Saarike - 2 in Kannada Thriller by Shrathi J books and stories PDF | ಸಾರಿಕೆ - 2

ಸಾರಿಕೆ - 2

ವಿಪರ್ಯಸವೆಂದರೆ ಎಲ್ಲಾ ವರ್ಗದ ಬೆಕ್ಕುಗಳು ಮಿಯಾಂವ್ ಎಂದರೆ . ಈ ಬೆಕ್ಕು ಮಾತ್ರ ಸಾರಿಕೆಯ ಹತ್ತಿರ ಬಂದು ಮನುಷ್ಯರ ರೀತಿ ಮಾತಾಡುತ್ತದೇ . ಅದನ್ನು ನೋಡಿ ಮತ್ತು ಅದರ ಮಾತು ಕೇಳಿ ಸಾರಿಕೆಗೆ ಕೈ ಕಾಲು ನಡುಗಳು ಶುರುವಾಯಿತು .

ಬೆಕ್ಕು ಅದರ ಮಾತು ಮುಂದುವರಿಸಿತು :
ಸಾರಿಕೆ " ನೀನು ನನ್ನ ಒಡೆಯ ಅರ್ಜುನನ್ನು ತುಂಬಾ ಪ್ರೀತಿಸುತ್ತಿದ್ದೆ , ಆದರೆ ನೀನು ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಲಿಲ್ಲ " . ಅವತ್ತು ನೀನು ನೋಡಿದ ಹಾಗೆ ಸುಡುತ್ತಿದ ದೇಹ ನನ್ನ ಒಡೆಯನದಲ್ಲ , ಆದರೆ ನೀನು ಅವತ್ತು ದುಡುಕಿನಿಂದ ತೆಗೆದುಕೊಂಡ ನಿರ್ಧಾರದಿಂದ ನಿನ್ನ ದೇಹವು ಬೂದಿಯಾಗಿತ್ತು . ನನ್ನ ಒಡೆಯ ಅರ್ಜುನನು ಕಷ್ಟ ಪಟ್ಟು ನಿನ್ನನ್ನು ರಕ್ಷಿಸಲು ತನೆಲ್ಲ ಬ್ರಾಹ್ಮೀ ಶಕ್ತಿಯನ್ನು ಉಪಯೋಗಿಸಿ ನಿನ್ನ ಆತ್ಮವನ್ನು ಸುರಭಿಯ ದೇಹಕ್ಕೆ ಸೇರಿಸಿದರು .

ಮತ್ತು ಅದು ಅಲ್ಲದೇ ನೀನು ಇಲ್ಲಿಗೆ ಈ ಅರಮನೆಗೆ ಒಂದು ಮುಖ್ಯ ಕಾರ್ಯಕ್ಕಾಗಿ ಬಂದ್ದಿದಿಯ ಮತ್ತು ಅದು ತುಂಬಾ ಕಷ್ಟ ಆದರೆ ಆ ಕೆಲಸ ನಿನ್ನಿಂದ ಮಾತ್ರ ಸಾಧ್ಯ ಎಂದು ನಿನ್ನ ಬಳಿ ಹೇಳಲು ಹೇಳಿದ್ದಾರೆ . ಆ ಕೆಲಸ ಏನು ಎಂದು ನೀನು ಗುಣ ಆದ ಮೇಲೆ ಹೇಳುತ್ತೇನೆ.

ಹಾಗು ಆ ಕೆಲಸಕ್ಕೆ ನಿನಗೆ ಸಹಾಯ ಮಾಡಲು ಒಡೆಯ ನನ್ನನ್ನು ಕಳಿಸಿದ್ದಾರೆ . ಎಂದೂ ಆ ಕೆಲಸ ಪೂರ್ತಿಯಾಗುತ್ತದೋ , ಆ ದಿನ ಅವರು ನಿನ್ನನ್ನು ಕಾಣಲು ಬರುತ್ತಾರೆ . ಅಲ್ಲಿಯ ವರೆಗೆ ನೀನು ಅವರ ಬಗ್ಗೆ ಕೇಳ ಕೂಡದು ಎಂದು ಆಜ್ಞೆ ಮಾಡಿದರೆ . ಎಂದು
ಎಲ್ಲ ವಿಷಯವನ್ನು ಒಂದೇ ಉಸಿರಿನಲ್ಲಿ ಹೇಳಿ ಬಿಡುತ್ತದೆ . ನಂತರ ಆತ್ಮದ ರೂಪದಲ್ಲಿ ಇರುವ ಬೆಕ್ಕು
ತನ್ನ ನಿಜ ರೂಪಕ್ಕೆ ಬಂದು ಸಾರಿಕೆಯ ಕಾಲಿನ ಬಳಿ ಬಂದು ಮಲಗುತ್ತದೆ .

