Saarike - 1 in Kannada Thriller by Shrathi J books and stories PDF | ಸಾರಿಕೆ - 1

Featured Books
Share

ಸಾರಿಕೆ - 1

ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣ
ಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ಅವಳಿಗೆ ನೃತ್ಯ ಎಂದರೆ ತುಂಬಾ ಪ್ರೀತಿ , ಅವಳು ನೃತ್ಯ ಕಲೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಳು . ಅವಳ ತಾಯಿಯಂತೆ ಪ್ರಸಿದ್ಧಿಯಾಗಿದ್ದಳು , ನೃತ್ಯವು ಅವಳಿಗೆ ತಾಯಿಯ ಬಳುವಳಿ ಎಂದರೆ ತಪ್ಪಾಗಲಾರದು .

ಒಂದು ದಿನ ಅವಳು ಕೆಲವು ಮೂಲಿಕೆ ವಸ್ತುಗಳನ್ನು ಹುಡುಕುತ್ತಾ ಸೌರಾಷ್ಟ್ರ ದೇಶಕ್ಕೆ ಪಯಣಿಸಿದಳು. ಆದರೆ ಅದೇ ಸಂದರ್ಭದಲ್ಲಿ ಸೌರಾಷ್ಟ್ರ ದೇಶದ ಪುರಂದರಗಡ ಕ್ಕೆ ವೀರ ಕೇಸರಿ ದಾಳಿ ಇಟ್ಟಿದ್ದರು!
ನಗರ ಅಗ್ನಿಗೆ ಆಹುತಿಯಾ ಮಾಡಿದರು.
ಸುತ್ತ ನೀರವ ಮೌನ , ಅಲ್ಲಲ್ಲಿ ಹೆಪ್ಪುಗಟ್ಟಿದ ರಕ್ತಗಳು , ರುಂಡ ಮುಂಡ ಕಳೆದುಕೊಂಡ ಸೈನಿಕರ ಕಳೇಬರಗಳು ಸಾಲುಗಳು. ಹಾಗೇ ನೋಡುತ್ತ ಮುಂದೆ ಹೋಗುತ್ತಿದ್ದ ಸಾರಿಕೆಯ ಕಣ್ಣುಗಳಿಗೆ ವಿಜಯ ಸ್ತಂಭ ಕಂಡಿತು.
ಅದನ್ನು ನೋಡಿ ಸಾರಿಕೆಗೆ ಭಯದಿಂದ ಮತ್ತು ಮುಂದೆ ಹೆಜ್ಜೆ ಇಡಲು ಸೋಲುತ್ತಿದ್ದವು ಕಾಲುಗಳು . ಇಷ್ಟು ಸಮಯ ಭಾವನೆ ರಹಿತವಾಗಿ ನೋಡುತ್ತಿದ್ದವಳ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು .

ಬೆಂಕಿಯಲ್ಲಿ ಉರಿದು ಬೀಳುತ್ತಿರ್ವ ಅವಳ ಸಂಗಾತಿಯ ದೇಹ ಕಂಡು ನಳುಗಿದಳು. ಅಸ್ತಿಪಂಜರಗಳು ಉರಿದು ಬೂದಿಯಾಗುವಂತೆ ಅವಳ ಇರುವಿಕೆಯು ಆಗ್ನಿಯಲ್ಲಿ ಉರಿದು ಬೂದಿಯಾಗುವಂತೆ ಭಾಸವಾಗುತ್ತಿತ್ತು .
ಅವಳ ಕಣ್ಣುಗಳಲ್ಲಿ ಪ್ರಿಯಕರನ ಸಾವು ಕಂಡು ಜೀವಂತ ಶವವಾಗಿ ಹೋದಳು ಸಾರಿಕೆ.

