(  ಮೊದಲಿನ ಸಂಚಿಕೆಯಲ್ಲಿ ನೋಡಿದಂತೆ ಅರುಣ್ ಕುಮಾರ್ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಅನುಜ್ ಸೂದ್ ಬಳಿ ಹೇಳಿಕೊಳ್ಳುತ್ತಾ ಇದ್ದ ... ಆದರೆ ಅನುಜ್  ಸೂದ್ ಗೆ ಮಾತ್ರ ಅರುಣ್ ಕುಮಾರ್ ನ ಮೇಲೆ ಒಂದು ರೀತಿಯ ಅನುಮಾನ ಮೂಡಿತ್ತು .. ಈ ಅರುಣ್ ಕುಮಾರ್ ಕೆಟ್ಟವನ ಅಥವಾ ಒಳ್ಳೆವನ ಎಂಬುದು ಅನುಜ್ ಸೂದ್ ಗೆ ಬಗೆ ಹರಿಯದ ಪ್ರಶ್ನೆ ಆಗಿತ್ತು ... ಇನ್ನು ಮುಂಬರುವ ಸಂಚಿಕೆಯಲ್ಲಿ ಅನುಜ್ ಸೂದ್ ನ ಅನುಮಾನಕ್ಕೆ ಉತ್ತರ ಸಿಗುತ್ತದೆಯ ಎಂಬುವುದನ್ನು ನೋಡುವ .... ) 
ಯಾರಿಗೂ ನನ್ನ ನೋವು ಅರ್ಥ ಆಗದು ... 
ನನ್ನ ಒಂಟಿತನ ಹೋಗಲಾಡಿಸಲು ಯಾರು ನನ್ನೊಂದಿಗೆ ಬಾಂಧವ್ಯದಿಂದಮಾತನಾಡುವುದಿಲ್ಲ ,
ಎಲ್ಲರೂ ಅವರವರ ಜೀವನದಲ್ಲಿ ಬಿಝಿಯಾಗಿದ್ದಾರೆ ...
ಈಜು ಕೊಳ , ದೊಡ್ಡ ಲಾನ್ ಮತ್ತು ಬೇಜಾರಾದಗ ಹೋಗುವ  ಸುಂದರವಾದ ಲ್ಯಾಂಡ್ ಸ್ಕೇಪ್ ಉದ್ಯಾನದನ್ನು ಹೊಂದಿದೆ ನಮ್ಮ ಮನೆಯಲ್ಲಿ ಆದರೆ , ಉದ್ಯಾನದಲ್ಲಿ ತಿರುಗಲು  ನನ್ನ  ಜೊತೆಯಾಗಿ ಒಂದು ಪ್ರಾಣಿಗಳು ಸಹ ಇಲ್ಲ ..... 
ಎಂದು ಅರುಣ್ ಕುಮಾರ್ ಹೇಳುತ್ತಾನೆ .. ಅರುಣ್ ಕುಮಾರ್ ಹೇಳುವುದನ್ನು ಕೇಳಿ ಅನುಜ್ ಸೂದ್ ಸ್ವಲ್ಪ ಆಶ್ಚರ್ಯ ಆಗುತ್ತೆ ... 
ನಿಮ್ಮ ಅಷ್ಟು ದೊಡ್ಡ  ಮನೆಯಲ್ಲಿ ಪ್ರಾಣಿಗಳು ಇಲ್ಲ ...
ತಮಾಷೆ ಮಾಡುತ್ತಿಲ್ಲ ತಾನೇ ...
ಇಂದಿನ ಕಾಲದಲ್ಲಿ ಶ್ವಾನವನ್ನು ಬೆಕ್ಕನ್ನು ಸಾಕುವುದು ಒಂದು ಪ್ರತಿಷ್ಠೆಯ ಕೆಲಸವಾಗಿದೆ ... 
