Avala Horata - 7 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 7

Featured Books
  • ಬಯಸದೆ ಬಂದವಳು... - 22

    ಅಧ್ಯಾಯ: ಮಾತಿನ ಬೆಲೆ... ಮನಸಿನ ಬೆಂಕಿ“ಯಾಕೆ ನಮ್ಮ ಹತ್ತಿರ ಹೇಳೋಕೆ ಸಂ...

  • ವಜ್ರದ ನಾಲಿಗೆ

    ಬೆಂಗಳೂರಿನ ಅತ್ಯಾಧುನಿಕ ಓಮಿನಿ ಪ್ರೈಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ...

  • ರಕ್ತ ಲಿಪಿಯ ಚಿರಂಜೀವಿ - 21

    ಮೈಸೂರಿನ ಚಾಮುಂಡಿ ಬೆಟ್ಟವು ಇಂದು ಎಂದಿನಂತೆ ಶಾಂತವಾಗಿ ಕಾಣುತ್ತಿರಲಿಲ್...

  • if... Level 1

    ಅಧ್ಯಾಯ 1: ಸಾಸಿವೆ ಮತ್ತು ಸಂಕಟಅನುಪಮಾಗೆ ಅಂದು ಬೆಳಿಗ್ಗೆಯಿಂದಲೂ ಯಾವು...

  • ಧರಣಿ ಮಂತ್ರ

    ಬೆಂಗಳೂರಿನ ಗದ್ದಲದಿಂದ ಮೈಲುಗಳಷ್ಟು ದೂರವಿರುವ ಆ ಹಳೆಯ ಹಳ್ಳಿಯ ಅಂಚಿನಲ...

Categories
Share

ಅವಳ ಹೋರಾಟ - 7

(ಸಂಜೆ ಆಗಿತ್ತು. ಶೌರ್ಯ ಎಲ್ಲರಿಗಾಗಿ ಕ್ಯಾಬ್ ಬುಕ್ ಮಾಡಿದ್ದ. ಅವನು ಹೋಟೆಲ್ ಮುಂದೆ ನಿಂತಿದ್ದ. ಆಗ ಕ್ಯಾಬ್ ಬಂತು. ಶೌರ್ಯಗೆ ದುರ್ಗಾನ ಬಿಟ್ಟು ಬೇರೆ ಎಲ್ಲರು ಕಾಣಿಸಿದರು.)

ಶೌರ್ಯ : ಅಂಕಲ್, ದುರ್ಗಾ ಬರಲಿಲ್ಲವಾ?

ನಾರಾಯಣ : ಇಲ್ಲ, ಅವಳಿಗೆ ಸ್ವಲ್ಪ ಕೆಲಸ ಇತ್ತು. ಅವಳು ಸ್ವಲ್ಪ ಹೊತ್ತು ಬಿಟ್ಟು ನಂತರ ಬರ್ತಾಳೆ. ನೀನು ಅವಳಿಗೆ ಲೊಕೇಶನ್ ಮೆಸೇಜ್ ಮಾಡಿಬಿಡು.

ಶೌರ್ಯ : ಹೌದಾ ಸರಿ.

(ನನಗೆ ಈ ಹುಡುಗಿ ಮೇಲೆ ಯಾವುದೇ ನಂಬಿಕೆ ಇಲ್ಲ. ಏನಾದರೂ ಕಿತಾಪತಿ ಮಾಡೇ ಮಾಡ್ತಾಳೆ ಅಂತ ಅಂದುಕೊಂಡು ಅವಳಿಗೆ ಲೊಕೇಶನ್ ಮೆಸೇಜ್ ಮಾಡಿದ.)

ನಾರಾಯಣ : ಹೋಟೆಲ್ ತುಂಬ ಚೆನ್ನಾಗಿದೆ ಶೌರ್ಯ. ಹೌದು, ನಿನ್ನ ಸ್ನೇಹಿತ ಎಲ್ಲಿದ್ದಾನೆ?

ಶೌರ್ಯ : ಅವನಿಗೆ ಏನೋ ಕೆಲಸ ಇದೆ ಅಂತ ಈಗಷ್ಟೇ ಹೊರಗಡೆ ಹೋದ. ಬನ್ನಿ ಅಂಕಲ್, ನಾವು ತಿನ್ನೋಕೆ ಶುರು ಮಾಡೋಣ. ಅವನು ನಂತರ ಬರುತ್ತಾನೆ.

ಎಲ್ಲರೂ ಕುಳಿತರು. ನಂತರ ಯಾರಿಗೆ ಏನು ಬೇಕು ಅಂತ ಆರ್ಡರ್ ಮಾಡಿದರು. ಸ್ವಲ್ಪ ಹೊತ್ತಿನ ನಂತರ ಊಟವೂ ಬಂತು. ಎಲ್ಲರೂ ತಿನ್ನೋಕೆ ಶುರು ಮಾಡಿದರು. ಅಷ್ಟರಲ್ಲೇ ಶೌರ್ಯನ ಸ್ನೇಹಿತ ವಿನೀತ್ ಬಂದ. ಮತ್ತೊಂದು ಕಡೆದಿಂದ ದುರ್ಗಾ ಕೂಡ ಬಂದಳು. (ಇವಳೇಕೆ ಇಷ್ಟು ಬೇಗ ಬಂದಳು, ಬರದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಶೌರ್ಯ ಮನಸ್ಸಲ್ಲೇ ಅಂದುಕೊಂಡನು.)

ವಿನೀತ್ : ಎಲ್ಲರಿಗೂ ನಮಸ್ಕಾರ (ಅಂತ ನಾರಾಯಣ ಮತ್ತು ಲಕ್ಷ್ಮಿಯ ಕಾಲಿಗೆ ನಮಸ್ಕಾರ ಮಾಡಿದನು).

ದುರ್ಗಾ : ಅರೆ ಇಷ್ಟು ಬೇಗ ನನ್ನನ್ನು ಬಿಟ್ಟು ಎಲ್ಲರು ಊಟ ಶುರು ಮಾಡಿದ್ದೀರಾ?

ನಾರಾಯಣ : ದುರ್ಗಾ, ಇಷ್ಟು ಹೊತ್ತು ಏಕೆ ಮಾಡಿದೆ?

ದುರ್ಗಾ : ಸ್ವಲ್ಪ ಕೆಲಸ ಇತ್ತು ಅಪ್ಪಾ. ಹೆಲೋ ಶೌರ್ಯ, ಎಲ್ಲಿದ್ದಾನೆ ನಿನ್ನ ಸ್ನೇಹಿತ ಕಾಣಿಸ್ತಾನೆ ಇಲ್ಲ.

ವಿನೀತ್ : ಹೆಲೋ, ನಾನೇ ಶೌರ್ಯನ ಸ್ನೇಹಿತ (ಎಂದು ದುರ್ಗಾಗೆ ಶೇಕ್ ಹ್ಯಾಂಡ್ ಕೊಟ್ಟ).

ದುರ್ಗಾ : ಹೆಲೋ ವಿನೀತ್.

ವಿನೀತ್ : ದುರ್ಗಾ, ನಿನಗೆ ಏನು ಬೇಕೋ ಅದನ್ನು ಆರ್ಡರ್ ಮಾಡು.

ದುರ್ಗಾ ತನಗೆ ಬೇಕಾದದ್ದನ್ನು ಆರ್ಡರ್ ಮಾಡಿದಳು.

ಶೌರ್ಯ : ಅಂಕಲ್, ನಾನು ನಿಮಗಾಗಿ ಮಾವಿನ ಹಣ್ಣಿನ ಶೀಕರಣೆ ತಂದಿದ್ದೇನೆ, ತಗೊಳ್ಳಿ.

ಆ ಜ್ಯೂಸ್ ಕೊಟ್ಟು ಶೌರ್ಯ ಮತ್ತು ವಿನೀತ್ ಇಬ್ಬರೂ ಒಬ್ಬರ ಮುಖ ನೋಡಿಕೊಂಡರು. ಅದನ್ನು ದುರ್ಗಾ ಗಮನಿಸಿದಳು. ಇನ್ನೇನು ನಾರಾಯಣ ಜ್ಯೂಸ್ ಕುಡಿಯಬೇಕು ಅನ್ನೋಷ್ಟರಲ್ಲಿ ದುರ್ಗಾ ಅದನ್ನು ನಾರಾಯಣನ ಕೈಯಿಂದ ತೆಗೆದುಕೊಂಡಳು.

