ಚೂರು ಪಾರು
(ವಿಭಿನ್ನ ಪ್ರೇಮ ಕಥೆ)
(ಲೇಖಕ ವಾಮನಾ ಚಾರ್ಯ)
ಅಂದು ಪವನ್ ಪೂರ್ ನಗರದಲ್ಲಿ ಬೆಳಗಿನ ಆರು ಗಂಟೆಯಿಂದ ಸಾಯಂಕಾಲ ಆರು ಗಂಟೆ ವರೆಗೆ ಸೆಕ್ಷನ್ 144 ಕರ್ಫು ಜಾರಿ ಮಾಡಿದ್ದರು. ರಸ್ತೆಗಳ ಮೇಲೆ ವಾಹನ ಗಳು ಹಾಗೂ ಜನ ಸಂಚಾರ ಇಲ್ಲದೇ ಸ್ತಬ್ದ ವಾಗಿತ್ತು.
ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಸಮಯಕ್ಕೆ ಮಹಾತ್ಮಾ ಗಾಂಧಿ ಮುಖ್ಯ ರಸ್ತೆ ಮೇಲೆ ಚಡ್ಡಿ ಹಾಗೂ ಬನಿಯನ್ ಧರಿಸಿದ ಧ್ರುಢ ಕಾಯ ನಾದ ಒಬ್ಬ ಯುವಕ ಹಾಗೂ ಜೊತೆಗೆ ಅವನ ನಾಲ್ಕು ಮಿತ್ರರು ಮಾತಾಡುತ್ತಾ ರಸ್ತೆಯ ಮೇಲೆ ಹೋಗುತ್ತಿರು ವದನ್ನು ನೋಡಿದ ಕರ್ತವ್ಯ ನಿರತನಾದ ಪೊಲೀಸ್ ಅಧಿಕಾರಿ ಗುಣಶೇಖರ್ ಅವರನ್ನು ನಿಲ್ಲಿಸಿದ.
ಆಗ ಚಡ್ಡಿ ಯುವಕ ಗಾಬರಿ ಆಗಿ,
“ಸರ್, ನನ್ನ ತಾಯಿಗೆ ವಿಪರೀತ ಜ್ವರ. ಡಾಕ್ಟರ್ ಬರೆದುಕೊಟ್ಟ ಮಾತ್ರೆಗಳನ್ನು ತರಲು ನಾವೆಲ್ಲರೂ ಎದುರಿಗೆ ಇರುವ ‘ಪ್ರಶಾಂತ್ ಮೆಡಿಕಲ್ ಸ್ಟೋರ್ ನಲ್ಲಿ ತೆಗೆದುಕೊಂಡು ವಾಪಸ್ ಹೋಗುತ್ತಾ ಇದ್ದೇವೆ. ನೋಡಿ ಸರ್ ಈ ಮಾತ್ರೆ ಗಳು,” ಎಂದ.
“ಅಲ್ಲಯ್ಯ ನೀನೊಬ್ಬನೇ ಬರುವದನ್ನು ಬಿಟ್ಟು ಇವರೆಲ್ಲರನ್ನು ಯಾಕೆ ಕರೆದುಕೊಂಡು ಬಂದೆ? ಇಂದು ಕರ್ಫು ಇರುವದು ನಿನಗೆ ಗೊತ್ತಿಲ್ಲವೇ? ಕಾನೂನು ಪ್ರಕಾರ ನಿಮ್ಮ ಮೇಲೆ ಕ್ರಮ ತೆಗೆದು ಕೊಳ್ಳು ತ್ತೇನೆ,” ಎಂದರು.
“ಸರ್, ನಮಗೆ ಓದಲು ಬರೆಯಲು ಬರದ ಕೂಲಿ ಮಾಡಿ ಬದುಕುವ ಪೆದ್ದ ಹುಡುಗರು. ನೀವು ಹೇಳುವದು ನಮಗೆ ಅರ್ಥ ವಾಗುವ
ದಿಲ್ಲ. ಮೊದಲು ಅಮ್ಮನಿಗೆ ಮಾತ್ರೆ ಕೊಡುವೆ. ನಂತರ ಏನು ಬೇಕಾದರೂ ಶಿಕ್ಷೆ ಕೊಡಿ,” ಎಂದ.
