Prema Jala ( love is blind) - 3 in Kannada Horror Stories by Narayan M books and stories PDF | ಪ್ರೇಮ ಜಾಲ (love is blind) - 3

Featured Books
  • ಸ್ವರ್ಣ ಸಿಂಹಾಸನ 1

    ಸ್ಥಳ: ಕಲ್ಪವೀರ ಸಾಮ್ರಾಜ್ಯದ ಸಿಂಹಾಸನ ಭವನ ಮತ್ತು ಆಧುನಿಕ ಬೆಂಗಳೂರು ನ...

  • ಪ್ರೇಮ ಜಾಲ (love is blind) - 3

    ಅಧ್ಯಾಯ 3ರಕ್ತ ಪಿಶಾಚಿಗಳ ಕಾಲ ಯಾವಾಗ ಶುರುವಾಯಿತು ಹೇಳುವುದು ಅಸಾಧ್ಯ ....

  • ಅಪಘಾತದ ನಂತರದ ಬದುಕು

    ಸೂರ್ಯೋದಯದ ಹೊನ್ನ ಕಿರಣಗಳು ಬೆಂಗಳೂರಿನ ಗಗನಚುಂಬಿ ಕಟ್ಟಡಗಳ ಮೇಲೆ ಪ್ರತ...

  • ಮಹಿ - 12

    ಕಾಫಿ ಶಾಪ್ ಯಿಂದ ನಾನು ಹೊರಟು ಹೋದಮೇಲೆ. ಧ್ರುವ್ ಅಕಿರಾ ಹತ್ತಿರ ಮಾತಾಡ...

  • ಮರು ಹುಟ್ಟು 6

    ಹೊಸ ಜವಾಬ್ದಾರಿಯ ಹೊಸ ನೋಟ,ಯಾಂತ್ರಿಕತೆಯಿಂದ ಹೊರಗೆ (ಇಂಟೀರಿಯರ್ - ಕಚೇ...

Categories
Share

ಪ್ರೇಮ ಜಾಲ (love is blind) - 3

ಅಧ್ಯಾಯ 3


ರಕ್ತ ಪಿಶಾಚಿಗಳ ಕಾಲ ಯಾವಾಗ ಶುರುವಾಯಿತು ಹೇಳುವುದು ಅಸಾಧ್ಯ .. ದೈವ ದಾನವರ ಜನನ ಸೃಷ್ಟಿಯ ಮೊದಲ ಹಂತದಲ್ಲಿಯೇ ದಾನವರ ಪಂಗಡದಲ್ಲಿ ರಕ್ತ ಪಿಶಾಚಿಗಳ ಜನನವು ಕೂಡ ಆಗಿತ್ತು.. ಮನುಷ್ಯರ ರಕ್ತ ಹೀರುವ ಪಿಶಾಚಿಗಳು  ಅಂದಿನಿಂದ ಇಂದಿನವರೆಗೂ ರಕ್ತ ಪಿಶಾಚಿಗಳು ತಮ್ಮದೇ ಅಧಿಪತಿ ಸಾಧಿಸಿಕೊಂಡು ಬಂದಿದ್ದಾರೆ..