ಬೀದಿಯಲ್ಲಿ ಅನಾತವಾಗಿ ಓಡಾಡುವ ನಾಯಿಯನ್ನು ನೋಡಿ ಕಲ್ಲು ಎಸೆಯುವವರು ಮನೆಗೆ ಲಕ್ಷ ಲಕ್ಷ ಕೊಟ್ಟು ಹೈ ಬ್ರೀಡ್ ನಾಯಿ ಬೆಕ್ಕನ್ನು ತರ್ಥಾರೆ ಆದರೆ ನಿಮ್ಮ ಮನೆಯಲ್ಲಿ ಒಂದು ನಾಯಿಯನ್ನು ಸಾಕಲಿಲ್ಲವ .... 
ಅದು ಯಾಕೆ ನೀವು
ಸಾಕು  ಪ್ರಾಣಿಗಳನ್ನು ಸಾಕಲಿಲ್ಲ ... ?
ಎಂದು ಅನುಜ್ ಸೂದ್ ಕೇಳುತ್ತಾನೆ ... 
ಅದು ನಂಗೆ ನಾಯಿಯನ್ನು ನೋಡಿದರೆ ಭಯವಾಗುತ್ತದೆ ಅದಕ್ಕೆ ... 
ಅಂತ ಅರುಣ್ ಕುಮಾರ್ ಹೇಳುತ್ತಾನೆ ...
ಒ ...
ಹಾಗೆ ... 
ಆದರೆ ಬೆಕ್ಕನ್ನು  ಸಾಕಬಹುದು ಅಲ್ಲ ... 
ವಿದೇಶದಲ್ಲಿ  ಸಿಂಹ ಹಾವುಗಳನ್ನೆಲ್ಲ ಸಾಕುತ್ತರಲ್ಲಾ ಹಾಗೆ ನೀವು ಕೂಡ ಸಾಕಬಹುದಿತ್ತು ... ಮನುಷರಿಗಿಂತ ಪ್ರಾಣಿಗಳೇ ತುಂಬಾ ಲೋಯಲ್ ಆಗಿ ಇರೋದು ... 
ನಮ್ಮನ್ನು ಯಾವತ್ತೂ ಬಿಟ್ಟು ಹೋಗುವುದಿಲ್ಲ .. ನಾವು ಕೊಡುವ ಸ್ವಲ್ಪ ಪ್ರೀತಿಗೆ ಅವುಗಳು ತಮ್ಮ ಪ್ರಾಣ ಕೊಡುವುದಕ್ಕೆ ಸಿದ್ದ ಹಾಗುತ್ತದೆ ..  
ಎಂದು ಅನುಜ್ ಸೂದ್ ಕೇಳುತ್ತಾನೆ ... 
ಸಾಕ ಬಹುದು ಆದರೆ ಆಗ ನೆನಪು ಬರಲಿಲ್ಲ ... ಈಗ ಒಂಟಿತನ ಅಭ್ಯಾಸ ಆಗಿದೆ ... 
ಎಂದು ನಗುತ್ತಾ ಅರುಣ್ ಕುಮಾರ್ ಹೇಳಿದ ... 
ಇನ್ನು ಒಂದು ಪ್ರಾಣಿಯನ್ನು ಆದರೂ ಸಾಕು ... 
ಒಂದು ವಿಷಯ ಹೇಳು ನಿಂಗೆ ನಾಯಿ ಅಂದ್ರೆ ಭಯ ಅಂತ ಹೇಳಿದಿಯಲ್ಲಾ .. 
ನಿಂಗೆ ಏನಾದರೂ ಸೈನೋಫೋಬಿಯಾ ಇದೆಯಾ....
ಎಂದು ಅನುಜ್ ಸೂದ್ ಅನುಮಾನದಲ್ಲಿ ಕೇಳುತ್ತಾನೆ ...
ಆ ... ಇದೇ ...  
ಅದರಿಂದಲೇ ನಮ್ಮ ಮನೆಯಲ್ಲಿ ನಾಯಿ ಸಾಕುವುದಿಲ್ಲ ...
ಅಂತ ಅರುಣ್ ಕುಮಾರ್ ಬೇಜಾರಿನಲ್ಲಿ ಹೇಳಿದ ...