ಪೊಲೀಸ್ ಅಧಿಕಾರಿ ಅವನ ಮಾತಿಗೆ ಕಿವಿಗೊ ಡದೆ ಇನ್ನೇನು ಆ ಯುವಕರಿಗೆ ಲಾಠಿ ಪ್ರಹಾರ ಮಾಡಬೇಕು ಎನ್ನುವ ದರಲ್ಲಿ ಹರಕು ಸೀರೆ ಉಟ್ಟ ಬರಿಕಾಲಿನಲ್ಲಿ ಓಡುತ್ತ ಒಬ್ಬ ಯುವತಿ ಬಂದಳು. ಆಕೆ ಕೂಲಿ ಕೆಲಸದವಳು ಎಂದು ಯಾರಾದರೂ ಹೇಳಬಹುದು. ಆಕೆ ಪೊಲೀಸ್ ಅಧಿಕಾರಿಯನ್ನು ತಡೆದಳು.
"ಸಾಬ್, ಮೇರಾ ನಾಮ ಪಾರು. ಇಸ್ ಚಡ್ಡಿ ಲಡಕೆಕ ನಾಮ ಮಾದೇವ್ ಕೆಂಚೂರು. ಸಬ್ ಉಸೆ ಚೂರು ಕಹಕರ ಬುಲಾತೇ ಹೈ. ಏ ಸಭಿ ಬಿಲ್ಡಿಂಗ್ ಲೇಬರ್ ಹೈ. ಚೂರು ಕಾ ಮಾ ಸಿರಿಯಸ ಹೈ. ಉಸೆ ಚೋಡ ದೋ. ಬಾದ ಮೇ ಹಮ್ ಕೋ ಸಜಾ ದೋ,” ಆಕೆ ಕೈ ಮುಗಿದು ವಿನಂತಿ ಮಾಡಿದಳು.
ಆಗ ಪೊಲೀಸ್ ಅಧಿಕಾರಿಗೆ ಕೂಲಿ ಕೆಲಸ ಮಾಡುವ ಈ ಹುಡುಗಿ ಇಷ್ಟೆಲ್ಲ ಧೈರ್ಯದಿಂದ ಸ್ಪಷ್ಟವಾಗಿ ವಿದ್ಯಾವಂತರ ಹಾಗೆ ಮಾತ ನಾಡುವುದು ನೋಡಿ ಆಶ್ಚರ್ಯ ವಾಗಿ ಕನಿಕರ ಕೂಡಾ ಬಂದಿತು.
"ತುಮ ಬಡೇ ಬಡೇ ಬಾತ್ ಕರ್ತೆ ಹೊ. ತುಮ ಭಿ ತೀನ್ ದೋಸ್ತೋ ಕೆ ಸಾಥ್ ಆಯಿ. ಸಬ್ ಕೋ ಸಜಾ ಹೋತಾ,”
"ಸಾಬ್, ಹಮ್ ಕೋ ಕ್ಯಾ ಭಿ ಸಜಾ ದೋ. ಚಡ್ಡಿವಾಲೆ ಲಡಕಾ ಛೋಡೋ”
ಆಗ ಪೊಲೀಸ್ ಅಧಿಕಾರಿ ವಾರ್ನ್ ಮಾಡಿ ಎಲ್ಲರನ್ನೂ ಬಿಟ್ಟರು. ಎಲ್ಲರೂ ಕಟ್ಟಡದ ಸೈಟ್ ಕಡೆ ಹೋದರು. ಮಗ ಬರುವ ಮೊದಲೇ ತಾಯಿ ಇಹಲೋಕ ತ್ಯಜಿಸಿದ್ದಳು. ಚೂರುಗೆ ಅತೀವ ದುಃಖವಾಗಿ ಒಂದೇ ಸಮನೆ ಅಳುತ್ತ ನೆಲದಮೇಲೆ ಎಚ್ಚರ ತಪ್ಪಿ ಕುಸಿದು ಬಿದ್ದ. ಪಾರು ಹಾಗೂ ಇತರರು ತುಂಬಾ ಗಾಬರಿ ಆದರು. ಆದರೂ ಧೈರ್ಯ ತಂದುಕೊಂಡು ಆಕೆ ಅವನಿಗೆ ಉಪಚಾರ ಮಾಡಿ ಸಾಂತ್ವನ ಹೇಳಿದಳು. ಕಟ್ಟಡದ ಗುತ್ತೇದಾರ ಮಹೇಶ್ ಪಾಟೀಲ್ ಬಂದು ಕೂಲಿ ಕಾರರ ಸಹಾಯ ದಿಂದ ಶವದ ಅಂತ್ಯ ಸಂಸ್ಕಾರ ಮುಗಿಸಿದ. ಎಲ್ಲಾ ಖರ್ಚು ಅವನೇ ಕೊಟ್ಟು ಸ್ವಲ್ಪ ಹಣ ಕೂಡಾ ಚುರೂ ಗೆ ಕೊಟ್ಟ .
