Abhinayanaa - 6 in Kannada Love Stories by S Pr books and stories PDF | ಅಭಿನಯನಾ - 6

The Author
Featured Books
  • ಹುಚ್ಚನ ನಗು

    ಆ ಊರಿನ ರೈಲ್ವೇ ಸ್ಟೇಷನ್ ಎದುರಿಗಿನ ಅಶ್ವತ್ಥ ಮರ ಕೇವಲ ಒಂದು ಮರವಲ್ಲ ಅ...

  • ಮಹಿ - 31

       ಕೃತಿ ನ ಮೀಟ್ ಮಾಡೋಕೆ  ಬರೋಕೆ ಹೇಳಿ ಫ್ರೆಂಡ್ಸ್ ಕೆಫೆ ಗೆ ಹೋದೆ. ಅವ...

  • ಅಭಿನಯನಾ - 6

            ಅಪ್ಪ ಅಭಿ ಬಗ್ಗೆ ಹೇಳಿ ಕೋಪದಿಂದ ಅಲ್ಲಿಂದ ಹೊರಟ ಮೇಲೆ ನಯನಾ ಮ...

  • ಪರರ ಮನವನ್ನು ಓದುವ ಮಾಯಾ ಕನ್ನಡಿ

    ಒಂದು ಪುಟ್ಟ, ಮರಗಳಿಂದ ಆವೃತವಾದ ಊರು. ಅದರ ಹೆಸರು ಹೇಮಾವತಿ. ಆ ಊರಿನಲ್...

  • ಮೌನದ ಸಾಧಕ

    ಹಿಮಾಲಯದ ಮಂಜುಗಡ್ಡೆಗಳ ನಡುವೆ, ಗಂಗೋತ್ರಿ ಧಾಮದಿಂದ ಬಹುದೂರದಲ್ಲಿ, ಸಾಮ...

Categories
Share

ಅಭಿನಯನಾ - 6

        ಅಪ್ಪ ಅಭಿ ಬಗ್ಗೆ ಹೇಳಿ ಕೋಪದಿಂದ ಅಲ್ಲಿಂದ ಹೊರಟ ಮೇಲೆ ನಯನಾ ಮೌನವಾಗಿ ಕೂತು ಬಿಡ್ತಾಳೆ. ಸಾವಿರ ಪ್ರಶ್ನೆ ಅವಳಿಗೆ ಬಂದು ಕಾಡೋಕೆ ಶುರು ಆಗುತ್ತೆ. ಇಷ್ಟು ದಿನ ಅಭಿ ಬಗ್ಗೆ ಒಂದು ಅಭಿಪ್ರಾಯ ಇದ್ದಾ ಅವಳಿಗೆ ಈಗ ಅಪ್ಪನ ಮಾತಿಂದ ಅದೆಲ್ಲಾ ತಲೆ ಕೇಳಗಾಗಿ ಬಿಡುತ್ತೆ. ತುಂಬಾ ಯೋಚ್ನೆ ಮಾಡೋಕೆ ಶುರು ಮಾಡ್ತಾಳೆ. 

ವಿಶ್ವನಾಥ್ ಮಗಳ ಹತ್ತಿರ ಹಾಗೇ ಮಾತಾಡಿದ ಮೇಲೆ ಯಾಕೋ ಅವರಿಗೂ ತಪ್ಪು ಮಾಡಿದೆ ಅಂತ ಅನ್ನಿಸಿತು. 

ರಾತ್ರಿ ಸೂಪರ್ ಮಾರ್ಕೆಟ್ ನಾ ಕ್ಲೋಸ್ ಮಾಡೋ ಟೈಮ್ ಗೆ ವಿಶ್ವನಾಥ್ ಆಫೀಸ್ ರೂಮ್ ಗೆ ಬರ್ತಾರೆ. ನಯನಾ ಟೇಬಲ್ ಮೇಲೆ ತಲೆ ಇಟ್ಟ್ಕೊಂಡು ಮಲಗಿರೋದನ್ನ ನೋಡಿ. ನಯನಾ ಅಂತ ಕರೀತಾರೆ.

ನಯನಾ,,, ಅಪ್ಪನ ಮಾತಿಗೆ ತಲೆ ಎತ್ತಿ ನೋಡ್ತಾಳೆ

ವಿಶ್ವ,,,, ಟೈಮ್ ಆಯ್ತು ಬಾ ಮನೆಗೆ ಹೋಗೋಣ.

ನಯನಾ,,, ಹ್ಮ್ ನಡೀರಿ ಅಪ್ಪ ಅಂತ ಹೇಳಿ ಎದ್ದು ಅಪ್ಪನ ಜೊತೆಗೆ ಸೂಪರ್ ಮಾರ್ಕೆಟ್ ಹೊರಗೆ ಬರ್ತಾರೆ ಇಬ್ಬರು.

ನಿರಂಜನ್ ರಾಜ್ ಸೂಪರ್ ಮಾರ್ಕೆಟ್ ನಾ ಕ್ಲೋಸ್ ಮಾಡಿ ಲಾಕ್ ಮಾಡಿ, ಕೀ ನಾ ವಿಶ್ವ ಗೆ ಕೊಟ್ಟು ಗುಡ್ ನೈಟ್ ಸರ್ ಅಂತ ಹೇಳಿ ಹೊರಟು ಹೋಗ್ತಾರೆ. 

