ಬೆಳಗಿನ ಜಾವ ಮನೆಯ ಅತ್ತಿರ ಪೊಲೀಸರು ಜೀಪಿನಲ್ಲಿ ಬಂದು, ಅ ತಾಯಿ ಮತ್ತು ತಂದೆನ ಕೇಳುತ್ತಾನೆ, ನಿನ್ನ ಮಗಯಲ್ಲಿ,ನಿನ್ನ ಮಗ ಒಬ್ಬ ಕೊಲೆಗಾರ, ನಿನ್ನ ಮಗ ನೆನ್ನೆ ರಾತ್ರಿ ಗೌಡರ ಯಜಮಾನ ಕೊಲೆ ಮಾಡಿದ್ದಾನೆ ಅಂತ, ಅ ಮಾತು ಕೇಳಿದ ತಾಯಿ ಹೃದಯ ಒಡೆದoಗೆ ಆಗುತ್ತೆ, ಜೋರಾಗಿ ಕಿರಿಚುತಾಳೆ ಇಲ್ಲ ಸುಳ್ಳು ನನ್ ಮಗ ಆ ತರ ಮಾಡಲ್ಲ, ನೀವು ಸುಳ್ಳು ಹೇಳುತ್ತಾ ಇದಿರ ಅಂತ, ಅ ತಂದೇನು ಹೇಳುತ್ತಾನು ನನ್ ಮಗ ಕೊಲೆಗಾರಣಲ್ಲ ಅಂತ,
ಅಷ್ಟ್ರಲ್ಲಿ ಮಗ ಬರುತ್ತಾನೆ ಪೊಲೀಸರು ಅ ಹುಡುಗನ ಕೇಳುತ್ತಾನೆ, ಗೌಡ್ರನ ಯಾರೂ ಕೊಲೆ ಮಾಡಿದ್ದು ಯಾಕೆ ಅಂತ, ನಡಿ ಪೊಲೀಸ್ ಸ್ಟೇಷನ್ ಗೆ ಅಂತ, ಆ ತಂದೆ ಮಗನ ಮುಖ ನೋಡಿ ಹೇಳು ಮಗ ನೀನು ಮಾಡಿಲ್ಲ ಅಂತ, ನಾನು ನಿನ್ನ ನೋಡಿಕೊಳ್ಳುತೇನೆ ಭಯ ಪಡಬೇಡ ಅಂತ,ಅ ಹುಡುಗ ನಾನೆ ಕೊಲೆ ಮಾಡಿದ್ದು ಅಂತ ಒಪ್ಪಿಕೊಳ್ಳುತ್ತಾನೆ,
ಅ ತಾಯಿಗೆ ಕೋಪ ಬರುತ್ತೆ, ಅ ಹುಡುಗನ ಬೈಳ್ಳುತ್ತಾಳೆ, ಥು ನಿನ್ ಅಂತ ಕೊಲೆಗಾರಣಿಗ ನಾನು ಜನುಮ ಕೊಟ್ಟಿದ್ದು, ಹೋಗಿ ಹೋಗಿ ನಮ್ಮಂತವರ ಹೊಟ್ಟೆಯಲ್ಲಿ ಹುಟ್ಟಿದಿಯ, ನಮ್ಮ ಮಾನ ಮರಿಯದೆ ತಗೆದುಬಿಟ್ಟೆ ಅಂತ, ಅ ತಂದೆಯು ಮಗನನ್ನ ಬೈಯುತನೇ, ನನ್ ಲೈಫ್ನಲ್ಲಿ ನನ್ ಮನೆ ಬಾಗಳಿಗೆ ಕಾಲು ಇಟ್ಟಿಲ್ಲ ಅಂತದು ನಿನ್ ಇಂದ ಇವತ್ತು ಪೊಲೀಸರು ನನ್ ಮನೆಗೆ ಬಂದರು, ಹಾಳಾಗಿ ಹೋಗಿ ನಿನ್ ಮುಖನು ತೋರಿಸಬೇಡ ಅಂತ ಅ ತಂದೆ ತಾಯಿ ಪೊಲೀಸರ ಜೊತೆ ಅ ಮಗುನ ಕಳಿಸು ಕೊಡುತ್ತಾರೆ.
