A couple's house books and stories free download online pdf in Kannada

ಜೋಡಿ ಮನೆ

ಜೋಡಿ ಮನೆ

(ಚಿಕ್ಕ ಕತೆ- ಲೇಖಕ-ವಾಮನ್ ಆಚಾರ್ಯ)


ರಾಘವಪುರ್ ನಗರದ ಹೃದಯ ಭಾಗ ಗಾಂಧಿ ಚೌಕ್ ನಲ್ಲಿ ಹಾಕಿದ ಒಂದು ದೊಡ್ಡದಾದ ಬೋರ್ಡ್ ಕಡೆಗೆ ಎಲ್ಲರ ಗಮನ ಸೆಳೆಯಿತು. ಅದರಲ್ಲಿ ಮೂಕಾಂಬಿಕಾ ಬಡಾವಣೆಯಲ್ಲಿ ಸುಂದರವಾದ, ವಿಶಾಲವಾದ ಜೋಡಿ ಮನೆ ಕಡಿಮೆ ಬೆಲೆಯಲ್ಲಿ ಮಾರಾಟಕ್ಕೆ ಇದೆ. ಇಚ್ಛೆ ಉಳ್ಳವರು 6659987345 ಮೊಬೈಲ್ ಗೆ ಸಂಪರ್ಕಿಸ ಬಹುದು.

ನಗರದ ಹೊರವಲಯ ದಲ್ಲಿ ಸುಮಾರು ಐವತ್ತು ನಿವೇಶಗಳು ಇರುವ ಮೂಕಾ0ಬಿಕಾ ಬಡಾವಣೆಗೆ ಭಾನುವಾರ ಬೆಳಗ್ಗೆ 9 ಗಂಟೆಗೆ ಜನರು ಉತ್ಸುಕತೆಯಿಂದ ನೋಡಲು ಬಂದರು. ಭೀಕ್ಕುಲಾಲ್ ಹರ್ಭಜನ್ ಲಾಲ್ ಧೋಕಡಿಯ ಮಾರ್ವಾಡಿ ಅವರು ಜೋಡಿ ಮನೆಗಳ ಮಾಲೀಕರು. ಅವರು ಆಗಲೇ ಬಂದು ಮನೆಯ ಎಲ್ಲಾ ಬಾಗಿಲುಗಳನ್ನು ತೆರೆದರು. ವಿವರಣೆ ಕೊಡಲು ಹುಡುಗರನ್ನು ನೇಮಿಸಿದರು. ಕಳೆದ ಎರಡು ವರ್ಷಗಳ ಹಿಂದೆ ಕಟ್ಟಿದ ಎರಡು ಅಂತಸ್ತು ಇರುವ ಸುಂದರ ವಾದ ಒಂದೇ ತರಹದ ಬೇರೆ ಬೇರೆ ಮನೆ. ಅಲ್ಲಿಗೆ ಬಂದ ವರು ಮನೆ ಒಳಗೆ ಹೋಗಿ ನೋಡುವಾಗ ಅವರಲ್ಲಿ ಒಬ್ಬ ಕಿತಾಪತಿ ಮಾಡಿದ.

“ಈ ಮನೆ ವಾಸ್ತು ಪ್ರಕಾರ ಕಟ್ಟಿಸಿಲ್ಲ. ಗೃಹ ಪ್ರವೇಶ ಆದ ಒಂದು ವಾರದಲ್ಲಿ ಮಾರ್ವಾಡಿ ಮನೆಯ ಯಜಮಾನ ಮರಣ ಹೊಂದಿದ. ಸುತ್ತಮುತ್ತಲು ಸಮೀಪದಲ್ಲಿ ಮನೆಗಳು ಇಲ್ಲ. ಸುರಕ್ಷತೆ ಇಲ್ಲವೇ ಇಲ್ಲ. ಬೀದಿ ನಾಯಿಗಳ ಕಾಟ. ಒಂದು ಕಿಲೋ ಮೀಟರ್ ದೂರ ಇರುವ ಮುಖ್ಯ ರಸ್ತೆಗೆ ಹೋಗಲು ಕಚ್ಚಾ ರೋಡ್. ಮಳೆಗಾಲ ದಲ್ಲಿ ತಿರುಗಾಡಲು ತುಂಬಾ ಕಷ್ಟ,”ಎಂದ.

