ಸೂಚನೆ :- ಇ ಕಥೆಯು ನನ್ನ ಸ್ವ ರಚನೆಯಾಗಿದ್ದು ಎಲ್ಲಿಯಾದರೂ ಹೋಲಿಕೆ ಕಂಡುಬಂದರೆ ಅದು ಕೇವಲ ಕಾಕತಾಳಿಯವಷ್ಟೇ.... ಹೃದಯದ ಒಡತಿ ಕಥೆಯ ಪ್ರೀತಿಯ ಅಭಿಮಾನಿಗಳಿಗೆ ಸಮರ್ಪಣೆ... ಏಕೆಂದರೆ ಇದು ಅದರ ಮುಂದುವರಿದ ಭಾಗ ಸೀಸನ್ 2🫰...ನಿಮ್ಮ ಪ್ರೋತ್ಸಾಹ ಇ ಪುಟ್ಟ ಬರಹಗಾರ್ತಿಯ ಮೇಲೆ ಸದಾ ಇರಲಿ 🙏
ಅಧ್ಯಾಯ -1
" ತುಳಸಿ ಗಿಡದ ಮುಂದೆ ಕೈ ಮುಗಿದು ಶ್ರದ್ದೆಯಿಂದ ತನ್ನ ಪುಟ್ಟ ಬೇಡಿಕೆಯ ದೇವರ ಮುಂದೆ ಇಡುತಿದ್ದ ಮುಗ್ದ ಮನಸ್ಸಿನ ಕೋರಿಕೆ ದೇವರಿಗೆ ತಲುಪುವುದಾದರು ಯಾವಾಗಲೋ.... ಕಣ್ತೆರೆದು ಪೂಜೆ ತಟ್ಟೆಯಲ್ಲಿದ್ದ ಪ್ರಸಾಧದ ಬಟ್ಟಲಿನಿಂದ ಸಿಹಿ ಪೊಂಗಲ್ ತೆಗೆದುಕೊಂಡು ಬಾಯಿಗೆ ಹಾಕಿಕೊಂಡವಳು ತನ್ನ ಅಮ್ಮನಿಗೆ ಕಾಣದಿರಲೆಂದು ಬೆರಳುಗಳನ್ನು ಚೀಪಿದವಳು, ಪಂಚಪಾತ್ರೆಯಿಂದ ನೀರು ಚುಮುಕಿಸಿಕೊಂಡು ಕೈ ತೊಳೆದುಕೊಳ್ಳುತ್ತಾಳೆ... ದೇವ್ರೇ ಕ್ಷಮಿಸಿಬಿಡು ಆಗಿಂದ ಅದರ ಘಮ ಬಾಯಿಯಲ್ಲಿ ನೀರು ಬರ್ತಿತ್ತು, ಆದ್ರೂ ನಾನು ಪೂಜೆ ಮುಗಿಯುವವರೆಗೂ ತಿಂದಿಲ್ಲ ಗೊತ್ತ, ನೀವು ಚಿಕ್ಕ ಮಕ್ಕಳು ಮಾಡಿದ ತಪ್ಪನ್ನ ಬೇಗ ಕ್ಷಮಿಸ್ತೀರಾ ಯಾಕಂದ್ರೆ ಮಕ್ಕಳು ದೇವರಂತೆ ಅಂತ ಮಮ್ಮಿ ಹೇಳ್ತಿರ್ತಾರೆ ಎಂದವಳ ಕಿಲಕಿಲ ನಗುವಿಗೆ ದೇವರು ಕರಗುವನೇನೋ "
" ತಸ್ಯಾ ಎಲ್ಲಿದ್ದೀಯ ಕಂದ ಇನ್ನು ನಿಂದು ಪೂಜೆ ಮುಗಿದಿಲ್ವಾ ಎಷ್ಟೊತ್ತು ಮಾಡೋದು... ನೀವಿನ್ನು ತಿಂಡಿ ತಿಂದಿಲ್ಲ, ಬಟ್ಟೆ ಬದಲಿಸಿಲ್ಲ, ಸ್ಕೂಲ್ ಅಡ್ಮಿಷನ್ ತಡ ಆಗುತ್ತೆ ಬೇಗ ಬನ್ನಿ ಎಂದು ಚೀರುತಿದ್ದವಳ ದನಿಗೆ, ಬಂದೆ ಮಮ್ಮಿ ಎನ್ನುತ್ತಾ ಓಡಿದ ಮುದ್ದು ಮರಿಯೇ ತಸ್ಯಾ "
" ಸ್ಸಾರಿ ಮಮ್ಮಿ ಈಗ ಬಂದೆ ಎನ್ನುತ್ತಾ ನಿಶುಳ ಮುಂದೆ ಪ್ರತ್ಯಕ್ಷಳಾದವಳು ಮಮ್ಮಿ ಬನ್ನಿ ಟಿಫನ್ ಮಾಡೋಣ ಎಂದಿದ್ದಳು "
" ಅವಳತ್ತ ನೋಡಿದ ನಿಶು ಸೊಂಟದ ಮೇಲೆ ಕೈ ಇರಿಸಿ ಗುರಾಯಿಸುತ್ತಾ ಪಾಪು ನಿಂಗೆ ಎಷ್ಟು ಬಾರಿ ಹೇಳೋದು ದೇವರ ಮುಂದೆ ನಿಂತು ನೈವೇದ್ಯ ತಿನ್ಬಾರ್ದು ಅಂತ, ಗುಡ್ ಗರ್ಲ್ಸ್ ಪದೇ ಪದೇ ಹೇಳಿಸಿಕೊಳ್ತಾರ "
" ತನ್ನಮ್ಮನಿಗೆ ಹೇಗೆ ತಿಳಿಯಿತು ಎನ್ನುತ್ತಾ ಬಾಯಿ ಮುಚ್ಚಿಕೊಳ್ಳುತ್ತಿದ್ದವಳ ಬೆರಳಿಗೆ ತುಟಿಗೆ ಅಂಟಿಕೊಂಡಿದ್ದ ಅನ್ನದ ಅಗುಳು ಸಿಕ್ಕಿತ್ತು, ಒಮ್ಮೆ ಉಗುಳು ನುಂಗಿ, ಏನ್ ಹೇಳಲಿ ಹೇಗೆ ಕಾನ್ವೆನ್ಸ ಮಾಡೋದಪ್ಪ ಯೋಚಿಸುತ್ತ, ನೋ ಮಮ್ಮಿ ಅದು ಅದು ನಾನು ಇಷ್ಟೇ ಇಷ್ಟು ಇಲ್ಲಿ ನೋಡಿ ಇಷ್ಟು ಪುಟ್ಟ ಇರುವೆಯಷ್ಟೇ ತಿಂದಿದ್ದು, ದೇವರಿಗೆ ಇಷ್ಟ ಆಗುತ್ತಾ ಟೇಸ್ಟ್ ಸರಿ ಇದಿಯಾ ಅಂತ ನೋಡೋಕಷ್ಟೇ, ಮುದ್ದಾಗಿ ಹೇಳಿದವಳ ಕಂಡು ನಿಶುಳ ಕೋಪ ಮಾಯವಾಗಿತ್ತು... ಇಬ್ಬರು ಜೊತೆಯಲ್ಲಿ ಕೂತು ತಿಂಡಿ ತಿಂದಿದ್ದರೂ... ತಸ್ಯಾ ಇನ್ನು ಮೂರು ವರ್ಷದ ಪುಟ್ಟ ಕಂದ, ತನ್ನ ತಿಂಡಿ ಊಟ ತಾನೇ ತಿನ್ನುತ್ತಾಳೆ, ಪ್ಲೇಟ್ ಸಿಂಕ್ ನಲ್ಲಿ ಹಾಕೋದರ ಜೊತೆಗೆ ತನಗೆ ತಿಳಿದಂತೆ ದೇವರ ಪೂಜೆ ಮಾಡಿ ತನ್ನ ಮಮ್ಮಿಗೆ ಸಣ್ಣ ಪುಟ್ಟ ಸಹಾಯ ಕೂಡ ಮಾಡುತ್ತಾಳೆ "
