ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು ಒಂದು ನಿರ್ಜೀವ ವಾತಾವರಣವಾಗಿ ಮಾರ್ಪಟ್ಟಿತ್ತು. ಅನು ಸತ್ತು ಹೋಗಿದ್ದಾಳೆ ಮತ್ತು ತನ್ನ ಮೂರು ವರ್ಷಗಳ ಪ್ರೀತಿ ಒಂದು ಸುಳ್ಳು ಎನ್ನುವ ಪ್ರಿಯಾಳ ಮಾತುಗಳು ಅವನ ಆತ್ಮವನ್ನು ಕೊಂದು ಹಾಕಿದ್ದವು. ಬೆಂಗಳೂರಿನ ಕೃಷ್ಣರಾಜಪುರಂನ ಒಂದು ಜನನಿಬಿಡ ಮೂಲೆಯಲ್ಲಿರುವ, ಸದಾ ಹೊಗೆ ಮತ್ತು ಕಡಿಮೆ ಬೆಳಕಿನಿಂದ ಕೂಡಿದ್ದ, 'ಮಿಡ್‌ನೈಟ್ ಶ್ಯಾಡೋ' ಎಂಬ ಹಳೆಯ ಬಾರ್ ಕೃಷ್ಣನ ಹೊಸ ವಿಳಾಸವಾಗಿತ್ತು.
ಸತ್ತ ಪ್ರೀತಿ ಜೀವಂತ ರಹಸ್ಯ 1
ಕೃಷ್ಣನ ಮತ್ತು ಅವಳ ಮೌನ ಕಥೆಯ ನಾಟಕೀಯ ಅಂತ್ಯದ ನಂತರ, ಕೃಷ್ಣನ ಜೀವನವು ಒಂದು ನಿರ್ಜೀವ ವಾತಾವರಣವಾಗಿ ಮಾರ್ಪಟ್ಟಿತ್ತು. ಅನು ಸತ್ತು ಹೋಗಿದ್ದಾಳೆ ಮತ್ತು ತನ್ನ ವರ್ಷಗಳ ಪ್ರೀತಿ ಒಂದು ಸುಳ್ಳು ಎನ್ನುವ ಪ್ರಿಯಾಳ ಮಾತುಗಳು ಅವನ ಆತ್ಮವನ್ನು ಕೊಂದು ಹಾಕಿದ್ದವು. ಬೆಂಗಳೂರಿನ ಕೃಷ್ಣರಾಜಪುರಂನ ಒಂದು ಜನನಿಬಿಡ ಮೂಲೆಯಲ್ಲಿರುವ, ಸದಾ ಹೊಗೆ ಮತ್ತು ಕಡಿಮೆ ಬೆಳಕಿನಿಂದ ಕೂಡಿದ್ದ, 'ಮಿಡ್‌ನೈಟ್ ಶ್ಯಾಡೋ' ಎಂಬ ಹಳೆಯ ಬಾರ್ ಕೃಷ್ಣನ ಹೊಸ ವಿಳಾಸವಾಗಿತ್ತು.ಅದು ರಾತ್ರಿ ಸುಮಾರು 11:30 ಇರಬಹುದು. ಮರಗೆಲಸದ ಟೇಬಲ್ ಮೇಲೆ, ಕೃಷ್ಣನ ಮುಂದೆ ಅರ್ಧ ತುಂಬಿದ್ದ ವಿಸ್ಕಿ ಗ್ಲಾಸ್ ನಿಂತಿತ್ತು. ಅವನ ಕಣ್ಣುಗಳಲ್ಲಿ ನಿದ್ದೆಯಿರಲಿಲ್ಲ, ಕೇವಲ ಮೂರು ವರ್ಷಗಳ ನೆನಪುಗಳ ನೋವಿತ್ತು. ಅನುಳ ಧ್ವನಿ, ಅವಳ ಸಂದೇಶಗಳು, ಪ್ರಿಯಾಳ ಕಣ್ಣೀರು ಈ ಎಲ್ಲವೂ ಅವನ ತಲೆಯಲ್ಲಿ ಸದಾ ಗುನುಗುತ್ತಿದ್ದವು. ಅನುಳ ನೆನಪುಗಳು ಅವನನ್ನು ಇನ್ನಷ್ಟು ಕಾಡುತ್ತಿದ್ದವು. ನೀನು ಸುಳ್ಳು ಹೇಳಲಿಲ್ಲ, ಅನು. ನೀನು ನಿಜವಾಗಿ ನನ್ನನ್ನು ಪ್ರೀತಿಸಿದ್ದೆ, ಆದರೆ ವಿಧಿ ನಿನ್ನನ್ನು ...Read More