ಪಾತಾಳ ಲೋಕದ ದಾನವರೆಲ್ಲರೂ ತಮ್ಮ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಭೂಲೋಕದಲ್ಲಿ ಆಹಾಕಾರ ಸೃಷ್ಟಿ ಮಾಡಿದರು ಕೆಲವೊಬ್ಬರು ದೈವ ಮಾನವರು ಇಂತಹ ದಾನವರನ್ನು ಸೋಲಿಸಿ ಭೂಲೋಕದಿಂದ ಪಾತಳ ಲೋಕದ ಕಡೆ ತಳ್ಳಲ್ಪಟ್ಟರು. ಇನ್ನು ಕೆಲವು ದಾನವರನ್ನು ನಾಶ ಮಾಡಿದರು ಇನೆಂದಿಗೂ ಪಾತಾಳ ಲೋಕದಿಂದ ಭೂಲೋಕಕ್ಕೆ ಬಂದು ಸಾಮಾನ್ಯರಿಗೆ ತೊಂದರೆ ಕೊಡದಿರುವಂತೆ ರಕ್ತ ಪಿಶಾಚಿಗಳನ್ನು ಬಂಧಿಸಿದರು ಆ ಲೋಕದ ಸುತ್ತಲೂ ದಿಗ್ಬಂಧನವನ್ನು ಹೂಡಿದರು ಇದರಿಂದ ಸಾಮಾನ್ಯರು ನಿಶ್ಚಿಂತೆಯಿಂದ ಜೀವಿಸಲು ಸಾಧ್ಯವಾಯಿತು...


ಕಾಲ ಉರುಳಿದಂತೆ ದೈವ ಮಾನವರ ಯುಗ ಮುಗಿದು  ಅಲ್ಲಲ್ಲಿ ಒಂದಿಷ್ಟು ದೈವ ಮಾನವರು ಹೆಸರಿಗೊಂದಿಷ್ಟು ಜನ  ಮಾತ್ರ ಉಳಿದರು ... ಇನ್ನು ಋಣಾತ್ಮಕತೆಯ ಅಸ್ತಿತ್ವ ಎಲ್ಲಾ ಕಡೆಯೂ ಅತಿ ಹೆಚ್ಚಾಗಿತ್ತು... ಭೂಲೋಕದಲ್ಲಿ ಸ್ವಾರ್ಥಿಗಳ ಜನನ ಅಸೂಯೆ ಹಿಂಸೆ ಕ್ರೂರತ್ವದ ಜನನದ ಜೊತೆಗೆ  ಅರಾಜಕತೆ ಹೆಚ್ಚಾಗಿ ಸೃಷ್ಟಿಯಾಗಿತ್ತು...


ಇದರಿಂದ ಪಾತಾಳ ಲೋಕದ ಋಣಾತ್ಮಕತೆಯ ಅಸ್ತಿತ್ವ ಆದ ಕಪ್ಪು ರಾಜ್ಯದ ದಾನವರಿಗೆ ಭೂಲೋಕಕ್ಕೆ ಬರಲು ಸುಲಭವಾಗಿದ್ದು ಅಧರ್ಮ ಅನ್ನುವ ಅಸ್ತಿತ್ವ ... ಎಲ್ಲಿಯವರೆಗೂ ಅದರ ತಲೆ ಎತ್ತಿ ಮೆರೆಯುತ್ತದೆಯೋ ಅಲ್ಲಿಯವರೆಗೂ ಪಾತಾಳದಲ್ಲಿ ಬಂದಿಯಾದ ದಾನವರು ನಾಯಿ ಕೊಡೆಯಂತೆ ಹೆಚ್ಚುತ್ತಾ ಸಾಗುತ್ತಾರೆ ತಮ್ಮ ಹಸಿವನ್ನು ನೀಗಿಸಲು ತಮ್ಮ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಸಾಮಾನ್ಯ ಜನರನ್ನು ನಿರ್ದಯಿ ಯಾಗಿ ನಾಶ ಮಾಡುತ್ತಾರೆ ..


ಇಲ್ಲಿಯವರೆಗೂ ಅಂತಹ ಪಿಶಾಚಿಗಳು ಭೂಲೋಕದಲ್ಲಿಯೇ ತಮ್ಮ ಅಸ್ತಿತ್ವವನ್ನು ಪಡೆದುಕೊಂಡರೆ ರಕ್ತ ಪಿಶಾಚಿಗಳು ಭೂಲೋಕದ ವಾಸಿಗಳಂತೆ ಮಾರ್ಪಟ್ಟು ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದರು, ಜನರಗಳ ನಡುವೆ ಇದ್ದುಕೊಂಡೇ ತಮ್ಮ ಹಸಿವನ್ನು ನೀಗಿಸಿಕೊಳ್ಳುವಂತಹ ಅಸ್ತಿತ್ವ ಅವರುಗಳದು ... 


