ಅಭಿ ಕಾರ್ ನಾ ಪಾರ್ಕ್ ಮಾಡಿ ಫ್ರೆಂಡ್ ಜೊತೆಗೆ ಮೊಬೈಲ್ ಅಲ್ಲಿ ಮಾತಾಡಿಕೊಂಡು, ಸ್ವಲ್ಪ ಸಮಯದ ನಂತರ ಮನೆ ಒಳಗೆ ಬರ್ತಾ ಲಗೇಜ್ ತಗೊಂಡು ಒಳಗೆ ಬರ್ತಾನೇ. ನಯನಾ ಅಭಿ ಲಗೇಜ್ ಜೊತೆಗೆ ಬರೋದನ್ನ ನೋಡಿ. ಎದ್ದು ಲಗೇಜ್ ತಗೋಳೋಕೆ ಹೋಗ್ತಾಳೆ.
ದೇವಮ್ಮ,,, ನಯನಾ ಕೈ ಇಡಿದು. ನೀನು ಕುತ್ಕೋ ಮಗಳೇ ಅವನು ತಗೊಂಡು ಹೋಗಿ ಇಡ್ತಾನೆ.
ಅಭಿ ಏನು ಮಾತನಾಡದೆ ಲಗೇಜ್ ನಾ ತಗೊಂಡು ರೂಮ್ ಒಳಗೆ ಇಟ್ಟು ಹಾಲ್ ಅಲ್ಲಿ ಕೂತ್ಕೋತಾನೆ.
ದೇವಮ್ಮ,,, ಅಭಿ ನಾ ನೋಡ್ತಾ ಏನೋ ಮದುವೆ ಮಾಡ್ಕೊಂಡು ಇಷ್ಟು ವರ್ಷ ಆದಮೇಲೆ ಮನೆಗೆ ಕರ್ಕೊಂಡು ಬರೋಕೆ ನಿನಗೆ ಟೈಮ್ ಸಿಗ್ತಾ.
ಅಭಿ,,, ಏನ್ ಮಾಡೋದು ದೇವಮ್ಮ, ನಾನು ಸ್ವಲ್ಪ ನೆಮ್ಮದಿಯಾಗಿ ಇರಬೇಕು ಅಲ್ವಾ. ಮದುವೆ ಮಾಡ್ಕೊಂಡು ಮಾರನೇ ದಿನ ನೇ ಇಲ್ಲಿಗೆ ಕರ್ಕೊಂಡು ಬಂದಿದ್ರೆ. ಅಮ್ಮ ಮಗಳು, ನನ್ನ ಹೆಂಡತಿಗೆ ನನ್ನ ಬಗ್ಗೆ ಪಿನ್ ಟು ಪಿನ್ ಹೇಳ್ತಾ ಇದ್ರಿ. ನೀನಾದ್ರೂ ಪರ್ವಾಗಿಲ್ಲ ಮಗ ಅನ್ನೋ ಕನಿಕರ ಆದ್ರು ಸ್ವಲ್ಪ ತೋರಿಸ್ತೀಯ. ಅದ್ರೆ ನಿನ್ನ ಮಗಳು ಇದ್ದಾಳೆ ಅಲ್ವಾ. ನನ್ನ ಹೆಂಡತಿ ನೇ ನನ್ನ ಮೇಲೆ ಎತ್ತಿ ಕಟ್ಟಿ ನನ್ನ ಮೇಲೆ ಯುದ್ಧಕ್ಕೆ ಕಳಿಸಿ. ಸಂತೋಷ ಪಡ್ತಾ ಇದ್ಲು. ಅದಕ್ಕೆ ನಾನು ಸ್ವಲ್ಪ ದಿನ ಆದ್ರು ನೆಮ್ಮದಿಯಾಗಿ ಇರೋಣ ಅಂತ ಹೇಳೋಕೆ ಹೋಗಿಲ್ಲ.
ದೇವಮ್ಮ,,, ಇದೆ ಮಾತನ್ನ ಅವಳು ಬಂದಮೇಲೆ ಅವಳ ಮುಂದೆ ಹೇಳು. ನೋಡೋಣ.
ಅಭಿ,,, ಏನು ಅ ರಾಕ್ಷಸಿ ಮುಂದೆ ನಾ, ಯಾಕೆ ನಾನ್ ಚೆನ್ನಾಗಿ ಇರೋದು ನಿನಗೆ ಇಷ್ಟ ಇಲ್ವಾ?
ಅಭಿ ಅವರ ಅಕ್ಕನಿಗೆ ಇಷ್ಟು ಭಯ ಬೀಳೋದನ್ನ ನೋಡಿ ನಯನಾ ಗೆ ನಗು ಬರುತ್ತೆ.
ದೇವಮ್ಮ,,, ನೋಡಮ್ಮ ಇವನು ಅವಳು ಇಲ್ಲಾ ಅಂದ್ರೆ ಅವಳ ಬಗ್ಗೆ ಹೀಗೆ ಹೇಳ್ತಾನೆ. ಅವಳು ಇದ್ರೆ ಬಾಲ ಸುಟ್ಟ ಬೆಕ್ಕಿನ ಹಾಗೇ ಸೈಲೆಂಟ್ ಆಗಿ ಇರ್ತಾನೆ. ಅಂತ ಹೇಳಿ ಮತ್ತೆ ಅಭಿ ಕಡೆಗೆ ನೋಡಿ ಎದ್ದು ಹೋಗಿ ಕಾಫಿ ಮಾಡು ಹೋಗು.