" ಮುದ್ದು ಮಮ್ಮಿ ನಿಂಗೆ ಬಟ್ಟೆ ಸಲೆಕ್ಟ್ ಮಾಡಿ ಇಟ್ಟಿದಾರೆ, ಹಾಗೆ ಹೇರ್ ಬ್ಯಾಂಡ್, ಶೂ ಎಲ್ಲಾ ಅಲ್ಲಿಯೇ ಇದೆ, ನೀವು ಹೋಗಿ ಬೇಗ ರೆಡಿಯಾಗಿ ಬನ್ನಿ... ಗೋ ಫಾಸ್ಟ್ ಕ್ವಿಕ್ ಎಂದಿದ್ದಳು "
" ಮಮ್ಮಿ ಇ ಬಟ್ಟೇನೂ ಕ್ಲೀನ್ ಇದೆ... ಸ್ನಾನ ಮಾಡಿ ಹಾಕ್ಕೊಂಡಿರೋದು ಮತ್ತೆ ಯಾಕೆ ಬದಲಿಸೋದು "
" ಮುದ್ದು ಎಷ್ಟು ಬಾರಿ ಹೇಳೋದು ನಿಮ್ಗೆ ಮನೆಯಲ್ಲಿ ಹಾಕಿಕೊಳ್ಳೋ ಬಟ್ಟೆ ಬೇರೆ, ಹೊರಗೆ ಹೋದಾಗ ಹಾಕುವ ಬಟ್ಟೆ ಬೇರೆಯಂತ... ನಿನ್ನ ಡ್ಯಾಡಿ ನಿಮ್ಮನ್ನ ಹೇಗೆ ರೆಡಿಮಾಡ್ತಿದ್ರು ಮರೆತು ಬಿಟ್ರಾ ಎಂದವಳು ಹಾಗೆಯೇ ಸ್ತಬ್ದಳಾಗುತ್ತಾಳೆ "
" ಸ್ಸಾರಿ ಮಮ್ಮಿ ನಾನು ರೆಡಿಯಾಗ್ತಿನಿ... ಎಷ್ಟೇ ಆದ್ರೂ ನಾನು ಯಾರು, ಡಾಟರ್ ಆಫ್ ಗ್ರಂಥ್.. ಪ್ಲೀಸ್ ನೀವು ಬೇಜಾರ್ ಮಾಡ್ಕೋಬೇಡಿ ನನ್ನಿಂದ ನೋಡೋಕಾಗೋದಿಲ್ಲ... ಟೂ ಮಿನಿಟ್ಸ್ ಬರ್ತೀನಿ ಎನ್ನುತ್ತಾ ಓಡಿದ್ದಳು "
" ಎಲ್ಲಿದ್ದೀರಾ ಗ್ರಂಥ್ ನೀವು ನಿಮ್ಮ ಮಗಳ ಬಗ್ಗೆ ಅದೆಷ್ಟು ಕನಸ್ಸು ಕಟ್ಟಿದ್ರಿ... ಹೇಗೆಲ್ಲ ಬೆಳೆಸಬೇಕು ಅಂದುಕೊಂಡಿದ್ರಿ, ನೀವು ಇಷ್ಟಪಟ್ಟ ಸ್ಕೂಲ್ಗೆ ಅಡ್ಮಿಷನ್ ಮಾಡಿಸೋಕೆ ಹೋಗ್ತಿದ್ದೀನಿ, ಆದ್ರೆ ಜೊತೆಯಲ್ಲಿ ನೀವಿಲ್ಲ... ಬೇಗ ಬನ್ನಿ ತುಂಬಾ ಕಾಯಿಸಬೇಡಿ... ನಿಮ್ಮ ಮಗಳುಎಲ್ಲಾ ನಿಮ್ಮಂತೆಯೇ ನಾನು ಬೇಜಾರಾದ್ರೆ ಅವ್ಳು ಸಹಿಸೋದಿಲ್ಲ"
