ಅಭಿ ಕಾರ್ ನಾ ಪಾರ್ಕ್ ಮಾಡಿ ಫ್ರೆಂಡ್ ಜೊತೆಗೆ ಮೊಬೈಲ್ ಅಲ್ಲಿ ಮಾತಾಡಿಕೊಂಡು, ಸ್ವಲ್ಪ ಸಮಯದ ನಂತರ ಮನೆ ಒಳಗೆ ಬರ್ತಾ ಲಗೇಜ್ ತಗೊಂಡು ಒಳಗೆ ಬರ್ತಾನೇ. ನಯನಾ ಅಭಿ ಲಗೇಜ್ ಜೊತೆಗೆ ಬರೋದನ್ನ ನೋಡಿ. ಎದ್ದು ಲಗೇಜ್ ತಗೋಳೋಕೆ ಹೋಗ್ತಾಳೆ. ದೇವಮ್ಮ,,, ನಯನಾ ಕೈ ಇಡಿದು. ನೀನು ಕುತ್ಕೋ ಮಗಳೇ ಅವನು ತಗೊಂಡು ಹೋಗಿ ಇಡ್ತಾನೆ. ಅಭಿ ಏನು ಮಾತನಾಡದೆ ಲಗೇಜ್ ನಾ ತಗೊಂಡು ರೂಮ್ ಒಳಗೆ ಇಟ್ಟು ಹಾಲ್ ಅಲ್ಲಿ ಕೂತ್ಕೋತಾನೆ. ದೇವಮ್ಮ,,, ಅಭಿ ನಾ ನೋಡ್ತಾ ಏನೋ ಮದುವೆ ಮಾಡ್ಕೊಂಡು ಇಷ್ಟು ವರ್ಷ ಆದಮೇಲೆ ಮನೆಗೆ ಕರ್ಕೊಂಡು ಬರೋಕೆ ನಿನಗೆ ಟೈಮ್ ಸಿಗ್ತಾ.ಅಭಿ,,, ಏನ್ ಮಾಡೋದು ದೇವಮ್ಮ, ನಾನು ಸ್ವಲ್ಪ ನೆಮ್ಮದಿಯಾಗಿ ಇರಬೇಕು ಅಲ್ವಾ. ಮದುವೆ ಮಾಡ್ಕೊಂಡು ಮಾರನೇ ದಿನ ನೇ ಇಲ್ಲಿಗೆ ಕರ್ಕೊಂಡು ಬಂದಿದ್ರೆ. ಅಮ್ಮ ಮಗಳು, ನನ್ನ ಹೆಂಡತಿಗೆ ನನ್ನ ಬಗ್ಗೆ ಪಿನ್ ಟು ಪಿನ್ ಹೇಳ್ತಾ ಇದ್ರಿ. ನೀನಾದ್ರೂ ಪರ್ವಾಗಿಲ್ಲ ಮಗ ಅನ್ನೋ ಕನಿಕರ