ಅಭಿ ಬಗ್ಗೆ ತಿಳಿದೇ ತಪ್ಪಾಗಿ ಮಾತಾಡಿದೆ ಅಂತ ಅಪ್ಪನ ಹತ್ತಿರ ಕ್ಷಮೆ ಕೇಳಿ. ಅಪ್ಪನನ್ನ ಕರ್ಕೊಂಡು ಊಟಕ್ಕೆ ಬರ್ತಾಳೆ. ಅಪ್ಪ ಅಮ್ಮ ನಯನಾ ಮೂರು ಜನ ಊಟ ಮಾಡಿದ ಮೇಲೆ. ನಯನಾ ರೂಮ್ ಗೆ ಬಂದು ಬೆಡ್ ಮೇಲೆ ಮಲಗಿಕೊಂಡು ಕಣ್ ಮುಚ್ಚಿಕೊಂಡು ಅಪ್ಪ ಅಭಿ ಬಗ್ಗೆ ಹೇಳಿದರ ಬಗ್ಗೆ ಯೋಚ್ನೆ ಮಾಡ್ತಾ ಇರ್ತಾಳೆ. ಸ್ವಲ್ಪ ಸಮಯದ ನಂತರ ಯಾರೋ ರೂಮ್ ಡೋರ್ ಓಪನ್ ಮಾಡಿಕೊಂಡು ಬಂದ ಹಾಗೇ ಅನ್ನಿಸುತ್ತೆ. ನಯನಾ ಯೋಚ್ನೆ ಯಿಂದ ಹೊರಗೆ ಬಂದು ಕಣ್ ಬಿಟ್ಟು ನೋಡ್ತಾಳೆ ರೂಮ್ ಒಳಗೆ ಅಮ್ಮ ಬರೋದನ್ನ ನೋಡಿ ಏನಾಯ್ತಮ್ಮ ಅಂತ ಎದ್ದು ನಿಲ್ಲೋಕೆ ಹೋಗ್ತಾಳೆ.
ಸುಭದ್ರ,,,,ಏನಿಲ್ಲಾ ಮಾತಾಡೋಣ ಅಂತ ಬಂದೆ ಕುತ್ಕೋ ಅಂತ ಹೇಳಿ ಮಗಳನ್ನ ಕೂರಿಸಿ ಪಕ್ಕದಲ್ಲಿ ಕೂತ್ಕೋತಾರೆ.
ನಯನಾ,,, ಅಮ್ಮನ ನೋಡ್ತಾ ಏನ್ ಹೇಳು ಅಮ್ಮ.
ಸುಭದ್ರ,,, ನಯನಾ ನಾ ನೋಡ್ತಾ, ಅವಳ ಕೈ ಇಡಿದು ಕೊಂಡು. ನಿಮ್ಮಪ್ಪ ಹೇಳಿದ ಮೇಲೇನೆ ನನಗೆ ಗೊತ್ತಾಗಿದ್ದು ಅವರ ಪ್ರಾಣ ಉಳಿಸಿದ್ದು ಅಭಿ ನೇ ಅಂತ. ಈ ತರ ಒಳ್ಳೆ ಮನಸ್ಸು ಇರೋವ್ರು ಸಿಗೋದು ತುಂಬಾ ಕಷ್ಟ, ನಿಮ್ಮಪ್ಪನ ಪ್ರಾಣ ಉಳಿಸಿದ ಅಂತ ಅವರ ತಾಯಿಗೆ ಆಪರೇಷನ್ ಮಾಡಿಸೋಕೆ ದುಡ್ಡು ಕೇಳಿಲ್ಲ. ಅವನಿಗೆ ಬೇರೆ ದಾರಿ ಇಲ್ಲದೆ ಅವರ ತಾಯಿ ನಾ ಉಳಿಸಿಕೊಳ್ಳೋಕೆ ನಿಮ್ ಅಪ್ಪನ ಹತ್ತಿರ ಸಹಾಯ ಕೇಳಿದ. ಅಭಿ ನಿಮ್ ಅಪ್ಪನ ಹತ್ತಿರ ದುಡ್ಡಿನ ವಿಷಯ ಮಾತಾಡೋವಾಗ ನಾನು ಕೇಳಿಸಿಕೊಂಡೆ, ಅದ್ರೆ ದುಡ್ಡಿಗೋಸ್ಕರ ನೇ ನಿನ್ನ ಮದುವೆ ಅದ ಅನ್ನೋ ನಿರ್ಧಾರಕ್ಕೆ ನಾನು ಬರಲಿಲ್ಲಾ. ಯಾಕಂದ್ರೆ ಯಾವುದೇ ವಿಷಯ ನಾ ಸರಿಯಾಗಿ ತಿಳಿದು ಕೊಳ್ಳದೆ ಒಂದು ನಿರ್ಧಾರಕ್ಕೆ ಬರೋದು ತಪ್ಪು. ಅವನು ಕೂಡ ಯಾವತ್ತೂ ಈ ವಿಷಯ ನಾ ನನಗೆ ಆಗಲಿ ನಿನಗೆ ಆಗಲಿ ಹೇಳಿಲ್ಲ, ಅದು ಅವನ ದೊಡ್ಡ ಗುಣ. ನಿಮ್ಮಪ್ಪ ಕೊಟ್ಟಿದ ದುಡ್ಡನ್ನ ಸಾಲ ಅಂತ ಅನ್ಕೊಂಡು ಮನೆ ಪತ್ರ ನಾ ಕೊಟ್ಟು, ಅ ದುಡ್ಡನ್ನ ವಾಪಸ್ಸು ಕೊಟ್ಟು ಮನೆ ಪತ್ರ ನಾ ತೆಗೆದುಕೊಂಡ. ಈ ಮನೆಗೆ ಅಳಿಯ ಅಂತ ಆಗಲಿ ಅಧಿಕಾರ ತೋರಿಸಿಲ್ಲ, ನಿನಗೆ ಗಂಡ ಅಂತ ಆಗಲಿ ನಿನ್ನ ಹತ್ತಿರ ದರ್ಪ ತೋರಿಸಿಲ್ಲ. ಸೂಪರ್ ಮಾರ್ಕೆಟ್ ಅಲ್ಲಿ ತಿಂಗಳಿಗೆ ಸಂಬಳ ತಗೊಂಡು ದುಡಿತಾ ಇದ್ದಾನೆ.
ಅಲ್ವೇ ನಯನಾ, ಒಂದು ಸರಿ ಯೋಚ್ನೆ ಮಾಡು, ಅವನು ಸಹಾಯ ಮಾಡಿದ ಅಂತ ನಿಮ್ಮಪ್ಪ ಸಹಾಯ ಮಾಡಿದ್ದನ್ನ, ಸಹಾಯ ಅನ್ಕೊಂಡು ಸುಮ್ನೆ ಇರಲಿಲ್ಲ. ನಿಮ್ಮಪ್ಪ ಕೇಳಿದ ಅಂತ ಅವನಲ್ಲದ ಮಗಳಿಗೆ ತಂದೆ ಆಗಿ ಬರೋದು ಇಲ್ಲಾ ಅಂತ ಹೇಳಿಲ್ಲ. ರಕ್ತ ಸಂಬಂಧಿಗಳೇ ಹಣ ಆಸ್ತಿ ಅಂತ ದುರಾಸೆ ಬೀಳೋವಾಗ. ಇಡೀ ಸೂಪರ್ ಮಾರ್ಕೆಟ್ ಜವಾಬ್ದಾರಿ ನಾ ಅವನ ಕೈಗೆ ಕೊಟ್ರು. ಒಂದು ರೂಪಾಯಿ ಕೂಡ ಆಗಲಿ ಅಳಿಯ ಅಲ್ವಾ ತಗೊಳೋಣ ಅಂತ ತಗೊಂಡು ಇಲ್ಲಾ. ಇಷ್ಟೆಲ್ಲಾ ಯಾಕೆ? ಅವನು ನಿನಗೆ ತಾಳಿ ಕಟ್ಟಿದ ಗಂಡ ಅಲ್ವಾ. ಯಾವತ್ತಾದ್ರೂ ಒಂದು ದಿನ ನಿನ್ನ ಹತ್ತಿರ ಮಾತಾಡೋದು ಆಗಲಿ. ನಿನ್ನ ಮೇಲೆ ಆಸೆ ಬೀಳೋದಾಗಲಿ. ನಿನ್ನ ಮುಟ್ಟೋದಾಗಲಿ ಮಾಡೋಕೆ ಹೋದ್ನ. ಇಲ್ಲಾ ಅಲ್ವಾ. ಅವನು ನಾಟಕ ಮಾಡೋವ್ನೆ ಆಗಿದ್ದಿದ್ರೆ. ಇಷ್ಟು ವರ್ಷ ನಾಟಕ ಮಾಡ್ಕೊಂಡು ನಮ್ ಜೊತೆಗೆ ಇರೋ ಅವಶ್ಯಕತೆ ಏನಿದೆ ಹೇಳು. ಅನಾ ಗೆ ಅಪ್ಪ ಆಗಿ ಈ ಮನೇಲಿ ಅನಾಥ ನಾಗಿ ಇರೋ ಕರ್ಮ ಅವನಿಗೆ ಏನಿತ್ತು. ಅವನಿಗೂ ಮನೆ ಇದೆ ಅಮ್ಮ ಇದ್ದಾರೆ. ಎಲ್ಲರೂ ಇದ್ದಾರೆ. ಇಷ್ಟೆಲ್ಲಾ ಯಾಕೆ ಮೊನ್ನೆ ರಾತ್ರಿ ಅವನು ಬಂದಾಗ. ನೀನು ಅವನಿಗೆ ಅವಮಾನ ಮಾಡಿದೆ ಅಲ್ವಾ. ನನಗೆ ಆಗಲಿ ನಿಮ್ ತಂದೆ ಗೆ ಆಗಲಿ, ಇದರ ಬಗ್ಗೆ ಏನಾದ್ರು ಹೇಳಿದ್ನ. ಇಲ್ಲಾ ನಿನ್ನ ಹತ್ತಿರ ಏನಾದ್ರು ಮಾತಾಡಿದ್ನ.
ನಯನಾ,,,, ಅಮ್ಮ ಅದು..
ಸುಭದ್ರ,,, ನನಗೆ ಎಲ್ಲಾ ಗೊತ್ತು ನಯನಾ, ನೀನು ಅಭಿ ಹತ್ತಿರ ಏನೇನ್ ಮಾತಾಡಿದೆ ಅಂತ. ಅವನಿಗೆ ಅ ಉದ್ದೇಶ ನೇ ಮನಸಲ್ಲಿ ಇದ್ದಿದ್ರೆ. ಇಷ್ಟು ವರ್ಷ ಬೇಕಾಗಿರಲಿಲ್ಲ. ತಾಯಿ ಆಗಿ ಒಂದು ಹೆಣ್ಣಾಗಿ ನಿನಗೆ ಹೇಳ್ತಾ ಇದ್ದೀನಿ. ಯಾವ ಹುಡುಗ ಅವರ ತಾಯಿ ನಾ ಚೆನ್ನಾಗಿ ನೋಡ್ಕೋತಾನೋ. ಅವನ ಹೆಂಡತಿ ನಾ ಕೂಡ ಅಷ್ಟೇ ಚೆನ್ನಾಗಿ ನೋಡ್ಕೋತಾನೆ. ಅಷ್ಟೇ ಗೌರವ ಕೊಡ್ತಾನೆ ಅರ್ಥ ಮಾಡ್ಕೋತಾನೆ. ಅಭಿ ವ್ಯಕ್ತಿ ಆಗಿ ನಿಮ್ ಅಪ್ಪನಿಗೆ ಇಷ್ಟ ಅದ. ಅಳಿಯನಾಗಿ ನನಗೆ ಇಷ್ಟ ಅದ. ಅಪ್ಪನಾಗಿ ನಿನ್ನ ಮಗಳಿಗೆ ಇಷ್ಟ ಅದ. ಈಗ ಅವನು ನಿನಗೆ ಗಂಡನಾಗಿ ಇಷ್ಟ ಆಗ್ತಾನೋ ಇಲ್ವೋ ನೀನೇ ನಿರ್ಧಾರ ಮಾಡಬೇಕು. ಯೋಚ್ನೆ ಮಾಡಿ ನೋಡು. ಇಲ್ಲಿ ಯಾರ ಬಲವಂತ ಏನು ಇಲ್ಲಾ. ಇಲ್ವಾ ಅಭಿ ನಿನಗೆ ಬೇಡ್ವೇ ಬೇಡ ಅನ್ನೋದೇ ಅದ್ರೆ, ನಿಮ್ ಅಪ್ಪನ ಹತ್ತಿರ ಮಾತಾಡಿ ಇಬ್ಬರಿಗೂ ಡಿವೋರ್ಸ್ ಕೊಡಿಸಿ ಬಿಡ್ತೀನಿ . ಅಂತ ಹೇಳಿ ಎದ್ದು ರೂಮಿಂದ ಹೊರಗೆ ಹೋಗವಾಗ. ತಿರುಗಿ ನಯನಾ ಕಡೆಗೆ ನೋಡ್ತಾ ಅವನನ್ನ ನೀನು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಪಡದೆ ಇದ್ರು ಪರ್ವಾಗಿಲ್ಲ. ಅಪಾರ್ಥ ಮಾಡ್ಕೊಂಡು ಅವಮಾನ ಮಾಡೋಕೆ ಹೋಗಬೇಡ. ಅಂತ ಹೇಳಿ ರೂಮ್ ಡೋರ್ ಕ್ಲೋಸ್ ಮಾಡಿಕೊಂಡು ಹೊರಟು ಹೋಗ್ತಾರೇ.
ನಯನಾ ಬೆಡ್ ಮೇಲೆ ಮಲಗಿಕೊಂಡು ಕಣ್ ಮುಚ್ಚಿ ಆಲೋಚನೆ ಅಲ್ಲಿ ಮುಳಗಿ ಹೋಗ್ತಾಳೆ. ಹಾಗೇ ಯೋಚ್ನೆ ಮಾಡ್ತಾ ಮಾಡ್ತಾ ನಿದ್ದೆಗೆ ಜಾರ್ತಾಳೆ.
....
ಬೆಳಿಗ್ಗೆ ಎದ್ದ ಅನಾ ಅವಳ ಪಪ್ಪಾ ನಾ ನೋಡೋಕೆ ಅಂತ ಮೇಲೆ ಹೋಗೋಕೆ ಹೋಗ್ತಾಳೆ.
ಸುಭದ್ರ,,, ಮೊಮ್ಮಗಳು ಹೋಗೋ ರೀತಿ ನೋಡಿ. ಮೇಡಂ ಎಲ್ಲಿಗೆ ಹಾಗೇ ಓಡ್ತಾ ಇದ್ದೀರಾ.
ಅನಾ,,, ಇನ್ನೆಲ್ಲಿಗೆ ಅಜ್ಜಿ ಪಪ್ಪಾ ನಾ ನೋಡೋಕೆ.
ಸುಭದ್ರ,,, ನಿಮ್ ಪಪ್ಪಾ ಮೇಲೆ ರೂಮ್ ಅಲ್ಲಿ ಇಲ್ಲಾ. ಆಫೀಸ್ ಕೆಲಸದ ಮೇಲೆ ಹೊರಗೆ ಹೋಗಿದ್ದಾರೆ, ಬರೋಕೆ 2 3 ದಿನ ಆಗುತ್ತೆ.
ಅನಾ,,, ಬೇಜಾರಿನಿಂದ,,,,,ಮತ್ತೆ ಪಪ್ಪಾ ನನಗೆ ಏನು ಹೇಳೇ ಇಲ್ಲಾ.
