She is mine...?-1 in Kannada Love Stories by Geetha Mahesh books and stories PDF | ನನ್ನವಳು...? - 1

Featured Books
Categories
Share

ನನ್ನವಳು...? - 1

       ಸಂಜಯ್ ನಮ್ಮ ಈ ಕಥೆಯ ನಾಯಕ .ಶ್ರೀಮಂತ ವ್ಯಕ್ತಿ ಆದರೆ ಉದಾರ ಸ್ವಭಾವ ಅವನದ್ದು.

     ಮೀರಾ ಈ ಕಥೆಯ ನಾಯಕಿ .ನಮ್ಮ ಸಂಜಯ್ ನಾ ಮುದ್ದಿನ ಪ್ರಿಯತಮೆ.

            

         ಮೀರಾ ಇವಳಿಗೆ ತಂದೆ ತಾಯಿ ಯಾರೂ ಇಲ್ಲ .ಇವಳು ಸಂಜಯ್ ನಾ ಮನೆಯಲ್ಲೇ ಇರ್ತಾಳೆ ಅವನ ಮನೆಯಲ್ಲಿ ಸಂಜಯ್ ತಂದೆ ರಮೇಶ್ ,ತಾಯಿ ಪರಿಮಳ ಅವನ ತಂಗಿ ಜಾನ್ವಿ ಅವನ ಅಣ್ಣ ಪ್ರವೀಣ್ ಅತ್ತಿಗೆ ಪಾವನಿ ಇವರದ್ದು ದೊಡ್ಡ ಕುಟುಂಬ 

     

       ಮೀರಾ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ ಇರುತ್ತಾಳೆ.ಅಷ್ಟರಲ್ಲಿ ಸಂಜು ಅವಳನ್ನು  ಕೂಗುತ್ತಾನೆ.

  "ಹೇ ಬೇಗ ಬಾರೆ ಎಷ್ಟೊತ್ತ್ ಮಾಡ್ತೀಯ ನನಗೆ ಟೈಮ್ ಆಗ್ತಾ ಇದೆ."

    "ಹಾ ಬಂದೇ ಮಾಮ."ಎಂದು ಭಯದಲ್ಲೇ ಹೇಳಿ ಅಡುಗೆ ಮನೆಯಿಂದ ಹೊರ ಬರುತ್ತಾಳೆ.

     ಅವಳನ್ನು ನೋಡಿದ ಅವನು "ಇಷ್ಟೊತ್ತು ಬೇಕ ನಿಂಗೆ."

    "Sorry ಮಾಮ."

    "ಎನ್ sorry ನಂಗ್ ಎಷ್ಟು ಟೈಮ್ ಆಗಿದೆ ಅಂತ ನಿಂಗ್ ಗೊತ್ತಾ."ಎಂದು ರೇಗುತ್ತಾನೆ.

"ಎಷ್ಟು ಅಂಥ ಬೈತಿಯ ಇವತ್ ಒಂದೇ ದಿನ ತಾನೆ ಬೈಕೊ ಹೋಗು".ಅಂತ ಮನಸಿಲ್ಲ ಅಂದುಕೊಳ್ಳುತ್ತ ಅವನಿಗೆ ತಿಂಡಿ ಬಡಿಸಿದಳು.

ಅಷ್ಟರಲ್ಲಿ ಬಂದ ಪರಿಮಳ"ಹೇ ಸಂಜು ಯಾಕೋ ಬೈತಿಯ ಅವಳನ್ನ ಪಾಪ ಕಣೋ ಅವಳು."

 "ಬಿಡುತ್ತೆ ಬೈಲಿ ಇವತ್ ಒಂದೇ ದಿನ ತಾನೆ".

ಗಲಿಬಿಲಿ ಆದ ಸಂಜು"ಇವತ್ ಒಂದೇ ದಿನನ ಅರ್ಥ ಆಗ್ಲಿಲ್ಲ ನಂಗೆ."

"ನಿಂಗ್ ಎಲ್ಲಿ ಅರ್ಥ ಆಗುತ್ತೆ ನಾಳೆ ಅವ್ಳು hostle ಗೆ ಹೋಗ್ತಾ ಇದಾಳೆ."ಎಂದರು ಪರಿಮಳ

ಸಂಜು"ಓ ಹೌದಾ!!".