ಸಾರಿಕೆ ಆ ಬೆಕ್ಕಿನ ಎಲ್ಲಾ ಮಾತುಗಳನ್ನು ಕೇಳಿ ಕನಸು ಎಂಬಂತೆ ಅದರ ಬಗ್ಗೆ ಯೋಚನೆ ಮಾಡುತ್ತಾ ಮಲಗಿದಳು. ನಿಧಾನವಾಗಿ ಅವಳು ಏನೋ ಕೇಳಬೇಕು ಅಂತ ಬಾಯಿ ತೆರೆದಳು ಆದರೆ ಅಷ್ಟರಲ್ಲಿ
ಕೋಣೆಯ ದ್ವಾರವನ್ನು ಯಾರೋ ತೆಗೆಯುವ ಹಾಗೆ ಅನಿಸಿತು . ಸಾರಿಕೆ ಅವಳ ಬಾಯಿಯನ್ನು ಮುಚ್ಚಿ ದ್ವಾರದ ಕಡೆ ನೋಡಿದಳು.

ಒಬ್ಬ ಹಿರಿಯ ವ್ಯಕ್ತಿ ಬಂದರು , ಅವರ ದೇಹ ಮುಪ್ಪಾಗಿದರು ಮುಖದಲ್ಲಿ ಒಂದು ರೀತಿಯ ಮಂದಹಾಸ , ಕಣ್ಣುಗಳಲ್ಲಿ ತೀಕ್ಷ್ಣವಾಗಿ ಪ್ರತಿರೋದಿಸುವ ಗುಣ ಇತ್ತು .ಸುರಭಿಯನ್ನು ಕಂಡಾಕ್ಷಣ ಆ ಕಣ್ಣುಗಳಲ್ಲಿ ನೀರು ತುಂಬಿತ್ತು. ಶ್ವೇತ ವರ್ಣದ ಉಡುಪು ಮತ್ತು ರೇಷ್ಮೆಯ ಕಛೇಯನ್ನು ಧರಿಸಿದರು. ಅವರನ್ನು ನೋಡಿದರೆ ಎಂಥವರಿಗೂ
ಕೈ ಮುಗಿಯ ಬೇಕು ಅನಿಸುತ್ತದೆ, ಸರಳ ಸ್ವಭಾವದ ವ್ಯಕ್ತಿತ್ವ .ಸುರಭಿ ದೇಹದಲ್ಲಿ ಇರುವ ಕಾರಣ ಸಾರಿಕೆಗೆ ಅದು ಯಾರು ಎಂದು ಗುರುತಿಸಲು ಅಷ್ಟು ಕಷ್ಟವಾಗಲಿಲ್ಲ .

ಮಲಗಿದ್ದ ಸುರಭಿಯ ಬಳಿ ಬಂದ ಆ ಹಿರಿಯ ವ್ಯಕ್ತಿ ಬೇರೆ ಯಾರು ಅಲ್ಲ, ಅದು ಸುರಭಿಯ ತಾತ ಅರುಣಾ ದೇವ . ಆ ವ್ಯಕ್ತಿ ಕಣ್ಣೀರು ಸುರಿಸುತ್ತ ಸೂರಭಿಯ ಕೈ ಹಿಡಿದರು .ನಂತರ ಅವಳ ಕೈ ಯನ್ನು ಪುನಃ ಕೆಳಗೆ ಇಟ್ಟು . ಅರುಣಾ ದೇವ ತನ್ನ ಎಲ್ಲಾ ಕೈಯನ್ನು ಸುರಭಿಯ ತಲೆಯ ಮೇಲೆ ಇಟ್ಟು , ಯಾವುದೋ ಮಂತ್ರವನ್ನು ಪಠಿಸುತ್ತಾನೆ . ಅವರ ಮುಖವನ್ನೆ ನೋಡುತ್ತಿದ್ದ ಸಾರಿಕೆಗೆ ಯಾವುದೋ ಶಕ್ತಿಯು ಅವಳ ದೇಹವನ್ನು ಸೇರಿದ ಅನುಭವ ಆಯಿತು . ಆ ಶಕ್ತಿಯ ರಭಸ ತಡೆಯಲಾಗದೆ , ಅವಳಿಗೆ ಪುನಃ ಪ್ರಜ್ಞೆ ತಪ್ಪಿತ್ತು .