ನಯನಾ ಗೆ ಅಭಿ ಎಲ್ಲಿ ಕಾಣಿಸೋದಿಲ್ಲ. ಅಪ್ಪನ ಕಡೆಗೆ ನೋಡಿ ಏನೋ ಕೇಳಬೇಕು ಅಂತ ಅನ್ನಿಸಿ, ಯಾವ ರೀತಿ ಕೇಳೋದು ಅಂತ ಅನ್ನಿಸಿ ಸೈಲೆಂಟ್ ಆಗಿ ಬಿಡ್ತಾಳೆ.

ಇಬ್ಬರು ಕಾರ್ ಅಲ್ಲಿ ಮನೆಗೆ ಬರ್ತಾರೆ. ನಯನಾ ಮೇನ್ ಡೋರ್ ಬೆಲ್ ಮಾಡ್ತಾಳೆ. 2 ನಿಮಿಷ ದ ನಂತರ ಅಮ್ಮ ಬಂದು ಡೋರ್ ಓಪನ್ ಮಾಡ್ತಾರೆ. ವಿಶ್ವ ನಯನಾ ಮನೆ ಒಳಗೆ ಬರ್ತಾ.

ವಿಶ್ವ,,, ಸುಭದ್ರ ನಾ ನೋಡಿ. ಮೊಮ್ಮಗಳು ಎಲ್ಲಿ ಅಂತ ಕೇಳ್ತಾರೆ.

ಸುಭದ್ರ,,, ರೂಮ್ ಅಲ್ಲಿ ಮಲಗಿದ್ದಾಳೆ.

ವಿಶ್ವ,,, ಅಭಿ ಹೀಗಾ ಹೇಗಿದ್ದಾನೆ?

ಸುಭದ್ರ,,, ಸ್ವಲ್ಪ ಗಾಬರಿ ಆಗಿ ಏನು ಅಭಿ ನಾ. ನೆನ್ನೆ ಹೋದವನು ಇನ್ನು ಮನೆಗೆ ಬಂದಿಲ್ಲ. ಏನಾಯ್ತು ಅವನಿಗೆ.

ವಿಶ್ವ,,, ಬೆಳಿಗ್ಗೆ ಹುಷಾರು ಇಲ್ಲದೆ ತುಂಬಾ ಜ್ವರ ಇತ್ತು ಅಂತೇ. ಫ್ರೆಂಡ್ಸ್ ಹಾಸ್ಪಿಟಲ್ ಗೆ ಕರ್ಕೊಂಡು ಹೋಗಿ ಬಂದ್ರು. ರೆಸ್ಟ್ ಮಾಡು ಅಂತ ಹೇಳಿದ್ರು, ಕೇಳದೆ ವರ್ಕ್ ಮಾಡ್ತಾ ಇದ್ದಾ. ನಾನ್ ಹೋಗಿ ಅವನನ್ನ ಮತ್ತೆ ಹಾಸ್ಪಿಟಲ್ ಗೆ ಕಳಿಸಿ ಡಾಕ್ಟರ್ ಹತ್ತಿರ ಚೆಕ್ ಮಾಡಿಸಿಕೊಂಡು ಮನೆಗೆ ಹೋಗು ಅಂತ ಹೇಳಿದೆ. ಇಲ್ಲಿಗೆ ಬಂದಿಲ್ಲ ಅಂದ್ರೆ ಅವನು ಅವರ ಮನೆಗೆ ಹೋಗಿರಬೇಕು ಅನ್ನಿಸುತ್ತೆ. ಹೋಗ್ಲಿ ಬಿಡು. ಇಲ್ಲಿ ಅವನಿಗೆ ಅಂತ ಯಾರ್ ಇದ್ದಾರೆ. ಅವರ ಮನೇಲಿ ಅವನ ತಾಯಿ ಅಕ್ಕ ಇಬ್ಬರು ಇರ್ತಾರೆ, ಜ್ವರ ಕಮ್ಮಿ ಆಗೋವರೆಗೂ ಅಲ್ಲೇ ಇರಲಿ ಬಿಡು. ಅಂತ ಹೇಳಿ ಸೋಫಾ ಮೇಲೆ ಕೂತ್ಕೋತಾರೆ. 

ಸುಭದ್ರ,,,, ಏನ್ರಿ ನೀವು ಹೇಳೋದು ಇಲ್ಲಿ ಅವನನ್ನ ನೋಡ್ಕೊಳ್ಳೋಕೆ ಯಾರು ಇಲ್ವಾ. ಮತ್ತೆ ನಾವೆಲ್ಲ ಯಾರು. ಅವನು ಈ ಮನೆಗೆ ಅಳಿಯ ಆದ್ರು ಮಗನೆ ಅಲ್ವಾ. ಇವತ್ತು ನೀವು ಇಷ್ಟು ಆರಾಮಾಗಿ ಇದ್ದೀರಾ ಅಂದ್ರೆ ಅದಕ್ಕೆ ಕಾರಣ ಅವನೇ. ನಿಮ್ಮ ಕೆಲಸದ ಜವಾಬ್ದಾರಿ ನಾ ಎಲ್ಲಾ ಅವನೇ ತಗೊಂಡು ಇದ್ದಾನೆ. ನಮಗೆ ಒಬ್ಬ ಮಗ ಇದ್ದಿದ್ರೆ ಯಾವ ರೀತಿ ನಿಮ್ಮನ್ನ ನೋಡ್ಕೋತ ಇದ್ನೋ ಅದಕ್ಕಿಂತ ಹೆಚ್ಚಾಗಿ ನೋಡ್ಕೋತ ಇದ್ದಾನೆ. ಅಂತವನಿಗೆ ಹುಷಾರು ಇಲ್ಲಾ ಅಂತ ಅಂದಾಗ ಮನೆಗೆ ಕರ್ಕೊಂಡು ಬರೋದನ್ನ ಬಿಟ್ಟು. ಅವರ ಮನೆಗೆ ಹೋಗ್ಲಿ ಅಂತ ಇದ್ದೀರಾ, ಇದು ಎಷ್ಟು ಸರಿ. 