ಇಂತಹ ರಕ್ತ ಪಿಶಾಚಿಗಳ ಅಸ್ತಿತ್ವ ಅದೆಷ್ಟು ಸಾವಿರ ವರ್ಷಗಳಿಂದ ಇದಿಯೋ ಲೆಕ್ಕವಿಲ್ಲ ಕೆಲವೊಬ್ಬರು ಅಂತಹ ರಕ್ತ ಪಿಶಾಚಿಗಳಿಗೆ ಆಹಾರ ಆಗಿರುವುದುಂಟು ಆದರೆ ಇನ್ನೂ ಕೆಲವರು ಅಂತಹ ರಕ್ತ ಪಿಶಾಚಿಗಳಲ್ಲಿಯೂ ಕೆಲವೊಬ್ಬರ ಮಾನವೀಯತೆ ದೃಷ್ಟಿ ಇರುವವರು ಉಂಟು ಮನುಷ್ಯರನ್ನು ಕಂಡು ಮರುಗುವವರು ಉಂಟು..


ಅಂತವರಿಂದ ಸಾಮಾನ್ಯರಿಗೆ ತೊಂದರೆ ಏನು ಇಲ್ಲ ಆದರೆ ಅತ್ಯಂತ ಕ್ರೂರ ದಾನವರಿಂದ ಅಪಾರ ತೊಂದರೆ ಇರುವುದು ಸತ್ಯವೇ ಎಲ್ಲ  ಋಣಾತ್ಮಕ ಅಂಶದ ಜೀವಿಗಳು ಎಲ್ಲವೂ ಕೆಟ್ಟವರೆಂದು ಹೇಳಲಾಗದು ಅವರಲ್ಲಿಯೂ ಕೆಲವೊಂದು ಭಾವನೆಗಳು ಹುಟ್ಟಿ ಬಿಟ್ಟರೆ ತಮ್ಮವರಿಗೋಸ್ಕರ ಏನು ಬೇಕಾದರೂ ಮಾಡಲು ಸಿದ್ದ ಇರ್ತಾರೆ ಅನ್ನುವುದು ವಿಶೇಷ...


ಮಾತು ಮಾತಲ್ಲಿ ಮೈಮರೆತು ಸೇತುವೆ ಕಡೆ ಹೆಜ್ಜೆ ಇಟ್ಟಿದ್ದರು ದಂಪತಿಗಳಿಬ್ಬರು. ಅವರ ಮಾತುಗಳು ಮುಂದಿನ ಜೀವನದ ಕನಸುಗಳತ್ತ ಸಾಗುತ್ತಿದ್ದವು — ತುಂಟತನ, ನಗು, ನಾಚಿಕೆ ಮತ್ತು ಅನೇಕ ಭಾವನೆಗಳು ಮಧ್ಯೆ ಚುರುಕಾಗಿದ್ದವು.


ಆಕೆಯ ಒಡಲಿನಲ್ಲಿ ಬೆಳೆಯುತ್ತಿದ್ದ ಪುಟ್ಟ ಜೀವದ ಬಗ್ಗೆ ಸಾವಿರಾರು ಕನಸು ಕಟ್ಟಿಕೊಂಡಿದ್ದರು ಅವರು. ತಾಯ್ತನದ ಸೌಭಾಗ್ಯವನ್ನು ಆಕೆ ಆನಂದಿಸುತ್ತಿದ್ದಳು. ಪತಿಯ ಭುಜಕ್ಕೆ ತಲೆಹಾಕಿ ಅವನ ಬೆಚ್ಚಗಿನ ಸ್ಪರ್ಶವನ್ನು ಅನುಭವಿಸುತ್ತಾ ಪ್ರಕೃತಿಯ ಮಧ್ಯೆ ಮೈಮರೆತಿದ್ದಳು.

