ಮಧ್ಯರಾತ್ರಿ 12:30.
ರಾಹುಲ್ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ ಸ್ವಲ್ಪ ಡ್ರಿಂಕ್ಸ್ ಮಾಡಿ ಕಾರ್ ಹತ್ರ ಬರ್ತಾನೆ ಹಾಗೆ ಫ್ರೆಂಡ್ಸ್ಗೆಲ್ಲ ಬೈ ಹೇಳಿ ಕಾರ್ ಸ್ಟಾರ್ಟ್ ಮಾಡ್ತಾನೆ ಅಷ್ಟರಲ್ಲಿ ಇನ್ನೊಬ್ಬ ಫ್ರೆಂಡ್ ಪ್ರಶಾಂತ್ ಮಚ್ಚಾ ನನ್ನ ಮನೆಗೆ ಡ್ರಾಪ್ ಮಾಡೋ ಅಂದಾಗ ಅಲ್ರೆಡಿ ಟೈಮ್ ಆಗಿದೆ ಇವಾಗ ನಿನ್ನ ಬಿಟ್ಟು ನಾನು ಮನೆಗೆ ಹೋಗೋಷ್ಟೋತಿಗೆ ಇನ್ನು ಲೇಟ್ ಆಗುತ್ತೆ ಮಚ್ಚಾ ಮನೆ ಕೂಡ ದೂರ ಇದೆ ಗೊತ್ತಲಾ, ಪ್ರಶಾಂತ್ ಸರಿ ಆಯ್ತು ನಿನ್ ಹೊರಡು ನಾನು ಅನಿಲ್ ಹತ್ರ ಡ್ರಾಪ್ ತಗಂತಿನಿ ಅಂತಾ ಹೇಳಿದಾಗ ರಾಹುಲ್ ಹೋಗ್ಲಿ ಬಾ ನಾನೆ ಡ್ರಾಪ್ ಮಾಡ್ತೀನಿ ಗಾಡಿ ಹತ್ತು , , ಇಬ್ಬರು ಹೊರಡುತ್ತಾರೆ ಪ್ರಶಾಂತನ ಮನೆ ಬರುತ್ತೆ " ಓಯ್ ಗಾಡಿ ನಿಲ್ಸು ಎಲ್ಲಿ ನಿನ್ ಮನೆಗೆ ಕರೆದುಕೊಂಡು ಹೊಕ್ತಿಯಾ " ರಾಹುಲ್ ನಗಾಡುತ್ತ ನೀನು ಬರ್ತೀನಿ ಅಂದ್ರೆ ಇವಾಗಲೇ ಹೋಗೋಣ ಅದಕ್ಕೆ ಪ್ರಶಾಂತ್ ಬೇಡ ಇವತ್ತು ಸ್ವಲ್ಪ ಜಾಸ್ತಿ ಆಗಿದೆ ನೆಸ್ಟ್ ಟೈಮ್ ನೋಡಣ ಹುಷಾರು ಗಾಡಿ ಓಡಿಸುವಾಗ ನಿನ್ ಹೋಗೋ ಹೈವೇ ಡೇಂಜರಸ್ ಅಂತಿದ್ರು ನೋಡ್ಕೊಂಡು ಗಾಡಿ ಓಡಿಸು ರಾಹುಲ್ಗೆ ಬೈ ಹೇಳಿ ಗೇಟ್ ಓಪನ್ ಮಾಡಿ ಒಳಗೆ ಹೋಗ್ತಾನೆ ರಾಹುಲ್ ಕೂಡ ಸರಿ ಅಂತಾ ಬೈ ಹೇಳಿ ಹೋರಾಡ್ತಾನೆ ಏನೋ ಒಂತರ ಗಲಿಬಿಲಿ ಸಿಟಿ ಬಿಡುಬಿಡುತ್ತಾ ರೋಡ್ ಪೂರ್ತಿ ಕಾಲಿ ಕಾಲಿ ಬೆಳಕಿಲ್ಲ ಸಿಟಿಯಲ್ಲಿ ಇದ್ದ ಚಂದ್ರನ ಬೆಳದಿಂಗಳು ಸಿಟಿ ಬಿಟ್ಟ ಮೇಲೆ ಎಲ್ಲೂ ಇಲ್ಲ ಪೂರ್ತಿ ಕತ್ತಲು ಕವಿದ ವಾತಾವರಣ
ಆಕಾಶದಲ್ಲಿ ಚಂದ್ರನೂ ಕಾಣಿಸಲಿಲ್ಲ. ಗಾಳಿ ಜೋರಾಗಿ ಬೀಸುತ್ತಿತ್ತು. ಹೈವೇ ಸಂಪೂರ್ಣ ಖಾಲಿ… ದೂರ ದೂರಕ್ಕೂ ಒಂದು ವಾಹನ ಕೂಡ ಇರಲಿಲ್ಲ.
