ಅಧ್ಯಾಯ ೪
ಇಬ್ಬರನ್ನೂ ಸಾಯಿಸಲು ಬಂದ ಆ ಜೀವಿಗೆ ಆಕೆಯ ಕಣ್ಣೀರು ಬೇಡಿಕೆಯು ಕ್ಷಣಕಾಲ ತಡೆ ನೀಡಿತು. ರೋಷಭರಿತ ಕಣ್ಣುಗಳಲ್ಲಿ ಶಾಂತತೆ ಮೂಡಿತು. ಆ ಭಯಂಕರ ಜೀವಿಯ ಕಣ್ಣುಗಳಲ್ಲಿ ಮೂಡಿದ ಶಾಂತತೆ ಗಮನಿಸಿದ ಆ ತಾಯಿಗೆ ಅದೆಷ್ಟೋ ನೆಮ್ಮದಿ ಆಯಿತು.
“ನನ್ನ ಒಡಲಿನಲ್ಲಿರುವ ಮಗುವನ್ನು ಕಾಪಾಡು... ಅದು ಏನು ತಿಳಿಯದ ಅಸುಳೆ. ನನ್ನ ಕಂದನನ್ನು ಕಾಪಾಡುವೆಯಾ? ನಾನೀಗ ಆರು ತಿಂಗಳ ಗರ್ಭಿಣಿ... ನನ್ನ ಮಗು ಈ ಪ್ರಪಂಚಕ್ಕೆ ಬರುವ ತನಕ ನನಗೆ ಸಮಯ ನೀಡುವೆಯಾ? ಅದರ ನಂತರ ನನ್ನ ಮಗುವನ್ನು ಕಂಡು ನಿನಗೆ ಆಹಾರವಾಗುವೆ...”
ಕಂಬನಿ ಮಿಡಿಯುತ್ತಾ ಆ ತಾಯಿ ಕೈಮುಗಿದು ಬೇಡಿಕೊಂಡಳು. ಪತಿಯಾದ ಸಂತೋಷನ ಕಣ್ಣೀರು ಕೂಡಾ ನೆಲ ತಟ್ಟಿತು. ಇಬ್ಬರ ಬೇಡಿಕೆಗೆ ಕ್ಷಣಕಾಲ ನಿಂತ ಆ ಕ್ರೂರ ಪ್ರಾಣಿ, ಮರುಕ್ಷಣ ತನ್ನ ಭಯಂಕರ ರೂಪವನ್ನು ತ್ಯಜಿಸಿ ನಿಜವಾದ ರೂಪಕ್ಕೆ ಬದಲಾಯಿತು.
ಪೂರ್ಣಚಂದ್ರನನ್ನೆ ನಾಚಿಸುವಷ್ಟು ಮನಮೋಹಕ ಸೌಂದರ್ಯ, ಶಾಂತ ಕೆಂಪು ಕಣ್ಣುಗಳು, ತುಟಿಯಂಚಿನಲ್ಲಿ ಮಿನುಗುವ ಕೋರೆ ಹಲ್ಲುಗಳು, ಬೆನ್ನಿನ ಹಿಂದೆ ಹರಡಿದ ವಿಶಾಲ ರೆಕ್ಕೆಗಳು — ಪ್ರಪಂಚದ ಅತಿ ಸೌಂದರ್ಯವನ್ನು ಒಳಗೊಂಡ ಆಕೆ ಬೇರೆ ಯಾರು ಅಲ್ಲ — ಕಪ್ಪು ರಾಜ್ಯದ ಒಡತಿ “ಪ್ರಮೋದಿನಿ.”
“ಈಗ ನಿಮ್ಮಿಬ್ಬರಿಗೆ ಜೀವದಾನ ನೀಡುತ್ತಿದ್ದೇನೆ. ಆದರೆ ನಿನ್ನ ಶಿಶು ಈ ಭೂಮಿಗೆ ಬಂದ ಕ್ಷಣ ನೀವು ಇಬ್ಬರೂ ನನ್ನ ಆಹಾರವಾಗಲು ಸಿದ್ಧರಿರಬೇಕು...”