ಸುಭದ್ರ,,, ಅದು ಅರ್ಜೆಂಟ್ ಆಗಿ ಹೋದ್ರು ನಿನಗೆ ಹೇಳೋಕೆ ಆಗಲಿಲ್ಲ, ಅದಕ್ಕೆ ನಿನ್ನ ಹತ್ತಿರ ಸಾರೀ ಹೇಳೋಕೆ ಹೇಳಿದ್ರು.
ಅನಾ,,, ಸಾರೀ ನಾ ಬೇಡ ಬಿಡು ಅಜ್ಜಿ, ಪಪ್ಪಾ ಅಲ್ವಾ ತುಂಬಾ ಕೆಲಸ ಇರುತ್ತೆ ಅದಕ್ಕೆ ಹೇಳ್ದೆ ಹೋಗಿರ್ತಾರೆ, ಬಂದಮೇಲೆ ಅವರನ್ನ ಅಪ್ಪಿಕೊಂಡು ಮಲಗಿದ್ರೆ ಎಲ್ಲಾ ಸರಿ ಹೋಗುತ್ತೆ ಅಂತ ಮುದ್ದು ಮುದ್ದಾಗಿ ಹೇಳ್ತಾಳೇ.
ಸುಭದ್ರ,,,, ಮೊಮ್ಮಗಳನ್ನ ಎತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು ನನ್ನ ಬಂಗಾರ, ನಿಮ್ ಪಪ್ಪಾ ನಾ ಎಷ್ಟು ಅರ್ಥ ಮಾಡ್ಕೊಂಡು ಇದ್ದಿಯಾ, ಬಾ ನಿನಗೆ ಬೂಸ್ಟ್ ನಾ ಕೊಡ್ತೀನಿ ಅಂತ ಹೇಳಿ ಅಡುಗೆ ಮನೆಗೆ ಕರ್ಕೊಂಡು ಹೋಗ್ತಾರೆ.
#######
ಜೆ,,,, ಮಚ್ಚಾ ಎದ್ದೇಳೋ ಇನ್ನು ಮಲಗೆ ಇದ್ದಿಯಾ ಅಂತ ಅಭಿ ಗೆ ಹೇಳ್ತಾನೆ. ಅಭಿ ಏನು ಮಾತನಾಡದೆ ಹಾಗೇ ಮಲಗಿರ್ತಾನೆ, ಜೆ ಇನ್ನೊಂದು ಸರಿ ಕರೆದ್ರು ಅಭಿ ಹಾಗೇ ಮಲಗಿರೋದನ್ನ ನೋಡಿ ಹತ್ತಿರ ಹೋಗಿ, ಮೈ ಮುಟ್ಟಿ ಎಬ್ಬಿಸೋಕೆ ಹೋಗ್ತಾನೆ. ಅಭಿ ಮೈ ಕೆಂಡ ದಂತೆ ಸುಡ್ತಾ ಇರುತ್ತೆ. ಜೆ ಭಯ ಬಿದ್ದು ಮಚ್ಚಾ ಏನೋ ಮೈ ಇಷ್ಟೊಂದು ಸುಡ್ತಾ ಇದೆ ಅಂತ ಎಬ್ಬಿಸೋಕೆ ಹೋಗ್ತಾನೆ ಅಭಿ ಗೆ ಎಚ್ಚರನೇ ಆಗೋದಿಲ್ಲ. ತಕ್ಷಣ ಜೆ ಅವನ ಮೊಬೈಲ್ ತೆಗೆದು ಫ್ರೆಂಡ್ ಗೆ ಕಾಲ್ ಮಾಡಿ ಬರೋಕೆ ಹೇಳ್ತಾನೆ.