ನಂತರ
ಕೋರ್ಟ್ನಲ್ಲಿ ಅ ಹುಡುಗನ ಮೇಲೆ ಕೇಸ್ ಆಗುತ್ತೆ, 6 ವರ್ಷ ಜೈಲು ಶಿಕ್ಷೆ ಆಗುತ್ತೆ ಅವನು ಜೈಲುಗೆ ಹೋಗುತ್ತಾನೆ,
6 ವರ್ಷಗಳನಂತರ ಅವನು ರಿಲೀಸ್ ಆಗುತ್ತಾನೆ, ಮನೆಗೆ ಬರುತ್ತಾನೆ ಅಮ್ಮಗೆ, ಅಪ್ಪಗೆ ಸ್ವಲ್ಪ ವಯಸ್ಸು ಆಗಿರುತ್ತೆ, 6 ವರ್ಷಗಳನಂತರ ಮಗನ ನೋಡಿ ತಾಯಿ ಕಣ್ಣಲ್ಲಿ ಕಣ್ಣೀರು ಹಾಕುತ್ತಾಳೆ, ಅಪ್ಪನ ಮನಸ್ಸು ನೋಂದೊಗುತ್ತೆ, ಮಗನೆ ಸ್ನಾನ ಮಾಡಿ ಬಾ ಊಟ ಬಡಿಸ್ತೀನಿ ತಿನ್ನುವಂತೆ ಅಂತ ತಾಯಿ ಪ್ರೀತಿ ಇಂದ ಊಟ ಇಡುತ್ತಾಳೆ, ಅವನು ಒಂದು ಒಂದು ತುತ್ತು ಬಾಯಲ್ಲಿ ನುಂಗಕ್ಕೆ ಆಗದೆ ಆ ಊಟಾನ ತಿನ್ನುತಾನೆ, ಯಾಕಂದರೆ ಅಷ್ಟ್ಟು ವರ್ಷಗಳನಂತರ ಅಪ್ಪ, ಅಮ್ಮನ ನೋಡಿದಾಗ, ಮನಸಲ್ಲಿ ತುಂಬಾ ನೋವು, ಅ ನೋವಿನಲ್ಲಿ ಊಟ ಮಾಡುತ್ತಾನೆ,
ಮರುದಿನ ಪಕ್ಕದ ಮನೆಯರು, ಸುತ್ತ ಮುತ್ತ ಜನರು, ಅವನು ಜೈಲುನಿಂದ ರಿಲೀಸ್ ಆಗಿದಾನೆ ಅಂತೇ, ಅವನು ಒಬ್ಬ ಕೊಲೆಗಾರ ಅನ್ನುವ ಮಾತುಗಳು ಈ ತಾಯಿನ ಕಿವಿಗೆ ಕೇಳಿಸುತ್ತದೆ, ಆ ತಾಯಿಯ ಮನಸ್ಸು ತುಂಬಾ ನೊಂದು ಹೋಗುತ್ತೆ, ನನ್ನ ಮಗನ ಕೊಲೆಗಾರ ಎಂದು ಎಲ್ಲರೂ ಕರೀತಾಲ್ಲಾ ಅನ್ನೋ ನೋವಿನಿಂದ,
ಆ ತಾಯಿಬಂದು ಮಗನ ಕೇಳುತ್ತಾಳೆ, ಅಲ್ಲ ಮಗನೆ ಯಾಕೆ ಈ ತರ ಮಾಡಿದೆ, ಏನಾದ್ರು ನಿಮಗೆ ಜಗಳ ಇತ್ತ, ಅವರನ್ನ ಕೊಲೆ ಮಾಡುವಂತಾದು ಏನು ಇತ್ತು ಅಂತ, ಮಗ ಆಗೋಗಿರೋ ವಿಷಯನ ಬಿಟ್ಟಬಿಡು, ಮುಂದೆ ಯಾವತರ ಇರ್ಬೇಕು ಅನೋದು ನೋಡೋಣ, ಸುಮ್ನೆ ಅವರು ಈ ತರ ಅಂದ್ರು, ಅತರ ಅಂದ್ರು ಅಂತ ತಲೆಕೆಡಿಸ್ಕೊಬೇಡ, ಯಾವನು ನಮಗೆ ಏನು ಸಹಾಯ ಮಾಡಲ್ಲ, ಕೋಪದಲ್ಲಿ ಮಾತಾಡಿ ಮನೆಯಿಂದ ಹೋಗ್ತಾನೆ. ಅ ಮಾತು ಕೇಳಿಸ್ಕೊಂಡ ಅಪ್ಪ ಯೋಚನೆ ಮಾಡುತ್ತಾನೆ ಯಾಕೆ ಇವನು ಏನು ಹೇಳುತ್ತಿಲ್ಲ, ಏನು ಆಗಿರಬವುದು ಅಂತ ಯೋಚನೆ ಮಾಡಿಕೊಂಡು ಊರಿನ ಮದ್ದೇ, ಅಂಗಡಿ ಕಡೆ ಹೋರಾಡುತಾನೇ,