ದುರ್ಗಾ : ಅರೆ ವಿನೀತ್, ನಿಮ್ಮ ಹೋಟೆಲ್‌ನ ಜ್ಯೂಸ್ ಅನ್ನು ಮೊದಲು ನಾನೇ ಕುಡಿಯುತ್ತೇನೆ. ಇದನ್ನು ನಾನು ಯಾರಿಗೂ ಕೊಡಲ್ಲ.

ನಾರಾಯಣ : ಕೋತಿ (ಅಂತ ಹೇಳಿ ಜೋರಾಗಿ ನಗಲು ಶುರು ಮಾಡಿದ).

ಶೌರ್ಯ : (ಅವಳನ್ನೇ ಕೊಲ್ಲೋ ರೀತಿಯಲ್ಲಿ ನೋಡುತ್ತಿದ್ದ, ನಂತರ ನಗುತ್ತ) ಆಯ್ತು, ನೀನೇ ಕುಡಿ.

ದುರ್ಗಾ : ಅರೆ ನಿಮ್ಮ ಹೋಟೆಲ್‌ನಲ್ಲಿ ಹಾಕಿರುವ ಎಲ್ಲಾ ಫೋಟೋಗಳು ತುಂಬ ಚೆನ್ನಾಗಿದೆ (ಎಂದು ಹೇಳುತ್ತ ಮುಂದೆ ನಡೆದಳು. ಮುಂದೆ ನಡೆಯುವಾಗ ಅವಳು ಹೀಲ್ಸ್ ಹಾಕಿದ್ದರಿಂದ ಎಡವಿದಳು. ಅದಕ್ಕಾಗಿ ಕೈಯಲ್ಲಿದ್ದ ಜ್ಯೂಸ್ ಕೆಳಗೆ ಬಿದ್ದುಹೋಯ್ತು. ಆದರೆ ನಿಜ ಏನೆಂದರೆ ಅವಳು ಬೇಕಂತಲೇ ಎಡವಿದಂತೆ ನಟಿಸಿ ಜ್ಯೂಸ್ ಕೆಳಗೆ ಬೀಳುವಂತೆ ಮಾಡಿದ್ದಳು.)

ಶೌರ್ಯ ಅದನ್ನು ಗಮನಿಸಿದ.

ದುರ್ಗಾ : ಅಯ್ಯಯ್ಯೋ ಶೌರ್ಯ, ನನ್ನನ್ನು ಕ್ಷಮಿಸು, ನಾನು ಬೇಕಂತ ಮಾಡಿಲ್ಲ (ಎಂದು ನಾಟಕೀಯವಾಗಿ ಹೇಳಿದಳು).

ಶೌರ್ಯ : ಪರವಾಗಿಲ್ಲ ದುರ್ಗಾ. ನಿನಗೆ ಬೇಕಾದರೆ ನಾನು ಇನ್ನೊಂದು ಜ್ಯೂಸ್ ಮಾಡಿಸಿಕೊಂಡು ಬರುತ್ತೇನೆ.

ದುರ್ಗಾ : ನೀನು ಇನ್ನಷ್ಟು ತಂದುಕೊಟ್ಟರೂ ಅದನ್ನು ಯಾರೂ ಕುಡಿಯಲ್ಲ ಶೌರ್ಯ (ಅವನು ಅವಳನ್ನೇ ಗಟ್ಟಿಯಾಗಿ ನೋಡಿದ). ದುರ್ಗಾ ಮುಂದುವರೆದು – ಅಂದರೆ ಎಲ್ಲರೂ ಹೊಟ್ಟೆ ತುಂಬ ಊಟ ಮಾಡಿದ್ದಾರೆ, ಜ್ಯೂಸ್ ಕುಡಿಯೋಕೆ ಆಗಲ್ಲ ಅಂತ ಹೇಳಿದೆ.

ನಾರಾಯಣ : ಹೌದು ಶೌರ್ಯ, ಹೊಟ್ಟೆ ತುಂಬಾಗಿದೆ, ಇನ್ನೇನು ಕುಡಿಯೋಕೆ ಆಗಲ್ಲ.

ಹೋಟೆಲ್ ಮಾಲೀಕ : ಜ್ಯೂಸ್ ಯಾರು ಇಲ್ಲಿ ಬೀಳಿಸಿದ್ದು?

ದುರ್ಗಾ : ನನ್ನನ್ನು ಕ್ಷಮಿಸಿ ಸರ್, ಇದನ್ನು ನಾನೇ ಬೀಳಿಸಿದ್ದೆ, ಬೇಕಂತ ಮಾಡಿಲ್ಲ.