ಆ ಹಾಗೆ ನಿಂಗೆ ನಾಯಿಯನ್ನು ಕಂಡರೆ ಭಯ ...
ಅಲ್ಲ ನಾನು ತುಂಬಾ ಜನ ನೋಡಿದ್ದೇನೆ , ಆ ಪಾಪದ ನಾಯಿಯನ್ನು ನೋಡಿ ಭಯ ಪಡುತ್ತಾರೆ ... 
ಈ ಸೈನೋಫೋಬಿಯಾದ ಬಗ್ಗೆ ಸ್ವಲ್ಪ ಹೇಳು ....
ಆ ಪಾಪದ ಪ್ರಾಣಿಯನ್ನು ನೋಡಿ ನೀವು ಯಾಕೆ ಹೆದರಿ ಕೊಳ್ಳುವುದು ...
ಅಂತ ಅನುಜ್ ಸೂದ್ ಕೇಳುತ್ತಾನೆ ...
ಆ .. 
ಹೇಳ್ತೇನೆ ಕೇಳಿ ...
ಸೈನೋಫೋಬಿಯಾ ಅಂದರೆ ನಾಯಿಯನ್ನು ನೋಡಿದರೆ ಭಯವಾಗುವುದು ಅಷ್ಟೇ ಅಲ್ಲ ....

ಸೈನೋಫೋಬಿಯಾ ಇದ್ದವರು ಅಂದರೆ ನನ್ನಂತಹ  ಮನೋರೋಗಿಗಳ ಮುಂದೆ ನಾಯಿ ಬಂದಾಗ ಕ್ಷಣ ಕಾಲ ಹೃದಯ ಬಡಿತದಲ್ಲಿ ತ್ವರಿತ ಹೆಚ್ಚಳವಾಗುತ್ತದೆ  ಮತ್ತು 
ಉಸಿರಾಟದಲ್ಲಿ ತೊಂದರೆಯಾಗುವುದು ... 
  ಆತಂಕ , ಭಯದ ಭಾವನೆಯಂತಹ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುತ್ತೇವೆ ... 
  ನಾಯಿಯು ಹತ್ತಿರ ಬರುತ್ತಿದ್ದಂತೆ ನಮಗೆ ನಮ್ಮ ಜೀವನದ ಕೊನೆಗೊಳ್ಳುವಂತೆ  ಭಾಸವಾಗುತ್ತದೆ .....   
ಅದಕ್ಕಾಗಿ ನನ್ನ ತಂದೆ ನಮ್ಮ ಮನೆಯಲ್ಲಿ ಯಾವುದೇ ಪ್ರಾಣಿಯನ್ನು ಸಾಕುವುದಿಲ್ಲ ಮುಖ್ಯವಾಗಿ ನಾಯಿಯನ್ನು ...... 
ನಾನು ಅಲ್ಲಿಗೆ ಬರುವ ಮೊದಲು ನಾಯಿಯನ್ನು ಸಾಕುತ್ತಿದ್ದರು ಆದರೆ ನಾನು ಬಂದ ಮೇಲೆ ಇದ್ದ ಎಲ್ಲಾ ಪ್ರಾಣಿಗಳನ್ನು ಸಹ ಬೇರೆಯವರಿಗೆ ನೀಡಿದರು ......
ಎಂದು ಅರುಣ್ ಕುಮಾರ್ ಹೇಳುವಾಗ ಅವನ ಮಾತು ಅರ್ಧದಲ್ಲಿ ನಿಲ್ಲಿಸಿ ....
ಅರುಣ್ ಕುಮಾರ್ ನಿಮ್ಮ ತಂದೆ ಏಷ್ಟು ಒಳ್ಳೆಯವರು ... 
ನಮ್ಮ ತಂದೆ ಕೂಡ ಇದ್ದರೆ ,  ನಾನು ಚಿಕ್ಕ ಇರುವಾಗ ನನ್ನ ತಂದೆಯ ಹತ್ತಿರ ಹೇಳಿದೆ ..