ನಯನಾ,,, ಅಮ್ಮ ನಾನ್ ಮಾಡ್ತೀನಿ ಅಂತ ಎದ್ದು ಹೋಗೋಕೆ ಹೋಗ್ತಾಳೆ.
ದೇವಮ್ಮ,,, ನೀನು ಆರಾಮಾಗಿ ಕುತ್ಕೋ ಮಗಳೇ ಅವನಿಗೆ ಇದೇನು ಹೊಸದಲ್ಲ. ಇವರ ಅಕ್ಕನಿಗೆ ಅಡುಗೆ ಮಾಡೋದನ್ನ ಸರಿಯಾಗಿ ಕಲಿಸಿದ್ದೀನೊ ಇಲ್ವೋ. ಇವನಿಗೆ ಮಾತ್ರ ಅಡುಗೆ ಮಾಡೋದನ್ನ ಚೆನ್ನಾಗಿ ಕಲಿಸಿದ್ದೀನಿ. ಚೆನ್ನಾಗಿ ಅಡುಗೆ ಮಾಡ್ತಾನೆ. ಅಂತ ಹೇಳ್ತಾ ಮತ್ತೆ ಅಭಿ ಕಡೆಗೆ ನೋಡಿ ಇನ್ನು ಕೂತಿದ್ದೀಯ ಎದ್ದು ಹೋಗೋ.
ಅಭಿ,,, ಇಷ್ಟು ದಿನ ಆದಮೇಲೆ ಮನೆಗೆ ಬಂದಿದ್ದೀನಿ ಸ್ವಲ್ಪ ಕೂಡ ಕನಿಕರ ಇಲ್ದೆ ಮಾತಾಡ್ತಿರ ಅಮ್ಮ ಮಗಳು. ನಡೆಸ್ರಿ ನಿಮ್ದೇ ರಾಜ್ಯಭಾರ ನಡೆಯೋವಾಗ ನಾವ್ ಏನ್ ಮಾಡೋಕೆ ಆಗುತ್ತೆ. ಅಂತ ಹೇಳ್ತಾ ಅಡುಗೆ ಮನೆ ಒಳಗೆ ಹೋಗ್ತಾನೆ.
ದೇವಮ್ಮ,,, ನಯನಾ ಕಡೆಗೆ ನೋಡ್ತಾ, ನೀನೇನು ಬೇಜಾರ್ ಮಾಡ್ಕೊಳ್ಳೋದು ಇಲ್ಲಾ ಅಲ್ವಾ ಏನು ನಿನ್ನ ಗಂಡನಿಗೆ ಹೀಗೆ ಹೇಳ್ತಾ ಇದ್ದಿವಿ ಅಂತ.
ನಯನಾ,,, ಅಮ್ಮ ಇಲ್ಲಾ ಅಮ್ಮ, ಅಭಿ ನಾ ಈ ರೀತಿ ನಿಮ್ ಹತ್ತಿರ ಇರೋದು ನೋಡಿ ತುಂಬಾ ಖುಷಿ ಆಗ್ತಾ ಇದೆ.
ದೇವಮ್ಮ,,,, ಇವರಿಬ್ಬರೇ ನನ್ನ ಪ್ರಪಂಚ ಈಗ. ನಾನು ಹಳ್ಳಿ ಯಿಂದ ಬಂದವಳು. ಮದುವೆ ಆಗಿ ಇಬ್ಬರು ಮಕ್ಕಳು ಹಾಗೋ ತನಕ ಅಭಿ ಅವರ ಅಪ್ಪ ಚೆನ್ನಾಗಿ ಇದ್ದಾ. ಅವರಿಗೆ ಏನ್ ಆಯಿತೋ ಏನೋ ದಿನ ಕುಡಿಯೋದನ್ನ ಕಲಿತು ಬಿಟ್ರು. ನಮಗೆ ಗೊತ್ತಿಲ್ಲದೇ ಇದ್ದಾ ಅಸ್ತಿನ ಎಲ್ಲಾ ಮಾರಿ ಕುಡಿದು ಹಾಳು ಮಾಡಿದ. ನನಗೆ ಗೊತ್ತಾಗೋ ಅಷ್ಟೋತ್ತಿಗೆ ಎಲ್ಲಾ ಕೈ ಮೀರಿ ಹೋಗಿತ್ತು. ಸ್ವಂತ ಅಣ್ಣ ನೇ ತಮ್ಮನ್ನ ಯಾಮಾರಿಸಿ ಕುಡಿಯೋದನ್ನ ಕಲಿಸಿ ಅಸ್ತಿ ನಾ ಎಲ್ಲಾ ಬರ್ಕೊಂಡ ಅಂತ. ಹೋಗಿ ಕೇಳಿದಕ್ಕೆ ನಮ್ ಮೇಲೇನೆ ಗಲಾಟೆಗೆ ಬಂದ್ರು. ಈ ಅಸ್ತಿ ಗಲಾಟೆ ಅಲ್ಲಿ ನನ್ನ ಮಕ್ಕಳಿಗೆ ಎಲ್ಲಿ ಏನಾದ್ರೂ ತೊಂದ್ರೆ ಆಗುತ್ತೆ ಅಂತ ನಾನು ಸುಮ್ಮನೆ ಆಗಿ ಬಿಟ್ಟೆ. ಕೂಲಿ ಕೆಲಸ ಮಾಡ್ಕೊಂಡು ನಾಲಕ್ಕು ಜನ ಮಕ್ಕಳ ಜೊತೆಗೆ ಬದುಕೋದನ್ನ ಕಲಿತೆ. ಅ ದೇವರಿಗೆ ಅದು ಇಷ್ಟ ಆಗಿಲ್ಲ ಅಂತ ಕಾಣುತ್ತೆ. ಅಭಿ ಚಿಕ್ ಮಗು ಇದ್ದಾಗ ಜ್ವರ ಬಂತು ಅಂತ ಹಾಸ್ಪಿಟಲ್ ಗೆ ಕರ್ಕೊಂಡು ಹೋದೆ. ಅಷ್ಟೇ ಡಾಕ್ಟರ್ ನೋಡಿ ಅವನಿಗೆ ಅದೇನೋ ಮೆದುಳು ಜ್ವರ ಅಂತಾರೆ ಅಲ್ವಾ ಅದು ಬಂದಿದೆ ಟ್ರೀಟ್ಮೆಂಟ್ ಕೊಡಬೇಕು ಇಲ್ಲಾ ಅಂದ್ರೆ ಪ್ರಾಣಕ್ಕೆ ಅಪಾಯ ಅಂತ ಹೇಳಿದ್ರು. ದಿನ ಕೂಲಿ ಕೆಲಸಕ್ಕೆ ಹೋಗಿ ಜೀವನ ಮಾಡ್ತಾ ಇದ್ದವಳು, ಸಾಲ ಸೋಲ ಮಾಡಿ ಬಡ್ಡಿ ಗೆ ದುಡ್ಡು ತಂದು ಹಾಸ್ಪಿಟಲ್ ಗೆ ಕಟ್ಟಿ ಅವನನ್ನ ಬದುಕಿಸಿ ಕೊಂಡೆ. ನನ್ನ ಗಂಡನಿಗೆ ಮಕ್ಕಳು ಹೆಂಡತಿ ಅನ್ನೋ ಚಿಂತೆ ನೇ ಇರಲಿಲ್ಲ. ನನ್ನ ಮಗಳು ನನ್ನ ಕಷ್ಟ ನೋಡಿ ಸ್ಕೂಲ್ ಹೋಗೋದನ್ನ ಬಿಟ್ಟು ನನ್ನ ಜೊತೆ ಕೂಲಿ ಕೆಲಸಕ್ಕೆ ಬರೋಕೆ ಶುರು ಮಾಡಿದ್ಲು. ಎಷ್ಟು ದುಡಿದ್ರು ಮನೆ ಗೆ ಸಾಲ ತಗೊಂಡು ಇರೋ ದುಡ್ಡಿಗೆ ಬಡ್ಡಿ ಕಟ್ಟೋಕೆ ಸರಿ ಹೋಗ್ತಾ ಇತ್ತು. ಅಭಿ ಹಾಗೋ ಇಗೋ ಡಿಗ್ರಿ ಮುಗಿಸಿ ಕೊನೆಗೆ ದುಡೀತೀನಿ ಅಂತ ದುಡಿಯೋಕೆ ಶುರು ಮಾಡಿದ.
ದೊಡ್ಡ ಮಗ ಮದುವೆ ಮಾಡ್ಕೊಂಡು ಅವನ ಜೀವನ ಅವನ ಸಂಸಾರ ನೋಡ್ಕೊಂಡ. ಇವರಿಬ್ಬರೇ ದುಡಿದು ಮನೆ ಸಂಸಾರ ನೋಡ್ಕೊಳ್ತಾ. ಈ ಮನೆ ನಾ ಕಟ್ಟಿದ್ರು. ತಂಗಿ ಮದುವೆ ಮಾಡಿದ್ರು. ಇವರ ಅಕ್ಕ ನನಗೆ ಮದುವೆ ನೇ ಬೇಡ ಅಂತ ನಿರ್ಧಾರ ಮಾಡಿ ಬಿಟ್ಲು. ಅಭಿ ಗೆ ಮದುವೆ ಮಾಡ್ಕೋ ಅಂತ ಹೇಳ್ತಾ ಇದ್ದೆ. ಅವನು ನೋಡೋಣ ಇರು ಇರು ಅಂತ ಹೇಳ್ತಾನೆ ಇದ್ದಾ. ಸಾಲ ಮಾಡಿ ತಂಗಿ ಮದುವೆ ಮಾಡಿದ್ರೋ ಇಲ್ವೋ. ನಾನು ಹಾಸ್ಪಿಟಲ್ ಬೆಡ್ ಮೇಲೆ ಮಲಗಿದೆ. ಆಲ್ರೆಡಿ ಮದುವೆಗೆ ಸಾಲ. ಮಾಡಿದ್ದೀವಿ. ಡಾಕ್ಟರ್ ನೋಡಿದ್ರೆ ಆಪರೇಷನ್ ಮಾಡಬೇಕು ಇಲ್ಲಾ ನಾನು ಉಳಿಯೋದು ತುಂಬಾ ಕಷ್ಟ ಅಂತ ಹೇಳಿದ್ರು. ಆಗ ಅ ದೇವರ ಹತ್ತಿರ ನಾನು ಬೇಡ್ಕೊಂಡಿದ್ದು ಒಂದೇ ಬೇಗೆ ಈ ಪ್ರಾಣನ ತಗೋಬಿಡು, ನನ್ನ ಮಕ್ಕಳಿಗೆ ನನ್ನಿಂದ ಕಷ್ಟ ಬೇಡ ಅಂತ. ನಂದಿನಿ ಅದ್ರೆ ಈ ಮನೆ ನಾ ಮಾರಿ ಬಿಡೋಣ ಅಂತ ನಿರ್ಧಾರ ಮಾಡಿದ್ಲು. ಅದ್ರೆ ಅಭಿ, ನಾನ್ ಇನ್ನು ಸತ್ತಿಲ್ಲ ಆಪರೇಷನ್ ಗೆ ದುಡ್ಡು ಅರೇಂಜ್ ಮಾಡ್ತೀನಿ ಅಂತ ಹೇಳಿ. ಅವ್ನಿಗೆ ಗೊತ್ತಿರೋ ಫ್ರೆಂಡ್ಸ್ ಹತ್ತಿರ, ಪರಿಚಯ ಇರೋವರ ಹತ್ತಿರ ಎಲ್ಲರ ಹತ್ತಿರ ಕೇಳಿ ಕೇಳಿ ಕೊನೆಗೆ ಆಪರೇಷನ್ ಗೆ ದುಡ್ಡು ಅರೇಂಜ್ ಮಾಡಿ ನನ್ನ ಪ್ರಾಣ ಉಳಿಸಿದ.
ನಾನು ಮನೆಗೆ ಬಂದಮೇಲೆ, ಅವರ ಅಕ್ಕ ನನ್ನ ನೋಡ್ಕೊಳ್ಳೋಕೆ ಅಂತಾನೆ ಇದ್ದು ಬಿಟ್ಟಳು. ಒಬ್ಬನೇ ದುಡಿಯೋಕೆ ಶುರು ಮಾಡಿದ. ಹತ್ತು ಅನ್ನೆರಡು ಲಕ್ಷ ಸಾಲ ನಾ ಒಬ್ಬನೇ ಹಗಲು ರಾತ್ರಿ ದುಡಿದು ಸಂಪಾದನೆ ಮಾಡಿ ತೀರಿಸಿದ. ನಾನು ಅವನನ್ನ ಕೇಳಿದೆ ಯಾಕೋ ನಿಮ್ ಅಕ್ಕ ಹೇಳಿದ್ಲು ಅಲ್ವಾ ಈ ಮನೆ ನಾ ಮಾರಿ ಬಿಡೋಣ ಅಂತ. ಯಾಕ್ ಮಾರಿಲ್ಲ ಅಂತ ಕೇಳಿದೆ. ಅವನು ಹೇಳಿದ್ದು ಈಗ್ಲೂ ನನ್ನ ಮನಸಲ್ಲಿ ಹಾಗೇ ಇದೆ. ಅಮ್ಮ ನಾನೇನೋ ಗಂಡು ಹುಡುಗ ಮನೆ ಇಲ್ಲಾ ಅಂದ್ರು ಫುಟ್ಬಾತ್ ಮೇಲೆ ಮಲಗಿದ್ರು ಕೇಳೋವ್ರು ಯಾರು ಇರಲ್ಲ. ಅವತ್ತು ನನ್ನ ಪ್ರಾಣ ಉಳಿಸೋಕ್ಕೋಸ್ಕರ ಮಾಡಿದ ಸಾಲಕ್ಕೆ, ಈ ಮನೆ ಕಷ್ಟಕ್ಕೆ ಅವಳ ಜೀವನ ಕೂಡ ಯೋಚ್ನೆ ಮಾಡದೇ ದುಡಿಯೋಕೆ ಹೋದ್ಲು. ನನ್ನ ಮಗನ ತರ ಸಾಕಿದ್ಲು. ಈಗ ಅವಳಿಗೆ ಅಂತ ಇರೋದು ಈ ಮನೆ ಒಂದೇ. ಅದಕ್ಕೆ ಮಾರೋಕೆ ಹೋಗಲಿಲ್ಲ ಅಂತ ಹೇಳಿದ.
ಅಭಿ,,,, ಅಡುಗೆ ಮನೆ ಯಿಂದ ಕಾಫಿ ತಗೋ ಬರ್ತಾ. ಸಾಕ್ ನಿಲ್ಲಿಸು ದೇವಮ್ಮ, ಮನುಷ್ಯ ಅಂದ ಮೇಲೆ ಕಷ್ಟ ಬರುತ್ತೆ ಹೋಗುತ್ತೆ, ಮದುವೆ ಆಗಿ ಮೊದಲ ಸರಿ ಮನೆಗೆ ಬಂದಿರೋ ಸೊಸೆ ನಾ ಚೆನ್ನಾಗಿ ನೋಡ್ಕೊಳ್ಳೋದು ಬಿಟ್ಟು, ನಡೆದು ಹೋಗಿರೋ ವಿಷಯ ನಾ ಎಲ್ಲಾ ಹೇಳ್ತಾ, ಅವರಿಗೂ ಬೇಜಾರ್ ಮಾಡ್ತಾ, ನೀನು ಬೇಜಾರ್ ಮಾಡ್ಕೊಂಡು ಇದ್ದಿಯಾ ಅಲ್ವಾ. ಈ ಪುರಾಣದ ಕಥೆ ನಾ ನಿಲ್ಲಿಸಿ ತಗೋ ಕಾಫಿ ಕುಡಿ ಅಂತ ಹೇಳಿ ಒಂದು ಲೋಟ ಕಾಫಿ ಕೊಡ್ತಾನೆ.