" ಮಮ್ಮಿ ಅಡ್ಮಿಷನ್ ಮುಗಿದ ಮೇಲೆ ಅತ್ತೆ ಚಿಕ್ಕು ಚಿಕ್ಕಿ ಆರವ್, ಮಾನಮ್ಮ ತಾತು ಎಲ್ಲರೂ ಒಟ್ಟಿಗೆ ಡಿನ್ನರ್ ಹೋಗೋಣ್ವಾ "
" ಆಹಾ ಸುಬ್ಬಿ ಹೋಗ್ತಿರೋದು ಪ್ರೀಕೆಜಿ ಅಡ್ಮಿಷನ್ ಸಲುವಾಗಿ ಏನೋ ಮೆಡಿಕಲ್ ಸೀಟ್ ಸಿಕ್ಕಿ ಅಡ್ಮಿಷನ್ ಮಾಡಿಸಿರೋ ತರ ಡಿನ್ನರ್ ಅಂತೇ ತಮಾಷೆಗೆ ಕಾಲೇಳೆದವಳು, ಮತ್ತೇನೋ ನೆನೆದು ಗ್ರಂಥ್ ಜೊತೆಯಲ್ಲಿ ಇದ್ದಿದ್ರೆ ಚಿಕ್ಕ ಪುಟ್ಟದ್ದನ್ನು ಅದೆಷ್ಟು ಸಂಭ್ರಮಿಸ್ತಿದ್ರು ಅವರಿಗೆ ಮಗಳಂದ್ರೆ ಪ್ರಾಣ, ಅವ್ಳು ಮೊದಲ ಬಾರಿಗೆ ಅಪ್ಪ ಅಂತ ಕರೆದಳು ಅನ್ನೋ ಖುಷಿಗೆ ಎಲ್ಲರನ್ನು ಕರೆದು ಸಿಹಿ ಅಡುಗೆ ಮಾಡಿಸಿದ್ರು, ಬೇರೆಯವರಿಗೆ ಇದೆಲ್ಲ ಅತೀ ಅನ್ನಿಸಬಹುದೇನೋ ಆದ್ರೆ ಗ್ರಂಥ್ ಪಾಲಿಗೆ ಪುಟ್ಟ ದೇವತೆಯನ್ನ ಪ್ರತಿದಿನ ಸಂಭ್ರಮಿಸಿದರು ಕಡಿಮೆಯೇ... ಸರಿ ಕಂದ ಎಲ್ಲರಿಗೂ ಮನೆಗೆ ಬರೋದಕ್ಕೆ ಹೇಳ್ತಿನಿ ನೈಟ್ ಒಟ್ಟಿಗೆ ಊಟ ಮಾಡೋಣ "
" ತಸ್ಯಾಳ ಮುದ್ದು ಮುಖ ಪೆಚ್ಚಾಗಿತ್ತು... ಅವಳು ತಿನ್ನುವ ವಿಷಯದಲ್ಲಿ ನಿಶುಳಂತೆ ಹೊರಗಿನ ತಿಂಡಿ ತುಂಬಾ ಇಷ್ಟ, ನಿಶುಗೆ ಹೇಗೆ ಗೋಭಿಮಂಚೂರಿಯನ್ ಇಷ್ಟವೋ ಇವಳಿಗೂ ಅಂತೆಯೇ "
" ನಿಶುಗೆ ಜೋರಾಗಿ ನಗು ಬಂದಿತ್ತು... ಮನೆಯಲ್ಲೇ ಊಟ ಮಾಡೋದು ಆದ್ರೆ ಹೊರಗಿನಿಂದ ನಿನ್ನ ಫೆವರೇಟ್ ರೆಸ್ಟೋರೆಂಟ್ ನಿಂದ ಊಟ ಆರ್ಡರ್ ಮಾಡ್ತೀನಿ ಎಲ್ಲಾ ನಿನ್ನ ಇಷ್ಟದ್ದೆ... ಆರ್ ಯು ಹ್ಯಾಪಿ "