ವಿಶ್ವನಾಥ್,,, ನಗ್ತಾ ಅವನು ತಾಳಿ ಕಟ್ಟಿದ ಹೆಂಡತಿನೇ ಅವನಿಗೆ ಜ್ವರ ಅಂತ ಗೊತ್ತಿದ್ರು ಸತ್ರೆ ಸಾಯಲಿ. ನನಗೆ ಏನು ಅವನೇನು ನನ್ನ ಇಷ್ಟ ಪಟ್ಟು ಮದುವೆ ಆಗಿಲ್ಲ, ದುಡ್ಡು ತೆಗೆದುಕೊಂಡು ಮದುವೆ ಅದ ಅಂತ ಹೇಳಿದಾಗ, ಮೊದಲ ಸರಿ ತಂದೆ ಆಗಿ ನಾನು ಸೋತೆ. ಒಳ್ಳೆ ವ್ಯಕ್ತಿ ನಾ ಕರ್ಕೊಂಡು ಬಂದು ಅವನಿಗೂ ನೋವನ್ನ ಕೊಟ್ಟೆ. ಒಂದಲ್ಲ ಒಂದು ದಿನ ಅವನನ್ನ ನನ್ನ ಮಗಳು ಅರ್ಥ ಮಾಡಿಕೊಳ್ತಾಳೆ ಅಂತ ಒಂದು ನಂಬಿಕೆ ಮೇಲೆ ಇದ್ದೆ ಇಷ್ಟು ದಿನ ಅದ್ರೆ ಇವತ್ತು ಗೊತ್ತಾಯಿತು ಅದು ಈ ಜನ್ಮದಲ್ಲಿ ಸಾಧ್ಯ ಇಲ್ಲಾ ಅಂತ. ನಿನ್ನ ಮಗಳಿಗೆ ಅವನನ್ನ ಗಂಡ ಅಂತ ಒಪ್ಪಿಕೊಳ್ಳೋಕೆ ಅಲ್ಲ ಕನಿಷ್ಠ ಪಕ್ಷ ಒಬ್ಬ ಮನುಷ್ಯ ಅಂತ ಕೂಡ ನೋಡೋಕೆ ಇಷ್ಟ ಪಡ್ತಾ ಇಲ್ಲಾ ಅಂದಾಗ. ನಾವೇನೋ ಆಸೆ ಪಟ್ಟು ಕಾಯೋದರಲ್ಲಿ ಅರ್ಥ ಇಲ್ಲಾ. ಇಲ್ಲಿ ಅವನು ಇರೋದಕ್ಕಿಂತ ಅವನ ಮನೇಲಿ ಅವನು ಇರೋದೇ ಒಳ್ಳೇದು. ಲಾಯರ್ ಗೆ ಬರೋಕೆ ಹೇಳ್ತಿನಿ. ಇಬ್ಬರಿಗೂ ಡಿವೋರ್ಸ್ ಕೊಡಿಸಿ ಬಿಡ್ತೀನಿ. ಆಮೇಲೆ ಅವನ್ಯಾರೋ ಇವಳು ಯಾರೋ.  ಇನ್ನ ಅನಾ ಅಂತೀಯಾ. ಸತ್ತೋದ್ರು ಒಂದೇ ಅಂತ ಹೇಳಿದ ನಿನ್ನ ಮಗಳಿಗೆ ಹೇಳು. ಅವನು ಸತ್ತೇ ಹೋದ ಅಂತ.  ಸ್ವಲ್ಪ ದಿನ ಅಳ್ತಾಳೆ ಆಮೇಲೆ ಸರಿ ಹೋಗ್ತಾಳೆ. ಅಂತ ಹೇಳಿ ಎದ್ದು ರೂಮ್ ಕಡೆಗೆ ಹೋಗೋಕೆ ಹೋಗ್ತಾರೆ.

   ಸುಭದ್ರ ಅವರಿಗೆ ಏನ್ ಮಾತಾಡಬೇಕು ಅನ್ನೋದೇ ಅರ್ಥ ಆಗಲ್ಲಾ. ಇಷ್ಟು ವರ್ಷದಲ್ಲಿ ಅವರು ಈ ರೀತಿ ಮಾತಾಡಿದ್ದು ಯಾವತ್ತೂ ಕೇಳಿಲ್ಲ. ಒಂದು ಕಡೆ ಮಗಳನ್ನ ನೋಡ್ತಾಳೆ. ನಯನಾ ಕಣ್ಣೀರು ಸುರಿಸುತ್ತಾ ಅಳ್ತಾ ರೂಮ್ ಕಡೆಗೆ ಹೊರಟು ಹೋಗ್ತಾಳೆ. ಗಂಡ ಕೂಡ ಎದ್ದು ಅವರ ರೂಮ್ ಗೆ ಹೋಗ್ತಾರೆ. ಸುಭದ್ರ ಅವರು ಅಲ್ಲೇ ಸೋಫಾ ಮೇಲೆ ಕೂತು ಬಿಡ್ತಾರೆ. ರಾತ್ರಿ 11 ಗಂಟೆ ಆಯಿತು ಸೋಫಾ ಮೇಲೆ ಕೂತಿದ್ದ, ಸುಭದ್ರ ಎದ್ದು ರೂಮ್ ಗೆ ಹೋಗಿ ನೋಡ್ತಾರೆ. ವಿಶ್ವನಾಥ್ ಬೆಡ್ ಮೇಲೆ ಮಲಗಿರ್ತಾರೆ. ಸುಭದ್ರ ಹೋಗಿ ಅವರ ಪಕ್ಕ ಕೂತು. 