ಕಂಚಿನ ಕಂಠದ ಧ್ವನಿಯಲ್ಲಿ ಆಜ್ಞೆ ಹೊರಡಿಸಿದ ಪ್ರಮೋದಿನಿ, ಕ್ಷಣದಲ್ಲಿ ಅದೃಶ್ಯಳಾದಳು. ಎಲ್ಲವೂ ಕನಸಿನಂತೆ ನಡೆದಿತ್ತು. ಪ್ರಾಣ ಉಳಿದ ಹರ್ಷಕ್ಕಿಂತ, ಮುಂಬರುವ ಸಾವಿನ ಭಯವು ಇಬ್ಬರ ಮನಸ್ಸನ್ನು ಅಲುಗಾಡಿಸಿತು.
ತಾವು ಏನು ಮಾಡಬೇಕು ಎಂಬ ಅಸ್ಪಷ್ಟತೆಯಲ್ಲಿ ದಂಪತಿಗಳು ತಮ್ಮ ಮನೆ ಹಾದಿ ಹಿಡಿದರು. ಶ್ರೀಮಂತ ಮನೆತನದ ಈ ದಂಪತಿ — ಸಂತೋಷ ಮತ್ತು ಸಾನ್ವಿ — ಮದುವೆಯಾಗಿ ಕೇವಲ ಎರಡು ವರ್ಷಗಳು ಮಾತ್ರ ಕಳೆದಿತ್ತು. ಅವರ ದಾಂಪತ್ಯವೇ ಒಂದು ಮಧುರ ಸಂಗೀತದಂತೆ ಇಂಪಾಗಿತ್ತು.
ಸಾನ್ವಿ ಈಗ ಐದು ತಿಂಗಳ ಗರ್ಭಿಣಿ. ಪತಿಯ ಪ್ರೀತಿಯಲ್ಲಿ ಮುಳುಗಿದ್ದ ಅವಳು ತವರಿನ ನೆನಪುಗಳಲ್ಲಿ ಜೀವಿಸುತ್ತಿದ್ದಳು. ಅವಳ ಇಚ್ಛೆಯಂತೆ ಸಂತೋಷ ಅವಳನ್ನು ತಂದೆಮನೆಗೆ ಕರೆದುಕೊಂಡು ಹೋಗಿದ್ದ. ಕೆಲವು ದಿನಗಳು ತವರಿನ ಸಿಹಿ ನೆನಪುಗಳಲ್ಲಿ ಕಳೆಯುತ್ತಿದ್ದ ಸಾನ್ವಿ, ತಮ್ಮ ಊರಿಗೆ ಹಿಂದಿರುಗುವ ಮುನ್ನ ಅದೇ ಅಪಶಕುನದ ಸೇತುವೆ ಹಾದಿ ಆಯ್ಕೆ ಮಾಡಿಕೊಂಡರು...
ಆ ಸೇತುವೆಯ ಬಗ್ಗೆ ಸಾನ್ವಿಯ ತಾಯಿ ಎಚ್ಚರಿಸಿದ್ದರು — “ಯಾವುದೇ ಕಾರಣಕ್ಕೂ ಆ ಸೇತುವೆಯ ಮೇಲೆ ಹೋಗಬೇಡ.” ಸರಿಯೆಂದು ಬಂದ ದಂಪತಿಗಳು..
ಆದರೆ ಅದೇ ಸಮಯಕ್ಕೆ ಸಂತೋಷ್ ಗೆ ತುರ್ತು ಕೆಲಸ ಬಂದಿತ್ತು... ಅವನು ಆದಷ್ಟು ಬೇಗ ತನ್ನ ಊರಿಗೆ ಪ್ರಯಾಣ ಬೆಳೆಸಲೇ ಬೇಕಿತ್ತು, ಬರೋಬ್ಬರಿ ಐದು ಗಂಟೆಗಳ ಪ್ರಯಾಣದ ಅವಧಿ....