******************

ಪಶ್ಚಿಮ ಘಟ್ಟದಲ್ಲಿ ದಟ್ಟವಾಗಿ ಬೆಳೆದ ಕಾಡು ಕಣ್ಮನಗಳನ್ನು ಆಕರ್ಷಿಸುವ ಮನೋಹರವಾದ ಪ್ರಕೃತಿ ಸೌಂದರ್ಯ ಹಸಿರ ಸಿರೆಯುಟ್ಟ ವನದೇವಿಯು ಪಗಡೆಯಡುವಂತೆ ಕಾಣುತ್ತಿತ್ತು . ಅವುಗಳು ಮದ್ಯೆ ಒಂದು ವಿಸ್ತಾರವಾಗಿ ಹಬ್ಬಿದ ದ್ರಾವಿಡ ದೇಶದ ರಾಜಧಾನಿ ಅಮರಾವತಿ ನಗರ . ಸುತ್ತಲೂ ಎತ್ತರವಾದ ಪರ್ವತಗಳು ರಭಸದಿಂದ ಭೋರ್ಗರೆಯುವ ನದಿಗಳು , ರಾಜ್ಯದ ಅಂದ ಹೆಚ್ಚಿಸುವುದಲ್ಲದೆ . ಶತ್ರುಗಳಿಗೆ ಸುಲಭವಾಗಿ ಭೇಧಿಸಲಾಗದ ಕವಚದಂತೆ ರಕ್ಷಣೆ ಒದಗಸುವೆ .

ಆ ದ್ರಾವಿಡ ಸಾಮ್ರಾಜ್ಯವನ್ನು ಕಾರ್ತಿಕ ವಂಶದ ಚಕ್ರವರ್ತಿ ಪಾರ್ಥ ಸೇನಾ. ಮಹಾರಾಜರ ರಾಜ್ಯಪರಿಪಾಲನೆಯಲಿ ಸುಭಿಕ್ಷವಾಗಿತ್ತು .ಆ ರಾಜ್ಯದ ಜನರಿಗೆ ವಿಶೇಷ ಬ್ರಾಹ್ಮೀ ಶಕ್ತಿ ಹೊಂದಿದ್ದಾರೆ . ಇಡೀ ಜಂಬೂ ದ್ವೀಪದ ರಾಜರುಗಳಿಗೆ. ಈ ರಾಜ್ಯ ಪಡೆಯುವುದು ಒಂದು ಕನಸಾಗಿತ್ತು . ಎಲ್ಲರಿಗೂ ಇದು ಕಪ್ಪು ಮಣಿ ಮುಕುಟದಂತೆ ಕಾಡುತ್ತಿತ್ತು .

ಬ್ರಾಹ್ಮೀ ಶಕ್ತಿ ಎಂದರೆ ಅದು ವಿಶೇಷ ಶಕ್ತಿಯಾಗಿದೆ . ಯಕ್ಷಿ ಮತ್ತು ಮನುಷ್ಯ ಮಿಲನದಿಂದ ಜನಿಸಿದ ಮಗುವಿಗೆ ಈ ಶಕ್ತಿಯು ಒದಗುತ್ತಿತ್ತು . ಅದಲ್ಲದೆ ಈ ಅಮರಾವತಿ ನಗರವನ್ನು ಯಕ್ಷಿ ಪುರವೆಂದು ಕರೆದರೆ ತಪ್ಪಗಲಾರದು , ಏಕೆಂದರೆ ಅಲ್ಲಿ ಇರುವ ಪ್ರತಿಯೊಂದು
ಜನರಿಗೆ 14 ವರ್ಷಗಳಿಗೆ ಬರುವಾಗ ಈ ಬ್ರಾಹ್ಮೀ ಒದಗುತ್ತದೆ . ಅದಲ್ಲದೇ ಸುರಭಿಯ ತಾಯಿ ಒಬ್ಬಳು ಯಕ್ಷಿನಿಯಾಗಿದ್ದಳು , ಅವಳು ಸುರಭಿಯ ಜನನದ ನಂತರ ಅವಳು ಪುನಃ ಯಕ್ಷ ಲೋಕಕ್ಕೆ ಹೋದಳು.