ಇದನ್ನು ಕೇಳಿದ ಮನೆ ನೋಡಲು ಬಂದ ಎಲ್ಲ ಜನ ಅಲ್ಲಿ ನಿಲ್ಲದೇ ವಾಪಸ್ ಹೋದರು. ಮಾರ್ವಾಡಿ ಮಧ್ಯಾಹ್ನ ಎರಡು ಗಂಟೆ ವರೆಗೆ ಇದ್ದು ಹೊರಡಲು ಸಿದ್ಧರಾಗಿ ಕಾರು ಸ್ಟಾರ್ಟ್ ಮಾಡು ಬೇಕು ಎನ್ನುವಾಗ ಇಬ್ಬರು ಯುವಕ ರು ಓಡುತ್ತ ಬಂದು,

“ಧೋಕಡಿಯಾಜಿ, ನಮಗೆ ಈ ಜೋಡಿ ಮನೆ ನೋಡ ಬೇಕು. ನನ್ನ ಹೆಸರು ಪ್ರವೀಣ್, ಈತ ರೋಹಿತ್,” ಎಂದು ತಮ್ಮ ಪರಿಚಯ ಮಾಡಿಕೊಂಡರು.

ಹುಡುಗರು ಮನೆ ತೋರಿಸಲು ಯುವಕರನ್ನು ಕರೆದುಕೊಂಡು ಹೋದರು. 2400 ಚದರ ಅಡಿ ನಿವೇಶನದಲ್ಲಿ ಒಂದೇ ತರಹದ ಎರಡು ಮನೆ ಗಳು. ಕೆಳಗಡೆ ಒಂದು ಹಾಲ್, ದೇವರ ಮನೆ, ಅಡುಗೆ ಮನೆ ಹಾಗೂ ಬಾತ್ ರೂಮ್. ಒಳಗೆ ಡುಪ್ಲೆಕ್ಸ್ ಇದ್ದು ಮೇಲೆ ಎರಡು ಬೆಡ್ ರೂಮ್ ಗಳು ಹಾಗೂ ಸಿಟ್ ಔಟ್. ಹೊರಗಡೆ ಕಾರ್ ಪಾರ್ಕ್ ಗಾಗಿ ಶೆಡ್. ಎರಡೂ ಮನೆಗೆ ಪ್ರತ್ಯೇಕ ಮುಖ್ಯ ದ್ವಾರ. ಮನೆ ನೋಡಿ ಹೊರಗೆ ಬಂದಮೇಲೆ ಪ್ರವೀಣ್,

“ಧೋಕಡಿಯಾಜಿ ಅವರೇ, ನಮಗೆ ನಿಮ್ಮ ಮನೆ ಲ್ಯೆಕ್ ಆಗಿದೆ. ಇದರ ಬೆಲೆ ಎಷ್ಟು?”

“ ರೂಪಾಯಿ ಹದಿನೈದು ಲಕ್ಷಕ್ಕೆ ಒಂದು ಮನೆ," ಎಂದರು.

“ಅದು ಬಹಳವಾಯಿತು ಕಡಿಮೆ ಮಾಡಿ,“. ಎಂದ ರೋಹಿತ್.

ಐದು ನಿಮಿಷ ಹಗ್ಗ ಜಗ್ಗಾಟ ನಡೆಯಿತು.

“ಆಯಿತು ಎರಡೂ ಮನೆ ಕೂಡಿ ರೂಪಾಯಿ ಎರಡು ಲಕ್ಷ ಕಡಿಮೆ ಮಾಡುವೆ,” ಎಂದರು.

ಇಬ್ಬರೂ ಯುವಕರು ಮಾತನಾಡಿಕೊಂಡರು.

“ ನಮಗೆ ಒಪ್ಪಿಗೆ ಆಗಿದೆ,” ಎಂದು ಇಬ್ಬರೂ ಒಂದೇ ಸಲ ಹೇಳಿದರು.

ಯುವಕರಿಗೆ ಜೋಡಿ ಮನೆ ಬಗ್ಗೆ ಎಲ್ಲಾ ಮಾಹಿತಿ ಗೊತ್ತಿದ್ದರೂ ಖರೀದಿ ಮಾಡಲು ಒಪ್ಪಿದರು. ಒಂದು ಬಿಳಿ ಹಾಳೆ ಮೇಲೆ ಒಪ್ಪಂದ ಪತ್ರ ಬರೆದು ಸಂಭಂದ ಪಟ್ಟವರ ಸಹಿಗಳು ಜೊತೆಗೆ ಸಾಕ್ಷಿ ಸಹಿ ಆಯಿತು.