ಪಾರು ಮತ್ತು ಚೂರು ಇಬ್ಬರ ಪರಿಚಯ ಆಗಿ ಅದೇ ತಾನೇ ಒಂದು ವಾರ ಆಗಿತ್ತು. ಈ ದುಃಖಕರ ಘಟನೆ ನಂತರ ಮೇಲಿಂದ ಮೇಲೆ ಭೇಟಿ ಆಗುವದ ರಿಂದ ಅವರಿಬ್ಬರಲ್ಲಿ ಅನ್ಯೋನ್ನತೆ ಜೊತೆಗೆ ಪ್ರೀತಿ ಹೆಚ್ಚಿಗೆ ಆಯಿತು. ಪ್ರೇಮಿಗಳು ಆದರು. ಚೂರು, ಕರ್ನಾಟಕದ ಕಲ್ಬುರ್ಗಿ ಕಡೆಯವನು ಇದ್ದರೆ ಅನಾಥೆ ಪಾರು, ಬಾರಾ ಬ0ಕಿ, ಉತ್ತರ ಪ್ರದೇಶ ದಿಂದ ಬಂದವಳು. ಚೂರು ಹಾಗೂ ಪಾರು ಇಬ್ಬರಿಗೂ ಹಿಂದಿ ಮಾತನಾಡಲು ಬರುವದ ರಿಂದ ಭಾಷೆ ಸಮಸ್ಯ ಆಗಲಿಲ್ಲ. ಪಾರು ಅದೇ ಸೈಟ್ ನಲ್ಲಿ ಕಳೆದ ಒಂದು ವರ್ಷದಿಂದ ಕೂಲಿ ಕೆಲಸ. ಚೂರು ಕಳೆದ ತಿಂಗಳು ಹಿಂದೆ ಬಂದ.
ಅವರಿಬ್ಬರ ಪರಿಚಯ ಆದದ್ದು ಒಂದು ವಿಶಿಷ್ಟ ಸಂದರ್ಭದಲ್ಲಿ.
ಅಂತಹ ವಿಶಿಷ್ಟ ಸಂದರ್ಭ ಯಾವುದು?
ಒಂದು ದಿವಸ ಕೆಲಸ ಮಾಡುವ ಸೈಟ್ ನಲ್ಲಿ ಮಧ್ಯಾನ್ಹ ಹನ್ನೆರಡು ಗಂಟೆಗೆ ಸಮಯಕ್ಕೆ ಮೇಸ್ತ್ರಿ ಕಾಳಪ್ಪನ ಆರು ವರ್ಷದ ಪುಟ್ಟ ಮಗ ಅಯ್ಯಪ್ಪ ತಾತ್ಕಾಲಿಕ ಶೆಡ್ ನಲ್ಲಿ ಸ್ನೇಹಿತರ ಜೊತೆಗೆ ಚಂಡು ಎಸೆಯುವ ಆಟ ಆಡುತ್ತಿದ್ದ. ಆಗ ಬಿರುಗಾಳಿ ತರಹ ಜೋರಾಗಿ ಗಾಳಿ, ಮಳೆ ಹಾಗೂ ಧೂಳು ಬಂದು ಮೇಲೆ ಹಾಕಿದ ಟಿನ್ ಗಳು ಅಲುಗಾಡಿದವು. ಇನ್ನೇನು ಅವುಗಳು ಪುಟ್ಟ ಮಕ್ಕಳ ಮೇಲೆ ಬೀಳು ತ್ತವೆ ಎಂದು ತಿಳಿದ ಅಲ್ಲಿಯೇ ಇದ್ದ ಚೂರು ಹಾಗೂ ಪಾರು ಮಕ್ಕಳನ್ನು ದುರಂತದಿಂದ ಪಾರು ಮಾಡಿದರು. ನಂತರ ಟಿನ್ ಗಳು ಕೆಳಗೆ ಬಿದ್ದವು. ಸಮಯಕ್ಕೆ ಸರಿಯಾಗಿ ಬಂದು ಮಕ್ಕಳ ಜೀವ ಉಳಿಸಿದರು.