ಅಪ್ಪ ಅಪ್ಪ ನೀವು ತಂದಿರುವ ನಾಯಿಯನ್ನು ನೋಡಿ ನಮ್ಮ ಮನೆಯ ಬೆಕ್ಕು ಭಯ ಪಡುತ್ತಾ ಇದೆ ..
ಅದಕ್ಕಾಗಿ ಆ ನಾಯಿಯನ್ನು ಇಲ್ಲಿಂದ ಬೇರೆ ಕಡೆಗೆ ಕಳಿಸಿ ಎಂದು ಹೇಳಿದ್ದಕ್ಕೆ .. 
ನನ್ನ ಅಪ್ಪ ಹೇಳಿದ್ರು ಬೇಕಾದರೆ ನೀನು ಮತ್ತೆ ನಿನ್ನ ಆ ಬೆಕ್ಕನ್ನು ಹಿಡಿದು ಕೊಂಡು ಬೇರೆ ಕಡೆ ಹೋಗು .. 
ಈ ನಾಯಿ ಇಲ್ಲೇ ಇರುತ್ತದೆ ಎಂದು ಹೇಳಿದರು ... 
ನನ್ನ ತಂದೆಗೆ ನನಗಿಂತ  ಆ ನಾಯಿ ಇಷ್ಟ ಆಗಿತ್ತು ...
ಎಂದು ಅನುಜ್ ಸೂದ್ ನಗುತ್ತ ಹೇಳುತ್ತಾನೆ .. 
ಹೌದ ... 
ಎಂದು ಅರುಣ್ ಕುಮಾರ್ ನಗುತ್ತ ಮತ್ತೆ ತನ್ನ ಕಥೆಯನ್ನು ಮುಂದುವರಿಸಿದ ... 
ನಮ್ಮ ಮನೆ ಅಮೃತಶಿಲೆಯಲ್ಲಿ ಮಾಡಿದ ಮಹಡಿಗಳೊಂದಿಗೆ ಐಷಾರಾಮಿ ಮರದ ಪೀರೋಪಕರಣಗಳನ್ನು ಹೊಂದಿದೆ ....  
ಆದರೆ ಅದರಲ್ಲಿ ಕುರುವರರು ಯಾರು ಇಲ್ಲ  ನನ್ನನ್ನು ಬಿಟ್ಟು  ...... 
ಐಷಾರಾಮಿಯ ಜೀವನ , 
" ಕೂತು ತಿನ್ನುವವನಿಗೆ ಕುಡಿಕೆ ಹೊನ್ನೂ ಸಾಲದು" 
ಎನ್ನುವ ಮಾತಿದೆ ಆದರೆ ನನ್ನ ಜೀವನ ಪೂರ್ತಿ ಕೂತು
ತಿಂದರು ಮುಗಿಯಾದ ಆಸ್ತಿ  ......
ಎಲ್ಲರಿಗೂ ಅನಿಸಬಹುದು ದುಡ್ಡು ಇದ್ದಾರೆ ಸಾಕು ಅವನ ಜೀವನ ಆನಂದ ಮಾಯ .... 
ಆದರೆ ಆ ಮಾತು ತಪ್ಪು ,
ಮಲಗಿದರೆ ಒಂದು ಹೊತ್ತು ನಿದ್ದೆಯು ಬರುವುದಿಲ್ಲ ... 
ಕಣ್ಣು ಮುಚ್ಚಿದರೆ  ತಂದೆಯ ಮುಖ 
ಕಣ್ಣ ಎದುರಿಗೆ ಬರುವುದು ... 
ಕಣ್ಣು ತೆರೆದರೆ ಒಂಟಿತನ ಕಾಡುವುದು ... 
ನನ್ನ ತಂದೆಯ ಸಾವಿನ ನಂತರ ಒಂದು ದಿನ ಕೂಡ ಸರಿಯಾಗಿ
ಹೊಟ್ಟೆ ತುಂಬಾ ಊಟ ಮಾಡಲಿಲ್ಲ ಕಣ್ಣು ತುಂಬಾ ನಿದ್ದೆ ಮಾಡಲಿಲ್ಲ ... 