ದೇವಮ್ಮ,,, ಬಿಡೋ ನನ್ನ ಸೊಸೆ ಗೆ ನನ್ನ ಕಷ್ಟ ಹೇಳ್ಕೊಂಡೆ ಅದು ಕೂಡ ತಪ್ಪಾ?
ಅಭಿ,,,, ತಪ್ಪು ಸರಿ ಆಮೇಲೆ ಮಾತಾಡೋಣ ಮೊದಲು ಕಾಫಿ ಕುಡಿ ಅಂತ ಹೇಳಿ ಇನ್ನೊಂದು ಲೋಟ ಕಾಫಿ ನಯನಾ ಗೆ ಕೊಡ್ತಾನೆ.
ನಯನಾ ಗೆ ಇಷ್ಟೋತ್ತು ಹೇಳಿದ್ದನ್ನ ಕೇಳಿ, ಮನಸ್ಸಿಗೆ ಬೇಜಾರು ಕಷ್ಟ ಅನ್ನಿಸಿದ್ರೂ, ಅಭಿ 1st ಟೈಮ್ ಅವನು ಕೈ ಯಾರೇ ಮಾಡಿರೋ ಕಾಫಿ ನಾ ಕೊಡ್ತಾ ಇರೋದನ್ನ ನೋಡಿ ತುಂಬಾ ಸಂತೋಷ ಆಗುತ್ತೆ, ಕಾಫಿ ಲೋಟ ತಗೊಂಡು ಅಭಿ ಮುಖ ನೋಡ್ತಾ ಥ್ಯಾಂಕ್ಸ್ ರೀ ಅಂತ ಹೇಳ್ತಾಳೆ.. ಅಭಿ ಒಂದು ಸ್ಮೈಲ್ ಮಾಡಿ ಹೋಗಿ ದಿವಾನ ಮೇಲೆ ಕುತ್ಕೊಂಡು ಮೊಬೈಲ್ ನೋಡ್ತಾ ಇದ್ದು ಬಿಡ್ತಾನೆ.
ನಂದಿನಿ ಮನೆ ಒಳಗೆ ಬರ್ತಾ,,, ಲೋ ಏನೋ ಬೀದಿಲಿ ಇರೋ ಹೆಂಗಸರೆಲ್ಲ ನಿನ್ನ ಬಗ್ಗೆ ನೇ ಮಾತಾಡ್ತಾ ಇದ್ದಾರೆ.
ದೇವಮ್ಮ,,, ಏನಂತೆ ಅವರ ನೋವು.
ನಂದಿನಿ,,, ಅದೇ ಅಮ್ಮ ಮದುವೆ ಮಾಡ್ಕೊಂಡು ಹೆಂಡತಿ ಮಗಳ ಜೊತೆಗೆ ಬಂದ ಅಲ್ವಾ ಅದೇ ವಿಷಯ ಒಬ್ಬರಿಗೊಬ್ಬರು ಮಾತಾಡ್ಕೊಳ್ತಾ ಇದ್ದಾರೆ. ನನ್ನ ಕೇಳಿದ್ರು, ಯಾವಾಗ ಮದುವೆ ಮಾಡ್ಕೊಂಡ, ನಮಗೆ ಹೇಳೇ ಇಲ್ಲಾ, ಹೆಂಡತಿ ಹೆಸರೇನು? ಯಾವ ಊರು? ಮಗಳ ಹೆಸರು ಏನು? ಅದು ಇದು ಅಂತ ಕೇಳೋಕೆ ಶುರು ಮಾಡಿದ್ರು. ನಾನು ಅವನೇ ಬರ್ತಾನೇ ನೀವೇ ಕೇಳಿ ತಿಳ್ಕೊಳ್ಳಿ ಫುಲ್ ಡೀಟೇಲ್ ಆಗಿ ಹೇಳ್ತಾನೆ ಅಂತ ಹೇಳ್ದೆ, ಅಷ್ಟೇ ಏನು ಬೇಡ ಅಂತ ಸುಮ್ನೆ ಆಗಿ ಬಿಟ್ರು.
ದೇವಮ್ಮ,, ಅವರದ್ದು ಇದ್ದಿದ್ದೇ, ಮಗು ನಾ ಅವರ ಅಪ್ಪ ಹತ್ತಿರ ಕೊಟ್ಟು ಹೋಗಿ ಕಾಫಿ ಕುಡಿ ಹೋಗು.
ನಂದಿನಿ,,, ಕಾಫಿ ಕುಡಿಯೋಕೆ ಮಗು ನಾ ಏನಕ್ಕೆ ಅವನಿಗೆ ಕೊಡಬೇಕು. ನನ್ನ ಪುಟ್ಟಿ ನನ್ನ ಜೊತೆ ನೇ ಇರ್ತಾಳೆ, ಅಲ್ವಾ ಪುಟ್ಟಿ ಅಂತ ಅನಾ ನಾ ಕೇಳ್ತಾಳೆ.