ಟೀ ಶಾಪ್ ನಲ್ಲಿ ಅವರ ಸಹಪಾಠಿಗಳು ಕೇಳುತ್ತಾರೆ ಯಾಕೆ ನಿನ್ನ ಮಗ ಗೌಡ್ರನ ಕೊಲೆಮಾಡಿದ್ದು ಅಂತ ಅ ತಂದೆ, ಕೋಪದಲ್ಲಿ ಗೊತ್ತಿಲ್ಲ ಬಿಡ್ರಯ್ಯ, ಅದೇನು ಆಗಿದೆ ಯಾವನಿಗೆ ಗೊತ್ತು, ಅಂತ ಕೋಪದಲ್ಲಿ ಇರುತ್ತಾನೆ,
ಆಗ ಪೊಲೀಸ್ ಬರುತ್ತಾನೆ, ಅ ತಂದೆ ನ ನೋಡಿ ಏನು ಅಣ್ಣ ಚನ್ನಾಗಿದೀರಾ, ನಿನ್ ಮಗ ಏನು ಮಾಡುತ್ತಿದ್ದಾನೆ,
ಅ ತಂದೆ ಸರ್ ಚನ್ನಾಗಿಧಿನಿ, ನೀವು ಅರಾಮ್ ಇದ್ದೀರಾ ಅಂತ ಮಾತಾಡಿಸುತ್ತಾನೆ, ಟೀ ಕುಡಿದ್ದು ಹೋಗುವಾಗ ಅ ಪೊಲೀಸ್ ಹೇಳುತ್ತಾನೆ, ಅಂತ ಮಗನ ನೀವು ಪಡಿಯುವದಕ್ಕೆ ಪುಣ್ಯ ಮಾಡಿರ್ಬೇಕು ಅಂತ ಹೇಳುತ್ತಾನೆ,
ಆ ತಂದೆಗೆ ಆಚಾರ್ಯ ಆಗುತ್ತೆ ಏನು ಮಾತು ಆಡ್ತಾಯಿರೋದು ಇವರು, ನನ್ನ ಮಗ ಒಬ್ಬ ಕೊಲೆಗಾರ ಅಂತವನ ಪಡಿಯೋದಕ್ಕೆ ಪುಣ್ಯ ಮಾಡಿರಬೇಕು ಅಂತಾರಲ್ಲ ಅಂತ ಯೋಚನೆ ಮಾಡುತ್ತಾನೆ, ಅಲ್ಲಿಂದ ಪೊಲೀಸ್ ಹೋರಾಡುತ್ತಾನೆ.
ಮರುದಿನ ಅ ತಂದೆ ಪೊಲೀಸರನ್ನು ಹುಡುಕಿಕೊಂಡು ಹೋಗುತ್ತಾನೆ, ಸರ್ ನಿಮ್ಮ ಅತ್ತಿರ ಸ್ವಲ್ಪ ಮಾತಾಡಬೇಕು ಅಂತ ಕೇಳುತ್ತಾನೆ, ಪೊಲೀಸ್ ಯಾಕೆ ಏನು ಆಯಿತು ಹೇಳಿ ಅಂತ ಕೇಳುತ್ತಾನೆ,
ತಂದೆ ಕೇಳುತ್ತಾನೆ ನೆನ್ನೆ ನೀವು ಅಂದ್ರಲ್ಲಿ ನಿಮ್ಮಂತ ಒಳ್ಳೆ ಮಗನ ಪಡಿಯಬೇಕು ಅಂದ್ರೆ ಪುಣ್ಯ ಮಾಡಿರಬೇಕು ಅಂದ್ರಿ ಅರ್ಥ ಆಗಿಲ್ಲ, ಊರಲ್ಲಿ ಎಲ್ಲರೂ ನಿನ್ನ ಮಗ ಕೊಲೆಗಾರ ಅಂತ ಇದರೆ ನೀವು ನೋಡಿದರೆ ಈ ತರ ಅಂತ ಇದಿರ ನಿಮಗೆ ಗೊತ್ತಿರುತ್ತೆ, ಯಾಕೆ ಅವ್ನು ಕೊಲೆಗಾರ ಅದ ಸರ್, ದಯವಿಟ್ಟು ನಿಮ್ಮಗೆ ಕೈ ಮುಗಿತೀನಿ ಹೇಳಿ ಸರ್ ಅಂತಾರೆ, ಪೊಲೀಸ್ ನಿನ್ನ ಮಗ ಯಾರಿಗೂ ಹೇಳಬೇಡಿ ಅಂತ ಹೇಳಿದನೇ, ಏನು ಮಾಡುವುದು ಸರ್ ಪ್ಲೀಸ್ ನಿಮಗೆ ಕೈ ಮುಗಿತೀನಿ ಸರ್ ಅಂತ ಮತ್ತೆ ಕೇಳುತ್ತಾನೆ,