ಸಂಜು ಅತ್ತಿಗೆ ಪಾವನಿ ಬಂದು"ಹೇ ಸಂಜು ಬೇಗ ತಿಂಡಿ ತಿನ್ನು ".

  "ಯಾಕ್ ಅತ್ತಿಗೆ ಏನ್ ಆಯ್ತು".

"ಏನು ಇಲ್ಲ ಕಣೋ ಸುಮ್ನೆ ಹೇಳ್ದೆ".

"ಇಲ್ಲ ಬಿಡಿ ನಂಗೊತ್ತು ನಾನು ಇನ್ನೂ ಇಲ್ಲೆ ಇದ್ರೆ ಇನ್ನೆಷ್ಟು ಬೈತೀನಿ ಅಂತ ಹೇಳ್ತಾ ಇದೀರಾ ಅಷ್ಟೇ ".

ಅಂಥ ಹೇಳಿ ತಿಂಡಿ ತಿಂದು ಹೋಗ್ತಾನೆ .

"ಅತ್ತೆ ನಿನ್ನ ಮಗ ಯಾಕೆ ಇಂಗ್ ಆಡ್ತಾನೆ".

"ಹೇ ಏನ್ ಹೇಳ್ತಾ ಇದೀಯ ನೀನು".

"ಇಲ್ಲ ಅತ್ತೆ ಇರದನ್ನೇ ಹೇಳ್ತಾ ಇದೀನಿ ನಿಮ್ಮ ಎಲ್ಲರ ಜೊತೆ ಚೆನ್ನಾಗಿ ಇರ್ತಾನೆ ನನ್ನ ಜೊತೆ ಮಾತ್ರ ಹಿಂಗೇನ ಇವ್ನು. ಇವ್ನು ಹೀಗೆ ಆಡಲಿ ನಾನ್ ಇವ್ನ ಮದುವೆನಾ ಆಗಲ್ಲಾ."

"ಯಾಕೆ ನನ್ ಮಗನಿಗೆ ಏನ್ ಕಮ್ಮಿ ಹೇಳು ಅವನ ನೀನು ಮದ್ವೆ ಆಗಲ್ಲ ಅನ್ನಕ್ಕೆ."

"ಎಲ್ಲಾ ಇದೆ ಅತ್ತೆ ಆದ್ರೆ ನನ್ ಜೊತೆ soft ಆಗಿ ಮಾತಾಡೋದೇ ಇಲ್ಲ ಅವನು."

"ಅಷ್ಟಕ್ಕೆ ಮದ್ವೆ ಆಗಲ್ಲ. ಇದನ್ನು ಅವ್ನ ಮುಂದೆ ಹೇಳು ನೋಡ್ತೀನಿ."

ಜಾನ್ವಿ"ಅಮ್ಮ ಅದನ್ನ ಮೀರಾ ಮಾತ್ರ ಯಾವತ್ತೂ ಹೇಳಲ್ಲ."

"ಸರಿ ಜಾನು ನೀ ಹೇಳಿದ್ದು."

ಮಾತಾಡ್ತಾ ಎಲ್ಲರೂ ತಿಂಡಿ ತಿಂದು ಮುಗಿಸ್ತಾರೆ.

ಮೀರಾ ತನ್ನ ರೂಮಿಗೆ ಬರ್ತಾಳೆ .

ಅಷ್ಟರಲ್ಲಿ ಅವಳ ಮಾಮ ಅವಳಿಗೆ ಫೋನ್ ಮಾಡ್ತಾನೆ.

"ಎನ್ ಸಾಹೇಬ್ರು ಹೋಗಿ ಇನ್ನು ಒಂದು ಗಂಟೆ ಆಗಿಲ್ಲ. ಆಗ್ಲೆ ಕಾಲ್ ಮಾಡಿದಿಯ."

"ಹೇ ಲೂಸ್ ಸುಮ್ನೆ ಟೈಮ್ ಪಾಸ್ ಗೆ ಮಾಡ್ದೆ."

"What!! ಟೈಮ್ ಪಾಸ್ ಹಾಗಿದ್ರೆ ನೀನು ನನ್ನ ಮದ್ವೆ ಆಗೋದು ಕೂಡ ಟೈಮ್ ಪಾಸ್ ಗೆ ನೀ."

"ಹೌದು..😁" .