ಅನಾ,,, ಹ್ಮ್ ಹೌದು ಅತ್ತೆ. ಇಲ್ಲಿ ಇರೋವರೆಗೂ ನಿನ್ನ ಜೊತೆ ನೇ ಇರ್ತೀನಿ. ಅಂತ ಹೇಳ್ತಾ ಐಸ್ಕ್ರೀಂ ತಿಂತಾಳೆ.
ದೇವಮ್ಮ,,,, ಅನಾ ಕಡೆಗೆ ನೋಡ್ತಾ ಏನ್ ಪುಟ್ಟಿ, ಬಂದು 2 ಗಂಟೆ ಆಗಿಲ್ಲ, ಹಾಗಲೇ ಅತ್ತೆ ಸೊಸೆ ಒಂದಾಗಿಬಿಟ್ರಾ,?
ಅನಾ,,, ಹ್ಮ್ ಹೌದು ಅಜ್ಜಿ, ಅತ್ತೆ ನನಗೆ ತುಂಬಾ ಇಷ್ಟ ಆದ್ರು.
ದೇವಮ್ಮ,,, ನಗ್ತಾ ಸಂತೋಷ ಪುಟ್ಟಿ. ಅತ್ತೆ ಸೊಸೆ ಯಾವಾಗ್ಲೂ ಹೀಗೆ ಇರಿ.
ಅಭಿ,,,, ದೇವಮ್ಮ ಅಷ್ಟು ಸಂತೋಷ ಪಡೋಕೆ ಹೋಗಬೇಡ, ನಿನ್ನ ಮಗಳು ಸಾಮಾನ್ಯದವಳು ಅಂತ ಅಂದುಕೊಂಡ. ನನ್ನ ಲೈಫ್ ಗೆ ಮಿನಿ ರಾಕ್ಷಸಿ ನಾ ರೆಡಿ ಮಾಡೋ ಪ್ಲಾನ್ ಮಾಡಿದ್ದಾಳೆ.
ನಂದಿನಿ,,, ಹೌದು ಕಣೋ ನನ್ನ ಪ್ಲಾನ್ ಅದೇ. ಏನ್ ಇವಾಗ.
ಅಭಿ,,,, ಏನಿಲ್ಲಾ ಜಸ್ಟ್ ದೇವಮ್ಮನಿಗೆ ಹೇಳ್ದೆ ಅಷ್ಟೇ.
ನಂದಿನಿ,,, ಮಗನೆ ಈ ಭಯ ಇರಬೇಕು ಅಂತ ಹೇಳ್ತಾ ಅಡುಗೆ ಮನೆಗೆ ಹೋಗಿ ಕಾಫಿ ತಗೊಂಡು ಹಾಲ್ ಗೆ ಬರ್ತಾ. ನಯನಾ ಪಕ್ಕ ಕೂತು. ನೀನು ಮಟನ್ ಬಿರಿಯಾನಿ ತಿಂತೀಯಾ ಅಲ್ವಾ.
ನಯನಾ,,, ಹ್ಮ್ ತಿಂತೀನಿ, ಅತ್ತಿಗೆ.
ನಂದಿನಿ,,, ಅತ್ತಿಗೆ ಅಂತ ಕರಿಬೇಡ. ನಂದಿನಿ ಇಲ್ಲಾ ನಂದು ಅಂತ ಕರಿ ಸಾಕು.
ನಯನಾ,,, ಹ್ಮ್ ಸರಿ ನಂದು.
ನಂದಿನಿ.. ಅಭಿ ಕಡೆಗೆ ನೋಡ್ತಾ,, ಲೋ ಹೇಳಿದ್ದು ಕೇಳಿಸಿಲ್ವಾ. ಹೋಗಿ ಮಟನ್ ತಗೋಬಂದು ಮಟನ್ ಬಿರಿಯಾನಿ ಮಾಡು. ಹೋಗು.
ಅಭಿ,,, ಅಮ್ಮ ನಾ ಕಡೆಗೆ ನೋಡ್ತಾ ದೇವಮ್ಮ, ಮಗಳಿಗೆ ಅಡುಗೆ ಮಾಡೋದನ್ನ ಕಲಿಸದೇ ನನಗೆ ಕಲಿಸಿದೆ, ಇವಾಗ ನೋಡು ನಿನ್ನ ಮಗಳು, ಹೇಗೆ ರೂಲ್ಸ್ ಮಾಡ್ತಾ ಇದ್ದಾಳೆ ಅಂತ. ಟೈಮ್ ಬರ್ಲಿ ನೋಡ್ಕೋತೀನಿ ಇಬ್ಬರನ್ನು.
ನಂದಿನಿ,,, ಆಯ್ತು ನೋಡ್ಕೊಳ್ಳಿವಂತೆ ಈಗ ಹೋಗಿ ಹೇಳಿದ ಕೆಲಸ ಮಾಡು ಹೋಗು.
ಅಭಿ,,, ಹೋಗ್ತೀನಿ ಬಿಡು ಅಂತ ಹೇಳಿ ಹೊರಗೆ ಹೋಗ್ತಾನೆ.