ನಿನ್ನಗೆ ಒಂದು ದಿನ ರಾತ್ರಿ ನಿನ್ನ ಹೊಡಿಯೋದಕ್ಕೆ ಬಂದಿದ್ರು ನೆನಪು ಇದಿಯಾ, ಅದು ಅವತ್ತು ಅವರು ಬಂದಿದ್ದು ನಿನ್ನ ಕೊಲೆಮಾಡೋದಕ್ಕೆ, ನಿನ್ನ ಅದೃಷ್ಟ ನಿನಗೆ ಏನು ಆಗಲಿಲ್ಲ, ಅವರು ಬೇರೆ ಊರಿನವರು ಆದರೆ ಅವರಿಗೆ ನಿನ್ನ ಕೊಲೆಮಾಡೋದಕ್ಕೆ ದುಡ್ಡು ಕೊಟ್ಟಿರೋದು ನಿಮ್ಮ ಊರಿನ ಯಜಮಾನರು,
ಅದನ್ನು ಕೇಳಿ ಅ ತಂದಿದೆ ಆಚಾರ್ಯ ಆಗುತ್ತೆ ಅವ್ರಿಗೆ ಕೊಟ್ಟಿ ಕೋಟಿ ಅಸ್ತಿ ಇದೆ ಅಂತದು ಅವರು ನನ್ನ ಯಾಕೆ ಕೊಳ್ಳಬೇಕು ಅಂತ, ನಿನ್ನ ಮನೆ ಅವನಿಗೆ ಬೇಕು ಅ ಮನೆ ಅತಿರ ದೇವಸ್ಥಾನ ಇದೆ ಅ ದೇವರು ಅತಿಶಕ್ತಿವಂತರು ಹೇಗಾದ್ರು ನಿನ್ನ ಮನೆನ ಸ್ವಂತ ಮಾಡುಕೊಂಡರೆ ಅವ್ನು ಅ ದೇವಸ್ಥಾನನ ಅವನ ಮನೆಯಲ್ಲಿ ಇರೋತರ ದೊಡ್ಡದಾಗಿ ಮನೆ ಕಟ್ಕೋಬವುದು, ಅವನೇ ದೇವರು ಆಗ್ಬೇಕು ಅನ್ನೋ ಸ್ವಾರ್ಥ, ಅದಕ್ಕೆ ನಿನ್ನ ಕೇಳಿದರೆ ಕೊಡಲ್ಲ ಅಂತ ಗೊತ್ತು, ಊರಿನವರುಗೆ ಗೊತ್ತಾದರೆ ಮರಿಯದೆ ಹೋಗುತ್ತೆ, ಇಷ್ಟ್ಟು ದುಡ್ಡು ಇದ್ದರು ಬಡವರ ಮನೇನ ಬಲವಂತವಾಗಿ ಕಿತ್ತುಕೊಂಡ ಅಂತ ಅಪವಾದ ಬರುತ್ತೆ ಅಂತ, ಬೇರೆ ಊರಿನಿಂದ ಜನ ಕರಿಸಿದರು, ಅ ದೇವರು ನಿಮ್ಮ ಅವತ್ತು ಕಾಪಾಡಿದರು,
ಅದೇ ದೇವರು ನಿನ್ನ ಮಗನ ರೂಪದಲ್ಲಿ ಅಂತ ರಾಕ್ಷಸ ನನ್ನ ಕೊಳ್ಳೆ ಮಾಡಿದ, ಅದಕ್ಕೆ ಹೇಳಿದ್ದು ನಿನ್ನ ಮಗ, ನಿನಗೆ ಅ ಘಟನೆ ನೆಡೆದಾಗಿಂದ ಒಂದು ದಿನಾನೂ ನೆಮ್ಮದಿ ಇಂದ ನಿದ್ದೆ ಮಾಡಿಲ್ಲ, ತುಂಬಾ ಹುಡುಕಿ ಯಾರು ಮಾಡಿದರೆ ಅಂತ ಹುಡುಕಿ ಕೊಲೆ ಮಾಡಿದ ಮೇಲೆ ಜೈಲಿಗೆ ಬಂದಮೇಲೆನೆ ನೆಮ್ಮದಿ ಆಗಿ ನಿದ್ದೆ ಮಾಡಿದ್ದು.