ಸೇತುವೆ ಬಳಸಿ ಹೋದರೆ ಮತ್ತೊಂದು ಗಂಟೆಗಳ ಪ್ರಯಾಣ ಆಗುತ್ತಿತ್ತು...ಈಗ ಬಳಸಿ ಹೋದರೆ ಮತ್ತಷ್ಟು ಸಮಯ ಹಿಡಿಯಬಹುದೆಂದು ನಿರ್ಧರಿಸಿ ಆ ಕತ್ತಲಿನಲ್ಲಿ ಸೇತುವೆ ಮೇಲೆ ಹೋಗಲು ನಿರ್ಧರಿಸಿ ಬಂದಿದ್ದರು ಆಗಲೇ ಆ ಅಪೂರ್ವ ದೃಶ್ಯ ಸಾನ್ವಿ ಕಣ್ಣುಗಳಿಗೆ ಬಿದ್ದಿತ್ತು..
ಜುಳು ಜುಳು ಶಬ್ದದ. ಜೊತೆಗೆ ತಂಪಾಗಿ ಬೀಸುತ್ತಿದ್ದ ಗಾಳಿ.. ಆಗಸದಲ್ಲಿ ಮುತ್ತಿನಂತೆ ಪೋಣಿಸಿದ ಲಕ್ಷಾಂತರ ನಕ್ಷತ್ರಗಳ ನಡುವೆ ಪೂರ್ಣಚಂದ್ರನ ಬೆಳದಿಂಗಳು ನದಿಯ ನೀರಿನ ಮೇಲೆ ಬಿದ್ದಾಗ ಪ್ರತಿಬಿಂಬವಾಗಿ ಆ ಸುತ್ತಲಿನ ವಾತಾವರಣವನ್ನು ಆಕ್ರಮಿಸಿ ಕೊಂಡಿತ್ತು...
ಕಣ್ಣಿಗೆ ತಂಪಾದ ವಾತಾವರಣ...ಆ ವಾತಾವರಣದಲ್ಲಿ ನಿಲ್ಲುವ ಆಸೆಯಿಂದ ಸಾನ್ವಿ ತನ್ನ ಪತಿಗೆ ಬಲವಂತವಾಗಿ ಕರೆದುಕೊಂಡು ಅವನ ಜೊತೆ ಅವನ ಕೈಹಿಡಿದು ದೂರ ಕ್ರಮಿಸಿ ಅಲ್ಲಿನ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಳು ಆದರೆ ಅದೇ ಅವರ ಕೊನೆಯ ಸಂತೋಷದ ದೃಶ್ಯವಾಗಿತ್ತು ಅನ್ನುವುದು ವಿಪರ್ಯಾಸ..
ಕ್ಷಣದಲ್ಲಿ ಸಾವು ತಪ್ಪಿತು ಆದರೆ ಮುಂದೆ ಸಾವಿನ ಅತಿಥಿ ಅವರಾಗಿದ್ದರು ಬೆನ್ನಿಂದೆ ಶ್ರೀಮಂತಿಕೆ ತುಂಬಿ ತುಳುಕುತ್ತಿತ್ತು...ಆದರೆ ನೆಮ್ಮದಿ ಹಾಳಾಗಿತ್ತು...ದಿನಗಳು ಕ್ಷಣಗಳಂತೆ ಸಾಗುತ್ತಿತ್ತು ದಂಪತಿಗಳಿಬ್ಬರು ಈಗಲೇ ಮಗುವಿನ ಭವಿಷ್ಯದ ಚಿಂತೆಯಲ್ಲಿ ತೊಡಗಿದರು ತಾವಿಬ್ಬರು ಇಲ್ಲದೆ ಇದ್ದರೂ ಕೂಡ ತಮ್ಮ ಮಗು ಸುಖವಾಗಿರಬೇಕೆನ್ನುವ ಕಾರಣಕ್ಕೆ ತಾವು ಸಂಪಾದಿಸಿದ ಆಸ್ತಿನೆಲ್ಲ ಆ ಮಗುವಿನ ಹೆಸರಿಗೆ ಮಾಡಿದರು..
ಇಷ್ಟು ದಿನ ಸೋದರರನ್ನು ದೂರವಿಟ್ಟುವರು ಈಗ ತಾವೇ ಬಂಧು ಬಳಗವನ್ನು ಹತ್ತಿರ ಸೇರಿಸಿಕೊಂಡರು ತಾವು ಇಲ್ಲದೆ ಹೋದರು ತಮ್ಮ ಕುಟುಂಬದವರಾದರೂ ತಮ್ಮ ಮಗುವನ್ನು ನೋಡಿಕೊಳ್ಳಲಿ ಎನ್ನುವ ಕಾರಣಕ್ಕೆ..