ಅಭಿ ಹೋದಮೇಲೆ ದೇವಮ್ಮ ಮಗಳನ್ನ ನೋಡಿ ಲೇ ಯಾಕೆ ಅವನಿಗೆ ಇಷ್ಟು ಕಾಟ ಕೊಡ್ತಾ ಇದ್ದಿಯಾ, ಪಾಪ ಕಣೆ.
ನಂದಿನಿ,,, ಏನ್ ಪಾಪ, ಮನೆಗೆ ಬಂದು ಎಷ್ಟು ದಿನ ಆಯ್ತು. ನಾವು ಫೋನ್ ಮಾಡಿ ಮಾತಾಡಿದ್ರೆ ಮಾತಾಡ್ತಾನೆ, ಇಲ್ಲಾ ಅಂದ್ರೆ ನಾವು ಇರೋದೇ ನೆನಪು ಇರಲ್ಲ. ಅದಕ್ಕೆ. ಆದ್ರು ನೀನು ಏನಕ್ಕೆ ಅಕ್ಕ ತಮ್ಮ ನಾ ಮಧ್ಯ ಬರ್ತೀಯ. ಸುಮ್ನೆ ಇರು. ಅಂತ ಹೇಳಿ ನಯನಾ ಕಡೆಗೆ ನೋಡ್ತಾ. ನಿನ್ನ ಗಂಡನಿಗೆ ಈ ರೀತಿ ಕಾಟ ಕೊಡೋದು ನೋಡಿ ನಿನಗೆ ನನ್ನ ಮೇಲೆ ಕೋಪ ಬರ್ತಾ ಇದೆಯಾ?
ನಯನಾ,,,, ಇಲ್ಲಾ ನಂದು, ನೋಡಿ ತುಂಬಾ ಖುಷಿ ಆಗ್ತಾ ಇದೆ. ಅಂತ ಹೇಳಿ ಕಣ್ಣಲ್ಲಿ ಕಣ್ಣೀರು ತುಂಬಿ ಕೊಳ್ತಾಳೆ.
ನಂದಿನಿ,,,, ನಯನಾ ಏನಕ್ಕೆ ಅಳ್ತಾ ಇದ್ದಿಯಾ ಏನಾಯ್ತು ಅಂತ ಹತ್ತಿರ ಕರ್ಕೊಂಡು ಕೇಳ್ತಾರೆ.
ದೇವಮ್ಮ,,,, ಮಗಳೇ ಏನಾಯ್ತು ಯಾಕ್ ಅಳ್ತಾ ಇದ್ದಿಯಾ.
ನಯನಾ,,, ಕಣ್ಣೀರು ಸುರಿಸುತ್ತಾ. ಅಮ್ಮ ನನಗೂ ಒಬ್ಬ ಅಕ್ಕ ಇದ್ಲು. ಅವಳ ಜೊತೆ ಹೀಗೆ ದಿನ ಕಿತ್ತಾಡಿಕೊಂಡು ಜಗಳ ಮಾಡಿಕೊಂಡು, ಇರ್ತಾ ಇದ್ದೆ. ಅವಳು ನನ್ನ ಮಗು ತರ ನೋಡ್ಕೋತ ಇದ್ಲು. ಅದ್ರೆ ದೇವರಿಗೆ ಅದು ಇಷ್ಟ ಆಗಿಲ್ಲ ಅಂತ ಕಾಣುತ್ತೆ. ತುಂಬಾ ಬೇಗ ನನ್ನಿಂದ ದೂರ ಮಾಡಿ ಅವನ ಹತ್ತಿರ ಕರೆದುಕೊಂಡು ಬಿಟ್ಟ ಅಂತ ಹೇಳ್ತಾ, ಅಳೋಕೆ ಶುರು ಮಾಡ್ತಾಳೆ.
ನಂದಿನಿ,,, ನಯನಾ ಗೆ ಸಮಾಧಾನ ಮಾಡ್ತಾ, ನಿನ್ನ ನೋವು ನನಗೆ ಅರ್ಥ ಆಗುತ್ತೆ, ಹೋದವರನ್ನ ನೆನೆಸಿಕೊಂಡು ಅತ್ರೆ ಮತ್ತೆ ವಾಪಸ್ಸು ಬರ್ತಾರಾ. ನಾವು ತುಂಬಾ ಇಷ್ಟ ಪಡೋವ್ರನ್ನ ಅವನ ಹತ್ತಿರ ಕರ್ಕೊಂಡ್ರು, ಮತ್ತೆ ಯಾವುದೊ ರೂಪದಲ್ಲಿ ಅವರನ್ನ ನಮ್ಮ ಹತ್ತಿರ ಕಳಿಸ್ತಾನೆ. ಮಗು ತರ ನೋಡ್ಕೋತ ಇದ್ಲು ಅಂತ ಹೇಳ್ದೆ ಅಲ್ವಾ. ದೇವ್ರು ಅವಳನ್ನೇ ನಿನ್ನ ಮಗಳ ರೂಪದಲ್ಲಿ ಕಳಿಸಿರಬಹುದು ಅಂತ ಅನ್ಕೋ. ನನ್ನೇ ನೋಡು. ನನಗೆ ಬುದ್ದಿ ಬಂದಾಗಿಂದ ನನಗೆ ಜನ್ಮ ಕೊಟ್ಟವನು ತಂದೆ ಅನ್ನೋದನ್ನೇ ಮರೆತು ಕುಡಿದು ಕುಡಿದು ಸತ್ತು ಹೋದ. ಅದ್ರೆ ನನಗೆ ತಮ್ಮನಾಗಿ ಹುಟ್ಟಿದ ಅಭಿ, ತಂದೆ ಗಿಂತ ಚೆನ್ನಾಗಿ ನೋಡ್ಕೋತ ಇದ್ದಾನೆ ನನ್ನ. ನಿಜ ಹೇಳಬೇಕು ಅಂದ್ರೆ ಅದಕ್ಕಿಂತ ಹೆಚ್ಚಾಗಿ ನೋಡ್ಕೋತ ಇದ್ದಾನೆ. ದೇವ್ರು ನಾವು ಕಳ್ಕೊಂಡಿದ್ದನ್ನ ಬೇರೆ ರೂಪದಲ್ಲಿ ಕೊಡ್ತಾನೆ, ಯಾವತ್ತೂ ಅವನು ನಮಗೆ ದ್ರೋಹ ಮಾಡೋದಿಲ್ಲ. ನೀನು ಹೀಗೆ ಅಳ್ತಾ ಇರೋದನ್ನ ನೋಡಿದ್ರೆ, ನಿನ್ನ ಗಂಡ ನಮ್ಮನ್ನ ಸುಮ್ನೆ ಬಿಡ್ತಾನಾ. ಸಮಾಧಾನ ಮಾಡ್ಕೊ.