ಪ್ರಿಯಾ,,, ರೆಡಿ ಆಗಿ ತೇಜು ಮೇಘ ಜೊತೆಗೆ ಸೂಪರ್ ಮಾರ್ಕೆಟ್ ಹತ್ತಿರ ಬರ್ತಾರೆ. ನಿರಂಜನ್ ರಾಜ್ ಇಬ್ಬರು ಅಲ್ಲೇ ಇರೋದನ್ನ ನೋಡಿ,
ಪ್ರಿಯಾ,,, ಲೋ ಅಭಿ ಎಲ್ಲೋ
ನಿರಂಜನ್,,, ಇನ್ನು ಬಂದಿಲ್ವೆ ಕಾಲ್ ಮಾಡಿದ್ರೆ ಪಿಕ್ ಮಾಡ್ತಿಲ್ಲ.
ಪ್ರಿಯಾ,,,, ಹೌದ್ ಅಂತ ಹೇಳಿ ಅಭಿ ನಂಬರ್ ಗೆ ಕಾಲ್ ಮಾಡ್ತಾಳೆ ಏನು ರೆಸ್ಪೋನ್ಸ್ ಬರೋದಿಲ್ಲ. ಕಾಲ್ ಕಟ್ ಮಾಡಿ ಪಿಕ್ ಮಾಡ್ತಾ ಇಲ್ಲಾ ಕಣೋ ಸರಿ ನೀವು ಹೋಗಿ ಕೀ ತಗೊಂಡು ಬನ್ನಿ ಸರ್ ಗೆ ಕಾಲ್ ಮಾಡಿ ಹೇಳ್ತಿನಿ. ಅಂತ ಹೇಳಿ ವಿಶ್ವನಾಥ್ ಗೆ ಕಾಲ್ ಮಾಡ್ತಾಳೆ.
ನಯನಾ ಜೊತೆಗೆ ಕೂತು ತಿಂಡಿ ಮಾಡ್ತಾ ಇದ್ದಾ ವಿಶ್ವನಾಥ್,, ಮೊಬೈಲ್ ರಿಂಗ್ ಆಗೋದನ್ನ ನೋಡಿ, ಮೊಬೈಲ್ ಕಡೆಗೆ ನೋಡ್ತಾರೆ ಪ್ರಿಯಾ ಕಾಲ್, ಪಿಕ್ ಮಾಡಿ ಹೇಳಮ್ಮ ಪ್ರಿಯಾ.
ಪ್ರಿಯಾ ಹೆಸರು ಕೇಳಿ, ನಯನಾ ಸುಭದ್ರ ಅವರ ಕಡೆ ನೋಡ್ತಾರೆ.
ಪ್ರಿಯಾ,,, ಗುಡ್ ಮಾರ್ನಿಂಗ್ ಸರ್, ಸರ್ ಅಭಿ ಇನ್ನು ಬಂದಿಲ್ಲ, ಕಾಲ್ ಮಾಡಿದ್ರೆ ಪಿಕ್ ಮಾಡ್ತಾ ಇಲ್ಲಾ, ಕೀ ಬೇಕಾಗಿತ್ತು, ನಿರಂಜನ್ ನಾ ಕಳಿಸ್ತೀನಿ ಕೀ ಕೊಟ್ಟು ಕಳಸಿ ಸರ್.
ವಿಶ್ವ,,, ಅಭಿ ಬಂದಿಲ್ಲ, ನೆನ್ನೆ ಜ್ವರ ಇತ್ತು ಅಲ್ವಾ ರೆಸ್ಟ್ ಮಾಡ್ತಾ ಇರಬಹುದು, ಕೀ ನಾ ನಾನೆ ತಗೋ ಬರ್ತೀನಿ. ಸರಿನಾ ಅಂತ ಹೇಳಿ ಕಾಲ್ ಕಟ್ ಮಾಡಿ, ಎದ್ದು ನಿಲ್ತಾರೆ.
ಸುಭದ್ರ,,, ಯಾಕ್ ರೀ ಏನಾಯ್ತು.