ಆ ಒಂಟಿ ತನದಲ್ಲಿ ಪುಸ್ತಕ ನನ್ನ ಸಂಗಾತಿಯಾಯಿತು .....  
ಅದೇ ಸಂದರ್ಭದಲ್ಲಿ  ನನ್ನ ಕಿವಿಗೆ
" ದೇಶ ಸುತ್ತಿ ನೋಡು ಕೋಶ ಓದಿ ನೋಡು "
ಆ ವಾಕ್ಯವು ಬಿತ್ತು ... 
ಆ  ವಾಕ್ಯ  ನನ್ನನ್ನು ಬೇರೆ ಬೇರೆ ಸ್ಥಳಕ್ಕೆ ಪ್ರವಾಸ ಹೋಗುವಂತೆ ಪ್ರೇರೇಪಿಸಿತು ..... 
ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿಯುವ ಅಂಬಲ ಶುರುವಾಯಿತು ......
ಈಗೆ  ಅರುಣ್ ಕುಮಾರ್ ಹೇಳುತ್ತಾ ಇರುವಾಗ ಅನುಜ್ ಮದ್ಯೆ ಮಾತಾಡುತ್ತ ಹೇಳುತ್ತಾನೆ ....
" ಸಾಮಾನ್ಯವಾಗಿ ಮನುಷ್ಯ ಒಂದು ಸಮೂಹ ಜೀವಿಯಾಗಿದ್ದರೂ ಜೀವನದ ಹಲವಾರು ಘಟ್ಟಗಳನ್ನು ಏಕಾಂಗಿಯಾಗಿ ಎದುರಿಸಬೇಕಾಗುತ್ತದೆ " 
" ಹೆಚ್ಚಾಗಿ ಇದು ಸನ್ನಿವೇಶದ ಅನಿವಾರ್ಯವಾಗಿರುತ್ತದೆಯೇ ಹೊರತು ಏಕಾಂತವನ್ನು ಬಯಸುವವರು ತುಂಬಾ ಕಡಿಮೆ "
ಯಾವಾಗಲೂ ನಿಮ್ಮ ತಂದೆ ಈ ಮಾತುಗಳನ್ನು ಹೇಳುತ್ತ ಇರುತ್ತಾರೆ ನೆನಪು ಉಂಟಾ ... 
ಎಂದು ಅನುಜ್ ಸೂದ್ ಹೇಳುತ್ತಾರೆ.... ಈಗೆ ಹೇಳುವ ಮೂಲಕ ಅರುಣ್ ಕುಮಾರ್ ನ ತಂದೆಯ ಬಗ್ಗೆ ಹೇಳುತ್ತಾನೆ ... 
ಆ ಹೌದು ..
ಎಂದು ಅರುಣ್ ಕುಮಾರ್ ಹೇಳುತ್ತಾನೆ ...
ಹಲವಾರು ಕವಿಗಳೂ ಕಲಾವಿದರೂ ಪ್ರೇರಣೆಗೋಸ್ಕರ ಜನರಿಂದ ಅಂತರದನ್ನು ಕಾಯ್ದುಕೊಂಡು ಈ ರೀತಿ ಏಕಾಂಗಿಯಾಗಿ ಪ್ರವಾಸ ಮಾಡುವುದುಂಟು ..
ನಾನು ಏಕಾಂಗಿಯಾಗಿ ಪ್ರವಾಸ ಮಾಡುವ ಕಾರಣವೆಂದರೆ ಹೊಸ ಪರಿಸರದಲ್ಲಿ ಹೊಸ ರೀತಿಯ ಅನುಭವದ ಬುತ್ತಿಯನ್ನು ಕಟ್ಟಿಕೊಳ್ಳಬಹುದು ಮತ್ತು   ಹೊಸ ಜನರೊಂದಿಗೆ  ಬೆರೆತು ಹೊಸ ಜೀವನ ಸೃಷ್ಟಿ  ಮಾಡಬಹುದು  ಎಂಬ ಆಸೆ ... 