ರೂಮ್ ಅಲ್ಲಿ ಅಳ್ತಾ ಮಲಗಿದ್ದ ನಯನಾ ಅಪ್ಪ ಮಾತಾಡಿದನ್ನ ಯೋಚ್ನೆ ಮಾಡ್ತಾ, ಕೊನೆಗೂ ಒಂದು ನಿರ್ಧಾರ ಮಾಡಿ, ಅಪ್ಪನ ಹತ್ತಿರ ಮಾತಾಡಬೇಕು ಅಂತ ಎದ್ದು ಅಪ್ಪನ ರೂಂ ಹತ್ತಿರ ಬಂದು ನೋಡ್ತಾಳೆ, ಡೋರ್ ಓಪನ್ ಇದೆ ಅದೇ ಸಮಯಕ್ಕೆ ಸರಿಯಾಗಿ.

ಸುಭದ್ರ,,, ರೀ ನನಗೆ ಗೊತ್ತು ನೀವು ಯಾರ್ ಬಗ್ಗೆನೂ ಸರಿಯಾಗಿ ತಿಳಿದುಕೊಳ್ಳದೆ ಯಾವುದೇ ನಿರ್ಧಾರಕ್ಕೆ ಬರೋದಿಲ್ಲ ಅಂತ. ಅಂತದ್ರಲ್ಲಿ ಅಭಿ ನಾ ಅಳಿಯಯನಾಗಿ ಮಾಡಿಕೊಂಡು ಇಡೀ ಸೂಪರ್ ಮಾರ್ಕೆಟ್ ಜವಾಬ್ದಾರಿ ನಾ ಅವನ ಕೈಗೆ ಕೊಟ್ಟಿದ್ದೀರಾ ಅಂದ್ರೆ ಅವನ ಬಗ್ಗೆ ಎಷ್ಟು ತಿಳ್ಕೊಂಡು ಇರ್ತೀರ ಅನ್ನೋದನ್ನ ನಾನು ಅರ್ಥ ಮಾಡ್ಕೋತೀನಿ. ನೀವು ನಯನಾ ಜಾಗದಲ್ಲಿ ಇದ್ದು ಅವಳ ಪರಿಸ್ಥಿತಿ ಬಗ್ಗೆ ಕೂಡ ಸ್ವಲ್ಪ ಯೋಚ್ನೆ ಮಾಡಬೇಕು ಅಲ್ವಾ. ಇಷ್ಟ ಇಲ್ಲದ ಮದುವೆ, ಯಾವ್ ಹುಡುಗೀ ತಾನೇ ಸಂತೋಷ ವಾಗಿ ಇರ್ತಾಳೆ ಹೇಳಿ. 

ವಿಶ್ವನಾಥ್,,, ಸುಭದ್ರ ಮಾತಿಗೆ ಎದ್ದು ಕೂತು. ಸುಭದ್ರ ನಿನಗೆ ನೆನಪಿದೆಯಾ. ಒಂದು ಸರಿ ನಾನು ಹಾರ್ಟ್ ಅಟ್ಯಾಕ್ ಆಗಿ ಹಾಸ್ಪಿಟಲ್ ಗೆ ಸೇರಿದ್ದೇ ಅಂತ.

ಸುಭದ್ರ,,, ಹ್ಮ್ ಗೊತ್ತಿದೆ.

ವಿಶ್ವ,,,, ಅವತ್ತು ನನ್ನ ಹಾಸ್ಪಿಟಲ್ ಗೆ ಸೇರಿಸಿದ್ದೆ ಅಭಿ.

ಸುಭದ್ರ,,, ಏನ್ ರೀ ಹೇಳ್ತಾ ಇದ್ದೀರಾ? 

