Prema Jala ( love is blind) - 2 in Kannada Horror Stories by Narayan M books and stories PDF | ಪ್ರೇಮ ಜಾಲ (love is blind) - 2

Featured Books
  • ಪ್ರೇಮ ಜಾಲ (love is blind) - 2

    ಅಧ್ಯಾಯ ೨ಗಾಢ ಕತ್ತಲಲ್ಲಿ ಅವನ ಆಕ್ರಂದನದ ಆರ್ಭಟ ಗುಡುಗಿನಂತೆ ಕೇಳಿಸುತ್...

  • ಬದಲಾವಣೆ ನನಗೋ? ಜಗತ್ತಿಗೋ?

    ಡಾ. ಅರ್ಜುನ್, 35 ವರ್ಷದ ಒಬ್ಬ ಅತ್ಯಂತ ಪ್ರತಿಭಾವಂತ ಮತ್ತು ವಿಚಿತ್ರ ಸ...

  • ಹಸಿದ ಹಕ್ಕಿಯ ಕಥೆ

    ಒಂದಾನೊಂದು ಕಾಲದಲ್ಲಿ, 'ಹಸಿರಾವೃತ' ಎಂಬ ಹೆಸರುಳ್ಳ ಒಂದು ವಿಶ...

  • ಮಹಿ - 11

     ಅಕಿರಾ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿಕೊಂಡು ಮನೆ ಕಡೆಗೆ...

  • ಮರು ಹುಟ್ಟು 5

    ಹಳೆಯ ಕಷ್ಟದ ಆಘಾತ (ಇಂಟೀರಿಯರ್ - ಕಚೇರಿ)ಅನಿಕಾ ಕಚೇರಿಯಲ್ಲಿ ಎಂದಿನಂತೆ...

Categories
Share

ಪ್ರೇಮ ಜಾಲ (love is blind) - 2

ಅಧ್ಯಾಯ ೨



ಗಾಢ ಕತ್ತಲಲ್ಲಿ ಅವನ ಆಕ್ರಂದನದ ಆರ್ಭಟ ಗುಡುಗಿನಂತೆ ಕೇಳಿಸುತ್ತಿತ್ತು. ಸುತ್ತಲೂ ಬಿರುಗಾಳಿಯನ್ನೇ ತರಿಸುವಂತೆ “ಸಾರಿಕಾ… ಸಾರಿಕಾ…” ಎನ್ನುವ ಅವನ ಕೂಗು ಪ್ರತಿಧ್ವನಿಸುತ್ತಿತ್ತು.


ಪ್ರಜ್ಞೆ ತಪ್ಪಿ ಅವನ ಬಾಹುಗಳಲ್ಲಿ ಬಿದ್ದಿದ್ದ ಸಾರಿಕೆಯನ್ನು ತಬ್ಬಿಕೊಂಡ ಅವನು ಆಕಾಶದ ಕಡೆ ಮುಖ ಮಾಡಿದ. ಆಗಸದ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದ ಕಾರ್ಮೋಡಗಳು ಕ್ಷಣದಲ್ಲಿ ಸರಿದು, ಮರೆಯಾಗಿದ್ದ ಪೂರ್ಣಚಂದ್ರನ ಕಿರಣಗಳು ಅವನ ಮೇಲೆ ಸುರಿದವು.

ಚಂದ್ರಕಿರಣಗಳು ಅವನ ಅನಿಯಂತ್ರಿತ ಮೃಗರೂಪದ ಮೇಲೆ ಬಿದ್ದ ತಕ್ಷಣ ಅವನ ರೂಪ ನಿಧಾನವಾಗಿ ಬದಲಾಗತೊಡಗಿತು. ಕೋರೆ ಹಲ್ಲುಗಳು ಮಾಯವಾಗಿ, ಕೆಂಪು ಕಣ್ಣುಗಳು ಮಂಕಾಗಿ, ಅರ್ಧ ಪಿಶಾಚಿಯ ರೂಪದಿಂದ ಅವನು ತನ್ನ ನಿಜವಾದ ಸುಂದರ ತರುಣನ ರೂಪಕ್ಕೆ ಮರಳಿದ. ಆದರೆ ಅವನ ಬೆನ್ನಿನ ಹಿಂದೆ ಇನ್ನೂ ಗರಿಗೆದರುತ್ತಿದ್ದ ಕಪ್ಪು ಬೃಹತ್ ರೆಕ್ಕೆಗಳು ಅವನ ದಾನವಸ್ವಭಾವವನ್ನು ನೆನಪಿಸುತ್ತಿದ್ದವು. ರೆಕ್ಕೆಗಳನ್ನು ಚಾಚಿಕೊಂಡು ಅವನು ಕ್ಷಣದಲ್ಲಿ ಆಕಾಶಕ್ಕೆ ಎದ್ದನು.