ಇದು ಮಾನವನ ಸಹಜ ಗುಣವೆಂದರೆ ತಪ್ಪಾಗಲಾರದು  ಪ್ರತಿ ಮನುಷ್ಯ .... 
ಇರುವುದಕ್ಕೆ ಸಂತೋಷ ಪಡುವ ಬದಲು ಇಲ್ಲದುದಕ್ಕೆ ಜೀವನ ಪೂರ್ತಿ ಕೊರಗುವುದು ! ಅಧ್ಯಯನಗಳ ಪ್ರಕಾರ ಸಂತೋಷವಾಗಿರುವುದರ ರಹಸ್ಯ ಹೊಸ ಅನುಭವಗಳನ್ನು ಹೊಂದುದರಿಂದ ದೊರೆಯುತ್ತದೆ ಹೊರತು ನಡೆದು ಹೋದ ವಿಷಯಗಳಿಗೆ ಕೊರಗುವುದರಿಂದಾಲ್ಲ .... 
ಬದುಕಿನ ಕೊನೆಯಿಲ್ಲದ ಜಂಜಾಟಗಳ ನಡುವೆ ನಾವು ನಮಗಾಗಿ ಸಮಯ ಕಂಡುಕೊಳ್ಳುವುದನ್ನೇ ಮರೆಯುತ್ತೇವೆ .....
ನಾನು ನನ್ನ ಕೆಮಿಕಲ್ ಎಂಜಿನಿಯರಿಂಗ್ ಮುಗಿಯುವವರೆಗೆ ಓದುದರ ಬಗ್ಗೆ ಮಾತ್ರ ಏಕಾಗ್ರತೆ ಕೊಡುತ್ತಿದ್ದೆ ... 
ಬೇರೆಯವರೊಂದಿಗೆ ಸೇರುವುದು ಮಾತನಾಡುವುದು ಎಂದರೆ ಕಿರಿಕಿರಿ ಕೊಡುತ್ತಿತ್ತು ನನಗೆ ...   
ಅಂಕಗಳಿಸುವುದು ನನ್ನ  ಮುಖ್ಯ ಉದ್ದೇಶವಾಗಿತ್ತು ನನ್ನ ಜೀವನದ ಲಕ್ಯವಾಗಿತ್ತು ... 
ದತ್ತು ತೆಗೆದುಕೊಂಡ ತಂದೆಗೆ ಖುಷಿ ಪಡಿಸಬೇಕು ಎಂದು ಪ್ರತಿ ಸಲ ಪ್ರತಿ ದಿನ ಹಂಬಲಿಸುತ್ತಿದ್ದೆ ಅದರಿಂದ ಮಿತ್ರರನ್ನು ಸಹ ಮಾಡದೇ ನನ್ನ ಎಲ್ಲಾ ಸಮಯವನ್ನು ಓದಿನಲ್ಲಿ ಮುಳುಗುತ್ತಿದ್ದೆ ...... 
ಆದರೆ ನಾನು ಕೆಮಿಕಲ್ ಎಂಜಿನಿಯರಿಂಗ್ ಮುಗಿಸಿದೆ ಕಾಲೇಜಿನ ಟಾಪರ್ ರ್ವಿದ್ಯಾರ್ಥಿಯಾಗಿ ಹೊರ ಹೊಮ್ಮಿದೆ ........ 
ಆದರೆ ಆ ಖುಷಿಯನ್ನು ಹಂಚಿಕೊಳ್ಳಲು ನನ್ನ ಸಾಕು ತಂದೆ ಈ ಲೋಕದಲ್ಲಿಯೆ ಇರಲಿಲ್ಲ .... 
ಎಂದು ಅರುಣ್ ಕುಮಾರ್ ಹೇಳುತ್ತಿರುವಾಗ ಅನುಜ್ ಸೂದ್ ಮದ್ಯದಲ್ಲಿ ನಿಲ್ಲಿಸುತ್ತಾರೆ ... 
ನಿಮ್ಮ ತಂದೆಯ ಕೊಲೆಗಾರರು ಸಿಕ್ಕಿದಾರ ... 