ವಿಶ್ವ,,, ಏನಿಲ್ಲಾ ಸುಭದ್ರ ಅಭಿ ಇವತ್ತು ಬಂದಿಲ್ಲ ಅಂತೆ ಕಾಲ್ ಮಾಡಿದ್ರು ತೆಗಿತಿಲ್ಲ, ಕೀ ಬೇಕು ಅಂತ ಪ್ರಿಯಾ ಕಾಲ್ ಮಾಡಿದ್ಲು, ಅದಕ್ಕೆ ನಾನೆ ತಗೋ ಬರ್ತೀನಿ ಅಂತ ಹೇಳಿದೆ ಅಂತ ಎದ್ದು ರೂಮ್ ಕಡೆಗೆ ಹೋಗ್ತಾರೆ.
ನಯನಾ ಅಭಿ ವಿಷಯ ಕೇಳಿ ಒಂದು ರೀತಿ ಬೇಜಾರ್ ಆಗುತ್ತೆ ಎದ್ದು ರೂಮ್ ಗೆ ಹೋಗ್ತಾಳೆ.
ವಿಶ್ವ ಕೀ ತೆಗೆದುಕೊಂಡು ಸುಭದ್ರ ಗೆ ಹೇಳಿ ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾರೆ.
ರೂಮಲ್ಲಿ ಬೆಡ್ ಮೇಲೆ ಕೂತಿದ್ದ ನಯನಾ ಗೆ ಮನಸಲ್ಲಿ ಒಂದು ರೀತಿ ಸಂಕಟ ಶುರುವಾಗುತ್ತೆ. ಅಪ್ಪ ಅಮ್ಮ ಅಭಿ ಬಗ್ಗೆ ಹೇಳಿದಾಗಿಂದ ಅಭಿ ಬಗ್ಗೆ ಸಾವಿರ ಆಲೋಚನೆ. ಅಪ್ಪ ಅಮ್ಮ ಇಷ್ಟ ಇಲ್ಲಾ ಅಂದ್ರು ಬಲವಂತವಾಗಿ ಮದುವೆ ಮಾಡಿದ್ರು. ಅದ್ರೆ ಇವಾಗ ಅವರ ಜೊತೆಗೆ ಚೆನ್ನಾಗಿ ಇದ್ದೀನಿ. ಅದ್ರೆ ಇದರಲ್ಲಿ ಅಭಿ ತಪ್ಪೇನಿದೆ, ಅಪ್ಪ ಕೇಳಿದಕ್ಕೆ ಅಲ್ವಾ ಅವರ ಮೇಲೆ ಇರೋ ಗೌರವಕ್ಕೆ ಅಲ್ವಾ, ಕೇವಲ ಅವರ ಮಾತಿಗೆ ಬೆಲೆ ಕೊಟ್ಟು ನನ್ನ ಮದುವೆ ಆಗಿದ್ದು. ಅಭಿ ಉದ್ದೇಶ ಏನಾದ್ರು ಕೆಟ್ಟದಾಗಿ ಇದ್ದಿದ್ರೆ. ಅವನು ಏನ್ ಬೇಕಾದ್ರು ಮಾಡಬೋದಿತ್ತು. ಅದ್ರೆ ಅವನು ಅವನ ಮಾತಿನ ಮೇಲೆ ಇದ್ದಾನೆ. ಪ್ರಿಯಾ ಯಾವ್ ಹುಡುಗನ ಬಗ್ಗೆ ಕೂಡ ಮಾತಾಡಿದನ್ನ ನಾನು ಕೇಳಿಲ್ಲ. ಅದ್ರೆ ಅಭಿ ಬಗ್ಗೆ ಅಷ್ಟು ಒಳ್ಳೆ ಅಭಿಪ್ರಾಯ ಇಟ್ಕೊಂಡು ಇದ್ದಾಳೆ. ಅವನನ್ನ ಇಷ್ಟ ಪಡ್ತಾ ಇದ್ದಾಳೆ. ಒಂದು