@@@@@

“ಏ ವಿಹಾನ್! ಇವಳನ್ನು ಇಲ್ಲಿ ಯಾಕೆ ತಂದು ಬಿಟ್ಟಿದ್ದೀಯಾ?” ಎಂದಳು ಮಾಯಾ, ಕೋಪದಿಂದ ಅವನನ್ನು ದಿಟ್ಟಿಸಿಕೊಂಡು.

ವಿಹಾನ್ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು, ಮಾಯಾದ ಮಾತಿನ ಕಡೆ ಗಮನಕೊಡದೇ ಹೇಳಿದ—
“ಇವಳು ನನ್ನವಳು. ನನ್ನ ಹೆಂಡತಿ. ಅವಳು ನನ್ನ ಜೊತೆಯಲ್ಲೇ ಇರುತ್ತಾಳೆ. ಅವಳನ್ನು ಇಲ್ಲಿ ಇರಿಸಬಾರದು ಅಂತ ಹೇಳೋ ಅಧಿಕಾರ ಯಾರಿಗೂ ಇಲ್ಲ.”

ಅವನು ತಕ್ಷಣ ಸಾರಿಕೆಯನ್ನು ತನ್ನ ಗೃಹದ ದೊಡ್ಡ ಕೋಣೆಯ ಕಡೆ ಕರೆದೊಯ್ದು, ಮೃದುವಾದ ಹಾಸಿಗೆಯ ಮೇಲೆ ಮಲಗಿಸಿದ. ಅವಳು ಇನ್ನೂ ಪ್ರಜ್ಞೆ ಪಡೆಯದೆ ನಿಶ್ಚಲವಾಗಿ ಬಿದ್ದಿದ್ದಳು.

ಮಾಯಾ ಕ್ಷಣಕ್ಕೆ ನಕ್ಕಂತೆ ಮಾಡಿತು; ಆದರೆ ಆ ನಗೆ ಕೋಪದಿಂದ ಹುಟ್ಟಿದ್ದದು.
“ಹೌ ಡೇರ್ ಯು! ಅಧಿಕಾರ ನಿನಗಿಂತ ನನಗೇ ಹೆಚ್ಚು—ಅವಳು ನಿನ್ನ ಹೆಂಡತಿಯಲ್ಲ. ನಾನಿರುವ ತನಕ ಆ ಸ್ಥಾನಮಾನ ಅವಳಿಗೆ ಸಿಗದು.

ಇದು ದಾನವಲೋಕ. ಇಲ್ಲಿ ಮಾನವಳಿಗೆ ಸ್ಥಾನವಿಲ್ಲ.
ಅವಳು ನನ್ನ ಹಸಿವಿಗೆ ಆಹಾರ… ಒಬ್ಬ ಸಾಮಾನ್ಯ ಪ್ರಾಣಿ ಅಷ್ಟೇ!

ನೀನು ಅವಳನ್ನು ಮತ್ತೆ ನನ್ನ ಲೋಕಕ್ಕೆ ಕರೆದುಕೊಂಡು ಬಂದ ಕ್ಷಣ… ಅವಳ ಅಂತ್ಯಕ್ಕೆ ನೀನೇ ಮಾರ್ಗ ಮಾಡಿದ್ದೀಯಾ ವಿಹಾನ್!”

ಮಾಯಾದ ರೂಪ ಕ್ಷಣದಲ್ಲಿ ಬದಲಾಗತೊಡಗಿತು. ಅವಳ ಕಣ್ಣುಗಳಲ್ಲಿ ಶ್ವೇತಭಾಗವೇ ಕಾಣದೆ ಗಾಢ ಕಪ್ಪು ವಲಯ ಮೂಡಿತು. ಉದ್ದವಾದ ಕೋರೆ ಹಲ್ಲುಗಳು, ನೆಲ ಮುಟ್ಟುವ ಕಪ್ಪು ಕೂದಲು, ಬಾಗಿದ ಬೆನ್ನು—ಅವಳ ಸಂಪೂರ್ಣ ರಾಕ್ಷಸಿಬಾವನೆ ಕೋಣೆಯನ್ನೇ ನಡುಗಿಸಿತು.