ಯುವಕರು ಒಂದೊಂದು ಸಾವಿರ ಟೋಕನ್ ಮನಿ ಕೊಟ್ಟರು. ಒಪ್ಪಂದ ಪ್ರಕಾರ ಒಂದು ತಿಂಗಳು ಆದ ಮೇಲೆ ಅವರು ಹಣ ಪಾವತಿ ಮಾಡಿದರು. ಮನೆಗಳು ಅವರ ಹೆಸರಿಗೆ ಬೇರೆ ಬೇರೆ ರೆಜಿಸ್ಟರ್ ಮಾಡಿಕೊಂಡು ಎಲ್ಲಾ ದಾಖಲೆಗಳನ್ನು ತೆಗೆದು ಕೊಂಡರು.

ಮೂರು ತಿಂಗಳು ಆದ ಮೇಲೆ ಒಂದು ಶುಭ ಮುಹೂರ್ತಕ್ಕೆ ಇಬ್ಬರೂ ಸ್ನೇಹಿತರು ಒಂದೇ ದಿವಸ ಜೋಡಿ ಮನೆ ವಾಸ್ತು ಶಾಂತಿ ಮಾಡಿದರು. ಪ್ರವೀಣ್ ಮನೆ ಹೆಸರು ‘ಹೊಂಗಿರಣ’ ಮತ್ತು ರೋಹಿತ್ ಮನೆಗೆ ‘ಕಿರಣ’ ಎಂದು ನಾಮಕರಣ ಆಯಿತು. ಅಂದು ಕೆಲವೇ ಅತಿಥಿಗಳಿಗೆ ಮಾತ್ರ ಆಮಂತ್ರಣ. ಆ ಸಮಯದಲ್ಲಿ ಇಬ್ಬರ ಮದುವೆ ಆಗಿರಲಿಲ್ಲ. ಒಂದು ತಿಂಗಳು ಬಿಟ್ಟು ರೋಹಿತ್ ಮದುವೆ ಆಗಿ ಪತ್ನಿ ರೋಹಿಣಿ ಜೊತೆಗೆ ನೂತನ ಗೃಹ ಪ್ರವೇಶ ಮಾಡಿದ. ಸುರಕ್ಷತೆ ಗಾಗಿ ಒಂದು ಹೆದರಿಕೆ ಬರುವ ನಾಯಿ ಸಾಕಿದರು.

ರೋಹಿತ್ ಮೂರು ಕಿಲೋಮೀಟರ್ ದೂರ ಇರುವ ಸೂರ್ಯಾ ಪರಮೇಶ್ವರ್ ಸ್ಟಿಲ್ ಕಂಪನಿಯಲ್ಲಿ ಮೆಕ್ಯಾನಿ ಕಲ್ ಇಂಜನೀಯರ್. ಅದೇ ಕಂಪನಿಯಲ್ಲಿ ರೋಹಿಣಿ ಇಲೆಕ್ಟ್ರಿಕಲ್ ಇ0ಜನಿಯರ್. ಪ್ರವೀಣ್ ಸಿವಿಲ್ ಇಂಜಿನಿ ಯರ್ ಇದ್ದು ಗುತ್ತೆದಾರ ಆದ. ಆತ ಹೊಸ ಮನೆಗೆ ಬರುವದು ಮುಂದೂಡಿದ. ಇಬ್ಬರೂ ಬಾಲ್ಯ ಸ್ನೇಹಿತರು ಇದ್ದು ಒಂದೇ ಕಾಲೇಜ್ ನಲ್ಲಿ ಡಿಗ್ರಿ ಮುಗಿಸಿದರು. ಬೆಂಗಳೂರು ನಲ್ಲಿ ಒಂದೇ ಬಡಾವಣೆ ಯಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಕಾಲೇಜ್ ನಲ್ಲಿ ಅವರ ಸ್ನೇಹ ಮುಂದುವರೆಯಿತು. ಇವರಿಗೆ ರೋಹಿಣಿ ಪರಿಚಯ ಆಗಿದ್ದು ಕಾಲೇಜ್ ನ ಒಂದು ಸಮಾರಂಭ ದಲ್ಲಿ.