ಅವರಿಬ್ಬರಿಗೂ ಮಕ್ಕಳ ಪಾಲಕರು ತುಂಬಾ ಕೊಂಡಾಡಿ ದರು.
ಚೂರು ಪಾರು ಪ್ರೇಮಿಗಳು ಆಗಿರುವದು ಕಟ್ಟಡದ ಎಲ್ಲ ಕೆಲಸ ಗಾರರಿಗೆ ತಿಳಿಯಿತು. ಅವರ ಮಧ್ಯ ಗುಸು ಗುಸು ಪ್ರಾರಂಭ ವಾಯಿತು. ಪ್ರೇಮಿಗಳ ಚೆಲ್ಲಾಟ ಹಾಗೆ ಮುಂದುವರೆಯಿತು.
ಹದಿನೈದು ದಿವಸಗಳು ಆದಮೇಲೆ ರಾಯಚೂರು ಜಿಲ್ಲೆಯ ಗ್ರಾಮದಿ0ದ ಕೂಲಿ ಕೆಲಸಕ್ಕೆ ಬಂದ ಹುಡುಗಿ ಗಿರಿಜಾ ಗೆ ವಿಷಯ ಗೊತ್ತಾಗಿ ತುಂಬಾ ನೊಂದು ಕೊಂಡಳು. ಪಾರು ಪರಿಚಯ ಆಗುವ ಮೊದಲು ಚೂರು ತನ್ನ ತಾಯಿ ಯ ಇಚ್ಛೆಯಂತೆ ಗಿರಿಜಾ ಜೊತೆಗೆ ಮದುವೆ ಆಗಲು ಒಪ್ಪಿಗೆ ಕೊಟ್ಟಿದ್ದ. ಆದರೆ ಪಾರು ಭೇಟಿ ಆದ ಮೇಲೆ ಚೂರು ತನ್ನ ಮನಸ್ಸು ಬದಲಾಯಿಸಿದ.
ಒಂದು ದಿವಸ ಬೆಳಗ್ಗೆ ಸುಮಾರು 9 ಗಂಟೆಗೆ ಗಿರಿಜಾ ಹಾಗೂ ಪಾರು ಇಬ್ಬರ ಜಗಳ. ಗಿರಿಜಾ ಹರುಕು ಮುರುಕು ಹಿಂದಿ ಯಲ್ಲಿ ಪಾರು ಗೆ ಬೈಗಳ ಸುರಿಮಳೆ ಮಾಡಿ ದಳು. ಪಾರು ಸಮಾಧಾನದಿಂದ ಕೇಳಿ ಒಂದೇ ಉತ್ತರ ಕೊಟ್ಟಳು.
“ಗಿರಿಜಾ, ತುಮಕೋ ಚೂರು ಪಸಂದ್ ನಹಿ ಕರತಾ. ಅಗರ್ ಚೂರು ತುಮಕೋ ಚಾಹೇತೋ ಮೈ ವಾಪಸ್ ಮೇರೇ ಗಾ0ವ್ ಕೋ ಜಾತಾ ಹು. ಉನಕಿ ಮಾ ಕೆ ಅಂತಿಮ ಕ್ಷಣ ಮೆ ತುಮ ಕಿದರ್ ಥಿ?” ಎಂದಳು.