"ಸರಿ ಆಯಿತು ನಾನು ನಿನ್ನ ಮದ್ವೆ ಆಗಲ್ಲ ಹೋಗು."

"ಏನಂದೇ"?. 

"ಏನು ಇಲ್ಲ".

"ನಂಗೆ ಕೇಳಿಸ್ತು ಕಣೆ."

"ಕೇಳಿಸ್ತಾ ".

"ನೋಡು ನಿನ್ ನನ್ನ ಮದ್ವೆ ಆಗಲ್ಲ ಅಂದ್ರು ನಾನ್ ನಿನ್ನ ಬಿಡಲ್ಲ ನೀನ್ ಯಾವತ್ತಿದ್ರು ನನ್ನವಳು."

"ಡೈಲಾಗ್ ಹೊಡೀತಿಯ ಅಷ್ಟೇ ನಿಂಗೆ ನನ್ ಮೇಲೆ love ಅನ್ನೋದೇ ಇಲ್ಲ."

"ಯಾರೇ ಹೇಳಿದ್ದು ".

"ಯಾರೋ ಯಾಕ್ ಹೇಳಬೇಕೇ ನಿನ್ನ ನೋಡಿದ್ರೆ ಗೊತ್ತಾಗುತ್ತೆ."

"ಓಯ್ ನನ್ ನೋಡಿ ಏನೇನೋ ಅನ್ಕೋಬೇಡ."

"ಅಯ್ಯೋ! ಮಾಮ ನೀನು ಬೇರೆ ರೀತಿ ಅರ್ಥ ಮಾಡ್ಕೋ ಬೇಡಾ".

"Excuse me Sir, they are already come".

"Ok I'm coming ".

"Ok sir".

"ಸರಿ ಕಣೆ ನಾನ್ ನಿಂಗೆ ಆಮೇಲೆ ಕಾಲ್ ಮಾಡ್ತೀನಿ ಮೀಟಿಂಗ್ ಇದೆ ಇವಾಗ."

"ಸರಿ ಆಯಿತು byee."

"Byee".

ಎಂದು ಹೇಳಿ ಕಾಲ್ ಕಟ್ ಮಾಡಿದ.

ಮೀರಾ ರೂಮ್ ನಲ್ಲಿ ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡ್ತಾ ಇರ್ತಾಳೆ ಅಷ್ಟರಲ್ಲಿ ಪಾವನಿ ಬರ್ತಾಳೆ.

"ಮೀರಾ ".

"ಹೇಳು darling."

"ಅವ್ನು ಬೈದ ಅಂತ ನಿಂಗೆ ಬೇಜಾರ್ ಆಗಿಲ್ಲ ತಾನೆ."

"ಅಯ್ಯೋ!ಇಲ್ಲ ಯಾಕ್ ಹೀಗ್ ಕೇಳ್ತಾ ಇದೀಯ."

"ಎನ್ ಇಲ್ಲ ಸುಮ್ನೆ ಕೇಳ್ದೆ."

"Darling ಅವ್ನು ಬೈದ ಆದ್ರೆ ಇವಾಗ ಅವ್ನೇ call ಮಾಡಿದ್ದ."

"ಅವ್ನ character ಅರ್ಥ ಮಾಡ್ಕೊಳಕ್ಕೆ ಆಗಲ್ಲ."

"ಇಲ್ಲ darling ನಂಗೆ ಹಾಗೆ ಅನಿಸಿಲ್ಲ."

"ನೀನು ಅವ್ನ ಹೆಂಡ್ತಿ ಆಗೋಳು ಅಲ್ವಾ ಅನಿಸಿಲ್ಲ ಬಿಡು."

"Darling ".

"ಸರಿ ಆಯ್ತು ಎನ್ ಡ್ರೆಸ್ ಎಲ್ಲ ಪ್ಯಾಕ್ ಮಾಡ್ತಾ ಇದೀಯ."

"ಹೂಂ ಬೆಳಿಗ್ಗೆ ಮಾಡಕ್ಕೆ ಟೈಮ್ ಇರಲ್ಲ ಅದಿಕ್ಕೆ ಇವಾಗ್ಲೇ ಮಾಡ್ತಾ ಇದೀನಿ."

"ಸರಿ ಮಾಡು ನಾನು ಹೊರಡ್ತೀನಿ ".