ವಿಶ್ವ,,, ಹೌದು ಸುಭದ್ರ,,, ನಯನಾ ಬಗ್ಗೆ ಸಂಬಧಿಕರು ದಿನಕೊಂದು ಮಾತನ್ನ ಮಾತಾಡೋವಾಗ, ನನ್ನ ಮನಸ್ಸಿಗೆ ತುಂಬಾ ನೋವಾಗ್ತಾ ಇತ್ತು, ಅವರೆಲ್ಲಾ ಹೇಳೋದನ್ನ ಕೇಳೋಕೆ ಆಗದೆ ಮನಸ್ಸಿಗೆ ನೆಮ್ಮದಿ ಇಲ್ಲದೆ, ಬಾರ್ ಗೆ ಹೋದೆ. ನಾನು ಕೂತಿದ್ದ ಎದುರುಗಡೆ ನೇ ಟೇಬಲ್ ಅಲ್ಲೇ ಅಭಿ ಕೂಡ ಕೂತಿದ್ದ. ಅವನನ್ನ ನೋಡಿ ಈ ವಯಸ್ಸಿಗೆ ಕುಡಿತಾ ಇದ್ದಾನೆ ಸ್ವಲ್ಪ ಕೂಡ ಜವಾಬ್ದಾರಿ ಇಲ್ಲಾ ಅಂತ ಮನಸಲ್ಲೇ ಬೈಕೊಂಡು. ನಾನು ಕೂಡ ಡ್ರಿಂಕ್ಸ್ ಮಾಡ್ತಾ ಅವನ ಕಡೆಗೆ ನೋಡ್ತಾ ಇದ್ದೆ. ನಾನು ಅವನನ್ನ ನೋಡೋದನ್ನ ನೋಡಿ. ಏನ್ ಸರ್ ಈ ವಯಸ್ಸಿಗೆ ಬಂದು ಜವಾಬ್ದಾರಿ ಇಲ್ದೆ ಕುಡಿತಾ ಇದ್ದಾನೆ ಅಂತ ಬೈಕೋತಾ ಇದ್ದೀರಾ. ಪರ್ವಾಗಿಲ್ಲ ಬೈಕೋಳಿ. ದೊಡ್ಡವರು ನೀವು ಒಳ್ಳೆ ರೀತಿ ಯೋಚ್ನೆ ಮಾಡಿ ಬೈತಾ ಇದ್ದೀರಾ. ಅದ್ರೆ ನಾನ್ ಸಂತೋಷಕ್ಕೋ ಇಲ್ಲಾ ನಶೆಗೋ ಕುಡಿತಾ ಇಲ್ಲಾ. ಮನಸಲ್ಲಿ ತುಂಬಾ ನೋವಿದೆ ಹೇಳಿಕೊಳ್ಳೋಕೆ ಇಷ್ಟ ಇಲ್ಲಾ ಆಗಂತ ಮರಿಯೋಕು ಇಷ್ಟ ಇಲ್ಲಾ. ಈ ರೀತಿ ನೇ ಹೋಗಿ ಮಲಗಿದ್ರೆ ನಿದ್ದೆ ಕೂಡ ಬರೋದಿಲ್ಲ. ನನ್ನ ನಂಬಿಕ್ಕೊಂಡು ಸ್ವಲ್ಪ ಜನ ಇದ್ದಾರೆ. ನಾಳೆ ಎದ್ದು ಕೆಲಸಕ್ಕೆ ಹೋಗಬೇಕು ದುಡೀಬೇಕು ಅಲ್ವಾ ಅದಕ್ಕೆ ರಾತ್ರಿ ಮಲಗಬೇಕು ಅಲ್ವಾ ಅದಕ್ಕೆ ಕುಡಿತಾ ಇದ್ದೀನಿ ಅಂತ ಹೇಳಿ ಎದ್ದು ಹೊರಗಡೆ ಹೋದ. 

ನನಗೆ ಇದ್ದಾ ನೋವಿನ ಮಧ್ಯ ಅವನ ಮಾತನ್ನ ನಾನು ಜಾಸ್ತಿ ತಲೆಗೆ ಹಾಕಿಕೊಂಡು ಇಲ್ಲಾ. ಕುಡಿದು ಬಾರ್ ನಿಂದ ಹೊರಗೆ ಬಂದೆ, ಅದೇ ಸಮಯಕ್ಕೆ ಸರಿಯಾಗಿ ನನ್ನ ಸಂಬಂದಿ ಮಗ ಅಲ್ಲಿಗೆ ಬಂದು ನನ್ನ ನೋಡಿ ನಾನು ಮರಿಬೇಕು ಅಂತ ಇದ್ದಾ ವಿಷಯ ನಾ ಮತ್ತೆ ಮಾತಾಡೋಕೆ ಶುರು ಮಾಡಿದ ಎಷ್ಟರ ಮಟ್ಟಿಗೆ ಅಂದ್ರೆ ನನ್ನ ನಾನು ಕಂಟ್ರೋಲ್ ಮಾಡ್ಕೊಳ್ಳೋಕೆ ಆಗಲಿಲ್ಲ. ಅವನನ್ನ ಹೊಡಿಯೋಕೆ ಹೋದೆ. ಅವನು ನನ್ನ ಜೋರಾಗಿ ತಳ್ಳಿದ ನಾನು ಹೋಗಿ ನೆಲದ ಮೇಲೆ ಬಿದ್ದೆ. ಅದೇ ಸಮಯಕ್ಕೆ ಸರಿಯಾಗಿ ಅಲ್ಲಿ ಇದ್ದಾ ಅಭಿ ಅವನ ಸ್ನೇಹಿತರು ನಾನು ಕೆಳಗೆ ಬಿದ್ದಿದ್ದನ್ನ ನೋಡಿ ನನ್ನ ಹತ್ತಿರ ಓಡಿ ಬಂದ್ರು. ನನಗೆ ಎದೆ ನೋವು ಶುರುವಾಯ್ತು. ನಾನು ಕೆಳಗೆ ಬಿದ್ದಿದ್ದೀನಿ ಅಂತ ಗೊತ್ತಿದ್ರು. ನನ್ನ ಸಂಬಂದಿ ಮಗ ನನ್ನ ಹೊಡಿಯೋಕೆ ಬಂದ ಅಭಿ ಅವನನ್ನ ತಡೆದು ಅವನಿಗೆ ಎರಡು ಬಿಟ್ಟು ಅವನ ಸ್ನೇಹಿತರಿಗೆ ಹೇಳಿ ಅವನ್ನನ್ನ ದೂರ ಕರ್ಕೊಂಡು ಹೋಗೋಕೆ ಹೇಳಿದ. ಆಮೇಲೆ ಅಭಿ ಬಂದು ನನ್ನ ಪರಿಸ್ಥಿತಿ ನೋಡಿ. ಬೈಕ್ ಅಲ್ಲಿ ಅವನ ಫ್ರೆಂಡ್ ಜೊತೆಗೆ ಹಾಸ್ಪಿಟಲ್ ಗೆ ಕರ್ಕೊಂಡು ಹೋದ್ರು. ಹೋಗ್ತಾ ದಾರಿಲಿ ನನಗೆ ಪ್ರಜ್ಞೆ ಹೊರಟು ಹೋಯಿತು..

