Missing girlfriend - 3 in Kannada Love Stories by Sandeep Joshi books and stories PDF | ಕಾಣದ ಗರ್ಲ್ ಫ್ರೆಂಡ್ - 3

Featured Books
Categories
Share

ಕಾಣದ ಗರ್ಲ್ ಫ್ರೆಂಡ್ - 3

​ಅನು ಹೇಳಿದ ಕಥೆಯನ್ನು ಕೇಳಿದ ಮೇಲೆ ಕೃಷ್ಣನ ಮನಸ್ಸು ಭಾರವಾಯಿತು. ಅವಳ ಅಣ್ಣನ ಕ್ರೌರ್ಯ, ಅವಳ ಗಂಡನ ಸಾವು, ಮತ್ತು ಅದರ ನಂತರವೂ ನನ್ನ ಜೊತೆಗಿನ ಸಂಪರ್ಕ. ಇದೆಲ್ಲವೂ ಅವನಿಗೆ ಅವಳ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅವಳ ಕಷ್ಟದ ಸಮಯದಲ್ಲಿ ನಾನು ಅವಳ ಜೊತೆ ಇರಬೇಕು ಎಂದು ನಿರ್ಧರಿಸಿದ. ಆದರೆ ಅವನ ಮನಸ್ಸಿನಲ್ಲಿ ಒಂದಿಷ್ಟು ಅನುಮಾನಗಳು ಉಳಿದಿದ್ದವು. ಅವಳು ಯಾಕೆ ನನ್ನನ್ನು ಭೇಟಿ ಮಾಡಲು ನಿರಾಕರಿಸುತ್ತಿದ್ದಳು? ಅವಳು ತನ್ನ ಗಂಡನ ಸಾವಿಗೆ ,ಅವಳ ಅಣ್ಣ ಕಾರಣನಾಗಿರಬಹುದೇ? ಅಥವಾ ಅವಳಿಗೆ ಇನ್ನೂ ಏನಾದರೂ ನೋವಿದೆಯೇ?​ಕೃಷ್ಣ ತನ್ನ ಗೆಳೆಯ ರವಿಯ ಬಳಿ ಈ ಕಥೆಯನ್ನು ಹೇಳಿದ. ರವಿ, ಕೃಷ್ಣ, ನೀನು ತುಂಬಾ ಸುಲಭವಾಗಿ ಅವಳನ್ನು ನಂಬುತ್ತಿದ್ದೀಯಾ. ಅವಳು ನಿನಗೆ ಒಂದು ಪ್ರೊಫೈಲ್ ಪಿಕ್ಚರ್ ಕೂಡ ಕಳಿಸಿಲ್ಲ. ನೀನು ಅವಳನ್ನು ನೋಡಿಲ್ಲ, ಅವಳ ಕುಟುಂಬದವರನ್ನು ನೋಡಿಲ್ಲ. ಇದೆಲ್ಲಾ ಒಂದು ದೊಡ್ಡ ಸುಳ್ಳು ಇರಬಹುದು. ನೀನು ಜಾಗರೂಕನಾಗಿರು ಎಂದು ಸಲಹೆ ನೀಡಿದನು.​ರವಿಯ ಮಾತುಗಳು ಅವನ ಮನಸ್ಸಿನಲ್ಲಿ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದವು. ಅವನು ಅನುಗೆ ಫೋಟೋ ಕಳಿಸು ಎಂದು ಕೇಳಿದ. ಅವಳು ನನ್ನ ಮೊಬೈಲ್ ಫೋನ್ ಹಾಳಾಗಿದೆ, ಹಾಗಾಗಿ ನಾನು ನಿಮಗೆ ಫೋಟೋ ಕಳುಹಿಸಲು ಸಾಧ್ಯವಿಲ್ಲ. ನನಗೂ ನೋವಾಗುತ್ತದೆ. ಆದರೆ ನನ್ನ ಮಾತು ನಂಬಬೇಕು ಎಂದು ಹೇಳಿದಳು.​ಅವನ ಮನಸ್ಸು ಗೊಂದಲದಿಂದ ತುಂಬಿತು. ಅನುಳ ಮೇಲೆ ನಾನು ನಂಬಿಕೆ ಇಡಬೇಕೇ ಅಥವಾ ರವಿ ಹೇಳಿದಂತೆ ಅನುಮಾನಿಸಬೇಕೇ ಎಂದು ಗೊತ್ತಾಗಲಿಲ್ಲ. ಅವನು ಅನುಗೆ ಒಂದು ಆಡಿಯೋ ಕಾಲ್ ಮಾಡಿದ. ಆಕೆ ಫೋನ್ ಎತ್ತಿದಳು. ಅವಳ ಧ್ವನಿಯಲ್ಲಿ ದುಃಖ ಮತ್ತು ನಿರಾಶೆ ಸ್ಪಷ್ಟವಾಗಿ ಕೇಳಿಸುತ್ತಿತ್ತು.ಅನು, ನಾನು ನಿನ್ನನ್ನು ನಂಬುತ್ತೇನೆ. ಆದರೆ ನಾನು ನಿನ್ನನ್ನು ನೋಡಬೇಕು ಎಂದು ಹೇಳಿದ.ನಾನು ಇವಾಗ ಆ ಸ್ಥಿತಿಯಲ್ಲಿಲ್ಲ. ನಾನು ಬೆಂಗಳೂರಿಗೆ ಹೋಗಬೇಕು, ನನ್ನ ಅಪ್ಪನಿಗೆ ಚಿಕಿತ್ಸೆ ಕೊಡಿಸಲು. ಅಣ್ಣನೂ ಬಂದಿದ್ದಾನೆ. ನಾವು ನಮ್ಮ ಬದುಕಿನ ಬಗ್ಗೆ ತುಂಬಾ ಚಿಂತೆಯಲ್ಲಿದ್ದೇವೆ ಎಂದು ನಿಟ್ಟುಸಿರು ಬಿಟ್ಟಳು.

​ಅವನ ಹೃದಯದಲ್ಲಿ ನೋವಿನ ಅಲೆಗಳು ಎದ್ದಿದ್ದವು. ಅವಳ ಪರಿಸ್ಥಿತಿ ಅರ್ಥವಾಗಿದ್ದರೂ, ಅವನು ಅವಳನ್ನು ನೋಡುವ ಆಸೆಯನ್ನು ಬಿಡಲು ಸಾಧ್ಯವಾಗಲಿಲ್ಲ. ನಿನಗೆ ಯಾವಾಗ ಅನುಕೂಲವಾಗುತ್ತದೋ ಆಗ ನಾನು ನಿನ್ನನ್ನು ಬೆಂಗಳೂರಿಗೆ ಬಂದು ನೋಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡಿದ.

​ಅವಳ ಮಾತಿನಲ್ಲಿ ಏನೋ ಸತ್ಯ ಇದೆ ಎಂದು ಕೃಷ್ಣನಿಗೆ ಅನಿಸಿತು. ಆದರೆ ಅವಳು ಯಾಕೆ ತನ್ನ ಫೋಟೋಗಳನ್ನು ಕಳುಹಿಸಲು ನಿರಾಕರಿಸುತ್ತಿದ್ದಳು? ಅವಳು ನಿಜವಾಗಿಯೂ ಯಾರು? ಕೃಷ್ಣ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇನ್ನಷ್ಟು ಪ್ರಯತ್ನಿಸಬೇಕು ಎಂದು ನಿರ್ಧರಿಸಿದ.

​ಅನುಳ ಕಥೆಯನ್ನು ಕೇಳಿದ ಮೇಲೆ, ಅವನ ಮನಸ್ಸು ಸಮಾಧಾನಗೊಂಡರೂ, ಅವಳನ್ನು ಭೇಟಿ ಮಾಡಬೇಕೆಂಬ ಹಂಬಲ ಮತ್ತಷ್ಟು ಹೆಚ್ಚಾಗಿತ್ತು. ಕೃಷ್ಣ ಅವಳ ಮೇಲೆ ಸಂಪೂರ್ಣ ನಂಬಿಕೆ ಇಡಲು ಸಿದ್ಧನಿದ್ದ, ಆದರೆ ಒಮ್ಮೆ ಅವಳನ್ನು ಕಣ್ಣಾರೆ ನೋಡಬೇಕೆಂದು ನಿರ್ಧರಿಸಿದ. ನಾನು ನೇರವಾಗಿ ಅನುಳಿಗೆ ಫೋಟೋ ಕಳುಹಿಸಲು ಹೇಳಿದರೆ, ಅವಳು ಮತ್ತೆ ನಿರಾಕರಿಸಬಹುದೆಂದು ಅವನಿಗೆ ಅನಿಸಿತು. ಹಾಗಾಗಿ, ಅವನು ಅವಳ ಕಸಿನ್ ಪ್ರಿಯಾಳನ್ನು ಸಂಪರ್ಕಿಸಲು ನಿರ್ಧರಿಸಿದ. ಪ್ರಿಯಾ ಅವಳ ಜೊತೆ ತುಂಬಾ ಆತ್ಮೀಯಳಾಗಿದ್ದಳು. ಹಾಗಾಗಿ ಅವಳು ಖಂಡಿತವಾಗಿ ತನಗೆ ಸಹಾಯ ಮಾಡುತ್ತಾಳೆಂದು ಅವನಿಗೆ ವಿಶ್ವಾಸವಿತ್ತು.