ಆ ಕೊಲೆಗರನಿಗೆ ಶಿಕ್ಷೆ ಆಯ್ತಾ ... 
ಎಂದು ಅನುಜ್ ಸೂದ್ ಅನುಮಾನದಲ್ಲಿ ಕೇಳಿದರು ...  
ಏಕೆಂದರೆ ಅರುಣ್ ನ ಸಾಕು ತಂದೆಯ ಕೊಲೆ ತುಂಬ ವಿಚಿತ್ರವಾಗಿತ್ತು ...  ಕೊಲೆಯಲ್ಲಿ ವಿಚಿತ್ರ ಏನೆಂದರೆ 
ಅವರನ್ನು ತುಂಬ ಹಿಂಸೆ ಕೊಟ್ಟು ಸಾಯಿಸಲಾಗಿತ್ತು ... 
ಸಾಮಾನ್ಯವಾಗಿ ಚಿತ್ರ ಹಿಂಸೆ ಕೊಡುವುದು ಯಾರೆಂದರೆ ಕೊಲ್ಲುವ ವ್ಯಕ್ತಿಯ ಮೇಲೆ ತುಂಬಾ ದ್ವೇಷ ಇದ್ದಾಗ ... ಇಲ್ಲ ಅಂದರೆ ಸೀರಿಯಲ್ ಕಿಲ್ಲರ್ ಗಳ ಹಾಗೆ ಯಾವುದೇ ದ್ವೇಷ ಇಲ್ಲದೆ ತಮ್ಮ ಖುಷಿಗಾಗಿ ಸಾಯಿಸುವುದು ... ಆದರೆ ಇಲ್ಲಿ ಅರುಣ್ ಕುಮಾರ್ ಅವರ ತಂದೆಗೆ ಯಾವುದೇ ಶತ್ರುಗಳು ಇರಲಿಲ್ಲ ... ಮತ್ತೆ ಅವರ ಕೊಲೆ ಒಂದು ರೀತಿ ಸೀರಿಯಲ್ ಕಿಲ್ಲರ್ ಗಳು ಕೊಲೆ ಮಾಡುವ ರೀತಿ ಇತ್ತು  .. 
ಇಲ್ಲಿ ತನಕ ಅಂತಹ ಕೊಲೆ ನೋಡಿರಲಿಲ್ಲ ಯಾರು , ಇಡೀ ರಾಜ್ಯವನ್ನೇ  ಬೆಚ್ಚಿ ಬೀಳಿಸಿತ್ತು ಅವರ ಕೊಲೆ ಪ್ರಕರಣ ... 
ಇಲ್ಲ .. 
ಅದು ಇನ್ನೂ ಬಗೆಹರಿಯದ ಕೊಲೆ ಪ್ರಕರಣವಾಗಿ ಉಳಿದು ಬಿಟ್ಟಿದೆ ..... 
ಅವರನ್ನು ಸಾಯಿಸಿದ ಕೊಲೆಗಾರ ಯಾವಾಗ ಸಿಗುತ್ತನೋ ನಮ್ಮ ತಂದೆಯ ಆತ್ಮಕ್ಕೆ ಯಾವಾಗ ಶಾಂತಿ ಸಿಗುತ್ತದೆಯೋ ಎಂಬುವುದು ಆ ದೇವರಿಗೆ ಗೊತ್ತು ...
ಇಷ್ಟು ಮಾತ್ರ ಹೇಳ ಬಹುದು ಆ ಕೊಲೆಗಾರ ತುಂಬಾ ಕ್ರೂರಿ ಮತ್ತು ದಯೆ ದಾಕ್ಷಿಣ್ಯ ಇಲ್ಲದವನು ... 
ಎಂದು ಅರುಣ್ ಕುಮಾರ್ ಹೇಳುತ್ತಾನೆ .... ಆಗ ಅರುಣ್ ಕುಮಾರ್ ತುಂಬಾ ಕೋಪದಲ್ಲಿ ಇದ್ದ ...