ಅದು ದೊಡ್ಡ ಸೇತುವೆ ಎಡಬಲ ಅತ್ಯಂತ ವಿಶಾಲವಾಗಿ ಚಾಚಿಕೊಂಡಿರುವಂತಹ ನದಿಯೇ ಎದ್ದು ಕಾಣಿಸುತ್ತಿತ್ತು ಅದರ ನಡುವೆ ಇದ್ದಿದ್ದು ಸೇತುವೆ ಗಾಡಿಗಳ ಓಡಾಟ ಹಗಲಿನಲ್ಲಿ ಎದ್ದು ಕಾಣಿಸಿದ್ದಾರೆ  ..ಅಲ್ಲಿಯೇ ಸಾಮಾನ್ಯರಿಗೆ ರಾತ್ರಿ ಓಡಾಟ ಬಲು ಇಷ್ಟವೇ ಆ ಸ್ಥಳ ಯಾವಾಗ್ಲೂ ಗಿಜಿಗುಡುತ್ತಿದ್ದ ಸ್ಥಳ ರಾತ್ರಿಯಾದರೆ ಮಾತ್ರ ಸಂಪೂರ್ಣ ನಿಶಬ್ದ ವಾತಾವರಣ ಅಲ್ಲಿ ಯಾರು ಓಡಾಡುವುದಿಲ್ಲ ಕೆಲವೊಂದು ಕಥೆಗಳು ಒಬ್ಬರಿಂದ ಒಬ್ಬರ ಬಾಯಿಂದ ತಲುಪಿ ಹೀಗ ದಂತಕತೆಯಾಗಿ ಉಳಿದುಬಿಟ್ಟಿದೆ ..


ಊಹಾಪೋಹಗಳು ಸತ್ಯವೂ ಸುಳ್ಳೋ ಗೊತ್ತಿಲ್ವಾ ಆದರೆ ಸತ್ಯವಾಗಿರುವುದು ಪ್ರತಿ ಶತ‌‌‍ ವಾಸ್ತವವಾದರೂ ಕೂಡ ಮಿಥ್ಯಾ ವಾಗಿಲ್ಲ ಅಂತಹ ಅಪಾಯಕಾರಿ ಸ್ಥಳಕ್ಕೆ ಬಂದಿದ್ದಾರೆ ದಂಪತಿಗಳಿಬ್ಬರು... ಅವರಿಗೆ ಆ ಸ್ಥಳದ ಬಗ್ಗೆ ಗೊತ್ತಿಲ್ಲ ಗೊತ್ತಿದ್ದರೆ ಬರುತ್ತಲೇ ಇರಲಿಲ್ಲವೇನೋ ಆದರೆ ತಿಳಿಯದೆ ಬಂದು ಅಪಾಯವನ್ನು ಮೈಗೆನಿಸಿಕೊಂಡಿದ್ದರೆ ಅವರಿಬ್ಬರು...


ಕಪ್ಪು ಆಗಸದ ಮಧ್ಯೆ ಮುತ್ತಿನಂತೆ ಹೊಳೆಯುತ್ತಿದ್ದ ತಾರೆಗಳ ನಡುವೆ ಪ್ರಕಾಶಮಾನವಾದ ಪೂರ್ಣಚಂದ್ರನ ಬೆಳಕು ಭುವಿಯತ್ತ ಹರಿಯುತ್ತಿತ್ತು. ಅದು ಅತ್ಯಂತ ಶಾಂತವಾದ ಬೆಳದಿಂಗಳ ರಾತ್ರಿ...


