ತಾನೆ, ಅಷ್ಟರಲ್ಲಿ ವೇಶ್ಯೆ ಅವರು ಬಂದು ಆ ವ್ಯಕ್ತಿ ಹತ್ತಿರ ಹೋಗು ಅವರು ಅಂತವರು ಅಲ್ಲ ಪಕ್ಕದಲ್ಲಿ ಹೋಗು ಅಂತ ಕಳುಹಿಸಿ ಬಿಡುತ್ತಾರೆ
ಅ ವೇಶ್ಯೆ ಕೇಳುತ್ತಾರೆ ಯಾರೂ ನೀವು, ಯಾಕೆ ಇಲ್ಲಿ, ಅಂತ ಅವಾಗ ಅ ಹೆಣ್ಣು ತನ್ನ ಸ್ಟೋರಿನ ಹೇಳುತ್ತಾಳೆ ಅದು ಕೇಳಿ ಅವರಿಗೆ ಕಣ್ಣಲ್ಲಿ ಕಣ್ಣೀರು ಬರುತ್ತೆ, ಹೆಣ್ಣು ಕೇಳುತ್ತೆ ನಿಮಗೆ, ಏನು ಅನಿಸೋದಿಲ್ವ, ದಿನ ಬೇರೆ ಬೇರೆ ಹುಡುಗರಿಗೆ ನಿಮ್ಮ ದೇಹನ ಕೊಟ್ಟು ದುಡ್ದು ಸಂಪಾದನೆ ಮಾಡುವದು ತಪ್ಪು ಅಂತ, ಅ ವೇಶ್ಯೆ ಹೇಳುತ್ತೆ ನಿಜ ತಪ್ಪೇ, 
ಆದರೆ ನಾವು ಅವರು ನಮಗೆ ಕೊಟ್ಟಂತ ದುಡ್ಡಿಗೆ ನಿಯತ್ತಾಗಿ ಇರುತ್ತೀವಿ, ದೇಹ ಅಷ್ಟ್ಟೇ ಕೊಡುತೀವಿ, ಆದರೆ ನೀವು ನೀಯತ್ತಾಗಿ ಇರುವಂತ, ಪರಿಶುದ್ಧ ಜನರು, ಪ್ರೀತಿ, ಪ್ರೇಮ ಅಂತ ಹೇಳಿ ಒಬ್ಬರು , ಇಬ್ಬರು, ಮೂವರು ಜೊತೆ ಇರ್ತಾರಲ್ಲ ನಿಮನ್ನ ಏನಂತ ಕರಿಯಲ್ಲ ಈ ಸಮಾಜ, ನಮಗೆ ಮಾತ್ರ ವೇಶ್ಯ ಎಂದು ಕರೆಯುತ್ತಾರೆ , ನಿಮಗೆ ಇನೊಂದು ಗೊತ್ತ ನಾವು ಮುಖಕ್ಕೆ ಅಷ್ಟ್ಟೇ ಬಣ್ಣ ಹಾಕೋದು ಮನಸಿಗೆ ಅಲ್ಲ, ವೇಶ್ಯೆ ಮಾರುವರು ಎಲ್ಲರೂ ಒಳ್ಳೆವರು ಅಂತಲ್ಲ, ನಮ್ಮ ವಿಧಿ, ನಮ್ಮಂತವರು ಇರುವುದರಿಂದ ಎಷ್ಟೋ ಜನ ಹೆಣ್ಣು ಮಕ್ಕಳು ಈ ಕಾಮ ಮೃಗಗಳಿಂದ ದೂರ ಇರೋದು, ಎಷ್ಟೋ ಜನ ಹೆಣ್ಣು ಮಕ್ಕಳು ಮನೆಗೆ safe ಆಗಿ ಮನೆಗೆ ಹೋಗ್ತಾ ಇರೋದು, ನಮ್ಮ ಕಥೆ ಬಿಡಿ ನಾವು ಸಮಾಜದ ಕಣ್ಣಿಗೆ ಯಾವತ್ತು ಕೆಟ್ಟವರೇ, ನಿನ್ನಗೆ ನನ್ನಿಂದ ಆದ ಸಹಾಯ ಮಾಡುತ್ತೀನಿ, ಆದರೆ ಈ ತರ ಬದುಕುವ ಆಸೆ ಇಟ್ಕೊಬೇಡ ಅಂತ ಹೇಳಿ ಆ ಹೆಣ್ಣಿಗೆ ಒಂದು ಸಣ್ಣ ಮನೆ ಬಾಡಿಗೆಗೆ ಕೊಡುಸುತ್ತಾಳೆ, ಸ್ವಲ್ಪ ದುಡ್ಡು ಸಹಾಯ ಮಾಡುತ್ತಾಳೆ.