ದಿನಗಳು ಕಳೆದಂತೆ ಭಯದ ಜೊತೆಗೆ ಪಿತೃತ್ವ,, ಮಾತೃತ್ವವನ್ನು ಅನುಭವಿಸುತ್ತ ಸುಖವಾಗಿದ್ದರೂ ಆ ದಂಪತಿಗಳಿಬ್ಬರು ಮಗುವಿನ ಬಗ್ಗೆ ನೂರಾರು ಕನಸು ಕಂಡಿದವರಿಗೆ ಆ ಮಗುವಿನ ಕನಸ್ಸಲ್ಲಿ ನಾವಿರುವುದಿಲ್ಲ ಅನ್ನುವುದೇ ದೊಡ್ಡ ಚಿಂತೆಯಾಗಿತ್ತು...
ಇಡೀ ಕುಟುಂಬದ ಜೊತೆ ಸಂತೋಷದಿಂದ ಸಮಯವನ್ನು ಕಳೆದರೂ ಆಗಲೇ ಆಕೆಗೆ ಸೀಮಂತವನ್ನು ಅದ್ದೂರಿಯಾಗಿ ಮಾಡಿದರು ತುಂಬು ಗರ್ಭಿಣಿ ಯಾವ ಕ್ಷಣದಲ್ಲಿ ಬೇಕಾದರೂ ಹೆರಿಗೆ ಆಗಬಹುದು ಎನ್ನುವ ಡಾಕ್ಟರ್ ಗಳ ಮಾತಿಗೆ ಬೆಲೆಕೊಟ್ಟು ತನ್ನ ಪತಿಯ ಮನೆಯಲ್ಲಿ ಉಳಿದು ಕೊಂಡಿದ್ದಳು ತವರಿಗೆ ಹೋಗದೇ ಸಾನ್ವಿ ..
ಆದರೆ ಅದೇ ರಾತ್ರಿ ಅವಳ ಕೊನೆಯ ರಾತ್ರಿ ಆಗುವುದರಲ್ಲಿ ಇತ್ತು... ಅದೇ ಸಮಯಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿತ್ತು... ಅವಳನ್ನು ಆಸ್ಪತ್ರೆಗೆ ಸೇರಿಸುವ ಮುನ್ನವೇ ಬಂದಳು ಕಪ್ಪು ರಾಜ್ಯದ ಒಡತಿ ತಮ್ಮ ಸಾವು ಕಣ್ಣೆದುರು ಬಂದು ನಿಂತಿತ್ತು ಹಸಿವಿನಿಂದ ಬುಸುಗುಡತ್ತಿದ್ದ ಆ ಪ್ರಾಣಿಯನ್ನು ಕಂಡು ಇಬ್ಬರು ಶರಣಾದರೂ...
ಆ ಪ್ರಾಣಿಯ ಕಂಗಳು ಕೆಂಪು ಕಂಗಳಾಗಿ ಮಿರ ಮಿರನೇ ಮಿಂಚುತ್ತಿತ್ತು... ಕೋರೆ ಹಲ್ಲುಗಳು ಮತ್ತಷ್ಟು ಉದ್ದವಾಗಿ ಬೆಳೆದಿತ್ತು... ಆಗಲೇ ಆ ಕ್ರೂರ ಪ್ರಾಣಿ ಸಂತೋಷ್ ಮೇಲೆರಗಿ ಅವನ ದೇಹದ ರಕ್ತವನ್ನು ಕ್ಷಣದಲ್ಲಿ ಒಂದು ಹನಿಯೂ ಬಿಡದೆ ಇರುವಂತೆ ಕುಡಿದು ತನ್ನ ದಾಹವನ್ನು ತೀರಿಸಿಕೊಂಡಿತ್ತು... ಆದರೂ ಆ ಪ್ರಾಣಿಯ ಹಸಿವಿನ ದಾಹ ಇನ್ನು ನಿಂತಿರಲಿಲ್ಲ ಈಗ ಅದರ ದೃಷ್ಟಿ ಬಿದ್ದಿದ್ದು ತುಂಬು ಗರ್ಭಿಣಿಯ ಮೇಲೆ...