ನಯನಾ ನಂದು ಹೇಳಿದ ಮಾತಿಗೆ ಸಮಾದಾನ ಆಗ್ತಾಳೇ.
ನಂದಿನಿ,,,, ವಿಷಯ ಬದಲಾಯಿಸಿ. ಹೌದು ಅಭಿ ಬಿರಿಯಾನಿ ಮಾಡಿರೋದನ್ನ ಯಾವತ್ತಾದ್ರೂ ತಿಂದಿದ್ದೀಯ.
ನಯನಾ,,, ಇಲ್ಲಾ ನಂದು, ಅಭಿ ಗೆ ಅಡುಗೆ ಮಾಡೋಕೆ ಬರುತ್ತೆ ಅನ್ನೋ ವಿಷಯ ಇಲ್ಲಿಗೆ ಬಂದ ಮೇಲೇನೆ ಗೊತ್ತಾಗಿದ್ದು. ಇವತ್ತೇ ಅಭಿ ನನಗೆ ಕಾಫಿ ಮಾಡಿ ಕೊಟ್ಟಿದ್ದು.
ನಂದಿನಿ,,, ಹೌದ ಆಗಿದ್ರೆ ಇನ್ಮೇಲೆ, ಅವಾಗವಾಗ ಅಡುಗೆ ಕಾಫಿ ಮಾಡೋದನ್ನ ಸ್ಟಾಪ್ ಮಾಡಿ ನೀನೇ ಮಾಡು ಅಂತ ಕೇಳು. ಏನಾದ್ರೂ ಜಾಸ್ತಿ ಮಾತಾಡಿದ್ರೆ ನನಗೆ ಹೇಳ್ತಿನಿ ಅಂತ ಹೇಳು ತೆಪ್ಪಗೆ ಇರ್ತಾನೆ.
ನಯನಾ,, ನಗ್ತಾ ಸರಿ ನಂದು.
#####
ಅಭಿ ಮಟನ್ ತರೋಣ ಅಂತ ಹೊರಗಡೆ ಬಂದಮೇಲೆ ಫ್ರೆಂಡ್ ಗೆ ಕಾಲ್ ಮಾಡಿ ಬೈಕ್ ತರೋಕೆ ಹೇಳ್ತಾನೆ. ಫ್ರೆಂಡ್ ಬಂದಮೇಲೆ ಅವನ ಜೊತೆ ಮಾತಾಡಿಕೊಂಡು, ಹೋಗಿ ಮಟನ್ ತಗೊಂಡು, ಲೈಟ್ ಆಗಿ ಬಿಯರ್ ಕುಡಿದು ಮತ್ತೆ ಮನೆಗೆ ಬರೋವಾಗ ಬಿರಿಯಾನಿ ಗೆ ಏನೇನ್ ಸಾಮಗ್ರಿ ಬೇಕೋ ಎಲ್ಲಾನು ತಗೊಂಡು ಮನೆ ಗೆ ಬರ್ತಾನೇ.
ಮನೆಗೆ ಬಂದವನು ಮೂರು ಜನ ಮಾತಾಡ್ತಾ ಕೂತು ಇರೋದನ್ನ ನೋಡ್ಕೊಂಡು ಅಡುಗೆ ಮನೆ ಒಳಗೆ ಹೋಗಿ ಎಲ್ಲವನ್ನೂ ಇಟ್ಟು ರೂಮ್ ಗೆ ಬಂದು ಬಟ್ಟೆ ಬದಲಾಯಿಸಿ ಕೊಂಡು. ಮತ್ತೆ ಅಡುಗೆ ಮನೆ ಒಳಗೆ ಹೋಗಿ ಬಿರಿಯಾನಿ ಮಾಡೋಕೆ ಶುರು ಮಾಡ್ತಾನೆ.
@@@@@@@@@@@@@@@@@@@@@@@@@