ರೋಹಿತ್, ರೋಹಿಣಿ ಹೊಸ ಮನೆಗೆ ಬಂದು ಆರು ತಿಂಗಳು ಕಳೆಯಿತು. ಒಂದು ಸಲ ಖಾಲಿ ಮನೆಯಲ್ಲಿ ಮಧ್ಯ ರಾತ್ರಿ ಕರ್ಕಶ ವಾಗಿ ಕೂಗುವ ಧ್ವನಿ ಕೇಳಿಸಿತು. ಅಂದು ಅಮಾವಾಸ್ಯ ಎಲ್ಲಡೆ ಯಲ್ಲಿ ನಿಶಬ್ದ ಅಲ್ಲದೇ ವಿದ್ಯುಕ್ಷ ಕ್ತಿ ಸರಬರಾಜು ಸ್ಥಗಿತ ವಾಗಿತ್ತು. ದಂಪತಿ ಧೈರ್ಯವಂತರು ಇರುವದ ರಿಂದ ಹೆದರಲಿಲ್ಲ. ಮರುದಿವಸ ಬೆಳಗ್ಗೆ ಕೆಲಸದವಳು ಬಂದಳು.

“ಕಲಾವತಿ ನಿನ್ನೆ ಮಧ್ಯ ರಾತ್ರಿ ಪಕ್ಕದ ಮನೆಯಲ್ಲಿ ಹೆದರಿಕೆ ಬರುವ ಧ್ವನಿ ಬಂದಿತು,” ಎಂದಳು.

“ಅಮ್ಮಾವ್ರೇ, ಆ ಮಾರ್ವಾಡಿ ಅಜ್ಜ ದೆವ್ವ ಆಗಿದ್ದಾನೆ ಎಂದು ಜನ ಹೇಳುವರು. ಕತ್ತಲು ಆದ ಮೇಲೆ ಈ ಕಡೆ ಜನ ಬರುವದಿಲ್ಲ.” ಎಂದಳು.

ಇದನ್ನು ಕೇಳಿದ ರೋಹಿಣಿ ಮನಸ್ಸಿನಲ್ಲಿ ನಕ್ಕು ಸುಮ್ಮನಾದಳು.

ಅದಾದ ಹತ್ತು ದಿವಸದ ನಂತರ ಒಂದು ದಿವಸ ಬೆಳಗ್ಗೆ ಆರು ಗಂಟೆಗೆ ‘ಜೋಡಿ ಮನೆ’ ಮುಂದೆ ಜನರ ಗುಂಪು. ಪೊಲೀಸ್ ಕಂಪ್ಲೇಂಟ್ ಆಗಿ ಅವರು ಬಂದು ವಿಚಾರಣೆ ಮಾಡಿ ಅರ್ಧ ಗಂಟೆಯಲ್ಲಿ ಹೊರಟರು. ‘ಕಿರಣ’ ಮನೆಯಲ್ಲಿ ದರೋಡೆ ಆಗಿ ಅಲ್ಲಿ ವಾಸ ವಾಗಿರುವ ಇರುವ ದಂಪತಿ ಕಳ್ಳರ ಜೊತೆಗೆ ಪ್ರತಿಭಟನೆ ಮಾಡು ವಾಗ ಇಬ್ಬರಿಗೂ ಕೈ ಗೆ ಪೆಟ್ಟು ಬಿದ್ದು ನೋವು ಇದ್ದರೂ ಲೆಕ್ಕಿಸದೇ ಕಾರ್ ನಲ್ಲಿ ಆಸ್ಪತ್ರೆಗೆ ಹೋದರು.

ರೋಹಿತ್ ರೋಹಿಣಿ ಅವರಿಗೆ ಆದ ಇಷ್ಟೆಲ್ಲಾ ಅನಾಹುತ ಗಳು ಪ್ರವೀಣ್ ಗೆ ತಿಳಿದ ಮೇಲೆ ದೂರವಾಣಿ ಮೂಲಕ ಮಾತನಾಡಿದ.