ಇವರಿಬ್ಬರ ತು, ಮೈ ತಾರಕಕ್ಕೆ ಏರಿತು. ಎಲ್ಲರೂ ಕೆಲಸ ಬಿಟ್ಟು ಅವರನ್ನು ಸಮಾಧಾನ ಮಾಡಲು ಬಂದರು. ಅಷ್ಟರಲ್ಲಿ ಚೂರು ಕೂಡಾ ಬಂದ. ಅವನಿಗೆ ವಿಷಯ ತಿಳದು ಗಿರಿಜಾ ಹಾಗೂ ಪಾರು ಗೆ ಸಮಾಧಾನ ಮಾಡಲು ಪ್ರಯತ್ನ ಮಾಡಿದ. ಇದಕ್ಕೆ ಇಬ್ಬರೂ ಕನ್ಯಾ ಮಣಿಗಳು ತಿರಸ್ಕಾರ ಮಾಡಿದರು.
ಚೂರು ಹೇಳಿದ್ದಾದರೂ ಏನು?
ಅವನು ಈ ಬಗ್ಗೆ ನಿರ್ಧಾರ ಮಾಡಲು ಸಮಯ ಬೇಕು ಎಂದ.
ಒಂದು ತಿಂಗಳು ಆಯಿತು.
ಈ ವಿಷಯ ಗುತ್ತೇದಾರ ಮಹೇಶ್ ಪಾಟೀಲ್ ಅವರಿಗೆ ಗೊತ್ತಾಯಿತು. ಅವರು ಮೂವರನ್ನು ತಮ್ಮ ಆಫೀಸ್ ಗೆ ಕರೆಸಿದರು. ಎಲ್ಲವನ್ನೂ ಆಲಿಸಿದ ಪಾಟೀಲ್,
“ಏ ಚೂರು, ನೀನು ಪಾರು ಗೆ ಏಕೆ ಗಂಟು ಬಿದ್ದಿ. ಆಕೆ ದೂರದ ಬಾರಾ ಬಂಕಿ, ಉತ್ತರ ಪ್ರದೇಶ ದವಳು. ಆಕೆಯ ಭಾಷೆ, ನಡೆ, ನುಡಿ,ಸಂಸ್ಕೃತಿ ಎಲ್ಲವೂ ಬೇರೆ. ಆಕೆ ಸ್ವಭಾವ ಹೇಗಿದೆ ನನಗೆ ಗೊತ್ತಿಲ್ಲ. ನಿನ್ನ ತಾಯಿ ಸಾಯುವ ಮೊದಲು ಗಿರಿಜಾ ಜೊತೆಗೆ ಮದುವೆ ಆಗು ಎಂದು ತನ್ನ ಇಂಗಿತ ವ್ಯಕ್ತ ಪಡಿಸಿದ್ದಾಳೆ. ಗಿರಿಜಾ ನಿನ್ನ ಊರು ಕಡೆಯವಳು. ಮೇಲಾಗಿ ಗಿರಿಜಾಳನ್ನು ನಾನು ಬಹಳ ದಿವಸ ಗಳಿಂದ ನೋಡಿದ್ದೇನೆ. ತುಂಬಾ ಒಳ್ಳೇಯ ಹುಡುಗಿ. ಅದಕ್ಕಾಗಿ ನೀನು ಪಾರು ಮರೆತು ಗಿರಿಜಾ ಜೊತೆಗೆ ಮದುವೆ ಆಗು,” ಎಂದರು.
ಅಲ್ಲಿ ನೆರೆದ ಎಲ್ಲರೂ ಗುತ್ತೇದಾರ ಅವರ ಸಲಹೆಗೆ ಚಪ್ಪಾಳೆ ತಟ್ಟಿ ಸಮ್ಮತಿ ಸೂಚಿಸಿದರು.
ಮರು ದಿವಸ ಆಗಿರುವದಾದರೂ ಏನು?
ಪಾರು ತನ್ನ ಪ್ರಿಯಕರನ ಜೊತೆಗೆ ಪರಾರಿ ಆದಳು.
ಆ ಪ್ರೇಮಿಗಳು ಎಲ್ಲಿಗೆ ಹೋದರು ಎಂದು ಯಾರಿಗೂ ಮಾಹಿತಿ ಸಿಗಲಿಲ್ಲ.