    ನನಗೆ ಪ್ರಜ್ಞೆ ಬಂದಾಗ ಹಾಸ್ಪಿಟಲ್ ಅಲ್ಲಿ ಇದ್ದೆ. ಡಾಕ್ಟರ್ ನನ್ನ ನೋಡಿ ಚೆಕ್ ಮಾಡಿ ನೀವು ರೆಸ್ಟ್ ಮಾಡಿ. ಅಂತ ಹೇಳಿ ಹೊರಗೆ ಹೋದ್ರು. ಆಮೇಲೆ ಅಭಿ ಬಂದು ಸರ್ ಹೇಗಿದ್ದೀರ ಅಂತ ಕೇಳಿದ. ನಾನ್ ತುಂಬಾ ಥ್ಯಾಂಕ್ಸ್ ನನ್ನ ಕಾಪಾಡಿದಕ್ಕೆ ಅಂತ ಹೇಳಿದೆ. ಪರ್ವಾಗಿಲ್ಲ ಬಿಡಿ ಸರ್ ಅಂತ ಮೊಬೈಲ್ ಕೊಟ್ಟು ನಿಮ್ ಮನೆಯವರಿಗೆ ಕಾಲ್ ಮಾಡಿ ಬರೋಕೆ ಹೇಳಿ ಅಂತ ಹೇಳಿ ಹೊರಟು ಹೋದ. ಆಮೇಲೆ ನೀವು ಹಾಸ್ಪಿಟಲ್ ಗೆ ಬಂದ್ರಿ. ನೀವು ಡಿಸ್ಚಾರ್ಜ್ ಮಾಡ್ಕೊಂಡು ಹೋಗೋಣ ಅಂತ ಡಾಕ್ಟರ್ ನಾ ಮೀಟ್ ಮಾಡೋಕೆ ಹೋದಾಗ, ನರ್ಸ್ ಬಂದ್ರು. ನಾನು ನರ್ಸ್ ಹತ್ತಿರ ಡಿಸ್ಚಾರ್ಜ್ ಬಿಲ್ ಕೇಳಿದೆ. ನರ್ಸ್ ಸರ್ ನಿಮ್ ಮಗ ಬಿಲ್ ಎಲ್ಲಾ ಒಂದೇ ಸಲ ಪೆ ಮಾಡಿ ಬಿಟ್ರು. ನೀವು ಅಂದ್ರೆ ತುಂಬಾ ಇಷ್ಟ ಅಂತ ಆಂಕೊಳ್ತೀನಿ. ನಿಮ್ಮನ್ನ ಹಾಸ್ಪಿಟಲ್ ಗೆ ಕರ್ಕೊಂಡು ಬಂದಾಗ, ಅವರ ಹತ್ತಿರ ಅಷ್ಟೊಂದು ದುಡ್ಡು ಇಲ್ಲಾ ಅಂತ ಆಂಕೊಳ್ತೀನಿ. ಬಿಲ್ ಕೌಂಟರ್ ಹತ್ತಿರ ನಿಂತು ಅದೆಷ್ಟೋ ಜನಕ್ಕೆ ಕಾಲ್ ಮಾಡಿ ದುಡ್ಡು ಕೇಳಿದ್ನೋ ಗೊತ್ತಿಲ್ಲ. ಆಮೇಲೆ ದುಡ್ಡು ಅಡ್ಜಸ್ಟ್ ಮಾಡಿ ಬಿಲ್ ಪೆ ಮಾಡಿ, ಎಷ್ಟುದಿನ ಇರ್ತೀರ ಎಷ್ಟಾಗುತ್ತೆ ಬಿಲ್ ಅಂತ ಡಾಕ್ಟರ್ ಹತ್ತಿರ ತಿಳ್ಕೊಂಡು ಫುಲ್ ಬಿಲ್ ಪೆ ಮಾಡಿದ. ನಿಮಗೆ ಎಚ್ಚರ ಹಾಗೋ ವರೆಗೂ ಪಾಪ ನಿಮ್ ಮಗನನ್ನ ನೋಡೋಕೆ ಆಗ್ತಾ ಇರಲಿಲ್ಲ. ಒಳ್ಳೆ ಮಗನನ್ನ ಪಡೆದಿದ್ದೀರಾ ಅಂತ ಹೇಳಿ ಹೊರಟು ಹೋದಳು. 