ಅವಾಗ ಅ ಹೆಣ್ಣು ಅಂದುಕೊಳ್ಳುತ್ತೇ,
ರಾಮಾಯಣ, ಮಹಾಭಾರತ, ಇಷ್ಟು ಒಳ್ಳೆ ಇತಿಹಾಸ ಇರುವ ಈ ನಮ್ಮ ಭಾರತ ದೇಶದಲ್ಲಿ, ಪ್ರತಿ ಒಂದು ಯುಗದಲ್ಲಿ ಒಬ್ಬ ರಾ ಕ್ಷಸರ ರನ್ನು ಸಂಹರಿಸಲು ಪ್ರತಿ ಒಂದು ಸಲಾನು ದೇವರು ಒಂದು ಅವತಾರದಲ್ಲಿ ಬರ್ತಾನೆ ಅನೋದು ಎಷ್ಟು ಸತ್ಯನೋ, 
ನವರಾತ್ರಿ ದಿನ 9 ದಿನ ಆ ತಾಯಿಗೆ ಪೂಜೆ ಮಾಡೋ ಈ ಜನರ ನಡುವೇ ಅದೇ 9 ತಿಂಗಳು ಹೊತ್ತು ಎತ್ತಿ ಸಾಕಿದ ಒಂದು ತಾಯಿನ, ಅದೇ ಹೊಟ್ಟೆಯಲ್ಲಿ ಹುಟ್ಟಿರುವ ಎಷ್ಟೋ ರಾಕ್ಷಸರು 9 ಮಿನಿಷಗಳ ಸುಖಕ್ಕಾಗಿ ಗಿ ಬಲಿದಾನ ಮಾಡುತ್ತಿರುವ ರಕ್ಷಸರನ್ನು ಸಂಹಾರಿಸಲು ಯಾವ ದೇವರು ಅವತಾರ ಎತ್ತಿ ಬರಲ್ಲ, ನಾವೇ ಅವತಾರ ಎತ್ತಬೇಕು ಅನ್ನೋದು ಕೂಡ ಅಷ್ಟ್ಟೇ ಸತ್ಯ...
ಆ ಹೆಣ್ಣು ಒಂದು ಮಗುಗೆ ಜನುಮ ಕೊಟ್ಟು, ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುತ್ತೆ, ಒಂದು ದಿನ ಅ ಹೆಣ್ಣು ರಸ್ತೆಯಲ್ಲಿ ಹೋಗುವಾಗ 70 ವರ್ಷ್ ವಯಸ್ಸಿನ ಸನ್ಯಾಸಿನ ನೋಡಿ ಕೇಳುತ್ತಾಳೆ, ಇಷ್ಟ್ಟು ವರ್ಷ ಈ ಭೂಮಿ ಮೇಲೆ ಬದುಕಿದಿಯ ತಾತ ಯಾವತ್ತೂ ನಿಂಗೆ ಬೇಜಾರು ಅನಿಸಿಲ್ವ, ಸತ್ತೋಗೋಣ ಈ ಜೀವನ ಬೇಡವೆಂದು ಅನಿಸಿಲ್ವ ಅಂತ, ಅ ಸನ್ಯಾಸಿ ನಗುತ್ತಾನೆ ಆಯೋ ಮಗು, ಜೀವನ ಅಂದರೆ *ಈ ಜೀವನನ ಜೀವಿಸುವುದೇ ನಿಜವಾದ ಜೀವನ,* ನಿನ್ನಗೆ ನಾಳೆ ಅನ್ನುವ ಚಿಂತೆ, ನನಗೆ ನಾಳೆ ಅನೋದೆ ಇಲ್ಲ, ಈ ನಿಮಿಷ ಅಷ್ಟೇ, ನೋಡಿ ಈ ಭೂಮಿ ಮೇಲೆ ಕೋಟ್ಯತರ ಜೀವ ರಾಶಿ ಇದೆ, ಆದರೆ ಒಬ್ಬ ಮನುಷ್ಯನಿಗೆ ಮಾತ್ರ ದುಡ್ಡಿನ ಅವಶ್ಯಕತೆ, ಮನುಷ್ಯ ಒಬ್ಬನು ತಾನು ದುಡಿಯುವ ದುಡ್ಡು ಇಡೀ ಕುಟುಂಬ, 2, 3 ಜನರೇಶನ್ ಗೆ ಆಗುವಸ್ಟ್ ಸಂಪಾದನೆ ಮಾಡಬೇಕು ಅನ್ನುವ ಸ್ವಾರ್ಥ, ಆದರೆ ಪ್ರಾಣಿಗಳು ಅ ತರ ಇಲ್ಲ, ನಿಜವಾದ ಮನುಷ್ಯ ತಾನು ಯಾವತ್ತೂ ಸ್ವಾರ್ಥ, ಕಾಮ, ಕ್ರೂರಿ, ನನ್ನಿಂದಾನೆ ಎಲ್ಲಾ ಎನ್ನುವ ಅಹಂ ಬಿಟ್ಟಾಗ, ಅವನು ನಿಜವಾದ ಮನುಷ್ಯ ಆಗುತ್ತಾನೆ, 
ಆ ಹೆಣ್ಣಿಗೆ ಅವಾಗ ಅರ್ಥ ಆಗುತ್ತೆ ಜೀವನ ಯಾವತರ ಜೀವಿಸಬೇಕು ಅಂತ.

ಒಬ್ಬ ಹುಡುಗಿ ಆಗಲಿ, ಹುಡಿಗ ಆಗಲಿ,
ಚಿಕ್ಕವರು ಇದ್ದಾಗ ಅಮ್ಮನ ಮಡಿಲು ಬೇಕು,
ಬೆಳೆಯುವಾಗ ಅಪ್ಪನ ಹೆಗಲು ಬೇಕು,
ಮದುವೆ ಆದಮೇಲೆ 
ಹೆಣ್ಣಿಗೆ ಅಪ್ಪನತರ ಹೆಗಲು ಕೊಡುವ ಗಂಡ ಬೇಕು,
ಹುಡುಗರುಗೆ ತಾಯಿತರ ಮಡಿಲು ಕೊಡುವ ಹೆಣ್ಣು ಬೇಕು.....