ಪಚ್ಚೇನಗರಿ

(4)
  • 61.6k
  • 0
  • 22.6k

ಸುಂದರಕಾಂಡದ ಕಥನಾಗರೀಯೋ! ದ್ವಾಪರದ ಕೃಷ್ಣಾ ಸುಂದರಿಯೋ! ನೀ ಬಾಳ ಬೆಳಕೋ! ತಂಗಾಳಿಯೊ ! ನಾ ಕಾಣೆ ನಿನ್ನ ಒಡಲಾಳವನ್ನ ನಿನ್ನ ಸನಿಹ ಬಿಡಲಾರೆ ಚಿನ್ನ ಇರು ನೀನು ಜೊತೆಯಲ್ಲೇ ಬಿಡಲಾರೆ ನಾ ನಲ್ಲೆ ಗೀತಾ ಹಾಡಲು ಶುರು ಮಾಡಿದಳು, ಬಸ್ಸಿನಲ್ಲಿದ್ದ ತನ್ನ ಗೆಳತಿಯರನ್ನು ರಂಜಿಸುತ್ತಾ, ನಸುನಕ್ಕು ತಾನು ಗಂಡು ಈ ತುಂತುರು ಮಳೆ ನನ್ನ ಪ್ರೇಯಸಿ ಎಂಬ ಭಾವವನ್ನು ಸೃಷ್ಟಿಸಿ ಹಾಡುತ್ತಿದ್ದಳು. ಗೆಳತಿಯರೆಲ್ಲ ಗೀತಳ ಹಾಡು ಹುಡುಗರು ಹಾಡುವ ಹಾಗೆ ಹಾಡುತ್ತಿದ್ದೀಯ , ಏನಾಯಿತು ಈ ದಿನ ಗೀತಾ ಎಂದು ನಗಲು ಶುರುಮಾಡಿದರು. ಇದ್ದಕ್ಕಿದ್ದಂತೆ ತಂಪಾಗಿ ಬೀಸುತ್ತಿದ್ದ ಗಾಳಿ ಯಾಕೋ ಗೀತಾ ಬಸ್ ನಿಂದ ಇಳಿಯುತ್ತಿದ್ದಂತೆ ತನ್ನ ಭಾವವನ್ನು ಬದಲಾಯಿಸಿತು. ಮುಸ್ಸಂಜೆ 4 ಗಂಟೆ ಸಮಯ, ಗೀತಾ ಕಾಲೇಜು ಮುಗಿಸಿ ಫ್ರೆಂಡ್ಸ್ ಜೊತೆ ಹರಟೆ ಹೊಡೆಯುತ್ತ ಬುಸ್ಸಿನಿಂದಿಳಿದು ಮನೆಗೆ ಹೊರಟಿರುವಾಗಲೇ ಬೀಸಿತು ಬಿರುಗಾಳಿ , ಬಿರುಗಾಳಿಯ ಗೆಳತಿಯಂತೆ ಶುರುವಾಯಿತು ಮಳೆ. ಪಚ್ಚೇನಗರದಿಂದ ರಾಗಿಹಳ್ಳಿಗೆ ಒಂದೇ ಸೇತುವೆ ಹಾಗು ಅದೊಂದೇ ದಾರಿ. ಮಳೆಗೆ ಗೀತಳ ಮೇಲೆ ಏನು ಮುನಿಸೋ, ಸಣ್ಣದಾಗಿ ಬಂದು ದೊಡ್ಡದಾಗಿ ನರ್ತಿಸಲು ಶುರುಮಾಡಿತು. ಆ ಮಳೆ ಗೀತಳ ಕೆಂದುಟಿಯ ಮೇಲೆ ಬಿದ್ದು ನಿಧಾನವಾಗಿ ಮಾಯವಾಗುತ್ತಲಿತ್ತು. ಆಕೆ ಹಾಕಿದ್ದ ಗುಲಾಬಿ ಬಣ್ಣದ ದುಪ್ಪಟ್ಟದಿಂದ ತನ್ನ ಮುಖವನ್ನು ಒರೆಸುತ್ತಾ ಮರದಡಿಯಲ್ಲಿ ನಿಂತಳು ಅದೇಕೋ ಇಂದು ಸುತ್ತ ಮುತ್ತ ಜನರಿಲ್ಲದ ಕಾರಣ ಆಕೆಗೆ ಅದೇನೋ ಒಂದು ಆತಂಕ ಮನದಲ್ಲಿ ಒಂದು ಸಣ್ಣ ಬೀಜವಾಗಿ ಮೊಳಕೆ ಹೊಡೆಯಿತು.

1

ಪಚ್ಚೇನಗರಿ - 1

ಸುಂದರಕಾಂಡದ ಕಥನಾಗರೀಯೋ!ದ್ವಾಪರದ ಕೃಷ್ಣಾ ಸುಂದರಿಯೋ!ನೀ ಬಾಳ ಬೆಳಕೋ! ತಂಗಾಳಿಯೊ ! ನಾ ಕಾಣೆ ನಿನ್ನ ಒಡಲಾಳವನ್ನನಿನ್ನ ಸನಿಹ ಬಿಡಲಾರೆ ಚಿನ್ನ ಇರು ನೀನು ಜೊತೆಯಲ್ಲೇಬಿಡಲಾರೆ ನಾ ನಲ್ಲೆ ಗೀತಾ ಹಾಡಲು ಶುರು ಮಾಡಿದಳು, ಬಸ್ಸಿನಲ್ಲಿದ್ದ ತನ್ನ ಗೆಳತಿಯರನ್ನು ರಂಜಿಸುತ್ತಾ, ನಸುನಕ್ಕು ತಾನು ಗಂಡು ಈ ತುಂತುರು ಮಳೆ ನನ್ನ ಪ್ರೇಯಸಿ ಎಂಬ ಭಾವವನ್ನು ಸೃಷ್ಟಿಸಿ ಹಾಡುತ್ತಿದ್ದಳು. ಗೆಳತಿಯರೆಲ್ಲ ಗೀತಳ ಹಾಡು ಹುಡುಗರು ಹಾಡುವ ಹಾಗೆ ಹಾಡುತ್ತಿದ್ದೀಯ , ಏನಾಯಿತು ಈ ದಿನ ಗೀತಾ ಎಂದು ನಗಲು ಶುರುಮಾಡಿದರು. ಇದ್ದಕ್ಕಿದ್ದಂತೆ ತಂಪಾಗಿ ಬೀಸುತ್ತಿದ್ದ ಗಾಳಿ ಯಾಕೋ ಗೀತಾ ಬಸ್ ನಿಂದ ಇಳಿಯುತ್ತಿದ್ದಂತೆ ತನ್ನ ಭಾವವನ್ನು ಬದಲಾಯಿಸಿತು. ಮುಸ್ಸಂಜೆ 4 ಗಂಟೆ ಸಮಯ, ಗೀತಾ ಕಾಲೇಜು ಮುಗಿಸಿ ಫ್ರೆಂಡ್ಸ್ ಜೊತೆ ಹರಟೆ ಹೊಡೆಯುತ್ತ ಬುಸ್ಸಿನಿಂದಿಳಿದು ಮನೆಗೆ ಹೊರಟಿರುವಾಗಲೇ ಬೀಸಿತು ಬಿರುಗಾಳಿ , ಬಿರುಗಾಳಿಯ ಗೆಳತಿಯಂತೆ ಶುರುವಾಯಿತು ಮಳೆ. ಪಚ್ಚೇನಗರದಿಂದ ರಾಗಿಹಳ್ಳಿಗೆ ಒಂದೇ ಸೇತುವೆ ಹಾಗು ಅದೊಂದೇ ...Read More

2

ಪಚ್ಚೇನಗರಿ - 2

ಮೆಲ್ಲಗೆ ಗುಲಾಬಿ ಹಿಡಿದ ಕೈ ಗೀತಾಳ ಕೈ ತಾಕಿ ಮೇಲೆತ್ತಲು ಪ್ರಯತ್ನಿಸಿತು. ಗೀತಾ ಮುಂದೆ ಇದ್ದ ಪೂರ್ಣ ಮುಖವನ್ನು ನೋಡತೊಡಗಿದಳು.ಯಾರಿದು! ಗೀತಾ : ಯಾರು ನೀವು?ಮುಂದಿದ್ದ : ಸಂದೀಪ್ ನನ್ ಹೆಸರು ಸಂದೀಪ್ ಅಂತ.ಗೀತಾ : ಯಾಕೆ ನಂಗೆ ಇಷ್ಟು ಹೆದರಿಸಿದ್ರಿ, ಏನಿದು ಕೈನಲ್ಲಿ ಹೂವು! ಯಾಕೆ ನನ್ ಫಾಲೋ ಮಾಡಿದ್ರಿ? ನಂಗೆ ತುಂಬಾ ಭಯ ಆಯ್ತು.ಹೀಗೇನಾ ಹೆದರಿಸೋದು?ಸಂದೀಪ್ : ಸಾರಿ!(ಗೀತಾ ನಿಶ್ಯಬ್ದ)ಸಂದೀಪ್ : ಈ ಗುಲಾಬಿ ನಿಮಗಾಗಿ! ಇದನ್ನ ಕೊಡೋಕೆ ನಾನುಓಡೋಡಿ ಬಂದಿದ್ದು.ಪ್ಲೀಸ್ ತಗೊಳ್ಳಿ!ಗೀತಾ : ಯಾಕೆ ಈ ಗುಲಾಬಿ? ನನಗೆ ಬೇಡ. ಮಳೆ ತುಂಬಾ ಬಾರೋ ಹಾಗಿದೆ. ನಾನು ಹೊರಡಬೇಕು. ಬೈ.ಸಂದೀಪ್ : ಗೀತಾ....ಪ್ಲೀಸ್...ನಿಂತುಕೊಳ್ಳಿ. ಪ್ಲೀಸ್...(ಗೀತಾ ಏನು ಮಾತಾಡದೆ ತನ್ನ ಮನೆ ಕಡೆ ಹೊರಟಳು)ಸಂದೀಪ್ ಕಣ್ಣುಗಳು ಮಾತ್ರ ಗೀತಾ ಮರೆಯಾಗುವ ವರೆಗೂ ನೋಡುತ್ತಿದ್ದವು.(ಗೀತಾ ಮನೆ)ಗೀತಾಳ ಅಮ್ಮ: ಗೀತಾ ಅನ್ನ ಇದೆ ಮಜ್ಜಿಗೆ ಇದೆ ಹಾಕೊಂಡು ತಿನ್ನು.(ಗೀತಾ ಊಟ ತಿನ್ನುತ್ತ ಯೋಚಿಸತೊಡಗಿದಳು).ಈತನನ್ನ ಎಲ್ಲೋ ನೋಡಿದ್ದೀನಿ ಆದ್ರೆ ಎಲ್ಲಿ ಅಂತ ...Read More