@@@@@

ಕೋಣೆಯ ಒಳಗೆ ನೀಲಿ ಗೋಡೆಗಳು, ಕೆಂಪು ಪಲ್ಲಂಗ, ತೆಳ್ಳನೆಯ ಪರದೆಗಳು ಶಾಂತಿಯ ಪ್ರಕಾಶ ಹರಡುತ್ತಿದ್ದವು. ಆ ಮೌನದಲ್ಲಿ ಸಾರಿಕೆಯನ್ನು ಅವನು ನೋಡಿದ ಕ್ಷಣ ಅವನ ಹೃದಯ ತುಂಡಾಗಿತು.

ಪೂರ್ಣಚಂದ್ರನ ಕಾಂತಿಯನ್ನೇ ಮೀರಿಸುವ ಅಂದ ಅವಳದ್ದು… ಆದರೆ ಈಗ ಅವಳ ದೇಹದ ಮೇಲೆ ಕಣ್ಣಿಗೆ ಬಿದ್ದದ್ದು ಅಂದವಲ್ಲ—ನೋವು.

ಅವಳ ಬಟ್ಟೆಗೆ ತಗುಲಿದ್ದ ರಕ್ತದ ಕಲೆಗಳು, ಬಿಳಿ ಚರ್ಮದ ಮೇಲೆ ಕೆಂಪು ಗುರುತುಗಳು, ಕಾಲಿನ ಬಳಿ ಹೆಪ್ಪುಗಟ್ಟಿದ ಗಾಯದ ಚುಕ್ಕೆಗಳು, ಕೆನ್ನೆಗೆ ಹರಿದ ಕಣ್ಣೀರಿನ ಗುರ್ತು… ಎಲ್ಲವೂ ಅವಳು ಭಗ್ನಗೊಂಡಿರುವುದನ್ನು ಹೇಳುತಿದ್ದವು.

“ನಿನ್ನ ನೋವನ್ನು ನಾನು ತೆಗೆದುಕೊಳ್ಳಬಲ್ಲೆಂದರೆ ಇಲ್ಲಿಯೇ ತೆಗೆದುಕೊಳ್ಳುತ್ತಿದ್ದೆ ಸಾರಿಕಾ…” ಎಂದು ಅವನು ಗುಪ್ತವಾಗಿ ಕಮಲಿಸಿದ.

ಅವನು ನಿಧಾನವಾಗಿ ಅವಳ ಗಾಯಗಳಿಗೆ ಹತ್ತಿರ ಬಾಗಿ, ತನ್ನ ನಾಲಿಗೆಯನ್ನು ಮೃದುವಾಗಿ ಗಾಯಗಳ ಮೇಲೆ ಹಾಯಿಸಿದ. ಅವನ ನಾಲಿಗೆಯಲ್ಲಿದ್ದ ದಾನವಶಕ್ತಿ ಅವಳ ರಕ್ತವನ್ನು ಹೀರಿಕೊಂಡಾಗ, ಅವಳ ಗಾಯಗಳು ಒಂದರೊಂದಾಗಿ ಮಾಯವಾಗತೊಡಗಿದವು—ಕ್ಷಣದಲ್ಲಿ ಅವಳು ಸಂಪೂರ್ಣ ಗುಣವಾಗಿಬಿಟ್ಟಳು.

ವಿಹಾನ್ ಉಸಿರನ್ನು ಬಿಡುವಂತೆ ನೆಮ್ಮದಿಯಿಂದ ಸೊಮ್ಮುಗೊಂಡ. ಅವನ ದೇಹ ಕ್ಷಣದಲ್ಲಿ ತನ್ನ ಸಹಜ, ಅಪರೂಪದ ಮನುಷ್ಯರೂಪಕ್ಕೆ ಮರಳಿತು—ಕಪ್ಪು ಕಣ್ಣುಗಳು, ರೇಷ್ಮೆಯ ಕೂದಲು, ಚಂದ್ರದಂತೆ ಹೊಳೆಯುವ ಮುಖ, ಆಕರ್ಷಕ ನಗು… ಅವನ ಅಂದಕ್ಕೆ ಸೋಲದ ಹುಡುಗಿಯೇ ಇರಲಿಲ್ಲ.