"ರೀ, ಅಲ್ಲಿ ನೋಡಿ, ಬೀಳುತ್ತಿರುವ ತಾರೆ!" ಎಂದು ಆಕೆ ಉತ್ಸಾಹದಿಂದ ಹೇಳಿದಳು. ಅವಳ ಕಣ್ಣುಗಳಲ್ಲಿ ನಕ್ಷತ್ರದ ಮಿಂಚು.ಕಪ್ಪು ಆಗಸದಲ್ಲಿಯೇ ಪೂರ್ಣಚಂದ್ರನ  ಸುತ್ತಲೂ ಸಾವಿರಾರು ನಕ್ಷತ್ರಗಳು ತಮ್ಮ ಅಸ್ತಿತ್ವ ಈಗತಾನೆ ಜನ್ಮ ತಾಳಿದೆ ಅನ್ನುವಂತೆ ಅತಿ ಪ್ರಕಾಶಮಾನವಾಗಿ ಗೋಚರಿಸುತ್ತಿದ್ದವು ಅದರಲ್ಲಿ ಒಂದು ನಕ್ಷತ್ರ ಕೆಳಗೆ ಉದುರುತ್ತಿತ್ತು.. ಇಲ್ಲಿವರೆಗೂ ಮೌನವಾಗಿ ಆಗಸದ ನಭೋಮಂಡಲದಲ್ಲಿ ನಡೆಯುತ್ತಿರುವ ಅತ್ಯಂತ ರೋಚಕಕಾರಿ ದೃಶ್ಯಗಳನ್ನು ಕಣ್ತುಂಬಿ ಕೊಳ್ಳುತ್ತಿದ್ದ ಆಕೆಯ ಮನದಲ್ಲಿ ಈ ದೃಶ್ಯ ಅಪಾರ ಸಂಭ್ರಮವನ್ನು ಸೃಷ್ಟಿಸಿತು ...


" ನಿಮಗೆ ಗೊತ್ತಾ ಬೀಳುತ್ತಿರುವ ತಾರೆಯನ್ನು ಕಂಡು ನಾವು ಏನೇ  ಬೇಡಿಕೊಂಡರು ಅದು ನೆರವೇರುತ್ತದೆ ಅಂತೆ ನಿಮಗೆ ಅದು ಗೊತ್ತಾ "ಅತಿಯಾದ ಉತ್ಸಾಹದಿಂದ ತನ್ನ ಪತಿಯ ಬಳಿ ಬಡಬಡಿಸಿದವಳು ಮತ್ತೊಮ್ಮೆ   ಆಗಸದಲ್ಲಿ ನೆಲದ ಕಡೆ ವೇಗವಾಗಿ ಬಂದು ಬೀಳುತ್ತಿರುವ ತಾರೆಯನ್ನು ಕಂಡು ಒಂದು ಬೇಡಿಕೆ ನಿಟ್ಟಿದಳು ಅವಳ ಬೇಡಿಕೆ ಕ್ಷಣದಲ್ಲಿ ನೆರವೇರುವಂತೆ ಅವಳ ಒಡಲಿನಲ್ಲಿ ಆಶ್ರಯ ಪಡೆದಿದ್ದ ಕಂದನ ಅಸ್ತಿತ್ವ ತನ್ನ ಇರುವಿಕೆಯನ್ನು ತೋರಿಸಿತು.

..

ಪತಿಯ ಬಳಿ ಮಾತೇನೂ  ಹೇಳಲು ಬಾಯಿ ತೆರೆದಾಗಲೇ ಆತಂಕದಿಂದ ಬಾಯಿ ಮುಚ್ಚಿ ಸುತ್ತಲೂ ನೋಡಿದ  ಆತಂಕದ ಗೆರೆಗಳು ಅವನ ಹಣೆಯ ಮೇಲೆ ಮೂಡಿದವು.

"ಶ್..! ಇಲ್ಲಿ ಏನೋ ಸರಿಯಿಲ್ಲ. ಬಾ, ಹೋಗೋಣ," ಎಂದವನು ಪಿಸುಗುಟ್ಟಿದ.