ದಿನ ಕೂಡ ಅವಳ ಹತ್ತಿರ ತಪ್ಪಾಗಿ ನಡ್ಕೊಂಡು ಇಲ್ಲಾ. ಅಪ್ಪ ಅಮ್ಮ ನನ್ನಿಂದ ಅವಮಾನ ಪಡ್ತಾ ಇದ್ದಾರೆ ಅನೋ ನೋವಿಗೆ ಇಷ್ಟ ಇಲ್ಲಾ ಅಂದ್ರು ಈ ಮದುವೆ ಮಾಡಿಕೊಂಡೆ. ಅಪ್ಪ ಅಭಿ ಅವರ ಅಮ್ಮನ ಆಪರೇಷನ್ ಗೆ ದುಡ್ಡು ಕೊಟ್ಟು ಅವರನ್ನ ಕಾಪಾಡಿದ್ರು. ಅಭಿ ಪ್ಲೇಸ್ ಅಲ್ಲಿ ಇದ್ರು ನಾನು ಕೂಡ ಇದನ್ನೇ ಮಾಡ್ತಾ ಇದ್ದೆ ಅಲ್ವಾ. ಯಾಕಂದ್ರೆ ಅಪ್ಪ ಅಮ್ಮನಿಗಿಂತ ದೊಡ್ಡದು ಯಾವುದು ಇಲ್ಲಾ. ಇವತ್ತು ಅಪ್ಪ ಬದುಕಿರೋದು. ಅಪ್ಪ ಇಷ್ಟು ಆರಾಮಾಗಿ ಇರೋದು. ಅಭಿ ಯಿಂದ, ಸಾರೀ ಅಭಿ ನಿನ್ನ ಬಗ್ಗೆ ಸರಿಯಾಗಿ ತಿಳ್ಕೊಳ್ದೆನೇ ಇಷ್ಟ ಬಂದ ಹಾಗೇ ಮಾತಾಡಿ ನಿನಗೆ ಅವಮಾನ ಮಾಡಿ ಮನೆಯಿಂದ ಹೊರಗೆ ಹೋಗು ಅಂತ ಹೇಳಿದೆ. ಛೇ ತಪ್ಪು ಮಾಡಿ ಬಿಟ್ಟೆ, ಅಂತ ಮನಸಲ್ಲಿ ಅನ್ಕೊಂಡು. ಎದ್ದು ರೆಡಿ ಆಗಿ ಹಾಲ್ ಗೆ ಬರ್ತಾಳೆ.
ಸುಭದ್ರ,,, ನಯನಾ ನಾ ನೋಡಿ ಎಲ್ಲಿಗೆ ಮಗಳೇ?
ನಯನಾ,,, ಅಮ್ಮ ಸೂಪರ್ ಮಾರ್ಕೆಟ್ ಗೆ ಹೋಗ್ತಾ ಇದ್ದೀನಿ , ಅನಾ ನಾ ನೋಡ್ಕೋ ನಾನ್ ಬರೋವರೆಗೂ..
ಸುಭದ್ರ,,, ಮನಸಲ್ಲೇ ದೇವರಿಗೆ ಕೈ ಮುಗಿದು. ಹ್ಮ್ ಸರಿ ಹೋಗಿ ಬಾ ಅನಾ ನಾ ನಾನ್ ನೋಡ್ಕೋತೀನಿ.
ನಯನಾ,,, ಥ್ಯಾಂಕ್ಸ್ ಅಮ್ಮ ಅಂತ ಹೇಳಿ ಅನಾ ಗೆ ಕಿಸ್ ಕೊಟ್ಟು ಅಮ್ಮ ಬರೋವರೆಗೂ ಅಜ್ಜಿ ಜೊತೆಗೆ ಇರು,
ಅನಾ,,, ಹ್ಮ್ ಸರಿ ಅಮ್ಮ.
ನಯನಾ ಬೈ ಹೇಳಿ ಬೈಕ್ ಅಲ್ಲಿ ಸೂಪರ್ ಮಾರ್ಕೆಟ್ ಕಡೆಗೆ ಹೋಗ್ತಾಳೆ.
@@@@@@@@@@@@@@@@@@@@@@@@@