ಆದರೆ ಅಂದದ ಒಳಗೆ ನರಕದ ಕತ್ತಲೆ ಮಲಗಿತ್ತು—
ಅವನು ರಕ್ತಪಿಪಾಸು.
ಎರಡು ಸಾವಿರ ವರ್ಷ ವಯಸ್ಸು.
ಪಾತಾಳ ಲೋಕದ ಕಪ್ಪು ನಗರಿಯ ಅಧಿಪತಿ.

ಮನುಷ್ಯರ ರಕ್ತ ಅವನಿಗೆ ಆಹಾರ.
ಕನ್ಯೆಯ ರಕ್ತ ಅವನಿಗೆ ಶಕ್ತಿ.
ಸಾರಿಕಾ… ವಿಶೇಷ ನಕ್ಷತ್ರದಲ್ಲಿ ಜನಿಸಿದ ಕನ್ಯೆ—ಅವಳ ರಕ್ತ ಅವನ ಬದುಕಿನ ಶಕ್ತಿಯ ಮೂಲವಾಗಬೇಕಿತ್ತು.

ಆದರೂ…

ಅವಳನ್ನು ನೋಡಿದ ಕ್ಷಣದಿಂದ ಅವನೊಳಗೆ ಹುಟ್ಟಿದ್ದು ರಕ್ತಪಿಪಾಸೆ ಅಲ್ಲ — ಪ್ರೀತಿ.

ಅವಳನ್ನು ಕೊಲ್ಲಲು ಬಂದವನು, ಅವಳಿಗಾಗಿ ಬದುಕತೊಡಗಿದನು.
ದಾನವನಾಗಿದ್ದರೂ, ಅವಳಿಗಾಗಿ ಮಾನವನಾಗಲು ಬಯಸಿದನು.
ಅವಳ ಕಣ್ಣಲ್ಲಿ ತಾನು ಕೆಟ್ಟವನಾಗಿದ್ದರೂ, ಅವಳನ್ನು ಕಾಪಾಡುವ ರಕ್ಷಕನಾಗಿಯೇ ಉಳಿಯಬೇಕೆಂದನು.

ಇದು ದಾನವ–ಮಾನವ ಎರಡರನ್ನೂ ಮೀರುವ ಅನುರಾಗದ ಕಥೆ…


ಅವರಿಬ್ಬರ ಪ್ರಪಂಚಗಳು ಒಂದಾಗಬಹುದೇ ಎಂಬುದು ಯಾರಿಗೂ ಗೊತ್ತಿರಲಿಲ್ಲ..

ದಾನವಲೋಕಕ್ಕೆ ಪ್ರೀತಿಯೇ ಇರುವುದಿಲ್ಲ, ಮಾನವಲೋಕದಲ್ಲಿ ವಿಶ್ವಾಸವೇ ದುರ್ಬಲ.
ಆದರೆ ಈ ಇಬ್ಬರ ನಡುವೆ ಹುಟ್ಟಿದ ಬಂಧ—
ವಿಧಿಯೇ ಬರೆಯದ ಜೋಡಿ.

ವಿಹಾನ್ ಅವಳನ್ನು ಕೊಲ್ಲಲು ಬಂದವನಲ್ಲ;
ಅವಳಿಗಾಗಿ ಬದುಕುವವನಾಗಿ ಅವನು ಬದಲಾಗಿಬಿಟ್ಟನು.
ಸಾರಿಕಾ ಕೇವಲ ಅವನ ಹಸಿವು ನೀಗಿಸುವ ಕನ್ಯೆಯಲ್ಲ—
ಅವಳೇ ಅವನ ಅಸ್ತಿತ್ವದ ಉತ್ತರ.
ಅವಳಿಗಾಗಿಯೇ ಅವನು ದಾನವದಿಂದ ರಕ್ಷಕನಾಗಿ ಮಾರ್ಪಟ್ಟನು.
ಅವಳ ನಗುವಲ್ಲಿ ಅವನು ನೆಮ್ಮದಿ ಕಂಡ;
ಅವಳ ನೋವಿನಲ್ಲಿ ತನ್ನ ಹೃದಯವೇ ಕರಗುವುದನ್ನು ಅನುಭವಿಸಿದ.