    ಬಾರ್ ಅಲ್ಲಿ ಜವಾಬ್ದಾರಿ ಇಲ್ದೆ ಇರೋವ್ನು ಅಂತ ಬೈಕೊಂಡ ನಾನು, ನನ್ನ ಪ್ರಾಣ ನಾ ಉಳಿಸಿದ ನನ್ನ ಮಗನ ಸ್ಥಾನದಲ್ಲಿ ನಿಂತು ನನ್ನ ಕಾಪಾಡಿದ. ಮನೆಗೆ ಬಂದ ಮೇಲೆ ಮತ್ತೆ ಅವನನ್ನ ನೋಡೋಣ ಮೀಟ್ ಮಾಡಿ ಮಾತಾಡೋಣ ಅಂತ ಬಾರ್ ಹತ್ತಿರ ಹೋದೆ. ನನಗೆ ಸಿಗಲಿಲ್ಲ. ಎರಡು ಮೂರು ದಿನ ಆದಮೇಲೆ ಸಿಕ್ಕಿದ. ನನ್ನ ನೋಡಿ ಹೇಗಿದ್ದೀರ ಸರ್ ಅಂತ ಕೇಳಿದ. ಅವನಿಗೆ ಯಾವರೀತಿ ಥ್ಯಾಂಕ್ಸ್ ಹೇಳಬೇಕು ಅನ್ನೋದು ಗೊತ್ತಾಗದೆ ನನ್ನ ಕಾರ್ಡ್ ಕೊಟ್ಟು ನನ್ನಿಂದ ಏನಾದ್ರು ಸಹಾಯ ಬೇಕಾಗಿದ್ರೆ ನನ್ನ ಭೇಟಿ ಮಾಡು ಅಂತ ಹೇಳಿ ಅಲ್ಲಿಂದ ಹೊರಟು ಬಂದೆ. 3 ತಿಂಗಳು ಆದಮೇಲೆ ನನ್ನ ನಂಬರ್ ಗೆ ಒಂದು ಕಾಲ್ ಬಂತು. ನಾನು ಪಿಕ್ ಮಾಡಿ ಮಾತಾಡಿದಾಗ ಗೊತ್ತಾಯ್ತು ಅಭಿ ಅಂತ. ಆಗ ವಿಷಯ ಗೊತ್ತಾಯಿತು ಅವನ ತಾಯಿ ಹಾಸ್ಪಿಟಲ್ ಅಲ್ಲಿ ಅಡ್ಮಿಟ್ ಆಗಿದ್ದಾರೆ ಆಪರೇಷನ್ ಮಾಡೋಕೆ ಸ್ವಲ್ಪ ದುಡ್ಡು ಬೇಕಾಗಿತ್ತು ಅಂತ. ನಾನು ಹಾಸ್ಪಿಟಲ್ ಗೆ ಹೋದೆ. ಡಾಕ್ಟರ್ ಹತ್ತಿರ ಮಾತಾಡಿ ಆಪರೇಷನ್ ಗೆ ಎಷ್ಟು ದುಡ್ಡು ಬೇಕಾಗುತ್ತೋ ತಿಳ್ಕೊಂಡು ನಾನ್ ದುಡ್ಡು ಕೊಟ್ಟು ಆಪರೇಷನ್ ಆಗೋವರೆಗೂ ಅಲ್ಲೇ ಇದ್ದೆ. ಆಮೇಲೆ ಮನೆಗೆ ಬಂದೆ. ಸ್ವಲ್ಪ ದಿನ ಆದಮೇಲೆ ಮತ್ತೆ ಅಭಿ ಕಾಲ್ ಮಾಡಿ ಭೇಟಿ ಮಾಡಿದ. ಅವರ ಮನೆ ಪತ್ರ ಕೊಟ್ಟು ಸರ್ ನೀವು ಕೊಟ್ಟ ದುಡ್ಡನ್ನ ವಾಪಸ್ಸು ಕೊಡೊ ತನಕ ಈ ಪತ್ರ ನಿಮ್ ಹತ್ತಿರಾನೆ ಇರಲಿ, ಅಂತ ನಾನು ಎಷ್ಟೇ ಬೇಡ ಅಂದ್ರು ಕೇಳದೆ ಕೊಟ್ಟು ಹೋದ..