ಅದನ್ನ ಕೇಳಿದ ಅ ತಂದೆಯ ಕಣ್ಣಲ್ಲಿ ಕಣ್ಣೀರು ಬರುತ್ತೆ, ಕೈ ಮುಗಿದ್ದು ಪೊಲೀಸ್ ಗೆ ತುಂಬಾ ಧನ್ಯವಾದಗಳು ಸರ್ ನಿಮ್ಮಗೆ, ನೀವು ಹೇಳಿಲ್ಲ ಅಂದಿದಾರೆ ನನ್ನ ಮಗ ಕೊಲೆಗಾರ ಅಂತ ಒಂದು ಮಚ್ಚೆ ತರ ಅನಿಸೋದು ಆದರೆ, ಈವಾಗ ಅನಿಸುತ್ತೆ ಅಂತ ಮಗನ ಪಡಿಯೋದಕ್ಕೆ ನಿಜ ನಾನು ಪುಣ್ಯ ಮಾಡಿಧಿನಿ ಸರ್, ಅ ದೇವರು ನಮನ್ನ ಕಾಪಿಡಿದನೇ ಸರ್ ಅಂತ ಹೇಳಿ ಅಲ್ಲಿಂದ ಹೋರಾಡುತ್ತಾನೆ.
ತಂದೆ ಮನೆಗೆ ಬರುತ್ತಾನೆ, ಹೆಂಡತಿನ ಕೇಳುತ್ತಾನೆ ಮಗ ಊಟ ತಿಂದನ ಅಂತ, ಹೆಂಡತಿ ಅ ತಿಂದು ರೂಮ್ ನಲ್ಲಿ ಮಲಗಿದಾನೆ, ಅ ತಂದೆ ಮಗನ ರೂಮ್ ಗೆ ಹೋಗುತ್ತಾನೆ, ಮಗ ಮಲ್ಕೊಂಡು ಇದೀಯ ಅಂತ ಕೇಳುತ್ತಾನೆ ಮಗ ಇಲ್ಲ ಅಪ್ಪ ಹೇಳಿ ಯಾಕೆ, ಏನು ವಿಷಯ ಅಂತ, ಅ ತಂದೆಯ ಕಣ್ಣುಗಳು ನೋಡುತ್ತಾನೆ ಮಗ, ಅವನಿಗೆ ಒಂಥರಾ ಆಗುತ್ತೆ ಮನಸೆಲ್ಲ ಒಂಥರಾ ಬಾರಾ, ಇನ್ನೊಂದು ಕಡೆ ಕಣ್ಣಲ್ಲಿ ಕಣ್ಣೂತುಂಬಾ ನೀರು, ತಂದೆ ಅವಾಗ ಹೇಳುತ್ತಾನೆ, ಅಲ್ಲಪ್ಪಾ ಒಂದು ಮಾತು ನನಗೆ ಹೇಳಬಹವುದು ಇತ್ತು ಅಲ್ವಾ ಅಂತ, ಅ ಮಾತು ಅಂದ ತಕ್ಷಣ ಅ ಮಗನ ಕಣ್ಣಲ್ಲಿ ಕಣ್ಣೀರು ಬರುತ್ತೆ, ಹೇಳಿದರೆ ಅರ್ಥ ಮಡಿಕೊಳ್ಳುವರು ಹೊರಗಿನವರು ಅಪ್ಪ, ನೀವು ಯಾವತ್ತೂ ನನಗೆ ಹೊರಗಿನವರು ಅಲ್ಲ,ನೀವು ನನ್ನ ಅಪ್ಪ ಚಿಕ್ಕವಯಸಿಂದ ನನಗೆ ಏನು ಕೇಳಿಲ್ಲ ಅಂದ್ರು ತಂದು ಕೊಟ್ಟಿರೋರು ನೀವು, ನಿಮ್ಮ ಮುಖ ನೋಡಿದರೆ ಗೊತ್ತಾಗುತ್ತೆ ಅಪ್ಪ ನನಗೆ, ಇಷ್ಟ್ಟೊ ಜನ ಪ್ರೀತಿ ಮಾಡುವ ಹುಡುಗಿ ಜೊತೆ ಅಂತಾರೆ ನಿನ್ನ ಮುಖ ನೋಡಿದರೆ ಸಾಕು ನೀನು ಯಾವತರ ಇದೀಯ ಅಂತ ನನಗೆ ಗೊತ್ತಾಗುತ್ತೆ ಅಂತ, ಆ ತರ ನಿಮ್ಮ ಮುಖ ನೋಡಿದರೆ ನನಗೆ ಗೊತ್ತಾಗುತ್ತೆ, ನೀವು ಯಾವತಾರ ಇದಿರ ಅಂತ, ನಾನು ನಿಮ್ಮ ಮಗ ಅಪ್ಪ,
ಆ ಮಾತು ಕೇಳಿದ ಅಪ್ಪನ ಕಣ್ಣಲ್ಲಿ ಕಣ್ಣೀರು ಶಮಿಷು ಮಗನೆ ನನ್ನ,
ತಂದೆ ಹೇಳುತ್ತಾನೆ ಒಬ್ಬನೇ ಶಿಕ್ಷೆ ಅನುಭವಿಸುವ ಅವಶ್ಯಕತೆ ಏನಾಗಿತ್ತು ನಾವು ಇದೀವಿ ಅಲ್ವಾಪ್ಪಾ, ಮಗ ಹೇಳುತ್ತಾನೆ ನೀವು ಇದಿರ ಅನೂ ಧೈರ್ಯನೆ ಅಪ್ಪ ನನಗೆ ಏನೇ ಆದರೂ ನಮ್ಮ ಅಪ್ಪ ನೋಡಿಕೊಳ್ಳುತ್ತಾನೆ ಅನೂ ಧೈರ್ಯ,
ನಮಗೆ ನೋವು ಅದರೇ ಅದು ಕಷ್ಟ, ನಮ್ಮವರಿಗೆ ಬಂದರೆ ಅದು ನರಕ, ನಿನ್ನ ಅ ಪರಿಸ್ಥಿತಿನಲ್ಲಿ ನೋಡಿದ ನನಗೆ ನರಕ ಅನುವಿಸುವತರ ಇತ್ತು, ಅಪ್ಪ ಒಂದು ವೇಳೆ ನನಗೆ ಆಗಿದ್ದರು ನೋವು ಆಗ್ತಾ ಇತ್ತು ಕೇಲವು ದಿನ ಕಷ್ಟ ಪಡುತ್ತಾ ಇದ್ದೆ, ಆದರೆ ನಿಮ್ಮನ ಆ ತರ ನೋಡಕ್ಕೆ ಅಗ್ಲಿಲ ನನಗೆ,
ರಾಮಾಯಣ, ಮಹಾಭಾರತ ನಾನು ನೋಡಿಲ್ಲ ಅಪ್ಪ ಆದರೆ, ರಾಮನಿಗೆ ಆಂಜನೇಯ ಯಾವತರ ರಕ್ಷಣೆ ಯಾಗಿ ಇದ್ದಾನೋ ನಾನು ಜೀವಂತ ಇರೋವರುಗಿ ನಿಮಗೆ ಇರ್ತೀನಿ ಅಪ್ಪ, ಅ ಮಾತು ಕೇಳಿದ ಅಪ್ಪ ಸಡನ್ ಆಗಿ ಅ ಮಗುನ ತಬ್ಬಿ ಕೊಳ್ಳುತ್ತಾನೆ ಅಳುತ್ತಾನೆ, ನೀನಂತ ಮಗನ ನಾನು ಪಡೆದಿದ್ದು ನಿಜವಾಗಲೂ ಪುಣ್ಯವಂತರು ಅಂತ. ಹೇಳಿ ಅ ಮಗನಿಗೆ ಉಷರ್ ಮಗನೆ, ಏನೇ ಅದರು ನಾನು ನಿನ್ನ ನೋಡಿಕೊಳ್ಳುತ್ತೇನೆ ಅಂತ ದೈರ್ಯ ಕೊಡುತ್ತಾನೆ.
ಈ ಕಥೆ ನನ್ನ ಅಪ್ಪಾಜಿಗೆ.