ಅಷ್ಟರಲ್ಲಿ ಅತಿ ಭೀಕರ ದೈತ್ಯ ಪ್ರಾಣಿ ಅವರ ಮುಂದೆ ಬಂದು ನಿಂತಿತು — ಕೆಂಪು ಕಣ್ಣುಗಳು, ಕೋರೆ ಹಲ್ಲುಗಳು, ಮಾನವ-ಪ್ರಾಣಿ ಮಿಶ್ರ ಮುಖ.

"Vampire…" ಎಂದು ಪತಿ ಉಸಿರಾಡಿದ. ಪತ್ನಿಯ ಕಿವಿಗಳಿಗೆ ಆ ಶಬ್ದ ಬಿದ್ದ ಕ್ಷಣದಲ್ಲಿ ಆಕೆ ನಡುಗಿಬಿಟ್ಟಳು.


“ಅಮ್ಮಾ!” ಎಂದು ಕಿರುಚಿದಳು ಭಯದಿಂದ. ಗರ್ಭಿಣಿ ಹೆಣ್ಣು, ಆಕೆಯ ಕೈಗಳು ನಡುಗುತ್ತಿದ್ದುವು. ಪತಿಯೂ ಹೆದರಿದ್ದರೂ, ಆಕೆಗೆ ಧೈರ್ಯ ನೀಡಲು ಪ್ರಯತ್ನಿಸಿದ.


“ರೀ, ನನ್ನ ಮಗುವಿಗೆ ಏನೂ ಆಗಬಾರದು. ನಾವು ಸತ್ತರೂ ಸರಿ, ಮಗುವನ್ನು ಉಳಿಸಿಕೊಳ್ಳಬೇಕು…” ಅವಳ ಕಣ್ಣೀರು ಉಸಿರುಗಟ್ಟಿಸುತ್ತಿತ್ತು.


ತಮ್ಮ ಜೀವ ಉಳಿಯುವುದು ಅಸಾಧ್ಯವೆಂದು ತಿಳಿದಿದ್ದರೂ, ಪತಿ ದೈತ್ಯದ ಮುಂದೆ ನಿಂತ. ಪತ್ನಿಗೆ ತಪ್ಪಿಸಿಕೊಳ್ಳಲು ಸೂಚಿಸಿದ. ಆದರೆ ಅವಳು ಅವನನ್ನು ಬಿಟ್ಟು ಹೋಗಲು ಸಿದ್ಧಳಿರಲಿಲ್ಲ.


ಅವರು ದೇವರನ್ನು ಬೇಡಿದರು — ದೇವತೆ ಬರುವ ಬದಲು ಪಿಶಾಚಿಯ ನೆರಳು ಅವರ ಮೇಲೆ ಬಿದ್ದಿತ್ತು.


“ನೋಡು, ನಾವಿಬ್ಬರೂ ನಿನ್ನ ಆಹಾರ ಆಗುತ್ತೇವೆ. ಆದರೆ ನಮ್ಮ ಕೊನೆಯ ಒಂದು ಆಸೆ — ನಮ್ಮ ಮಗುವನ್ನು ಉಳಿಸು,” ಎಂದು ತಾಯಿ ಪರಿಪರಿಯಾಗಿ ಬೇಡಿಕೊಂಡಳು.

ಆ ಪಿಶಾಚಿ ಕೇಳುತ್ತಿದ್ದದೋ ಇಲ್ಲವೋ ಗೊತ್ತಿಲ್ಲ... ಆದರೆ ಆ ತಾಯಿಯ ಧ್ವನಿಯಲ್ಲಿ ಕರುಣೆ ಇತ್ತು, ದೇವರನ್ನು ಮರುಗುಮಾಡುವಷ್ಟು ಪ್ರಾಮಾಣಿಕತೆ

ಇತ್ತು...


ಮುಂದುವರಿಯುವುದು...