​ಕೃಷ್ಣ ಪ್ರಿಯಾಳಿಗೆ ವಾಟ್ಸ್ಆ್ಯಪ್‌ನಲ್ಲಿ ಮೆಸೇಜ್ ಮಾಡಿದ. ಹಾಯ್ ಪ್ರಿಯಾ, ಹೇಗಿದ್ದೀಯಾ? ಎಂದು ಕೇಳಿದ. ಅವಳು ತಕ್ಷಣ ಉತ್ತರಿಸಿದಳು: ಹಾಯ್ ಕೃಷ್ಣ, ನಾನು ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ?​ಕೃಷ್ಣ ವಿಷಯಕ್ಕೆ ನೇರವಾಗಿ ಬಂದ. ಪ್ರಿಯಾ, ನನಗೆ ಅನು ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ. ದಯವಿಟ್ಟು ನನಗೆ ಸಹಾಯ ಮಾಡುತ್ತೀಯಾ? ಎಂದು ಕೇಳಿದ.ಖಂಡಿತ, ಹೇಳಿ ಎಂದು ಅವಳು ಉತ್ತರಿಸಿದಳು.ಕೃಷ್ಣ ಅನುಳ ಕಥೆಯನ್ನು ಕೇಳಿದ ಬಗ್ಗೆ, ಅವಳ ಅಣ್ಣ ಮತ್ತು ಗಂಡನ ವಿಷಯಗಳನ್ನು ಹೇಳಿದ.  ಆಕೆ ಆಶ್ಚರ್ಯಚಕಿತಳಾದಳು. ಅನುಳ ಬಗ್ಗೆ ನಿಮಗೆ ಇವೆಲ್ಲವೂ ಹೇಗೆ ಗೊತ್ತಾಯಿತು? ಎಂದು ಕೇಳಿದಳು.ಅನುನೇ ನನಗೆ ಹೇಳಿದಳು. ಆದರೆ ನನಗೆ ಒಂದು ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಅವಳು ಯಾಕೆ ನನ್ನನ್ನು ಭೇಟಿ ಮಾಡಲು ಹಿಂಜರಿಯುತ್ತಿದ್ದಾಳೆ? ದಯವಿಟ್ಟು ನನಗೆ ಅವಳ ಒಂದು ಫೋಟೋ ಕಳುಹಿಸುತ್ತೀಯಾ? ಅವಳನ್ನು ನೋಡಿದರೆ ನನ್ನ ಮನಸ್ಸಿಗೆ ಸಮಾಧಾನವಾಗುತ್ತದೆ.​ಪ್ರಿಯಾ ಸ್ವಲ್ಪ ಹೊತ್ತು ಮೌನವಾಗಿದ್ದಳು. ನಂತರ ಕೃಷ್ಣ, ಇದು ತುಂಬಾ ಕಷ್ಟ. ಅನು ತನ್ನ ಫೋಟೋಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆಕೆಯ ಅಣ್ಣ ಅವಳ ಬದುಕು ಹಾಳು ಮಾಡಿರುವುದರಿಂದ ಅವಳು ತುಂಬಾ ಮಾನಸಿಕವಾಗಿ ನೋವಿನಲ್ಲಿ ಇದ್ದಾಳೆ. ಹಾಗಾಗಿ ನನ್ನಲ್ಲಿಯೂ ಕೂಡ ಅವಳ ಫೋಟೋಗಳಿಲ್ಲ, ಎಂದು ಹೇಳಿದಳು.​ಕೃಷ್ಣನ ಆಸೆ ನಿರಾಸೆಯಾಯಿತು. ಆದರೆ, ಪ್ರಿಯಾ ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡಳು. ಆದರೆ ನಾನು ಒಂದು ವಿಷಯದಲ್ಲಿ ಸಹಾಯ ಮಾಡಬಲ್ಲೆ, ಕೃಷ್ಣ. ಒಂದು ದಿನ ನಿಮ್ಮನ್ನು ಮತ್ತು ಅನುಳನ್ನು ಭೇಟಿ ಮಾಡಲು ಒಂದು ಯೋಜನೆ ರೂಪಿಸುತ್ತೇನೆ. ಆದರೆ ನೀವು ದಯವಿಟ್ಟು ಅನುಗೆ ನಾನು ಈ ವಿಷಯವನ್ನು ಹೇಳಿದ್ದೇನೆಂದು ತಿಳಿಸಬೇಡಿ, ಎಂದು ಭರವಸೆ ನೀಡಿದಳು. ಪ್ರಿಯಾ ಈ ರೀತಿ ಹೇಳಿದ ನಂತರ ಅವನಿಗೆ ಸಮಾಧಾನವಾಯಿತು. ಅವಳು ಖಂಡಿತವಾಗಿ ಸಹಾಯ ಮಾಡುತ್ತಾಳೆಂದು ಅವನಿಗೆ ವಿಶ್ವಾಸವಿತ್ತು. ಆದರೆ ಅವನಿಗೆ ಒಂದು ವಿಷಯ ಮಾತ್ರ ಗೊಂದಲವಾಗಿತ್ತು. ಅನುಳ ಅಣ್ಣನ ಬಗ್ಗೆ ಅವಳು ಹೇಳಿದ ಮಾತುಗಳು, ಆತ ಹೇಗೆ ತನ್ನ ಸಹೋದರಿಯ ಜೀವನವನ್ನು ಹಾಳುಮಾಡಿದ್ದಾನೆ ಎಂಬ ವಿಷಯ. ಈತನಿಗೂ ಅನುಳ ಗಂಡನ ಸಾವಿಗೂ ಏನಾದರೂ ಸಂಬಂಧ ಇದೆಯೇ? ಈ ಯೋಚನೆ ಅವನ ಮನಸ್ಸನ್ನು ಕಾಡುತ್ತಿತ್ತು.  ಕೃಷ್ಣನು ಅನುಳ ಅಣ್ಣನ ಬಗ್ಗೆ ತನಿಖೆ ಮಾಡಲು ಪ್ರಯತ್ನಿಸುತ್ತಾನೆ. ಈ ತನಿಖೆಯಲ್ಲಿ ಕೃಷ್ಣನಿಗೆ ಏನು ಸಿಗುತ್ತದೆ? ಅನುಳ ಗಂಡನ ಸಾವಿನ ರಹಸ್ಯ ಏನು?

                                         ಮುಂದುವರೆಯುತ್ತದೆ