ಮೋಡಕ್ಕೆ ಮೋಡ ಘರ್ಷಿಸಿ ಗರ್ಜನೆಯಂತಹ ಸಿಡಿಲು ಸ್ಟೋಟಗೊಂಡು; ಕಣ್ಣುಗಳಿಗೆ ತಿವಿಯುವ ಹಾಗೆ ಬ್ರಮೆಯನ್ನುಂಟು ಮಾಡುತ್ತಿತ್ತು . ಜತೆಗೆ ಗುಡುಗಿನ ಸದ್ದು ಎದೆಯನ್ನು ಚುಚ್ಚಿ ರಂಧ್ರ ಕೊರೆಯುವಂತಿತ್ತು.
ಸಾರಿಕೆ ತನ್ನ ಆತ್ಮ ಸಂಗಾತಿ ಇರದ ಲೋಕದಲ್ಲಿ ತಾನೂ ಇರುವುದಿಲ್ಲವೆಂದು ಕೊನೆಯ ಉಸಿರು ಬಿಗಿ ಮಾಡಿಕೊಂಡು . ಸುಡುತ್ತಿದ್ದ ಸಂಗಾತಿಯ ಜೊತೆಗೆ ತಾನು ಸುಟ್ಟುಹೋಗುತ್ತೇನೆಂದು , ಸುಡುತ್ತಿದ್ದ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ..............

"ತಾನೊಂದು ನೆನೆದರೆ ದೈವವೊಂದು ಬಗೆಯುವುದು "
ಎಂಬ ಮಾತು ಸಾರಿಕೆಯ ಜೀವನದಲ್ಲಿ ನಿಜವಾಗುವುದು , ಏಕೆಂದರೆ ಸಾರಿಕೆ ಜನಿಸಿದ ಸಮಯ ಮತ್ತು ಗಳಿಗೆಯು ತುಂಬಾ ವಿಶೇಷವಾಗಿತ್ತು . ಅ ಗಳಿಗೆಯಲ್ಲಿ ಸಾವಿರಾರು ವರ್ಷಗಳಿಗೆ ಒಮ್ಮೆ ಒಬ್ಬರು ಜನಿಸುತ್ತಾರೆ . ಈ ಗಳಿಗೆಯಲ್ಲಿ ಜನಿಸಿದವರು ತುಂಬಾ ಶಕ್ತಿಶಾಲಿಯಾಗಿರುತ್ತಾರೆ , ಅಷ್ಟೇ ಅಲ್ಲದೆ ಸತ್ತ ಜನರನ್ನು ಜೀವಂತ ಮಾಡುವ ದೈವೀ ಶಕ್ತಿಯನ್ನು ಹೊಂದಿರುತ್ತಾರೆ .

ಆದರೆ ಸಾರಿಕೆಗೆ ಅವಳ ಶಕ್ತಿಯ ಬಗ್ಗೆ ಪರಿವಿಲ್ಲದೆ ಸಾಮನ್ಯರಂತೆ ಬದುಕುತ್ತಿದ್ದಳು , ಬುದ್ದಿ ಬಂದಾಗಿನಿಂದ ಅವಳು ತಂದೆ ತಾಯಿಯನ್ನು ನೋಡಿರಲಿಲ್ಲ , ಒಂಟಿಯಾಗಿ ಬೆಳೆದ ಸಾರಿಕೆಗೆ ಅರ್ಜುನನ ಪ್ರೀತಿಯಿಂದ ಹೊಸ ಜೀವನ ದೊರೆತಿತು .ಅವನ ಪ್ರೀತಿಯ ಅಮಳಿನಿಂದ ತೇಳುತ್ತಿದ ಸಾರಿಕೆಗೆ ಅರ್ಜುನನ ಸಾವು ನೋವು ತಂದಿತ್ತು , ಅವಳು ಸಾವಿನ ನಿರ್ಧಾರ ಮಾಡಿದಳು . ವಿಧಿ ಅವಳಿಗೆ ಸಾಯಲು ಇಚ್ಛಿಸಿದರು , ಅವಳ ಪೂರ್ತಿ ದೇಹ ಸುಟ್ಟು ಹೋದರು , ಅವಳ ಮೂಳೆಗಳು ಬೂದಿಯಾಗಿ ಗಾಳಿಯಲಿ ಲೀನವಾದರು . ಅವಳ ಆತ್ಮಕ್ಕೆ ಮುಕ್ತಿ ಸಿಗದೆ , ಅವಳು ಬೇರೆ ಹೆಣ್ಣಿನ ದೇಹ ಸೇರುವಂತೆ ಮಾಡುತ್ತದೆ ....