“ಹಲೋ, ರೋಹಿತ್ ರಾತ್ರಿ ಆದ ಹೆದರಿಕೆ ಆಗುವ ಕೂಗು ನಂತರ ದರೋಡೆ ಅಲ್ಲದೇ ನಿಮಗೆ ಗಾಯ ಆದದ್ದು ತಿಳಿದು ಮನಸ್ಸಿಗೆ ತುಂಬಾ ಖೇದವಾಯಿತು ಹೆದರ ಬೇಡಿ. ಅಂದಹಾಗೆ ನಾನು ಸಧ್ಯ ಬೆಂಗಳೂರು ನಲ್ಲಿ ಇದ್ದೇನೆ. ಒಂದು ದೊಡ್ಡ ಕಾ0ಟ್ರಾಕ್ಟ ಸಿಕ್ಕಿದೆ. ನಿನಗೆ ತಿಳಿಸದೇ ಇಲ್ಲಿಯೇ ಸುಮನ್ ಎಂಬ ಅರ್ಕಿಟೆಕ್ಟ್ ಜೊತೆಗೆ ಲವ್ ಮ್ಯಾರೇಜ್ ಆಗಿದೆ. ಮುಂದಿನ ವಾರ ಇಬ್ಬರೂ ಹೊಸ ಮನೆ ಪ್ರವೇಶ ಮಾಡುತ್ತೇವೆ. ಎಲ್ಲವನ್ನೂ ವಿವರ ವಾಗಿ ಆಮೇಲೆ ಹೇಳುವೆ,” ಎಂದ.

“ಕಂಗ್ರಾಟ್ಸ್ ಪ್ರವೀಣ್. ನೀವು ಬರುವದರಿಂದ ನಮಗೆ ಒಳ್ಳೇಯ ನೇಬರ್ ಆಗುತ್ತಿರಿ. ನಿಮಗೆ ಒಳ್ಳೆಯದಾಗಲಿ,” ಎಂದ.

“ನಾವು ಬರುವ ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಸಾಮಾನು ಸಮೇತ ಬರುತ್ತೇವೆ. ಕೆಲಸದವರ ಕಡೆಯಿಂದ ಮನೆ ಸ್ವಚ್ಛತೆ ಹಾಗೂ ಕರೆಂಟ್ ವ್ಯವಸ್ಥೆ ಮಾಡು,” ಎಂದು ಫೋನ್ ಇಟ್ಟ.

****

ರೋಹಿತ್, ರೋಹಿಣಿ ಗೆ ಪ್ರವೀಣ್ ತನ್ನ ಪತ್ನಿ ಜೊತೆಗೆ ಬರುವದನ್ನು ಕೇಳಿ ಸಂತೋಷ ವಾಯಿತು. ಸ್ನೇಹಿತ ಹೇಳಿದಂತೆ ಅವನ ಮನೆ ಸ್ವಚ್ಛತೆ ಎರಡು ದಿವಸ ಮೊದಲೇ ಮುಗಿಸಿದ. ಎಲ್ಲಾ ರೂಮಲ್ಲಿ ಕರೆಂಟ್ ವ್ಯವಸ್ಥೆ ಮಾಡಿದ. ಪ್ರವೀಣ್ ಹಾಗೂ ಸುಮನ್ ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಆಗಮಿಸಿದರು. ನೂತನ ದಂಪತಿಗಳಿಗೆ ಆರತಿ ಬೆಳಗಿ ಒಳಗೆ ಸ್ವಾಗತ ಮಾಡಿ ದರು. ಬೇರೆ ಬೇರೆ ಮನೆಯಲ್ಲಿ ಇದ್ದರೂ ಒಂದೇ ಮನೆಯವ ರಂತೆ ಅನ್ಯೋನ್ಯ ವಾಗಿ ಇದ್ದರು.

ಕನಿಷ್ಠ ಒಂದು ವರ್ಷ ಬರುವದಿಲ್ಲ ಎಂದು ಹೇಳಿದ ಪ್ರವೀಣ್ ದಿಢೀರನೆ ಏಕೆ ಬಂದ? ಎಂದು ರೋಹಿತ್ ನಿಗೆ ಕಾಡಿದ ಪ್ರಶ್ನೆ.