ಆ ಪ್ರಾಣಿಯ ದೃಷ್ಟಿಯಲ್ಲಿ ಅಡಗಿದ ಶಕ್ತಿ ಯಾವುದೋ ಕ್ಷಣದಲ್ಲಿ ಆ ತಾಯಿಯ ಗರ್ಭದಿಂದ ಮಗು ಹೊರ ಬರಲು ತವಕಿಸುತ್ತಿತ್ತು ಕ್ಷಣದಲ್ಲಿ ಕುಸಿದು ಬಿದ್ದ ತಾಯಿ ಒದ್ದಾಡಿ ಬಿಟ್ಟಳು ಜೀವ ಹೋಗುವಂತಹ ಹೆರಿಗೆ ನೋವಿನಲ್ಲಿ... ಅರ್ಧ ತಾಸಿನ ನೋವಿನ ನಂತರ ಪೂರ್ಣಚಂದ್ರ ನನ್ನು ಹೋಲುವಂತಹ ಶಿಶುವಿಗೆ ಜನ್ಮ ನೀಡಿದ ತಾಯಿ .. ಭೂಮಿಗೆ ಬಂದ ತನ್ನ ಮಗುವನ್ನು ಕಂಡು ಮೊದಲ ಹಾಗೂ ಕೊನೆಯ ಬಾರಿಗೆ ಮಗುವನ್ನು ಮುದ್ದಾಡಿದಳು....
ಮತ್ತೊಮ್ಮೆ ಬಲಿಯಾಗುವ ಮುನ್ನ ಬೇಡಿಕೊಂಡಳು 'ತನ್ನ ಮಗುವಿನ ರಕ್ಷಣೆಯ ಜವಾಬ್ದಾರಿಯನ್ನು ಅದೇ ರಕ್ತ ಪಿಶಾಚಿಯ ಬಳಿ ಸಾನ್ವಿ. '
ಉತ್ತರ ನೀಡದೆ ಇದ್ದರೂ ಮೌನವಾಗಿರಲಿಲ್ಲ...ಆ ಮಗುವಿನ ರಕ್ಷಣೆ ಮಾಡುವೆ ಎನ್ನುವ ಆ ಕ್ರೂರ ಪ್ರಾಣಿಯ ಕಣ್ಣಿನಲ್ಲಿಯೇ ಭರವಸೆ ನೀಡಿ ಸಾನ್ವಿಯನ್ನು ಆಹಾರವಾಗಿ ಮಾಡಿಕೊಂಡಿದ್ದಳು ಪ್ರಮೋದಿನಿ ..
ದಂಪತಿಗಳಿಬ್ಬರು ಕೊನೆಗೂ ತಾವು ಹೇಳಿದಂತೆ ಆ ದೈತ್ಯ ಪ್ರಾಣಿಗೆ ಬಲಿಯಾಗಿದ್ದರು ... ಬಲಿಯಾಗುವ ಮುನ್ನ ಆ ದೈತ್ಯ ಪ್ರಾಣಿಯ ಅಸ್ತಿತ್ವದ ಮೂಲ ರೂಪದ ಗುರುತು ಆ ಇಬ್ಬರ ಕಣ್ಣುಗಳಲ್ಲಿ ಮೂಡಿತು... ಹುಟ್ಟುವಾಗಲೇ ಅನಾಥೆ ಆದಳು ಸಂತೋಷ ಸಾನ್ವಿಯ ಪುಟ್ಟ ರಾಜಕುಮಾರಿ ...ಆ ಕ್ರೂರ ಪ್ರಾಣಿಯ ದೃಷ್ಟಿ ಆ ಮಗುವಿನ ಮೇಲೆ ಬೀರಲೆ ಇಲ್ಲ ... ಬಿದ್ದರೂ ಅದು ಅಪಾಯಕಾರಿ ಆಗಿರಲಿಲ್ಲ..!!
ಮುಂದುವರಿಯುವುದು...!!!