************


ತನ್ನ ದಾಸಿಯ ತಕ್ಷಣ ಕರೆದು ಮಜ್ಜನಕ್ಕೆ ಸಿದ್ಧ ಮಾಡು ಎಂದಳು ಕೆಂಪು ಕೆನ್ನೆಯ ಒಡತಿ " ಯುವರಾಣಿ ಸುರಭಿ " . ತನ್ನ ಪ್ರಿಯಕರ ದಕ್ಷನ ಸಂದೇಶ ಕಂಡು ಅವನನ್ನು ಭೇಟಿ ಮಾಡಳು ಅವಸರವಾಗಿ ಮಜ್ಜನ ಮುಗಿಸಿದಳು "ವಸುದೇವ ಮಹಾರಾಜನ " ಅತಿ ಲಾವಣ್ಯವತಿ ಪುತ್ರಿ ಸುರಭಿ . ಅವಳ ದೇಹದ ಕಾಂತಿಯನ್ನು ಇನ್ನು ಹೆಚ್ಚಿಸುತ್ತಿತ್ತು ನೀರಿನ ಉಳಿದ ಹನಿಗಳು.

ಅವಳ ಸೌಂದರ್ಯ ರಾಶಿಯ ಬಿಸಿಗೆ ನೀರ ಹನಿಗಳು ಆವಿಯಾಗಿ ಹೋಗುತ್ತಿದ್ದರು . ತಲೆಯಿಂದ ಬಿದ್ದ ನೀರಿನ ಹನಿಗಳು ಮುಖ ಕಮಲವ ಸೇರಿ ಗಲ್ಲವನ್ನು ಮುತ್ತಿಕ್ಕಿ ಬಿದ್ದ ಹನಿಗಳು ಹರಿದು ನದಿಗೆ ಸೇರಿದಂತೆ ಮೊಲೆಗಳ ಕಣಿವೆಗಳ ನಡುವೆ ಸಾಗಿದೆ.

ಗುಲಾಬಿ ತುಟಿಯಲ್ಲಿ ಜೇನು ತುಂಬಿದ ಮಂದಹಾಸ ,
ಮನೆಯವರಿಗೆ ಕಾಣದಂತೆ ನೀಲಾ ವರ್ಣದ ವಸ್ತುವೊಂದರಲ್ಲಿ ವಿಜೃಂಭಿಸುತ್ತ ಕೇಸರಿ ಬಣ್ಣದ ಶಾಲೊಂದು ಹೊದೆದು . ಯಾರಿಗೂ ಗುರುತುಸಿಗದಂತೆ
ರುಮಾಲು ಒಪ್ಪುವ ಆವರಣಗಳನ್ನು ಕೊಟ್ಟು ಮಂದಹಾಸದ ಮುಖಕ್ಕೆ ಬಟ್ಟೆಯೊಂದನ್ನು ಕಟ್ಟಿಕೊಂಡು, ಕಳ್ಳರಂತೆ ಅರಮನೆಯ ತ್ಯಜಿಸಿ , ಪ್ರೀಯಕರ ದಕ್ಷನನ್ನು ಭೇಟಿ ಮಾಡಳು ಹೋಗುತ್ತಾಳೆ.

ಖುಷಿಯಿಂದ ಬೆಟ್ಟದ ಕಡೆಗೆ ಕುದುರೆಯ ಸಹಾಯದಿಂದ ಮುಟ್ಟಿದಳು . ಅವನಿಗಿಂತ ಮುಂಚೆ ಬಂದು ಅವನ ಬಗ್ಗೆ ಯೋಚನೆ ಮಾಡುತ್ತಾ ಮುಂದೆ ಪ್ರಪಾತ ಇರುವುದನ್ನು ಗಮನಿಸದೆ ನಿಂತು ಬಿಟ್ಟಿದಳು.
ಪಾಪ ಸುರಭಿಗೆ ಪ್ರೀಯಕರನ ಮೋಸದ ಅರಿವಿಲ್ಲದೆ ಅವನ ಬರುವಿಕೆಗೆ ಕಾಯುತ್ತಿದ್ದಳು . ಯಾರೋ ಮರದ ತುಂಡಿನಿಂದ ಜೋರಾಗಿ ಹೊಡೆದು ಬೆನ್ನಿಗೆ ಚಾಕುವಿನಿಂದ ತಿವಿದು . ಅವಳನ್ನು ಬೆಟ್ಟದ ಮೇಲಿನಿಂದ ಕೆಳಗೆ ನುಕಿದರು . ಅವಳಿಗೆ ಅಲ್ಲಿ ಏನಾಗುವುದೆಂದೂ ತಿಳಿಯುವ ಮೊದಲು ಅವಳ ಪ್ರಾಣ ಪಕ್ಷಿ ಹಾರಿಹೋಗಿತ್ತು . ಪ್ರೀಯಕರನ ಮೋಸದಿಂದ ಕೆಂಪು ಕೆನ್ನೆಯ ಸುಂದರಿಯು ಭೂಮಿಯನ್ನು ಬಿಟ್ಟು ಆತ್ಮಗಳ ಲೋಕಕ್ಕೆ ಹೋದಳು .