ಮೂಕಾಂಬಿಕಾ ಬಡಾವಣೆ ಅಭಿವೃದ್ಧಿ ಸಂಘ ದವರು ಹತ್ತು ಮನೆ ಕಟ್ಟುವ ಗುತ್ತಿಗೆ ಪ್ರವೀಣ್ ಗೆ ವಹಿಸಿದರು. ಅವನ ಪತ್ನಿ ಸುಮನ್ ಆರ್ಕಿಟೆಕ್ಟ ಇರುವದ ರಿಂದ ಜೋಡಿ ಮನೆಗೆ ಬರಲೇ ಬೇಕಾಯಿತು. ಇದನ್ನು ಪ್ರವೀಣ್ ತನ್ನ ಮಿತ್ರ ರೋಹಿತ್ ಗೆ ಹೇಳಿದ. ಮೊದಲನೇ ಹಂತದಲ್ಲಿ ಹತ್ತು ಮನೆಗಳನ್ನು ಕಟ್ಟುವ ಸಿದ್ಧತೆ ನಡೆಯಿತು. ಮನೆ ಹೊರಗೆ ಬಯಲಿನಲ್ಲಿ ಪ್ರವೀಣ್ ತಾತ್ಕಾಲಿಕ ಆಫೀಸ್ ಮಾಡಿದ.

ಜನರು ಬರುವದು ದಿನೇ ದಿನೇ ಹೆಚ್ಚಾಗಿ ರೋಹಿತ್ ಗೆ ಗದ್ದಲದ ಜೊತೆಗೆ ಅನೇಕ ಸಮಸ್ಯೆಗಳು ಉದ್ಭವ ವಾದವು. ಪ್ರವೀಣ್ ಗೆ ಅನೇಕ ಸಲ ಇದರ ಬಗ್ಗೆ ಹೇಳಿದರೂ ಆತ ಸುಮ್ಮನಾದ. ರೋಹಿಣಿ ಹಾಗೂ ಸುಮನ್ ಮಧ್ಯ ಈ ಬಗ್ಗೆ ಮನಸ್ತಾಪ ಕೂಡಾ ಆಯಿತು.

ಒಂದು ವರ್ಷ ಕಳೆಯಿತು. ಸ್ನೇಹಿತರ ಮಧ್ಯ ಇರುವ ಸಂಭಂದ ಬಿಗಡಾಯಿಸಿತು. ಹತ್ತು ಮನೆಗಳು ಮುಗಿಯುವ ಹಂತಕ್ಕೆ ಬಂದವು. ಆ ಮನೆಗಳನ್ನು ಮಾಲಕರಿಗೆ ಇನ್ನೂ ಎರಡು ತಿಂಗಳಲ್ಲಿ ಕೊಡುವಾದಾಗಿ ಹೇಳಿದ. ಆದಾಯ ಹೆಚ್ಚಾಗಿ ಪ್ರವೀಣ್ ನಿಗೆ ತುಂಬಾ ಗರ್ವ ಬಂದು ಒಂದು ದಿವಸ ರೋಹಿತ್ ನಿಗೆ ಅವಾಚ್ಯ ಶಬ್ದದಲ್ಲಿ ಬಯ್ದ. ಈ ಬೆಳವಣಿಗೆ ಯಿಂದ ರೋಹಿತ್ ಗೆ ತುಂಬಾ ಕೆಟ್ಟದು ಅನಿಸಿತು. ಪ್ರವೀಣ್ ಒಳ್ಳೆಯ ಸ್ವಭಾವ ಇದ್ದರೂ ಶ್ರೀಮಂತಿಕೆ ಬಂದ ಮೇಲೆ ಬದಲಾದ.

ಒಂದು ದಿವಸ ಸ್ನೇಹಿತರ ಮಧ್ಯ ವಾಗ್ವಾದ ಪ್ರಾರಂಭ ವಾಯಿತು.

"ರೋಹಿತ್, ನಾವಿಬ್ಬರೂ ಒಂದೇ ಮನೆಯಲ್ಲಿ ಇರುವದು ಬೇಡ. ನಿನ್ನ ಮನೆ ನಾನು ಖರೀದಿ ಮಾಡುವೆ. ನಿನಗೆ ಎಷ್ಟು ಹಣ ಬೇಕು ಹೇಳು,”ಎಂದ.