" ಎಸ್ ಎನ್ನುತ್ತಾ ಚೀರಿದವಳು ಮಮ್ಮಿ ಮೆನು ನಾನು ಹೇಳ್ತಿನಿ ಪ್ಲೀಸ್ ಪ್ಲೀಸ್ ಎನ್ನುತ್ತಾ ನಿಶುಳ ಚೋಟು ಏರಿದ್ದಳು.... ಮನೆಯಲ್ಲಿ ಕಾರ್ ಇದೆ, ಡ್ರೈವಿಂಗ್ ಕೂಡ ಗೊತ್ತು, ಆದರೆ ಗ್ರಂಥ್ ಬಾರದೆ ಅದನ್ನ ಮುಟ್ಟೋದಿಲ್ಲ ಎಂಬುದು ನಿಶುಳ ತರ್ಕ "
@@@@@@@
" ರವಿಕಾಂತ್ ಮನೆಯಲ್ಲಿ ದುಷ್ ಪ್ರಾಚೀ ಅವರ 5 ವರ್ಷದ ಮಗ ಆರವ್ ಹಾಗೆ ಮಾಧವಿ... ಎಂಬಿಎ ಮೊದಲ ವರ್ಷ ಓದುತ್ತಿರೋ ದೀಪ್ತಿ ಎಲ್ಲರೂ ಒಟ್ಟಿಗೆ ಸೇರಿದ್ದರು... ರವಿಕಾಂತ್ ಹೇಳಿದ ಮಾತಿಗೆ ಎಲ್ಲರಿಗೂ ಕೋಪವೇ ಬಂದಿತ್ತು "
" ಡ್ಯಾಡಿ ಆರ್ ಯು ಔಟ್ ಆಫ್ ಯುವರ್ ಮೈಂಡ್ ಏನು ಹೇಳ್ತಿದ್ದೀರಾ ನಿಮ್ಗೆ ಗೊತ್ತ... ಅತ್ತಿಗೆಗೆ ಇನ್ನೊಂದು ಮದುವೆನಾ "
" ಹೌದು ಮಾವ ನೀವು ತುಂಬಾ ಅವಸರ ಮಾಡ್ತಿದ್ದೀರಾ "
" ಹೌದು ಡ್ಯಾಡಿ ಗೊಂಬೆ ನಿಮ್ಮ ಮಾತು ಕೇಳಿದರೆ ಸಹಿಸೋದಿಲ್ಲ, ಇನ್ನೊಮ್ಮೆ ತಮಾಷೆಗೂ ಇ ರೀತಿ ಹೇಳ್ಬೇಡಿ "
" ಮಾಧವಿ ಗಂಡನತ್ತ ಕೋಪದಿಂದ ನೋಡಿ... ಏನ್ರೀ ನಿಮ್ಗೆ ಆಗಿರೋದು ನಿಮ್ಮ ಮುದ್ದಿನ ಸೊಸೆ ಬಗ್ಗೆ ನಿಮಗೊಬ್ಬರಿಗೆ ಯೋಚನೆ ಇರುವವರಂತೆ ಮಾತಾಡ್ತಿರಲ್ಲ... ನಿಶು ನನಗೂ ಸೊಸೆಯೇ ಅವಳು ಒಂಟಿಯಾಗಿ ಕೊರಗುತಿದ್ರೆ ನಮಗೂ ಬೇಸರ ಆಗೋದಿಲ್ವ... ತನ್ನ ಅಪ್ಪನ ತುಂಬು ಪ್ರೀತಿ ಅನುಭವಿಸಬೇಕಾದ ಮಗುವನ್ನ ನೋಡಿ ನಮಗೂ ಹೊಟ್ಟೆ ಉರಿಯೋದಿಲ್ವ, ನಿಶು ಮೊದಲೇ ನೊಂದಿದಾಳೆ ನಿಮ್ಮ ಅತಿರೇಕದ ಮಾತಿನಿಂದ ಅವಳೇನಾದ್ರೂ ಮತ್ತೆ ನೋವು ತಿಂದ್ರೆ ನಾವ್ಯಾರು ಇ ಮನೆಗೆ ಕಾಲಿಡೋದಿಲ್ಲ.... ನಿಶು ಪಾಲಿಗೆ ನಾವೆಲ್ಲರೂ ಇನ್ನು ಬದುಕಿದ್ದೀವಿ "