     ಯಾರೋ ಗುರುತು ಪರಿಚಯ ಇಲ್ದೆ ಇರೋ ನನ್ನ ಪ್ರಾಣ ಕಾಪಾಡಿದ. ತಾಯಿ ನಾ ಅಷ್ಟು ಚೆನ್ನಾಗಿ ನೋಡ್ಕೋತ ಇದ್ದಾನೆ. ನಾನು ಕೊಟ್ಟ ದುಡ್ಡನ್ನ ಸಾಲ ಅಂತ ಅನ್ಕೊಂಡು ತೀರಿಸೋಕೆ ಅವನ ಮನೆ ಪತ್ರ ನಾ ಕೊಟ್ಟು ಹೋದ. ದುಡೀತಾನೆ ಜವಾಬ್ದಾರಿ ಇದೆ ಅಂತ. ಅವನಿಗೆ ಕಷ್ಟ ಗೊತ್ತಿದೆ, ಪ್ರಾಣ ದ ಬೆಲೆ ಗೊತ್ತು. ನನ್ನ ಮನಸಲ್ಲಿ ಇರೋ ನೋವನ್ನ ಅರ್ಥ ಮಾಡ್ಕೋತಾನೆ ಅಂತ ಅವನನ್ನ ಮೀಟ್ ಮಾಡಿ. ನನ್ನ ಪರಿಸ್ಥಿತಿ ಬಗ್ಗೆ ನಯನಾ ಬಗ್ಗೆ ಹೇಳಿ. ನಯನಾ ನಾ ಮದುವೆ ಮಾಡ್ಕೊಳ್ಳೋಕೆ ಹೇಳಿದೆ. ನನ್ನ ಮಾತನ್ನ ಕೇಳಿ ಅವನು ಅರ್ಥ ಮಾಡಿಕೊಂಡು ನನ್ನ ಮೊಮ್ಮಗಳಿಗೆ ತಂದೆ ಆಗಿ ಬಂದ ಬಿಟ್ರೆ. ನಾನು ಶ್ರೀಮಂತ ನನ್ನ ಹತ್ತಿರ ದುಡ್ಡು ಇದೆ. ಮಗಳು ಚೆನ್ನಾಗಿ ಇದ್ದಾಳೆ ಅಂತ ಅಲ್ಲ. ಇದೆ ಬೇರೆ ಯಾರಾದ್ರೂ ಆಗಿದ್ದಿದ್ರೆ. ಇಷ್ಟೋತ್ತಿಗೆ ಏನೋ ಒಂದು ನಾಟಕ ಮಾಡಿ ಈ ಮನೆ ಅಧಿಕಾರ ನಾ ತಗೋತಾ ಇದ್ದಾ. 

   ನನಗೆ ಸಾಕಾಗಿ ಹೋಗಿದೆ ಸುಭದ್ರ. ಅರ್ಥ ಮಾಡ್ಕೊತಾಳೆ ಅಂತ ಕಾದು ಕಾದು ಸೋತು ಹೋದೆ. ನಮ್ಮಿಂದ ನಮ್ಮ ಮೊಮ್ಮಗಳಿಂದ ಅವಳ ಲೈಫ್ ಹಾಳಾಗೋದು ಬೇಡ. ಡಿವೋರ್ಸ್ ಕೊಡಿಸಿ ಬಿಡೋಣ ಆಮೇಲೆ ಅವಳ ಇಷ್ಟ. 

   ಸುಭದ್ರ,,, ರೀ ನನಗೆ ಸಮಾಧಾನ ಮಾಡ್ತಾ ಇದ್ದವರು ನೀವೇ ಹೀಗೆ ಮಾತಾಡಿದ್ರೆ ಹೇಗೆ. ದೇವರಿದ್ದಾನೆ ಬನ್ನಿ ಬಂದು ಮೊದಲು ಊಟ ಮಾಡಿ.

ವಿಶ್ವ,,, ಬೇಡ ಸುಭದ್ರ, ಯಾಕೋ ಮನಸಿಲ್ಲ. ಅಂತ ಹೇಳಿ ಮತ್ತೆ ಮಲಗಿ ಬಿಡ್ತಾರೆ. 

ನಯನಾ ಅಪ್ಪ ಮಾತಾಡಿದನ್ನ ಕೇಳಿದ ಮೇಲೆ ಅವಳು ಮಾಡಿದ್ದು ತಪ್ಪು ಅಂತ ಅನ್ನಿಸಿತು. ಕಣ್ಣೀರನ್ನ ಹೊರೆಸಿಕೊಂಡು, ರೂಮ್ ಒಳಗೆ ಬರ್ತಾ ಅಪ್ಪ ಅಂತ ಕರೀತಾಳೆ.

ಸುಭದ್ರ ಮಗಳ ಕಡೆಗೆ ನೋಡಿದ್ರೆ. ವಿಶ್ವ ಎದ್ದು ಕೂತು ಮಗಳ ಕಡೆಗೆ ನೋಡ್ತಾರೆ. 

ನಯನಾ,,,, ಅಪ್ಪ ನಾನು ಮಾತಾಡಿದ್ದು ತಪ್ಪೇ, ನನ್ನ ಪರಿಸ್ಥಿತಿ ನ ಕೂಡ ನೀವು ಅರ್ಥ ಮಾಡಿಕೊಳ್ಳಿ. ಅಭಿ ನಾ ನಾನೆ ತಪ್ಪಾಗಿ ಅರ್ಥ ಮಾಡಿಕೊಂಡು ಇಷ್ಟ ಬಂದ ಹಾಗೇ ಮಾತಾಡಿದೆ. ದಯವಿಟ್ಟು ನನ್ನ ಕ್ಷಮಿಸಿ ಬಿಡಿ. ಪ್ಲೀಸ್ ಎದ್ದು ಬಂದು ಊಟ ಮಾಡಿ ಅಪ್ಪ.

ಸುಭದ್ರ,,, ರೀ ಬನ್ರೀ,, ಅವಳೇ ಹೇಳ್ತಾ ಇದ್ದಾಳೆ ಅಲ್ವಾ ತಪ್ಪಾಗಿ ಅರ್ಥ ಮಾಡಿಕೊಂಡು ಮಾತಾಡಿದ್ದು ಅಂತ ಬನ್ನಿ ಅಂತ ಹೇಳಿ ಬಲವಂತವಾಗಿ ಕರ್ಕೊಂಡು ಹೋಗ್ತಾರೆ ಊಟ ಮಾಡಿಸೋಕೆ.

@@@@@@@@@@@@@@@@@@@@@@@@@