ರಾಹುಲ್ ತನ್ನ ಕಾರನ್ನು ನಿಧಾನವಾಗಿ ಓಡಿಸುತ್ತಿದ್ದ. ಕಾರಿನ ಹೆಡ್‌ಲೈಟ್‌ಗಳು ಕತ್ತಲೆಯನ್ನು ಕತ್ತರಿಸುತ್ತಾ ಮುಂದೆ ಇರುವ ರಸ್ತೆಯನ್ನು ಮಾತ್ರ ಸ್ವಲ್ಪ ಬೆಳಗಿಸುತ್ತಿದ್ದವು.
ಎರಡೂ ಬದಿಯಲ್ಲಿ ದಟ್ಟ ಕಾಡು.
ಕಾಡಿನೊಳಗಿಂದ ವಿಚಿತ್ರವಾದ ಶಬ್ದಗಳು ಕೇಳಿಸುತ್ತಿದ್ದವು.
ಕಾಲಕಾಲಕ್ಕೆ ಗೂಬೆ ಕೂಗುವ ಧ್ವನಿ… ಗಾಳಿಯಲ್ಲಿ ಕಾಡಿನ ಮರಗಳು ಜಾರುವ ಶಬ್ದ…
ಆ ಶಾಂತತೆಯಲ್ಲೇ ರಾಹುಲ್ ಹೃದಯದ ಬಡಿತವೇ ಹೆಚ್ಚು ಕೇಳಿಸುತ್ತಿತ್ತು. ಅವನು ರೇಡಿಯೋ ಆನ್ ಮಾಡಲು ಪ್ರಯತ್ನಿಸಿದ. ಆದರೆ ರೇಡಿಯೋ ಸರಿಯಾಗಿ ಕೆಲಸ ಮಾಡಲಿಲ್ಲ. ಕೇವಲ ವಿಚಿತ್ರವಾದ “ಕ್ರ್ರ್ರ್…” ಎಂಬ ಶಬ್ದ ಮಾತ್ರ ಕೇಳಿಸುತ್ತಿತ್ತು.
“ಈ ಹೈವೇನಲ್ಲಿ ಬರೋದು ದೊಡ್ಡ ತಪ್ಪಾಯ್ತು…” ಆದರೆ ಏನು ಮಾಡೋದು ಮನೆಗೆ ಹೋಗಲು ಇದು ಒಂದೇ ದಾರಿ ಇರೋದು ಅಂತಾ ಅವನು ಮನಸ್ಸಿನಲ್ಲಿ ಯೋಚಿಸಿದ.
ಅಷ್ಟರಲ್ಲಿ ಮುಂದೆ ರಸ್ತೆಯ ಮಧ್ಯದಲ್ಲಿ ಏನೋ ಚಲಿಸಿದಂತೆ ಕಾಣಿಸಿತು.
ರಾಹುಲ್ ಗಮನವಾಗಿ ನೋಡಿದ.
ಒಬ್ಬ ಹೆಂಗಸು… ರಸ್ತೆಯ ಮಧ್ಯದಲ್ಲಿ ನಿಂತಿದ್ದಳು.
ಅವಳು ಬಿಳಿ ಬಟ್ಟೆ ಹಾಕಿಕೊಂಡಿದ್ದಳು. ಅವಳ ಕೂದಲು ಗಾಳಿಯಲ್ಲಿ ಅಸ್ತವ್ಯಸ್ತವಾಗಿ ಹಾರುತ್ತಿತ್ತು. ಕಾರಿನ ಹೆಡ್‌ಲೈಟ್ ಬೆಳಕಿನಲ್ಲಿ ಅವಳ ನೆರಳು ಉದ್ದವಾಗಿ ರಸ್ತೆಯ ಮೇಲೆ ಹರಡಿಕೊಂಡಿತ್ತು.