ಪ್ರೀತಿ ಅವನಿಗೆ ಅಪರಿಚಿತ.
ಭಾವನೆಗಳು ಅವನಿಗೆ ಬಂಧನ.
ಮಾನವ ಹೃದಯದ ನಡುಕ ಏನೆಂಬುದನ್ನು ಅವನು ತಿಳಿದಿರಲಿಲ್ಲ.
ಆದರೆ ಸಾರಿಕಾ ಅವನನ್ನು ನೋಡುವಾಗ—
ಅವಳ ಕಣ್ಣಿನ ಸರಳ ಬಯಕೆ, ಅವಳ ನಿರಪರಾಧಿ ನಗು,
ಅವಳ ಸಣ್ಣ ಮಾತುಗಳು, ಸಣ್ಣ ಭಯಗಳು…
ಎಲ್ಲವೂ ಅವನೊಳಗಿನ ಕತ್ತಲೆಯನ್ನು ಮೃದುವಾಗಿಸಿತು.

ಅವಳ ಬಗ್ಗೆ ಹೆದರುವ ದಾನವ ಲೋಕ
ಅವಳ ಮೇಲೆಯೇ ಹವಣಿಸುತ್ತಿದ್ದ ಮಾನವ ಜಾಲ
ಎರಡರ ಮಧ್ಯದಲ್ಲಿ ನಿಂತು
ವಿಹಾನ್ ಒಂದೇ ಪ್ರತಿಜ್ಞೆ ಮಾಡಿದ—

“ಯಾರೇ ಆಗಲಿ… ಯಾವ ಲೋಕದವರೇ ಆಗಲಿ…
ಸಾರಿಕೆಗೆ ತಾಕಲು ನಾನಿರುವ ತನಕ ಸಾಧ್ಯವಿಲ್ಲ.”

ಅವನು ದಾನವ,
ಆದರೆ ತನ್ನ ಹೃದಯವನ್ನು ಅವಳ ಮುಂದಿಟ್ಟಾಗ
ಅವನು ಮನುಷ್ಯನಿಗಿಂತಲೂ ಮನುಷ್ಯನಾಗಿದ್ದ.

ಇವಳಿಗಾಗಿಯೇ ಜೀವಿಸಲು ಬಯಸಿದಾಗ
ಅವನೊಳಗಿನ ರಕ್ತಪಿಶಾಚಿ ಮೌನಗೊಂಡ.
ಅವಳಿಗೆ ನಗುವನ್ನು ನೀಡಲು ಬಯಸಿದಾಗ
ಅವನೊಳಗಿನ ಕತ್ತಲೆ ಕ್ಷೀಣಿಸಿತು.
ಅವಳನ್ನು ಅಪ್ಪಿಕೊಂಡಾಗ
ಮೊದಲ ಬಾರಿಗೆ ಅವನು ಜೀವನದ ಉಷ್ಣತೆಯನ್ನು ಅನುಭವಿಸಿದ.

ಕತ್ತಲೆಯ ಲೋಕದ ಅಧಿಪತಿ,
ಸಾವಿರ ವರ್ಷಗಳ ರಕ್ತಪಿಪಾಸು,
ಕ್ರೌರ್ಯದ ಹೆಸರು,
ಎಲ್ಲವೂ ಅವಳ ಒಂದು ಸ್ಪರ್ಶಕ್ಕೆ ಕರಗಿದವು.

ಸಾರಿಕಾ—
ಅವನಿಗೆ ಆಹಾರವಾಗಿ ಹುಟ್ಟಿದ್ದವಳು,
ಆದರೆ ಅವಳೇ ಅವನನ್ನು ಬದುಕುವುದಕ್ಕೆ ಕಾರಣವಾಗಿ ಮಾರ್ಪಟ್ಟಳು.
ಅವಳ ರಕ್ತದಿಂದ ಅವನಿಗೆ ಶಕ್ತಿ ಬರಬಹುದಿತ್ತು,
ಆದರೆ ಅವಳ ಪ್ರೀತಿಯಿಂದ ಅವನಿಗೆ ಹೃದಯ ಬಂದಿತ್ತು.

ಹೀಗಾಗಿ ಈ ಕಥೆ—
ಒಬ್ಬ ದಾನವನ ಪ್ರೀತಿ ಕಂಡ ಕ್ಷಣದಿಂದ ಆರಂಭವಾಗುತ್ತದೆ.
ಅವನಿಗೆ ಅಸಾಧ್ಯವಾದದ್ದು ಒಂದೇ—
ಅವಳಿಲ್ಲದೆ ಬದುಕುವುದು.

ಮುಂದುವರಿಯುವುದು…!!