ಅಂತ ಹೇಳಿ ಪಾವನಿ ಅಲ್ಲಿಂದ ಹೊರಟು ಬರ್ತಾಳೆ .

ಎಲ್ಲರೂ ಮಧ್ಯಾನದ ಊಟ ಮುಗಿಸಿ ಕೂತಿರ್ತಾರೆ.

ಅಷ್ಟರಲ್ಲಿ ಸಂಜು ಬರ್ತಾನೆ.

ಎಲ್ಲರೂ ಮಾತಾಡ್ತಾ ಮಾತಾಡ್ತಾ ಸಾಯಂಕಾಲ ಆಗುತ್ತೇ.

ಎಲ್ಲರೂ ಅಡುಗೆ ಮನೆಗೆ ಹೋಗ್ತಾರೆ.ಆದರೆ ಸಂಜು ಮಾತ್ರ ಮೀರಾ ನಾ ರೂಮ್ ಗೆ ಕರ್ಕೊಂಡು ಹೋಗ್ತಾನೆ.

"ಅಯ್ಯೋ! ಮಾಮ ಯಾಕ್ ನನ್ನ ಹೀಗೆ ಹೇಳ್ಕೊಂಡು ಹೋಗ್ತಾ ಇದೀಯ."

"ಬಾರೆ ಇಲ್ಲಿ ಸುಮ್ನೆ."

"ಬಂದೇ ಅದೇನು ಹೇಳು."

"ನಾಳೇನೇ ಹೋಗಬೇಕಾ ಹಾಸ್ಟಲ್ ಗೆ."

"ಯಾಕೆ ಹೀಗ್ ಕೇಳ್ತಾ ಇದೀಯ."

"ಹೇಳೇ ".

"ಹೂಂ ಯಾಕೆ ".

"ನಂಗೆ ನಿನ್ನ ಬಿಟ್ಟು ಇರಕ್ಕೆ ಆಗೋಲ್ಲ ಅದಿಕ್ಕೆ ಕೇಳ್ದೆ."

"ನಿಜವಾಗ್ಲೂ ನೀನಾ ಈ ಮಾತ್ ಹೇಳ್ತಾ ಇರೋದು!."

"ಹೂಂ ಕಣೆ".

"ಹೂಂ ಇನ್ನೂ 6 month ಅಷ್ಟೇ ಆಮೇಲೆ ಕಾಲೇಜ್ ಮುಗಿಯುತ್ತಿಲ್ಲ ಬಿಡು."

"ಇನ್ನು 6 month up and down ಮಾಡು ಏನು ಆಗಲ್ಲ."

"ಕಾಲೇಜ್ ಇಲ್ಲಿಂದ ದೂರ ಮಾಮ."

"ಸರಿ ಆಯ್ತು ಮತ್ತೆ ಯಾವಾಗ ಬರ್ತೀಯ."

"ಗೊತ್ತಿಲ್ಲ ಈ next month end ಅಲ್ಲಿ ಬರ್ತೀನಿ ಆಯ್ತಾ. ಬೇಜಾರ್ ಮಾಡ್ಕೋ ಬೇಡಾ."

"ನಿಂಗೆ ಅಲ್ಲಿ boys ಯಾರು Friends ಇಲ್ಲ ತಾನೆ."

"ಯಾಕೆ ನನ್ ಮೇಲೆ ಅನುಮಾನ ನಾ ನಿಂಗೆ."

"ಕೇಳ್ದೆ".

"ಇಲ್ಲ ಈ ಮೀರಾ ಯಾವತಿದ್ರು ನಿನ್ನವಳೇ."

"ಸರಿ ಬಾ ಕೆಳಗಡೆ ಹೋಗನ ".

"ಹ್ಮ್ಮ್ ".

ಇಬ್ಬರು ಕೆಳಗೆ ಬರ್ತಾರೆ.

ಎಲ್ಲರೂ ಊಟ ಮುಗಿಸಿ ಮಲಗಲು ಹೋಗುತ್ತಾರೆ.

ಮುಂದುವರೆಯುವುದು.


*********************

ನಾನು ಯೋಚಿಸುತ್ತೇನೆ ಕಥೆ ನಿಮಗೆ ಇಷ್ಟ ಆಗುತ್ತೆ ಅಂತ.