ರಾಹುಲ್ ಹೃದಯ ಒಂದು ಕ್ಷಣ ನಿಂತಂತೆ ಆಯಿತು.
“ಇಷ್ಟು ರಾತ್ರಿ ಇಲ್ಲಿ ಯಾರು ಇರಬಹುದು?” ಎಂದು ಅವನು ನಿಧಾನವಾಗಿ ಕಾರನ್ನು ನಿಲ್ಲಿಸಿದ.
ಕಿಟಕಿ ಸ್ವಲ್ಪ ತೆರೆದು ಕೇಳಿದ —
“ಮ್ಯಾಡಮ್… ನಿಮಗೆ ಸಹಾಯ ಬೇಕಾ?”
"ಮ್ಯಾಡಮ್.... ನೀವು ಎಲ್ಲಿಂದ ಬಂದ್ರಿ? , ಈ ಹೈವೇಯಲ್ಲಿ ಯಾರಿಗೆ ಕಾಯ್ತಿದಿರ ?" ಇದು ತುಂಬಾ ಅಪಾಯಕಾರಿ ಜಾಗ ಅಂತಾ ನಿಮಗೆ ಗೊತ್ತಿರ್ಲಿಲ್ವಾ
ಯಾವುದೇ ಉತ್ತರ ಇಲ್ಲ.
ಅವಳು ನಿಶ್ಚಲವಾಗಿ ನಿಂತಿದ್ದಳು.
ಗಾಳಿ ಇನ್ನೂ ಜೋರಾಗಿ ಬೀಸಲು ಶುರು ಆಯಿತು.
ಮರಗಳ ಎಲೆಗಳು ಭಯಾನಕವಾಗಿ ಸದ್ದು ಮಾಡುತ್ತಿವೆ. ರಾಹುಲ್ ಅವಳ ಕಾಲನ್ನು ನೋಡುತ್ತಾನೆ ಎರಡು ಕಾಲು ಹಿಂದೆ ತಿರುಗಿರುವುದನ್ನ ಗಮನಿಸಿ ಮೆಲ್ಲಕ್ಕೆ ತಲೆಯನ್ನು ಎತ್ತಿ ಅವಳನ್ನ ನೋಡಿದಾಗ
ಹಠಾತ್… ಅವಳು ನಿಧಾನವಾಗಿ ತನ್ನ ತಲೆಯನ್ನು ಎತ್ತಿದಳು.
ರಾಹುಲ್ ಕಣ್ಣುಗಳು ದೊಡ್ಡದಾಗಿದವು.
ಅವಳ ಮುಖವೇ ಇರಲಿಲ್ಲ!
ಕಣ್ಣು ಇಲ್ಲ… ಮೂಗು ಇಲ್ಲ… ಬಾಯಿ ಇಲ್ಲ… ಸಂಪೂರ್ಣ ಖಾಲಿ ಮುಖ!
ರಾಹುಲ್ ಭಯದಿಂದ ಕಿರುಚುವಷ್ಟು ಆಗಿತ್ತು. ತಕ್ಷಣ ಗ್ಲಾಸ್ ಏರಿಸಿ ಗಾಡಿ ಸ್ಟಾರ್ಟ್ ಮಾಡಲು ಆಗುತ್ತಿಲ್ಲ ಕೈ ನಡುಗುತ್ತಿದೆ ಹೇಗೋ
ತಕ್ಷಣ ಕಾರನ್ನು ಸ್ಟಾರ್ಟ್ ಮಾಡಿ ಪೂರ್ಣ ವೇಗದಲ್ಲಿ ಓಡಿಸಿದ.
ಹೃದಯ ಜೋರಾಗಿ ಬಡಿತ ಹೊಡೆಯುತ್ತಿತ್ತು. ಕೈಗಳು ನಡುಗುತ್ತಿವೆ.
“ಇದು ನಿಜ ಅಲ್ಲ… ಇದು ನಿಜ ಅಲ್ಲ…” ಎಂದು ಅವನು ತಾನೇ ಹೇಳಿಕೊಂಡ. ಕೆಲವು ನಿಮಿಷಗಳ ನಂತರ ಅವನು ಸ್ವಲ್ಪ ಧೈರ್ಯವಾಗಿ ಉಸಿರೆಳೆದ.
“ಇದು ಕೇವಲ ನನ್ನ ಭ್ರಮೆ ಇರಬಹುದು…” ಎಂದು ಅವನು ತಾನೇ ಸಮಾಧಾನಪಡಿಸಿಕೊಂಡ.
ಕೆಲವು ಕ್ಷಣಗಳ ನಂತರ ಅವನು ಸ್ವಲ್ಪ ಧೈರ್ಯವಾಗಿ ರಿಯರ್ ವ್ಯೂ ಮಿರರ್ ನೋಡಿದ. ಅಲ್ಲಿ ಯಾರೂ ಇರಲಿಲ್ಲ ಅಬ್ಬಾ ಅಂತಾ ಫೋನ್ ತೆಗೆದು ಅವನ ಅಪ್ಪನಿಗೆ ಕಾಲ್ ಮಾಡಲು ಹಿಂದೆ ಇಂದ ಜೋರಾಗಿ ಉಸಿರಾಡುತ್ತಿರುವ ಶಬ್ದ ಕೇಳುತ್ತೆ ತಕ್ಷಣ ಫೋನಿನ ಟಾರ್ಚ್ ಒನ್ ಮಾಡಿ ಕನ್ನಡಿಯನ್ನು ತಿರುಗಿಸಿ ಹಿಂದೆ ನೋಡುತ್ತಾನೆ
ಅಷ್ಟರಲ್ಲಿ ಅವನ ರಕ್ತವೇ ಗಟ್ಟಿಯಾದಂತೆ ಆಯಿತು…
ಅದೇ ಹೆಂಗಸು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಳು.
ಅವಳ ಕಪ್ಪು ಕಣ್ಣುಗಳು ನೇರವಾಗಿ ರಾಹುಲ್ ಕಡೆ ನೋಡುತ್ತಿದ್ದವು.
ಈ ಬಾರಿ ಅವಳ ಖಾಲಿ ಮುಖದಲ್ಲಿ ನಿಧಾನವಾಗಿ ಒಂದು ಭಯಾನಕ ನಗು ಮೂಡುತ್ತಿತ್ತು…
ಮತ್ತು ಅವಳ ಧ್ವನಿ ನಿಧಾನವಾಗಿ ಕೇಳಿಸಿತು —
“ಇಷ್ಟು ಬೇಗ… ನನ್ನನ್ನು ಬಿಟ್ಟು ಹೋಗ್ತಿಯಾ…?” ತಕ್ಷಣ ರಾಹುಲ್ ಕಾರ್ ಬ್ರೇಕ್ ಹಾಕಿ ನಿಲ್ಲಿಸಿ ಹಿಂದೆ ತಿರುಗಿದ , ರಾಹುಲ್ ಭಯದಿಂದ ಕಿರುಚಿದ…
ಆ ಕ್ಷಣದಲ್ಲಿ ಕಾರಿನ ಹೆಡ್‌ಲೈಟ್ ಹಠಾತ್ ಆಫ್ ಆಯಿತು.
ಹೈವೇ ಮತ್ತೆ ಸಂಪೂರ್ಣ ಕತ್ತಲೆಯಾಯಿತು.
ಮುಂದಿನ ಕಥೆ ಓದಲು ದಯವಿಟ್ಟು ಫಾಲೋ ಮಾಡಿ, ಸಪೋರ್ಟ್ ಮಾಡಿ ನೆಸ್ಟ್ ಪಾರ್ಟ್ ಬೇಗ ಹಾಕ್ತೀನಿ ನಿಮ್ಮ ಪ್ರೋತ್ಸಾಹ ನನ್ನೋಟಿಗೆ ಇರಲಿ ಮೊದಲ ಬಾರಿ ಒಂದೂ ಕಥೆ ಬರುತ್ತಿದ್ದೇನೆ ಪ್ಲೀಸ್ follow ಮಾಡಿ