****************

[ ಅದೇ ಸತ್ತು ಬಿದ್ದ ಸುರಭಿಯ ದೇಹಕ್ಕೆ ಸಾರಿಕೆಯ ಆತ್ಮವು ಸೇರಿಸುತ್ತದೆ . ಮರುದಿವಸ ಸುರಭಿಗೆ ಎಚ್ಚರವಾಗುತ್ತದೆ , ಅವಳು ಒಂದು ವಿಶಾಲವಾದ ಕೋಣೆಯೊಂದರಲ್ಲಿ ಮಲಗಿದ್ದಳು ........... ]ಅವತ್ತು ಹುಣ್ಣಿಮೆ ಬೆಳದಿಂಗಲು ಸುತ್ತಲೂ ಹರಡಿತ್ತು . ಕಿಟಕಿಯ ಸಂಧಿಯಿಂದ ಚಂದ್ರನ ಕಿರಣಗಳು ಸಾರಿಕೆಯ ಕಣ್ಣುಗಳಿಗೆ ನೇರವಾಗಿ ಬೀಳುತ್ತಿತ್ತು. ಆ
ಬೆಳಕಿನಿಂದ ಸಾರಿಕೆಗೆ ಪ್ರಜ್ಞೆ ಬಂದಿತು . ಸುತ್ತ ನೋಡುತ್ತಾಳೆ , ಅಲ್ಲಿ ಯಾರು ಇಲ್ಲದನ್ನು ಗಮನಿಸಿ ನಿಧಾನಕ್ಕೆ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸಿದಳು .


ಆದರೆ ಕೈ ಕಾಲುಗಳು ಅಲುಗಾಡಿಸಲು ಸಾದ್ಯವಾಗಲಿಲ್ಲ . ಅವಳ ಸ್ನಾಯುಗಳು ತುಂಬಾ ನೋವಾಗುತ್ತಿತ್ತು . ಪುನಃ ಸುತ್ತ ನೋಡುತ್ತಾಳೆ ವಿಶಾಲವಾದ ಕೊನೆಯಲ್ಲಿ ಅವಳ ಕಣ್ಣಿಗೆ ಯಾವುದೋ ಒಂದು ಬೆಕ್ಕು ಆಚೆ ಇಚೆ ತಿರುಗುವುದು ಕಂಡಿತ್ತು . ಆದರೆ ವಿಶೇಷ ಎಂದರೆ ಆ ಬೆಕ್ಕಿಗೆ ಮುಖ ಮಾತ್ರ ಇತ್ತು ಮತ್ತು ಬಾಕಿ ದೇಹವು ಕಪ್ಪು ಹೊಗೆಯಿಂದ ಆವರಿಸಿತ್ತು .


ಆ ಬೆಕ್ಕಿನ ಮುಖ ನೋಡಿ ಅವಳಿಗೆ ಪರಿಚಿತ ಅನಿಸಿತು. ಸ್ವಲ್ಪ ಸಮಯದ ಯೋಚನೆಯ ನಂತರ ಅವಳಿಗೆ ತಿಳಿಯಿತು . ಅದು ಅರ್ಜುನನ ಬೆಕ್ಕು ಎಂದು , ಆ ಬೆಕ್ಕು ಸ್ವಲ್ಪ ಹೊತ್ತು ಸಾರಿಕೆಯನ್ನು ದುರುಗುಟ್ಟಿ ನೋಡುತ್ತಿತ್ತು . ನಂತರ ಅವಳಿಗೆ ಏನೋ ಹೇಳಲು ಬಾಯಿ ತೆರೆಯಿತು .