ಅದರಿಂದ ಸುರಭಿಯ ಪಾಲನೆ ಪೋಷಣೆಯನ್ನು ತಾತ ಅರುಣಾ ದೇವ ಮತ್ತು ಅವಳ ದೊಡಪ್ಪ
ಪಾರ್ಥ ಸೇನಾ ಮಾಡುತ್ತಿದ್ದರು . ಆದರೆ ಸುರಭಿಯ ತಂದೆ ವಾಸುದೇವ ಯುದ್ಧದ ಸಂದರ್ಭದಲ್ಲಿ ಗಾಯಗೊಂಡು ಸೊಂಟದ ಕೆಳಗೆ ಶಕ್ತಿ ಇರಲ್ಲಿಲ್ಲ . ಹಾಗಾಗಿ ಅವರಿಗೆ ವಾಸುದೇವನಿಗೆ ಸುರಭಿಯ ಪಾಲನೆ ಪೋಷಣೆಯನ್ನು ಮಾಡುವ ಭಾಗ್ಯ ದೊರೆಯಲಿಲ್ಲ .

ಆ ಕಾರ್ತಿಕ ವಂಶದ ಕೊನೆಯ ಕುಡಿ ಈ ಸುರಭಿಯಾಗಿದ್ದಳು , ಆ ರಾಜ್ಯಕ್ಕೆ ಪಾರ್ಥ ಸೇನಾನ ನಂತರ ಯಾವುದೇ ಗಂಡು ದಿಕ್ಕಿರಲ್ಲಿಲ್ಲ . ಈ ಚಿಂತೆಯಲ್ಲಿ ಇದ್ದ ತಾತನಿಗೆ , ಸುರಭಿಗೆ ಯಾವುದೇ ಬ್ರಾಹ್ಮೀ ಶಕ್ತಿಯು ಇಲ್ಲದಿರುವುದು ಇನ್ನೊಂದು ತಲೆ ನೋವಾಗಿತ್ತು .

ಏಕೆಂದರೆ ಆ ಅಮರಾವತಿ ಸಾಮ್ರಾಜ್ಯದಲ್ಲಿ ಯಾರಿಗಾದರೂ ಬ್ರಾಹ್ಮೀ ಶಕ್ತಿ ಇಲ್ಲದಿದ್ದರೆ, ಅವರನ್ನು
ನಿರುಪ ಯುಕ್ತ ಮತ್ತು ಅವರು ಯಾವುದೇ ವಿಷಯಕ್ಕೆ ಅರ್ಹತೆ ಇಲ್ಲದವರು ಎಂದು ಪರಿಗಣಿಸುತ್ತಿದ್ದರು. ಸುರಭಿಯ ಬಗ್ಗೆ ಈ ವಿಷಯದಲ್ಲಿ ತುಂಬಾ ಚಿಂತೆಯಲ್ಲಿ ಇದ್ದರು , ಆದರೆ ಈಗ ಅಂತು ಅವಳ ಮೇಲೆ ಕೊಲೆ ಪ್ರಯತ್ನ ಮಾಡಿದ್ದಾರೆ . ಅದರಿಂದ ತಾತ ಅರುಣಾ ದೇವನಿಗೆ ಅವಳ ರಕ್ಷಣೆಯ ಬಗ್ಗೆ ಚಿಂತೆಯಿಂದ ಮಾಡುತ್ತಿದ್ದರು ..........


*****************

ಸಾರಿಕೆಯ ಮನದಲ್ಲಿ ಕೇಳು ಪ್ರಶ್ನೆಗಳು ಮೂಡುತ್ತದೆ :
1. ಸುರಭಿಯನ್ನು ಸಾಯಿಸಲು ಪ್ರಯತ್ನಿಸಿದವರು
ಯಾರು ???
2. ಈ ಅರ್ಜುನನ ಮೂಲ ಏನು ??
3. ಅರ್ಜುನ ನೀಡಿದ ಕೆಲಸವೇನು ??
ಈ ಎಲ್ಲಾ ಪ್ರಶ್ನಗಳಿಗೆ ಉತ್ತರ ಬೇಕಾದರೆ,,, ನನ್ನ ಇನ್ನೂ ಬರುವ ಅದ್ಯಾಯವನ್ನು ಓದಿರಿ .....


Rate & Review

Be the first to write a Review!

Share