“ಪ್ರವೀಣ್, ನಾನೇಕೆ ಮಾರಲಿ. ಅಂತಹ ದುಸ್ಥಿತಿ ನನಗೆ ಬಂದಿಲ್ಲ. ಬೇಕಾದರೆ ನೀನೇ ನಿನ್ನ ಮನೆ ಮಾರಿಕೊಂಡು ಎಲ್ಲಿಯಾದರೂ ಹೋಗು,”

ಇವರಿಬ್ಬರ ಜೋರಾದ ಧ್ವನಿ ಕೇಳಿ ರೋಹಿಣಿ ಹಾಗೂ ಸುಮನ್ ಅಲ್ಲಿಗೆ ಬಂದರು. ಇಬ್ಬರೂ ಮಹಿಳೆಯರ ಜಗಳ ತಾರಕ ಕ್ಕೆ ಹೋಯಿತು.

ಇಬ್ಬರಿಗೂ ಜೋಡಿ ಮನೆ ಪ್ರತಿಷ್ಠೆಯ ವಿಷಯವಾಯಿತು.

ಕೊನೆಗೆ ರೋಹಿತ್, ರೋಹಿಣಿ ಒಂದು ನಿರ್ಧಾರಕ್ಕೆ ಬಂದರು. ದುಷ್ಟರಿಂದ ದೂರ ಇರಬೇಕು ಎಂದು ತಮ್ಮ ಮನೆ ಪ್ರವೀಣ್ ಗೆ ಮಾರಿ ಬೇರೆ ಮನೆಗೆ ಹೋದರು.

ಮೂರು ತಿಂಗಳು ಕಳೆಯಿತು.

ಮೂಕಾಂಬಿಕಾ ಬಡಾವಣೆ ಅಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಪ್ರವೀಣ್ ಮೇಲೆ ಅನುಮಾನ ಬಂದಿತು. ಅವರು ಲೆಕ್ಕ ಪತ್ರ ಪರಿಶೀಲನೆ ಮಾಡಿಸಿದಾಗ ಪ್ರವೀಣ್ ಮಾಡಿದ ಮೋಸ ಒಂದೇ ಎರಡೇ? ಅವನ ವಿರುದ್ಧ ಪೊಲೀಸ್ ಕೇಸ್ ಆಗಿ ಬಂಧನದ ಭೀತಿ ಆಯಿತು.

ಪ್ರವೀಣ್ ತನ್ನ ಪತ್ನಿ ಸುಮನ್ ಗೆ ಹೀಗೇಕೆ ಆಯಿತು,” ಎಂದು ಕೇಳಿದ.

ಆಕೆ ಸಿಟ್ಟಿನಿಂದ,

“ಪ್ರವೀಣ್, ಇದು ನಿನ್ನ ಸ್ವಯಂ ಕೃತ ಅಪರಾಧ ಹಾಗೂ ನಿನ್ನ ಬಾಲ್ಯ ಸ್ನೇಹಿತನಿಗೆ ಕೊಟ್ಟ ತೊಂದರೆ ಅದರ ಪ್ತತಿಫಲ ನಮಗೆ ಪಾಪ ಅಂಟಿಕೊಂಡಿತು. ರೋಹಿತ್ ಮನೆ ನೀನೇ ಖರೀದಿ ಮಾಡಲು ಷಡ್ಯಂತ್ರ ರಚಿಸಿದೆ. ಅಮಾವಾಸ್ಯ ರಾತ್ರಿ ಕರ್ಕಶವಾದ ಕೂಗು ಅಲ್ಲದೇ ದರೋಡೆ ಯಲ್ಲಿ ನಿನ್ನ ಕೈವಾಡ ಇದೆ. ನಿನ್ನ ಪಾಪದಲ್ಲಿ ನಾನೂ ಸಹಾಭಾಗಿ. ಮಾಡಿದ್ದುಣ್ಣೋ ಮಹಾರಾಯ,” ಎಂದಳು.

ಮುಕಾಂಬಿಕಾ ಬಡಾವಣೆ ಅಭಿವೃದ್ಧಿ ಸಂಘ ದವರು ಜೋಡಿ ಮನೆ ಹರಾಜು ಮಾಡಿ ಬಂದ ಹಣದಿಂದ ಹತ್ತು ಮನೆಗಳ ಉಳಿದ ಕೆಲಸ ಮುಗಿಸಿದರು.

ಪ್ರವೀಣ್, ಸುಮನ್ ಎಲ್ಲಿಗೆ ಹೋದರು ಯಾರಿಗೂ ಗೊತ್ತಿಲ್ಲ.














Share

NEW REALESED