" ಹೆಂಡತಿಯ ಮಾತಿನಿಂದ ರವಿಕಾಂತ್ ಒಂದೆಡೆ ಖುಷಿ ಪಟ್ಟದ್ದೆನೋ ನಿಜಾ.... ಸ್ವಲ್ಪ ನನ್ನ ಮಾತು ಕೇಳಿ ಎಲ್ಲರೂ ಗ್ರಂಥ್ ಎಲ್ಲಿದಾನೆ ಗೊತ್ತಿಲ್ಲ ಪೊಲೀಸ್ ಕಂಪ್ಲೇಂಟ್ ಆಗಿದೆ ಆದರೂ ಏನು ಸುದ್ದಿ ಇಲ್ಲ, ಅವನೊಂದಿಗೆ ಟ್ರಿಪ್ ಹೋಗಿದ್ದವರು ತೋರಿಸಿದ ಜಾಗದಿಂದ ಬಿದ್ದ ಮನುಷ್ಯ ಬದುಕಿರೋದಕ್ಕೆ ಸಾಧ್ಯನೇ ಇಲ್ಲ ಎಂದವರ ದನಿ ಕಟ್ಟಿ ಕಣ್ಣು ತುಂಬಿತ್ತು...ತಂದೆ ಬದುಕಿರುವಾಗಲೇ ಮಗನ ಸಾವು ಯಾರು ಸಹಿಸುವಂತದ್ದಲ್ಲ, ಅದರಲ್ಲಿಯೂ ತಮ್ಮ ಹೆಮ್ಮೆಯ ಮಗ, ತಾನು ಗೌರವದಿಂದ ಕಾಣುವಂತ ಮೆಚ್ಚಿನ ಮಗನ ಗೈರು ಅವರನ್ನ ಪ್ರತಿ ಕ್ಷಣವೂ ಹಿಂಸಿಸುತಿತ್ತು....ಬಾಡಿ ಸಿಗದಿದ್ದ ಮಾತ್ರಕ್ಕೆ ಅವನು ಬರ್ತಾನೆ ಅನ್ನೋ ಹುಸಿ ನಂಬಿಕೆಯಲ್ಲಿ ಕಾಲ ಕಳೆಯೋದು ಎಷ್ಟು ಸರಿ... ಆ ಮಗುವಿನ ಭವಿಷ್ಯ ಇಷ್ಟು ಚಿಕ್ಕ ವಯಸ್ಸಿಗೆ ಕಮರೋದು ನನಗೆ ಇಷ್ಟವಿಲ್ಲ "
" ಯಾರು ಹೇಳಿದ್ದು ಡ್ಯಾಡಿ ಬ್ರೋ ಬದುಕಿಲ್ಲ ಅಂತ ಅವ್ನು ಬದುಕಿದ್ದಾನೆ?
ಮುಂದುವರೆಯುವುದು....
ನಿಮ್ಮ ಪ್ರೀತಿಯ ಹೃದಯದ ಒಡತಿ ಕಥೆ ಹೊಸ ರೂಪ ಹೊಸ ತಿರುವುಗಳೊಂದಿಗೆ ಅಭಿಪ್ರಾಯ ತಿಳಿಸೋದು ಮಿಸ್ ಮಾಡ್ಬೇಡಿ... ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಾಗಿ ಕಾಯ್ತಿರ್ತೀನಿ ♥️