ಹೋಟೆಲ್ ಮಾಲೀಕ : ಹೋಗಲಿ ಬಿಡಿ.

ದುರ್ಗಾ : ಹೌದು, ನೀವು ವಿನೀತ್‌ಗೆ ಏನಾಗ್ಬೇಕು?

ಅವಳ ಮಾತು ಕೇಳಿ ಶೌರ್ಯ ಮತ್ತು ವಿನೀತ್‌ಗೆ ತುಂಬ ಟೆನ್ಷನ್ ಆಯ್ತು.

ಹೋಟೆಲ್ ಮಾಲೀಕ : ವಿನೀತ್ ಯಾವ ವಿನೀತ್? ನನಗೆ ಯಾರೂ ಗೊತ್ತಿಲ್ಲ.

ಅವರ ಮಾತು ಕೇಳಿ ದುರ್ಗಾ ಮತ್ತು ನಾರಾಯಣ ಇಬ್ಬರಿಗೂ ಏನೋ ಸರಿಯಿಲ್ಲ ಅನ್ನಿಸಿತು. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು.

ನಾರಾಯಣ : ಸರಿ, ನಾವು ಈಗ ಹೋಗ್ತೀವಿ.

ದುರ್ಗಾ : ವಿನೀತ್, ಹೋಟೆಲ್ ನಿಮ್ಮದು ಅಂತೀರಾ, ಆದರೆ ಹೋಟೆಲ್ ಮಾಲೀಕನಿಗೆ ನೀನು ಯಾರು ಅಂತೇ ಗೊತ್ತಿಲ್ಲ. ಸೊ ಫನ್ನಿ ಅಲ್ವಾ?

ವಿನೀತ್ : ಹಾಗೇನಿಲ್ಲ. ಇದು ನಮ್ಮ ತಂದೆಯ ಹೋಟೆಲ್, ಆದರೆ ಇಲ್ಲಿ ಇರುವವರಿಗೆ ನಾನು ಅವರ ಮಗ ಅಂತ ಗೊತ್ತಿಲ್ಲ.

ದುರ್ಗಾ : ಹ್ಮ್ ಸರಿ.

ರಾಘವೇಂದ್ರ : ಅರೆ ಶೌರ್ಯ ಎಲ್ಲಿದ್ದಾನೆ? ಕಾಣಿಸ್ತಿಲ್ಲ.

ವಿನೀತ್ : ಅವನಿಗೆ ಯಾವದೋ ಕಾಲ್ ಬಂತು ಅಂತ ಹೊರಗಡೆ ಹೋದ. ನಡಿ, ನಾವು ಹೊರಗಡೆ ಹೋಗೋಣ.

ಎಲ್ಲರೂ ಹೊರಗಡೆ ಬಂದರು.

ನಾರಾಯಣ : ತುಂಬ ಹೊತ್ತಾಯಿತು, ನಾವು ಈಗ ಹೊರಡ್ತೀವಿ.

ಅವರ ಎದುರಿಗೆ ಯಾರೋ ಒಬ್ಬ ಬರುತ್ತಿದ್ದ. ಅವನು ಮುಖ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದ. ಅವನ ಕಣ್ಣು ಮಾತ್ರ ಕಾಣಿಸುತ್ತಿತ್ತು. ಅವನು ಲಕ್ಷ್ಮಿಯ ಕಡೆಗೆ ಬರುತ್ತಿದ್ದ. ದುರ್ಗಾ ಅವನನ್ನು ಗಮನಿಸಿದಳು. ಅವನ ಉಡುಗೆ, ನೋಟ ಯಾವುದೂ ಸರಿಯಾಗಿ ಅನ್ನಿಸಲಿಲ್ಲ. ಅವನು ಕೈಯಲ್ಲಿದ್ದ ಬಾಟಲ್ ತೆಗೆದು ಅದನ್ನು ಲಕ್ಷ್ಮಿಯ ಮೇಲೆ ಎರಚಿಬಿಟ್ಟ.

ಮುಂದೆ ಏನಾಯ್ತು? ಯಾರು ಲಕ್ಷ್ಮಿಯ ಮೇಲೆ ಏನು ಎರಚಿದರು ಅನ್ನೋದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ...